Amruthadhaare: ಒಂದಾದ ಗೌತಮ್-ಆನಂದ್, ಸ್ನೇಹಿತರನ್ನು ದೂರ ಮಾಡಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಶಕುಂತಲಾ ದೇವಿ!

By Poorva

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ, ಗೌತಮ್ ಹಾಗೂ ಆನಂದ್‌ರನ್ನು ಒಂದು ಮಾಡಿದ್ದಾಳೆ. ಬಹುಕಾಲದ ಗೆಳೆಯರು ಬೇರೆ ಬೇರೆಯಾಗಿ ಬಹಳ ನೋವು ಅನುಭವಿಸುತ್ತಿದ್ದರು. ಕೇವಲ ಒಂದು ಚಿನ್ನದ ಸರಕೊಸ್ಕರ ಮಾತನಾಡುವುದನ್ನೆ ಬಿಟ್ಟಿದ್ದರು. ಗೌತಮ್ ದಿವಾನನಿಗೆ ಚಿಕ್ಕ ವಯಸ್ಸಿನಿಂದಲೂ ಆನಂದ್ ಅಂದರೆ ಪಂಚಪ್ರಾ.ಣ ಆತನೊಂದಿಗೆ ಎಲ್ಲ ವಿಷಯವನ್ನು ಹೇಳಿಕೊಳ್ಳುತ್ತಿದ್ದ.

ತನ್ನ ತಂದೆ ಸತ್ತಾಗ ಆನಂದ್ ಜೊತೆಯೇ ಕಷ್ಟ ಹೇಳಿಕೊಂಡು ಗೌತಮ್ ಜೋರಾಗಿ ಅತ್ತಿದ್ದ. ಅದಾದ ಬಳಿಕ ಆನಂದ್ ದೂರ ಆದಾಗ ಭೂಮಿಕಾ ಜೊತೆ ಆ ದುಃಖ ಹೇಳಿ ಜೋರಾಗಿ ಅಳುತ್ತಾನೆ. 'ಆನಂದ್ ನನ್ನ ಜೀವದ ಗೆಳೆಯ ಆತ ಚಿಕ್ಕ ವಯಸ್ಸಿಂದಲೂ ನನ್ನ ಜೊತೆ ಇದ್ದ. ನಾನು ಏನೇ ತಪ್ಪು ಮಾಡಿದರೂ ಆತ ನನಗೆ ಹೇಳುತ್ತಿದ್ದ. ಆದರೆ ಇದೀಗ ಆನಂದ್ ನನ್ನನ್ನು ಬಿಟ್ಟು ದೂರ ಹೋಗುತ್ತಾನೆ. ಎನ್ನುವ ಭಯ ಕಾಡುತ್ತಿದೆ ಆತನಿಲ್ಲದ ದಿನವನ್ನ ಹೇಗೆ ನಾನು ನೋಡುತ್ತೇನೆ ಎನ್ನುವ ಭಯ ಶುರುವಾಗಿದೆ' ಎಂದಿದ್ದಾರೆ.

zee-kannada-serial-amruthadhaare

ಜೈದೇವ್‌ಗೆ ಸರಿಯಾದ ಪಾಠ ಕಲಿಸಿದ ಭೂಮಿಕಾ!

ಗೌತಮ್ ಮಾತು ಕೇಳಿ ಭೂಮಿಕಾ ಸದ್ದಿಲ್ಲದೆ ಆನಂದ್ ಹಾಗೂ ಗೌತಮ್‌ರನ್ನು ಒಂದು ಮಾಡಲು ಉಪಾಯವನ್ನು ಮಾಡುತ್ತಾಳೆ. ಅದರೆ ಯಾವುದು ಪ್ಲಾನ್ ವರ್ಕ್ ಆಗುವುದಿಲ್ಲ. ಅದಾದ ಬಳಿಕ ಜಯದೇವನೆ ಕಳ್ಳ ಎನ್ನುವ ವಿಚಾರ ಭೂಮಿಕಾಗೆ ಗೊತ್ತಾಗುತ್ತದೆ. ಆದರೆ ಈ ವಿಚಾರವನ್ನು ಗೌರಮನಿಗೆ ಹೇಳಬೇಕು ಎನ್ನುವಷ್ಟರಲ್ಲಿ ಗೌತಮ್ ಗಾಢ ನಿದ್ದೆಗೆ ಜಾರಿರುತ್ತಾರೆ. ಆ ಬಳಿಕ ಮರುದಿನ ಆನಂದ್ ಗೌತಮ್ ದಿವಾನ್ ಮನೆಗೆ ಬರುತ್ತಾರೆ . ಆ ಬಳಿಕ ಬಂದು ಸರವನ್ನ ತಂದು ತೆಗೆದುಕೋ ನನ್ನದು ತಪ್ಪಾಯಿತು ಎಂದು ಆನಂದ್ ಗೌತಮ್ ಬಳಿ ಹೇಳಿದಾಗ ಭೂಮಿಕಾ ಬಂದು ಗೌತಮ್‌ನನ್ನು ಬದಿಗೆ ಕರೆದು ಮಾತನಾಡುತ್ತಾಳೆ .

ಗೌತಮ್‌ಗೆ ಸತ್ಯದ ಮನವರಿಕೆ ಮಾಡಿದ ಭೂಮಿಕಾ

ಭೂಮಿಕ ಹೇಳುತ್ತಾಳೆ ಆನಂದ್ ಆ ಸರವನ್ನ ಕದ್ದಿಲ್ಲ.. ಎಂದಾಗ ಗೌತಮ್‌ಗೆ ಶಾಕ್ ಆಗುತ್ತದೆ. ಆನಂದ್ ಸರ ಕದ್ದಿಲ್ಲ ಎಂದರೆ ಬೇರೆ ಯಾರೂ ಸರ ಕಳ್ಳತನ ಮಾಡಿದ್ದಾರೆ ಎಂದು ಯೋಚನೆ ಮಾಡುತ್ತಿರುವಾಗ ಭೂಮಿಕಾ ಒಬ್ಬ ಕೆಲಸದವನನ್ನು ಕರೆದು ವಿಡಿಯೋವನ್ನ ಆನ್ ಮಾಡಿ ಗೌತಮ್ ಕಡೆಗೆ ಕೊಡುವಂತೆ ಹೇಳುತ್ತಾಳೆ ಆ ಕೂಡಲೇ ಆ ವಿಡಿಯೋವನ್ನು ನೋಡಿದ ಗೌತಮ್‌ಗೆ ಬಹಳ ನೋವಾಗುತ್ತದೆ ಯಾಕೆಂದರೆ ಅಲ್ಲಿ ಕದ್ದಿರುವುದು ಜೈ ದೇವ್. ಆದರೆ ಶಿಕ್ಷೆ ಅನುಭವಿಸಿದ್ದು ಆನಂದ್.

zee-kannada-serial-amruthadhaare

ಗೌತಮ್‌ಗೆ ಕಾಡುತ್ತಿದೆ ತಪ್ಪಿತಸ್ಥ ಮನೋಭಾವ

ಇದೇನು ದೊಡ್ಡ ತಪ್ಪು ಮಾಡಿಬಿಟ್ಟೆನಲ್ಲ ಎಂದು ಯೋಚನೆ ಮಾಡಿ ಜೋರಾಗಿ ಜೈದೇವ್‌ರನ್ನ ಕರೆಯುತ್ತಾನೆ. ಆ ಕೂಡಲೇ ಅಣ್ಣ ಕರೆಯುತ್ತಿದ್ದಾನೆ ಎಂದು ಜೈದೇವ್ ಓಡಿಕೊಂಡು ಬರುತ್ತಾನೆ ಅಣ್ಣ ಏನು ಎಂದು ಕೇಳಿದಾಗ ಜೈದೇವ್ ಕೆನ್ನೆಗೆ ಜೋರಾಗಿ ಭಾರಿಸುತ್ತಾನೆ. ಆ ಬಳಿಕ ಸರವನ್ನ ಕೊಡುವಂತೆ ಜೈದೇವ್ ಬಳಿ ಕೇಳಿದಾಗ ಮೊದಲು ಆ ಸರ ನನ್ನ ಬಳಿ ಇಲ್ಲ ಎಂದು ಹೇಳಿ ಆ ಬಳಿಕ ಸರ ನನ್ನ ಜೊತೆ ಇದೆ ಎಂದು ತಪ್ಪು ಒಪ್ಪಿಕೊಳ್ಳುತ್ತಾನೆ. ಇದನ್ನು ನೋಡಿದ ಶಕುಂತಲಾ ತನ್ನ ಮಗನಿಗೆ ಹೊಡೆಯುತ್ತಾಳೆ.

ಗೌತಮ್ ಬಳಿ ಕ್ಷಮೆ ಕೇಳಿದ ಶಾಕುಂತಲದೇವಿ

ಬಳಿಕ ಗೌತಮ್ ಬಳಿ ಕ್ಷಮೆಯಾಚನೆ ಮಾಡುತ್ತಾಳೆ ಇನ್ನು ಭೂಮಿಕಾ ಬಗ್ಗೆ ಗೌತಮನಿಗೆ ಎಷ್ಟೇ ಗೊತ್ತಿದ್ದರೂ ತೆರೆ ಮೆರೆಯಲಿ ಕೆಲಸ ಮಾಡಿದ ಭೂಮಿಕಾಳನ್ನ ಆನಂದ್ ಶ್ಲಾಘಿಸುತ್ತಾರೆ. ನಮ್ಮಿಬ್ಬರನ್ನು ಒಂದು ಮಾಡಲು ಅದೆಷ್ಟು ಕಷ್ಟ ಪಟ್ಟರು ಅತ್ತಿಗೆ ಎಂದು ನಡೆದ ವಿಚಾರವನ್ನೆಲ್ಲ ಗೌತಮ್‌ಗೆ ಹೇಳಿದಾಗ ಆತನಿಗೆ ಆಶ್ಚರ್ಯವಾಗುತ್ತದೆ. 'ಹೌದು ನನಗೆ ಯಾರದು ತಪ್ಪು ಎಂದು ತಿಳಿಯದೆ ನಿನ್ನ ಮೇಲೆ ರೇಗಿಬಿಟ್ಟೆ ಆದರೆ ಅದಾದ ಬಳಿಕ ನನಗೆ ತಿಳಿಯಿತು ನಾನು ಬಹಳ ದೊಡ್ಡ ತಪ್ಪು ಮಾಡಿಬಿಟ್ಟೆ ಎಂದು ನನ್ನ ತಪ್ಪನ್ನು ಮನವರಿಕೆ ಮಾಡಿ ಕೊಟ್ಟಿದ್ದು ಭೂಮಿಕಾ' ಎಂದು ಯೋಚನೆ ಮಾಡುತ್ತಾನೆ. ಬಳಿಕ ತನ್ನ ಜೀವದ ಗೆಳೆಯ ನನ್ನ ಜೊತೆ ಇದ್ದಾನೆ ಎಂದು ಖುಷಿಪಡುತ್ತಾನೆ.

More from Filmibeat

English summary
Amruthadhaare serial written update on 09th November .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X