Amruthadhaare: ದೀಪಾವಳಿ ಆಚರಣೆಗೆ ಭೂಮಿಕಾ ಜೊತೆಗೆ ಅತ್ತೆ ಮನೆಗೆ ಬಂದ ಗೌತಮ್

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ, ಶಕುಂತಲಾ ಹಾಗೂ ಲಕ್ಷ್ಮೀಕಾಂತ ಸೇರಿ, ವಂಶಪರಂಪರೆಯ ಹಾರವನ್ನು ಕಳ್ಳತನ ಮಾಡಿ ಅದನ್ನು ಆನಂದ್ ಮೇಲೆ ಹಾಕಿದ್ದರು. ಆದರೆ, ಭೂಮಿಕಾಳ ಬುದ್ಧಿವಂತಿಕೆಯಿಂದ ಕಳ್ಳರನ್ನು ಹಿಡಿದು, ಗೌತಮ್ ಗೆ ರೆಡ್ ಹ್ಯಾಂಡ್ ಆಗಿ ಜೈದೇವ ಸಿಕ್ಕಿ ಹಾಕಿಕೊಳ್ಳುವಂತೆ ಪ್ಲಾನ್ ಮಾಡಿದ್ದಳು. ಅದರಂತೆಯೇ ಜೈದೇವ ಗೌತಮ್ ಗೆ ಸಿಕ್ಕಿ ಬಿದ್ದಿದ್ದು, ತಮ್ಮನಿಗೆ ವಾರ್ನಿಂಗ್ ಕೊಟ್ಟಿದ್ದಾನೆ. ಯಾವುದೇ ಕಾರಣಕ್ಕೂ ಇನ್ಮುಂದೆ ಯಾವ ಕೆಲಸವನ್ನೂ ಮಾಡದಂತೆ ಹೇಳಿದ್ದಾನೆ.

ಗೆಳೆಯನಿಗೆ ಸಿಇಓ ಸ್ಥಾನ ಕೊಟ್ಟ ಗೌತಮ್

ಗೌತಮ್ ತನ್ನ ಪ್ರಾಣ ಸ್ನೇಹಿತನ ಮೇಲೆ ಅನುಮಾನ ಪಟ್ಟಿದ್ದಕ್ಕೆ ಬೇಸರ ಕೂಡ ಆಗಿದ್ದಾನೆ. ಗೆಳೆಯನ ಬಳಿ ಕ್ಷಮೆ ಕೇಳಿದ್ದಾನೆ. ಗೆಳೆಯನ ಸಾಲವನ್ನೆಲ್ಲಾ ತೀರಿಸಲು ಮುಂದಾಗಿದ್ದಾನೆ. ಅಲ್ಲದೇ, ಗೆಳೆಯ ಆನಂದ್ ಗೆ ಕಂಪನಿಯಲ್ಲಿ ಉತ್ತಮ ಸ್ಥಾನವನ್ನು ನೀಡಿದ್ದು, ಸಿಇಓ ಪೋಸ್ಟ್ ಕೊಟ್ಟಿದ್ದಾನೆ.

zee-kannada-serial-amruthadhaare

ಆನಂದ್ ಗೆ ಇದರಿಂದ ಮುಜುಗರವಾಗಿದೆ. ಇನ್ನು ಇಬ್ಬರೂ ಗೆಳೆಯರು ಮುಂದಿನ ದಿನಗಳಲ್ಲಿ ಎಂತಹದ್ದೇ ಪರೀಸ್ಥಿತಿ ಬಂದರೂ ಇಬ್ಬರೂ ಬೇರೆಯಾಗಬಾರದು ಎಂದು ಮಾತು ಕೊಟ್ಟುಕೊಳ್ಳುತ್ತಾರೆ. ಆನಂದ್ ಗೆ ತನ್ನ ಮೇಲಿದ್ದ ಅಪವಾದ ಇಷ್ಟು ಬೇಗ ಸರಿ ಹೋಗಿದ್ದಕ್ಕೆ ಖುಷಿಯಾಗಿರುತ್ತಾನೆ.

ಶಕುಂತಲಾಗೆ ಕಡಿಮೆಯಾಗದ ಟೆಂಷನ್

ಆದರೆ, ಇತ್ತ ಶಕುಂತಲಾಳಿಗೆ ತಾವು ಮಾಡಿದ ಪ್ಲಾನ್ ನಿಂದಾಗಿ ತಾವೇ ಮೂಳುಗುವಂತಾಗಿದೆ. ಎಲ್ಲರ ಎದುರಿಗೂ ಮಗನಿಗೆ ಹೊಡೆದಿದ್ದಲ್ಲದೇ, ಆತನಿಗಿದ್ದ ಎಲ್ಲಾ ಹಕ್ಕನ್ನು ಕೂಡ ಕಿತ್ತುಕೊಳ್ಳುವಂತಾಗಿದೆ. ಆದರೆ, ಇನ್ಮುಂದೆ ಇದೆಲ್ಲವನ್ನು ಸರಿ ಮಾಡುವುದು ಹೇಗೆ ಅನ್ನೋ ಆತಂಕದಲ್ಲಿ ಶಕುಂತಲಾ ಇದ್ದಾಳೆ.

ಜೈದೇವನಿಗೂ ತನ್ನ ತಾಯಿಯೂ ಅವಮಾನ ಮಾಡಿದ್ದು, ಈಗ ತಾನು ಆಫೀಸಿಗೆ ಹೋಗುವಂತಿಲ್ಲ. ತನ್ನಿಷ್ಟದಂತೆ ಯಾವ ಕೆಲಸವನ್ನೂ ಮಾಡುವಂತಿಲ್ಲವಲ್ಲ ಎಂದು ತಲೆ ಕೆಡಿಸಿಕೊಂಡಿದ್ದಾನೆ. ಆದರೆ, ಲಕ್ಷ್ಮೀಕಾಂತ ಒಬ್ಬನೇ ಜೈದೇವ ಹಾಗೂ ಶಕುಂತಲಾಳಿಗೆ ಸಮಾಧಾನ ಮಾಡುತ್ತಾ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾನೆ.

zee-kannada-serial-amruthadhaare

ಹಬ್ಬಕ್ಕೆ ಮಹಿಮಾಳಿಗಿಲ್ಲ ಆಹ್ವಾನ

ಇನ್ನು ಭೂಮಿಕಾ ಹಾಗೂ ಗೌತಮ್ ಗೆ ಜೀವನ ಮನೆಯಿಂದ ಆಹ್ವಾನ ನೀಡಲಾಗಿದೆ. ದೀಪಾವಳಿ ಹಬ್ಬಕ್ಕೆ ಮನೆಗೆ ಬರಬೇಕು ಎಂದು ಮಂದಾಕಿನಿ ಮತ್ತು ಸದಾಶಿವ ಕರೆದಿದ್ದಾರೆ. ಆದರೆ, ಮಹಿಮಾಳನ್ನು ಶಕುಂತಲಾ ಮನೆಯಲ್ಲಿ ಕರೆದಿಲ್ಲ. ಆದರೂ ಮಹಿಮಾ ದೀಪಾವಳಿ ಹಬ್ಬಕ್ಕೆ ತವರು ಮನೆಗೆ ಹೋಗಲು ನಿರ್ಧರಿಸಿದ್ದಾಳೆ.

ಹೀಗಾಗಿ ಫೋನ್ ಮಾಡಿ ಶಕುಂತಲಾಳನ್ನು ಹಬ್ಬಕ್ಕೆ ಬರುತ್ತೀನಿ ಎಂದಾಗ, ಇಲ್ಲ ಇನ್ನು ನಮ್ಮ ಮನೆಯಲ್ಲಿ ಹಬ್ಬಕ್ಕೆ ಯಾವುದೇ ಪ್ಲಾನ್ ಮಾಡಿಲ್ಲ ಎನ್ನುತ್ತಾಳೆ. ಆದರೆ, ಮಹಿಮಾಳನ್ನು ಅವಾಯ್ಡ್ ಮಾಡಿ, ದೊಡ್ಡ ಮಗಳು ಅಶ್ವಿನಿ ಅನ್ನು ಹಬ್ಬಕ್ಕೆ ಮನೆಗೆ ಆಹ್ವಾನ ನೀಡಿದ್ದಾಳೆ. ಆದರೆ, ಮಹಿಮಾ ಅಮ್ಮ ಮನೆಗೆ ಕರೆಯದಿದ್ದರು ಕೂಡ ತಾನು ದೀಪಾವಳಿ ಹಬ್ಬಕ್ಕೆ ಜೀವನ ಜೊತೆಗೆ ಅವರ ಮನೆಗೆ ಹೋಗಲೇಬೇಕು ಎಂದು ನಿರ್ಧರಿಸಿದ್ದಾಳೆ.

ಅತ್ತೆ ಮನೆಗೆ ಬಂದ ಗೌತಮ್

ಗೌತಮ್ ಗೆ ತನ್ನದೇ ಆದ ಸಾಕಷ್ಟು ಸಮಸ್ಯೆಗಳಿರುವುದರಿಂದ ಅತ್ತೆ ಮನೆಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಾನೆ. ಆದರೆ, ಗೆಳೆಯ ಆನಂದ್ ಸುಮ್ಮನಿರದೇ, ಗೌತಮ್ ತನ್ನ ಮಾವನ ಮನೆಗೆ ಹಬ್ಬಕ್ಕೆ ಹೋಗಲೇಬೇಕು ಎಂದು ಹೇಳಿ ಒಪ್ಪಿಸುತ್ತಾನೆ. ಭೂಮಿಕಾ ಅಮ್ಮ ಮಂದಾಕಿನಿಗೆ ಫೋನ್ ಮಾಡಿ ಗೌತಮ್‌ಗೆ ಹೇಗಿರಬೇಕು, ಏನು ಬೇಡ ಎಂಬ ಎಲ್ಲಾ ವಿಚಾರಗಳನ್ನು ವಿವರವಾಗಿ ಹೇಳುತ್ತಾಳೆ. ಬಳಿಕ ಗೌತಮ್ ಮತ್ತು ಭೂಮಿಕಾ ಇಬ್ಬರೂ ಮನೆಗೆ ಬರುತ್ತಾರೆ. ಅಳಿಯ ಮಗಳು ಮನೆಗೆ ಬಂದಿದ್ದಕ್ಕೆ ಮಂದಾಕಿನಿಗೆ ಖುಷಿಯಾಗುತ್ತದೆ.

More from Filmibeat

English summary
Amruthadhaare Serial 13th November episode written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X