Amruthadhaare: ತಂದೆಯ ಮಾತಿನಂತೆ ನಡೆದುಕೊಳ್ಳುತ್ತಿರುವ ಭೂಮಿಕಾ, ಅಪರ್ಣಾ ಕೋಪಕ್ಕೆ ತುತ್ತಾಗುತ್ತಾಳಾ?

By Poorva

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಬಾಳಲ್ಲಿ ಆನಂದ್ ಬರುವುದಿಲ್ಲ ಎಂದು ಗೊತ್ತಾದ ಬಳಿಕ ಗೌತಮ್ ಇನ್ನಷ್ಟು ಕುಗ್ಗಿ ಹೋಗಿದ್ದಾನೆ. ಗೌತಮ್‌ಗೆ ಆನಂದ್ ಎಂದರೆ ಬಹಳ ಇಷ್ಟ ಚಿಕ್ಕ ವಯಸ್ಸಿನಿಂದಲೂ ಅತ್ಯುತ್ತಮ ಗೆಳೆಯರಾಗಿದ್ದ ಇವರು ಇದೀಗ ಜೈದೇವನ ಪಿತೂರಿಯಿಂದಾಗಿ ಬೇರೆಯಾಗುವ ಪರಿಸ್ಥಿತಿ ಬಂದಿದೆ .

ಇದನ್ನೆಲ್ಲ ನೋಡಿದ ಭೂಮಿಕಾಗೆ ಬಹಳ ಬೇಸರವಾಗಿದೆ ಗೌತಮ್ ದಿವಾನನನ್ನು ಆ ಪರಿಸ್ಥಿತಿಯಲ್ಲಿ ನೋಡಲು ಭೂಮಿಕಾಗೆ ಆಗುತ್ತಿಲ್ಲ. ಭೂಮಿಕಾ ಎಷ್ಟೇ ಗೌತಮ್‌ನನ್ನು ಮಾತನಾಡಲು ಪ್ರಯತ್ನಿಸಿದರು ಆತ ಏನು ಮಾತನಾಡದೆ ಆಫೀಸಿನತ್ತ ಹೋಗುತ್ತಾನೆ. ಆನಂದ್ ಆಫೀಸಿಗೆ ಬಂರದೆ ಇರುವುದನ್ನು ನೋಡಿದ ಗೌತಮ್ ಬಹಳ ಬೇಸರ ಮಾಡಿಕೊಳ್ಳುತ್ತಾನೆ. ಆ ಕೂಡಲೇ ಗೌತಮ್ ತನ್ನ ಕೆಲಸದವರ ಬಳಿಯಲ್ಲಿ ಆನಂದ್‌ಗೆ ಫೋನ್ ಮಾಡಿಸುತ್ತಾನೆ.

zee Kannada serial Amruthadhaare written update on 2th November

ಆನಂದ್ ಫೋನ್ ತೆಗೆಯದೆ ಇರುವುದನ್ನು ನೋಡಿದ ಗೌತಮನಿಗೆ ಬಹಳ ನೋವಾಗುತ್ತದೆ. ಇಷ್ಟು ದಿನದ ಸ್ನೇಹಕ್ಕೆ ನಾನೇ ಫುಲ್ ಸ್ಟಾಪ್ ಇಟ್ಟೆನಾ ಎಂದು ಬಹಳ ಬೇಸರ ಮಾಡಿಕೊಳ್ಳುತ್ತಾನೆ. ಗೌತಮ್ ಕಷ್ಟ ನಷ್ಟದಲ್ಲೂ ಆನಂದ್ ಯಾವಾಗಲೂ ಭಾಗಿಯಾಗಿರುತ್ತಾನೆ. ಆದರೆ ಇದೀಗ ಆನಂದ ಇಲ್ಲದ ಆಫೀಸ್ ಗೌತಮ್ ದಿವಾನ್‌ಗೆ ಬಿಕೋ ಎನಿಸಿದೆ.

ಗೌತಮ್ ಬಗ್ಗೆ ವಿಚಾರಣೆ ನಡೆಸುತ್ತಿರುವ ಭೂಮಿಕಾ

ಭೂಮಿಕಾ ಪದೇ ಪದೇ ಗೌತಮ್‌ಗೆ ಕಾಲ್ ಮಾಡಿದರು ಆತ ಮಾತ್ರ ಫೋನ್ ರಿಸೀವ್ ಮಾಡದೆ ಇರುವುದನ್ನು ನೋಡಿದ ಭೂಮಿಕಾ ಗೌತಮ್ ಕಾರ್ ಡ್ರೈವರ್ ಗೆ ಫೋನ್ ಮಾಡುತ್ತಾಳೆ. ಗೌತಮ್ ಬಗ್ಗೆ ವಿಚಾರಣೆ ನಡೆಸುತ್ತಾಳೆ ಗೌತಮ್ ತಿಂಡಿ ತಿಂದರೂ ಇಲ್ಲವೋ ಎನ್ನುವುದನ್ನು ಕಾರ್ ಡ್ರೈವರ್ ಬಳಿ ಕೇಳಿದಾಗ ಆತ ಇಲ್ಲ ಎಂದು ಹೇಳುತ್ತಾನೆ.ಇದನೆಲ್ಲ ನೋಡಿದ ಅಜ್ಜಿಗೆ ಬಹಳ ಖುಷಿಯಾಗುತ್ತದೆ ಗೌತಮ್ ಬಗ್ಗೆ ಸ್ವಲ್ಪನಾದರೂ ಕೇರ್ ತೆಗೆದುಕೊಳ್ಳುತ್ತಿದ್ದಾಳೆ ಎಂದು ಹೆಮ್ಮೆ ಪಡುತ್ತಾರೆ.

zee Kannada serial Amruthadhaare written update on 2th November

ಆನಂದ್ ಇಲ್ಲದ ಆಫೀಸ್‌ ನೋಡಿ ಬೇಸರಗೊಂಡ ಗೌತಮ್

ಇನ್ನು ಗೌತಮ್ ಹಾಗು ಆನಂದ ನಡುವಿನ ಸ್ನೇಹವನ್ನು ಸರಿಪಡಿಸಲೇಬೇಕು ಎನ್ನುವ ಉದ್ದೇಶದಿಂದ ಭೂಮಿಕಾ ತನ್ನ ತಂದೆಯನ್ನು ಭೇಟಿಯಾಗುತ್ತಾಳೆ. ಆಗ ಭೂಮಿಕಾ ತಂದೆ ಹೇಳ್ತಾರೆ ಗೌತಮ ಹಾಗೂ ಆನಂದ್ ಬಹಳ ಒಳ್ಳೆಯ ಸ್ನೇಹಿತರು ಅವರ ಬಗ್ಗೆ ಯಾರು ಮಾತನಾಡಿದರು ತಪ್ಪಾಗುತ್ತದೆ. ಅವರ ಸ್ನೇಹವನ್ನು ಬೇಕೆಂದು ಯಾರು ಹಾಳು ಮಾಡುತ್ತಿದ್ದಾರೆ ಅವರನ್ನು ನಾವು ಪತ್ತೆ ಹಚ್ಚಲೇಬೇಕು ಎಂದು ಹೇಳಿದಾಗ ಭೂಮಿಗೆ ವಿಷಯ ತಿಳಿಯುತ್ತದೆ .

ಆನಂದ್ ಮನೆಗೆ ಹೋದ ಭೂಮಿಕಾ

ಆ ಕೂಡಲೇ ಭೂಮಿಕಾ ಆನಂದನನ್ನು ಹೇಗಾದರೂ ಭೇಟಿಯಾಗಲೇಬೇಕೆಂದು ಯೋಚನೆ ಮಾಡುತ್ತಾಳೆ. ಭೂಮಿಕಾ ಆಟೋದಲ್ಲಿ ಆನಂದ ಮನೆಗೆ ಹೋಗುತ್ತಾಳೆ. ಆನಂದ ಮನೆಗೆ ಹೋದ ಕೂಡಲೇ ಕಾಲಿಂಗ್ ಬೇಲ್ ಒತ್ತುತ್ತಾಳೆ. ಅಪರ್ಣಾ ಹೊರಗಡೆ ಬಂದು ಬಾಗಿಲು ತೆಗಿಯುತ್ತಾಳೆ. ಭೂಮಿಕಾಳನ್ನು ನೋಡಿ ಬಹಳ ಕೋಪ ಮಾಡಿಕೊಂಡಿದ್ದಾಳೆ. ಭೂಮಿಕಾ ಮೇಲೆ ಅಪರ್ಣಾ ಜೋರಾಗಿ ಕೂಗಾಡಿ ಬಿಡುತ್ತಾಳೆ. ಆನಂದ್‌ನನ್ನು ಭೇಟಿಯಾಗಲು ಬಿಡುತ್ತಾಳ ಇಲ್ಲವೋ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ.

More from Filmibeat

English summary
Amruthadhaare serial written update on 2th November.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X