Amruthadhaare: ಶ್ರೀಮಂತಿಕೆ ಬಯಸದ ಭೂಮಿಕಾ ಪಾಲಿಗೆ ಬಂತು ದಿವಾನ್ ವಂಶದ ವಿಶೇಷ ಹಾರ!

By Poorva

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ನಡುವೆ ಭಿನ್ನ ಅಭಿಪ್ರಾಯಗಳು ಬಂದರೂ ಅದನ್ನೆಲ್ಲ ಮೆಟ್ಟಿನಿಂತು ಗೌತಮ್ ಭೂಮಿಕಾ ಬಳಿ ಕ್ಷಮೆ ಕೇಳಿ ಮನ ಬಿಚ್ಚಿ ಮಾತನಾಡಿದ್ದಾನೆ. ಭೂಮಿಕಾ ಮಾತ್ರ ತಿಳಿದು ತಿಳಿಯದವರ ಹಾಗೆ ಇರುತ್ತಾಳೆ. ಇದನ್ನೆಲ್ಲ ನೋಡಿದ ಗೌತಮ್ ಮಾತ್ರ ಏನು ಮಾತನಾಡದೆ ಸುಮ್ಮನೆ ಇರುತ್ತಾನೆ.

ಇದೀಗ ಗೌತಮ್ ತಾತ ವಿಲ್ ಬರೆದಿದ್ದಾರೆ. ಹೌದು ತನ್ನ ಮೊಮ್ಮಗ ಗೌತಮ ದಿವಾನ್ ಮದುವೆ ಆದ ಬಳಿಕ ಈ ವಿಲ್ ಓದಬೇಕು ಎಂದು ವಕೀಲರ ಬಳಿ ಗೌತಮ್ ದಿವಾನ್ ತಾತ ಹೇಳಿದ್ದರು. ಹೀಗಾಗಿ ಗೌತಮ್ ಮದುವೆ ನಂತರ ವಕೀಲರು ಇದೀಗ ದಿವಾನ್ ಮನೆಗೆ ಆಗಮಿಸಿದ್ದಾರೆ. ವಕೀಲರು ಬಂದಿರುವುದನ್ನು ತಿಳಿದ ಶಕುಂತಲಾ ದೇವಿ ಹಾಗೂ ಅವರ ತಮ್ಮ ಅವಕ್ಕಾಗಿ ನಿಂತಿದ್ದಾರೆ.

Zee Kannada serial Amruthadhaare written update on 23rd October

ವಕೀಲರು ಏಕೆ ಬಂದಿದ್ದಾರೆ ಎನ್ನುವ ಪ್ರಶ್ನೆ ಶಕುಂತಲಾ ದೇವಿಗೆ ಮೂಡಿದೆ. ಇತ್ತ, ಅಜ್ಜಿ ವಕೀಲರು ಮನೆಗೇ ಬಂದಿರುವ ಖುಷಿಯಲ್ಲಿ ಇದ್ದಾರೆ. ಗೌತಮ್ ತಾತಾ ಘನವೀರ್ ದಿವಾನ್ ಅವರು ಗೌತಮ್ ದಿವಾನ್ ಮದುವೆ ಆದ ಬಳಿಕವೇ ಈ ವಿಲ್ ಅನ್ನು ಎಲ್ಲರ ಬಳಿ ಓದಬೇಕು ಎಂದು ಹೇಳಿರುತ್ತಾರೆ. ಆದ ಕಾರಣಕ್ಕೆ ವಕೀಲರು ಗೌತಮ್ ದಿವಾನ್ ಮನೆಗೆ ಆಗಮಿಸುತ್ತಾರೆ.

ತಾತನ ಮಾತಿನ ಪ್ರಕಾರ ನಡೆಯುವಂತೆ ವಕೀಲರ ಮನವಿ

ಗೌತಮ್ ದಿವಾನ್ ಬಳಿ ಮಾತನಾಡುವ ವಕೀಲರು .. ನಿಮ್ಮ ತಾತ ಘನವೀರ್ ದಿವಾನ್ ಅವರು ವಿಲ್ ಮಾಡಿ ಇಟ್ಟಿದ್ದಾರೆ. ನನ್ನ ಮೊಮ್ಮಗ ಮದುವೆ ಆದ ಬಳಿಕವೇ ಈ ವಿಲ್ ಅನ್ನು ಓಪನ್ ಮಾಡಬೇಕು ಎಂದು ತಾಕೀತು ಮಾಡಿದ್ದಾರೆ. ಈ ಕಾರಣಕ್ಕೆ ನಾನು ಈ ವಿಲ್ ಅನ್ನು ಈಗ ತೆಗೆದು ಓದುತ್ತಿದ್ದೇನೆ ಎಂದು ಬಾಕ್ಸ್ ಸಮೇತ ವಕೀಲರು ಮನೆಗೆ ತಂದಿದ್ದರು.

ಪಾತ್ರದಲ್ಲಿ ಬರೆದ ವಿಚಾರ ಜೋರಾಗಿ ಓದಿ ಹೇಳಿದ ವಕೀಲರು

ಮನೆಯವರ ಎದುರು ಜೋರಾಗಿ ಪತ್ರವನ್ನು ಓದುವ ವಕೀಲರು, "ಈ ಪತ್ರದಲ್ಲಿ ನೀನು ತಿಳಿಸುವುದು ಏನೆಂದರೆ ದಿವಾನ್ ವಂಶದ ಕಿರೀಟ ಪ್ರಾಯದಂತೆ ಇರುವ ವಿಶೇಷ ಹಾರವನ್ನು ನನ್ನ ಮೊಮ್ಮಗ ಗೌತಮ್ ದಿವಾನ್ ಹೆಂಡತಿಗೆ ಸೇರತಕ್ಕದ್ದು" ಎಂದು ಹೇಳಿ ಭೂಮಿಕಾಗೆ ಹಾರ ಸೇರಬೇಕು ಎಂಬುದನ್ನು ವಕೀಲರು ಸೂಚಿಸುತ್ತಾರೆ.. ಇದನ್ನು ನೋಡಿದ ಶಕುಂತಲಾ ದೇವಿ ಗೆ ಶಾಕ್ ಆಗುತ್ತದೆ..

Zee Kannada serial Amruthadhaare written update on 23rd October

ಭೂಮಿಕಾ ಪಾಲಾಯಿತು ದಿವಾನ್ ವಂಶದ ಹಾರ

ದಿವಾನ್ ಕುಟುಂಬದ ಹಿರಿಮೆಯ ಹಾರ ತನ್ನದು ಎಂದು ಕೇಳಿದ ಭೂಮಿಕಾ ಮಾತ್ರ ಶಾಕ್ ಆಗಿದ್ದಾಳೆ. ಆಕೆ ಹಾರವನ್ನು ಬೇಡ ಎಂದು ಹೇಳುತ್ತಿದ್ದರೆ ಅಜ್ಜಿ ಮಾತ್ರ ಆ ಹಾರವನ್ನು ತೆಗೆದುಕೊಳ್ಳಲೇ ಬೇಕು ಅವರ ಆಸೆ ಏನು ಇದೆಯೋ ಅದೇ ಆಗಬೇಕು ಎಂದು ಹಠ ಹಿಡಿಯುತ್ತಾರೆ. ಆದರೆ ಶಕುಂತಲಾ ದೇವಿ ಮಾತ್ರ ಬಹಳ ಕುಪಿತಗೊಂಡಿರುತ್ತಾರೆ. ನಾನು ಈ ಮನೆ ಸೊಸೆ ಆದರೆ ನನಗೆ ಈ ಮನೆಯಲ್ಲಿ ಬಿಡುಗಾಸಿಗೆ ಕಿಮ್ಮತ್ತು ಇಲ್ಲ. ಆದರೆ ನಿನ್ನೆ ಮೊನ್ನೆ ಬಂದ ಭೂಮಿಕಾ ಇವರಿಗೆ ಹೆಚ್ಚದಳು ಎಂದು ಮನದಲ್ಲಿ ಕುದಿಯುತ್ತಿದ್ದಾರೆ.

More from Filmibeat

English summary
Amruthadhaare serial written update on 23rd October.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X