Amruthadhaare: ಆನಂದ್ ಮನೆಯಲ್ಲಿ ಗೌತಮ್ ಭೂಮಿಕಾ, ನಶೆಯಲ್ಲಿ ಮನದ ಮಾತು ಹೇಳ್ತಾಳಾ ಭೂಮಿಕಾ?

By Poorva

ಅಮೃತಧಾರೆ ಧಾರಾವಾಹಿಯಲ್ಲಿ ಮುನಿಸಿಕೊಂಡಿದ್ದ ಸ್ನೇಹಿತರು ಇದೀಗ ಒಂದಾಗಿದ್ದಾರೆ. ಇವರಿಬ್ಬರನ್ನ ನೋಡಿದ ಅಭಿಮಾನಿಗಳು ಮಾತ್ರ ಬಹಳ ಖುಷಿಪಡುತ್ತಿದ್ದಾರೆ . ಆದರೆ ಇದೀಗ ಭೂಮಿಕಾ ದೆಸೆಯಿಂದ ಇಬ್ಬರು ಕೂಡ ಒಂದಾಗಿದ್ದಾರೆ. ಹಾಗೆಯೇ ಗೌತಮ್ ಎದುರು ಜೈ ದೇವ್ ಮುಖವಾಡ ಕೂಡ ಕಳಚಿ ಬಿದ್ದಿದೆ.

ಆನಂದ್ ಮಾಡಬೇಕಿದ್ದ ಕೆಲಸವನ್ನು ಭೂಮಿಕಾ ಈಗಾಗಲೇ ಮಾಡಿ ತೋರಿಸಿದ್ದಾಳೆ . ಶಕುಂತಲಾ ದೇವಿ ಭೂಮಿಕಾಳನ್ನು ಮನೆಗೆ ಕರೆದುಕೊಂಡಿದ್ದು ಬೇರೆ ಕಾರಣಕ್ಕಾಗಿ. ಆದರೆ ಇದೀಗ ಆಗುತ್ತಿರುವುದೇ ಬೇರೆ. ತಪ್ಪು ಕಂಡಾಗ ಭೂಮಿ ಯಾವತ್ತೂ ಸುಮ್ಮನೆ ಕುಳಿತುಕೊಳ್ಳುವಳು ಅಲ್ಲ ಆದರೆ ಈ ವಿಚಾರ ಶಕುಂತಲಾ ದೇವಿಗೆ ಅಷ್ಟಾಗಿ ತಿಳಿದಿರುವುದಿಲ್ಲ. ತಾನು ಗೆರೆ ಹಾಕಿದ್ದನ್ನು ಯಾವ ಕಾರಣಕ್ಕೂ ಭೂಮಿಕಾ ದಾಟುವುದಿಲ್ಲ ಎನ್ನುವ ನಂಬಿಕೆ ಇತ್ತು.

Zee Kannada serial Amruthadhaare written Update on 20th November

ಜೈ ದೇವ್ ಬೆವರಿಳಿಸಿದ ಭೂಮಿಕಾ

ಈಗ ಜೈದೇವ್ ಯಾವಾಗ ಗೌತಮ್ ಮುಂದೆ ಸಿಕ್ಕಿಬಿದ್ದನೋ ಅವತ್ತೆ ಶಕುಂತಲಾ ದೇವಿಯ ಆಟ ನಿಂತು ಹೋಗಿದೆ. ತಾನು ಯಾವಾಗ ಗೌತಮ್ ಕೈಗೆ ಸಿಕ್ಕಿ ಬೀಳುತ್ತೇನೆ ಎನ್ನುವ ಭಯವೂ ಕೂಡ ಹೆಚ್ಚಾಗಿ ಕಾಡುತ್ತಿದೆ . ಇದೀಗ ಗೌತಮ್ ಮಾಡಿದ ತಪ್ಪಿಗೆ ಆನಂದ್‌ ಕಂಪನಿಯ ಎಂಡಿ ಆಗಿ ಮಾಡಿದ್ದಾನೆ. ಇನ್ನು ಆನಂದ್ ಗೌತಮ್‌ನನ್ನು ಮನೆಗೆ ಊಟಕ್ಕೆ ಕರೆಯುತ್ತಾನೆ . ಹಾಗೆಯೇ ನಿನ್ನ ಜೊತೆ ಭೂಮಿಕಾ ಕೂಡ ಬರಬೇಕು ಎಂದು ಹೇಳುತ್ತಾನೆ. ಇದಕ್ಕೆ ಗೌತಮ್ ಒಪ್ಪಿಕೊಳ್ಳುತ್ತಾನೆ.

ಆನಂದ್ ಮನೆಯಲ್ಲಿ ಔತಣ ಕೂಟ

ಇದನ್ನು ಗೌತಮ್ ಭೂಮಿಕಾ ಬಳಿ ಹೇಳುತ್ತಾನೆ. 'ಭೂಮಿಕಾ ನಾಳೆ ಆನಂದ್ ಮನೆಯಲ್ಲಿ ನಮಗಿಬ್ಬರಿಗೆ ಪಾರ್ಟಿ ಏರ್ಪಾಡು ಮಾಡಲಾಗಿದೆ . ನಾವಿಬ್ಬರೂ ಕೂಡ ಆನಂದ್ ಮನೆಗೆ ಹೋಗಿ ಊಟ ಮಾಡಿಕೊಂಡು ಬರೋಣ .ಇಲ್ಲವಾದರೆ ಆನಂದ್ ಗೆ ಬಹಳ ಬೇಸರವಾಗುತ್ತದೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಭೂಮಿಕಾ ಸರಿ ಆನಂದ ಮನೆಗೆ ಊಟಕ್ಕೆ ಹೋಗೋಣ ಎಂದು ಹೇಳುತ್ತಾಳೆ. ಆ ಬಳಿಕ ಸ್ವಲ್ಪ ಸಮಯದ ನಂತರ ಮಾತನಾಡುತ್ತಾನೆ ಗೌತಮ್ ಭೂಮಿಕ ನಾಳೆ ಸ್ವಲ್ಪ ಡ್ರಿಂಕ್ಸ್ ಮಾಡುತ್ತೇನೆ ಎಂದು ಹೇಳಿದಾಗ ಭೂಮಿಕಾ ಮಾತ್ರ ಬಹಳ ಕೋಪ ಮಾಡಿಕೊಂಡು ಗೌತಮ್ ಮೇಲೆ ಚೀರಾಡಿ ಬಿಡುತ್ತಾಳೆ.

Zee Kannada serial Amruthadhaare written Update on 20th November

ಡ್ರಿಂಕ್ಸ್ ವಿಚಾರಕ್ಕೆ ಕಿತ್ತಾಟ

ನಾಳೆ ಡ್ರಿಂಕ್ಸ್ ಮಾಡುತ್ತೀರಾ..? ನೀವು ಕುಡುಕರ..? ಎಂದೆಲ್ಲಾ ಪ್ರಶ್ನೆ ಮಾಡುತ್ತಾಳೆ. ಇದನ್ನು ಕೇಳಿದ ಗೌತಮನಿಗೆ ಕೊಂಚ ಕೋಪ ಬರುತ್ತದೆ. ಗೌತಮ ಹಾಗೂ ಭೂಮಿಕಾ ಇಬ್ಬರು ಒಬ್ಬರಿಗೊಬ್ಬರು ಅನ್ಯೂನ್ಯವಾಗಿದ್ದರು ಆದರೆ ಇದೀಗ ಡ್ರಿಂಕ್ಸ್ ವಿಷಯವಾಗಿ ಇಬ್ಬರು ಕಿತ್ತಾಡುತ್ತಿದ್ದಾರೆ. ಇನ್ನು ಮರುದಿನ ಆನಂದ್ ಮನೆಗೆ ಗೌತಮ ಹಾಗೂ ಭೂಮಿಕಾ ಹೋಗುತ್ತಾರೆ ಆಮೇಲೆ ಆನಂದ್ ಹೆಂಡತಿ ಅಪರ್ಣ ಭೂಮಿಕಾ ಕುಡಿಯುವ ಜ್ಯೂಸ್ ನಲ್ಲಿ ಆಲ್ಕೋಹಾಲ್ ಮಿಕ್ಸ್ ಮಾಡಿ ಕೊಡುತ್ತಾಳೆ. ಅದನ್ನು ಕುಡಿದ ಭೂಮಿಕಾ ಜ್ಯೂಸ್ ಬಹಳ ಚೆನ್ನಾಗಿದೆ ಇನ್ನೊಂದು ಗ್ಲಾಸ್ ಕೊಡ್ತೀರಾ ಎಂದು ಕೇಳುತ್ತಾಳೆ ಇದನ್ನು ಕೇಳಿದ ಆನಂದ್‌ಗೆ ಶಾಕ್ ಆಗುತ್ತದೆ. ಮುಂದೇನು ನಡೆಯಲಿದೆಯೋ ಕಾದು ನೋಡಬೇಕು.

More from Filmibeat

English summary
Amruthadhaare serial 20th November written update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X