Amruthadhaare: ಆನಂದ್ ನೆನಪಲ್ಲಿ ಒದ್ದಾಡುತ್ತಿರುವ ಗೌತಮ್, ಪರಿಹಾರ ಕೊಡ್ತಾಳಾ ಭೂಮಿಕಾ?
ಗೌತಮ್ ದಿವಾನ್ ತನ್ನ ಸ್ನೇಹಿತನ ಮೇಲೆ ಅನುಮಾನ ಮೂಡಿದೆ. ಹೇಗಾದರೂ ಮಾಡಿ ಗೌತಮ್ ಹಾಗೂ ಆತನ ಸ್ನೇಹಿತನನ್ನು ದೂರ ಮಾಡಲೇಬೇಕೆಂದು ಜಯದೇವ ಹೊಂಚು ಹಾಕುತ್ತಿದ್ದ. ಬಹಳ ನಾಜುಕಾಗಿ ಆನಂದನ್‌ನನ್ನು ಆಪತ್ತಿಗೆ ಸಿಲುಕಿಸಿದ್ದಾರೆ.
ಆನಂದ್ ಎಷ್ಟೇ ತನ್ನ ಗೆಳೆಯನ ಬಳಿ ಬೇಡಿಕೊಂಡರು, ಗೌತಮ್ ದಿವಾನ್ ಮಾತ್ರ ತನ್ನ ಕುಟುಂಬದವರ ಬಗ್ಗೆ ಯಾರು ಆರೋಪ ಮಾಡಬೇಕಾಗಿಲ್ಲ ನನ್ನ ಕುಟುಂಬದವರು ಏನೆಂದು ನನಗೆ ಗೊತ್ತಿದೆ ಎಂದಾಗ ಆನಂದ್ ಬಹಳ ಬೇಸರಗೊಳ್ಳುತ್ತಾನೆ. ಆನಂದ್ ಗೌತಮ್ ಗೋಸ್ಕರ ಏನು ಬೇಕಾದರೂ ಮಾಡಲು ಸಿದ್ಧನಿದ್ದ. ಆದರೆ ಗೌತಮ್ ಮನೆಯವರು ಮಾತ್ರ ಹಣಕ್ಕಾಗಿ ಆತನನ್ನ ಬಳಸಿಕೊಳ್ಳುತಿದ್ದರು.

ಆನಂದ್ ಮೇಲೆ ಜೈದೇವ್‌ಗೆ ಬಹಳ ಸಿಟ್ಟು ಇರುತ್ತದೆ. ಹೇಗಾದರೂ ಕಂಪನಿಯಿಂದ ದೂರ ಮಾಡಬೇಕೆಂದು ಪ್ರಯತ್ನ ಪಡುತ್ತಿರುತ್ತಾನೆ. ಆದರೆ ಈ ವಿಚಾರ ಯಾರಿಗೂ ತಿಳಿದಿರುವುದಿಲ್ಲ. ಜೈದೇವ್ ಬಹಳ ದೊಡ್ಡ ಕುತಂತ್ರಿ ಎನ್ನುವುದು ಆನಂದನಿಗೆ ತಿಳಿದಿತ್ತು. ಆನಂದ್ ಮಾತ್ರ ಜೈದೇವ್ ಬಗ್ಗೆ ಗೌತಮ್ ಬಳಿ ಏನು ಹೇಳಿರಲಿಲ್ಲ, ಗೌತಮ್ ಕಷ್ಟ ಕಾಲಕ್ಕೆ ಆಗಿದ್ದು ಆನಂದ್. ಆದರೆ ಇದೀಗ ಆನಂದ ಮೇಲೆ ಕಳ್ಳತನದ ಆರೋಪ ಬಂದಿದೆ ಆದರೂ ಗೌತಮ್ ಏನು ಮಾಡುವ ಸ್ಥಿತಿಯಲ್ಲಿ ಇಲ್ಲ .
ಆನಂದ್ ಮಾತಿಗೆ ಬೆಲೆ ಕೊಡದ ಗೌತಮ್
ಸಿಸಿಟಿವಿಯಲ್ಲಿ ಆನಂದ್ ಬಳಿ ಹಾರ ಇರುವುದನ್ನು ನೋಡಿದ ಗೌತಮ್ ಆನಂದ ಬಳಿ ಹಾರವನ್ನು ಮರಳಿ ಕೊಡುವಂತೆ ಕೇಳುತ್ತಾನೆ. ಇದನ್ನು ಕೇಳಿದ ಆನಂದ್‌ಗೆ ಸಿಡಿಲು ಬಡಿದ ಹಾಗೆ ಆಗುತ್ತದೆ. ನನ್ನ ಗೆಳೆಯನೆ ನನ್ನನ್ನು ನಂಬುತ್ತಿಲ್ಲ ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾನೆ. ತನ್ನ ಗೆಳೆಯನಿಗಾಗಿ ವಿದೇಶದಲ್ಲಿ ಕೆಲಸ ಸಿಕ್ಕಿದ್ದನ್ನು ಕೂಡ ಬಿಟ್ಟಿದ್ದ ಆನಂದ್‌ಗೆ ನೋವಾಗಿದೆ.

ಆನಂದ್ ಮೇಲೆ ಕಳ್ಳತನದ ಆರೋಪ
ಗೌತಮ್ ಆ ರೀತಿಯೆಲ್ಲ ಆನಂದ್ ಬಳಿ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ಆನಂದ್ ಕೂಡಲೇ ಅಲ್ಲಿಂದ ಹೋಗುತ್ತಾನೆ. ಗೌತಮ್ ಆನಂದ್ ಇದ್ದಾನೆ ಎಂದು ತಿಳಿದು ತಿರುಗಿ ನೋಡಿದಾಗ ಆನಂದ್ ಅಳುತ್ತ ಹೋಗುತ್ತಿರುತ್ತಾನೆ. ಇದನ್ನು ನೋಡಿದ ಗೌತಮ್ ಗೆ ತಾನು ಏನಾದರು ತಪ್ಪು ಮಾಡಿ ಬಿಟ್ಟೇನಾ ಎಂಬ ಯೋಚನೆ ಬರುತ್ತದೆ.
ಗೌತಮ್ ಮನದ ದುಗುಡ ದೂರ ಮಾಡುತ್ತಾಳ ಭೂಮಿಕಾ ?
ಇನ್ನೂ ರಾತ್ರಿಯೆಲ್ಲಾ ಆನಂದ್ ನೆನಪಲ್ಲೇ ಇದ್ದ ಗೌತಮ್ ಬೆಳಗ್ಗೆ ಭೂಮಿಕಾ ಎದ್ದೇಳುವ ಮುಂಚೆಯೆ ಎದ್ದು ಹೋಗಿದ್ದಾನೆ. ಆತ ಬೆಡ್ ಮೇಲೆ ಇಲ್ಲದಿರುವುದನ್ನು ನೋಡಿದ ಭೂಮಿಕಾ ಮನೆಯ ಕೆಲಸದವರ ಬಳಿ ಗೌತಮ್ ಬಗ್ಗೆ ಕೇಳುತ್ತಾಳೆ. ಆತ ವಾಕಿಂಗ್ ಹೋಗಿರಬಹುದು ಎಂದು ತಿಳಿದು ಆತನನ್ನು ಹುಡುಕಿಕೊಂಡು ಹೋಗುತ್ತಾಳೆ. ಇತ್ತ ವಾಕಿಂಗ್ ಗೆ ಹೋದ ಗೌತಮ್ ತನ್ನ ಗೆಳೆಯ ಆನಂದ್ ನೆನಪಿನಲ್ಲಿದ್ದನೆ. ಆ ವೇಳೆ ಭೂಮಿಕಾಳನ್ನು ನೋಡಿದ ಗೌತಮ್ ಎನು ಹೇಳಬೇಕು ಎಂದು ತಿಳಿಯದೇ ಸುಮ್ಮನಿರುತ್ತಾನೆ. ಇನ್ನೂ ಗೌತಮ್ ನನ್ನು ನೋಡಿದ ಭೂಮಿಕಾಗೆ ತನ್ನ ಗಂಡನ ಮನದಲ್ಲಿ ಸಾವಿರ ಗೊಂದಲ ಇದೆ ಎಂದುಕೊಳ್ಳುತ್ತಾಳೆ. ಗೌತಮ್ ಮಾಡಿದ ತಪ್ಪನ್ನು ಭೂಮಿಕಾ ಹೇಳುತ್ತಾಳ ಕಾದು ನೋಡಬೇಕಿದೆ.y


Click it and Unblock the Notifications











