Amruthadhaare: ಹೆಂಡತಿಯ ಪರ ನಿಂತ ಗೌತಮ್, ಮಗನ ಮಾತು ಕೇಳಿ ಶಾಕುಂತಲ ಫುಲ್ ಶಾಕ್!
ಅಮೃತದಾರೆ ಧಾರಾವಾಹಿ ನೋಡುಗರಿಗೆ ಇನ್ನಷ್ಟು ಕುತೂಹಲ ಮೂಡಿಸುತ್ತಿದೆ. ಹೌದು ಆನಂದ ಹಾಗೂ ಗೌತಮ್ ಕೊಂಚಮಟ್ಟಿಗೆ ದೂರ ದೂರ ಆಗಿದ್ದಾರೆ. ಆನಂದ್ ಮನೆ ಬಳಿ ಹೋದಾಗ ಅಳುತ್ತಾ ಇರುತ್ತಾನೆ. ತಾನು ತಪ್ಪು ಮಾಡಿಬಿಟ್ಟೆ. ನನ್ನ ಸ್ನೇಹಿತ ನನ್ನನ್ನ ಇದೀಗ ಬಿಟ್ಟು ಹೋಗಿದ್ದಾನೆ. ಚಿಕ್ಕ ವಯಸ್ಸಿನಿಂದಲೂ ನನ್ನ ಸ್ನೇಹಿತ ನನ್ನ ಜೊತೆ ಇದ್ದ ನನ್ನ ಎಲ್ಲಾ ಕಷ್ಟ ಸುಖದಲ್ಲೂ ಭಾಗಿಯಾಗಿದ್ದ. ಆದರೆ, ಇದೀಗ ಆತನಿಗೆ ಸಿಕ್ಕಿದ್ದು ಕಳ್ಳತನದ ಪಟ್ಟ. ಆದರೂ ನನ್ನ ಸ್ನೇಹಿತ ಒಂದು ಮಾತನಾಡದೆ ನನ್ನನ್ನು ಬಿಟ್ಟು ಹೋದ ಎಂದು ಬಹಳ ಬೇಸರ ಮಾಡಿಕೊಂಡು ಜೋರಾಗಿ ಅಳುತ್ತಾನೆ.
ಆದರೆ ಗೌತಮ್ ಅಳು ಆನಂದ್‌ಗೆ ಕೇಳಿಸಲಿಲ್ಲ ಆತ ಅಳುತಿರಬೇಕಾದರೆ ಆನಂದ್ ಮನೆ ಮುಂದೆ ಬಹಳ ಜೋರಾಗಿ ಮಳೆ ಸುರಿಯುತ್ತಿತ್ತು. ಇನ್ನು ಗೌತಮ್ ನೋವು ನೋಡಲಾಗದೆ ಭೂಮಿಕಾ ಬಹಳ ಬೇಸರಪಟ್ಟುಕೊಂಡಿದ್ದಳು. ಆನಂದ್ ಬಳಿ ಮಾತನಾಡೋಣ ಅಂದರೆ ಅಪರ್ಣಾ ಭೂಮಿಕಾಳನ್ನು ತಡೆಯುತ್ತಾಳೆ. ಹೀಗಾಗಿ ಏನು ಮಾಡಬೇಕೆಂದು ತಿಳಿಯದೆ ಗೌತಮ್‌ಗೆ ಸಮಾಧಾನ ಮಾಡುತ್ತಾಳೆ.

ಭೂಮಿಕಾ ಬಳಿ ವಿಚಾರಣೆ ಮಾಡಲು ಹೋದ ಶಾಕುಂತಲ
ಆ ರಾತ್ರಿ ನೋವಿನಲ್ಲಿ ಹಾಗೆ ಕಳೆದು ಹೋಗುತ್ತದೆ. ಇನ್ನು ಬೆಳಗ್ಗೆ ಎದ್ದ ತಕ್ಷಣ ಭೂಮಿಕಾ ದೇವರಿಗೆ ಪೂಜೆಯನ್ನು ಮಾಡುತ್ತಿರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಶಕುಂತಲಾ ಬರುತ್ತಾಳೆ. ಶಕುಂತಲಾ ಅಣ್ಣ, ನಿನ್ನೆ ಭೂಮಿಕಾ ಹಾಗೂ ಗೌತಮ್ ಇರಲಿಲ್ಲ ಯಾಕೆ ಏನು ಎಂಬುದನ್ನು ಇದೀಗ ವಿಚಾರಣೆ ಮಾಡು. ಎಲ್ಲಿಗೆ ಹೋಗಿದ್ದರು ಎಂಬುದನ್ನ ಕೇಳು ಎಂದು ಶಕುಂತಲಾ ಬಳಿ ಹೇಳುತ್ತಾನೆ.
ಹೀಗಾಗಿ ಶಕುಂತಲಾ ಎಂದು ಹೇಳಿ ದೇವರಿಗೆ ಕೈ ಮುಗಿದು ಭೂಮಿಕಾ ಬಳಿ, " ಭೂಮಿಕಾ ನೆನ್ನೆ ನೀನು ಎಲ್ಲಿಗೆ ಹೋಗಿದ್ದೆ. ನಿನ್ನೆ ನೀನು ಇರಲಿಲ್ಲ ಗೌತಮ್ ಕೂಡ ಇರಲಿಲ್ಲ ನೀವಿಬ್ಬರೂ ಎಲ್ಲಿಗೆ ಹೋಗಿದ್ರಿ..?" ಎಂದು ಕೇಳುತ್ತಾಳೆ.

ಅತ್ತೆಯ ಮಾತಿಗೆ ತಬ್ಬಿಬ್ಬಾದ ಭೂಮಿಕಾ
ಅತ್ತೆಯ ಮಾತು ಕೇಳಿದ ಭೂಮಿಕಾಗೆ ಏನು ಹೇಳಬೇಕೆಂದು ತಿಳಿಯದಾಗುತ್ತದೆ. ಆಕೆ ಸುಮ್ಮನೆ ನಿಂತಿರುತ್ತಾಳೆ. ಸುಮ್ಮನೆ ನಿಂತಿರುವುದನ್ನು ನೋಡಿದ ಶಕುಂತಲಾ, ನೀವಿಬ್ಬರು ನಿನ್ನೆ ಎಲ್ಲಿಗೆ ಹೋಗಿದ್ದೀರಿ ನನಗೆ ಬಹಳ ಭಯವಾಯಿತು. ನಿನಗೆ ಕೊಡಬೇಕಾಗಿದ್ದ ಸರ ಕೂಡ ಮಾಯವಾಗಿದೆ. ಈ ಸಂದರ್ಭದಲ್ಲಿ ಹೊರಗೆ ಹೋಗುವಾಗ ಒಂದು ಮಾತು ನನ್ನ ಬಳಿ ಹೇಳಬೇಕಾಗಿತ್ತು. ಯಾಕೆ ನೀವು ನನ್ನ ಬಳಿ ಹೇಳಿ ಹೋಗಲಿಲ್ಲ ಎಂದು ಶಕುಂತಲಾ ದೇವಿ ಭೂಮಿಕಾ ಬಳಿ ಪದೇ ಪದೇ ಕೇಳುತ್ತಿರುವಾಗ ಅಲ್ಲಿಗೆ ಗೌತಮ್ ಬರುತ್ತಾನೆ.
ಹೆಂಡತಿಯ ಮನಸನ್ನು ಅರಿತ ಗೌತಮ್
ಭೂಮಿಕಾ ವಿಚಾರಣೆ ನೋಡಿದ ಗೌತಮ್, ಭೂಮಿಕಾಳನ್ನು ಬರಲು ಹೇಳಿದ್ದು ನಾನೇ. ಆಕೆಗೆ ಏನು ಹೇಳಬೇಡಿ ಎಂದು ಹೇಳುತ್ತಾನೆ. ಇದನ್ನು ಕೇಳಿಸಿಕೊಂಡ ಶಕುಂತಲಾ ದೇವಿಗೆ ಶಾಕ್ ಆಗುತ್ತದೆ. ನನ್ನ ಮಗ ಯಾವತ್ತು ನನ್ನ ಬಳಿ ಇತರ ಮಾತನಾಡಿದವನೇ ಅಲ್ಲ. ಆದರೆ ಇದೀಗ ಹೆಂಡತಿ ಪರ ವಹಿಸಿಕೊಂಡು ಬರುತ್ತಿದ್ದಾನೆ ಎಂದು ಮನದಲ್ಲಿ ಅಂದುಕೊಳ್ಳುತ್ತಾರೆ.
ಆದರೂ, ಮನೆಯಲ್ಲಿ ಇಷ್ಟೆಲ್ಲಾ ರಾಧಂತ ಆಗಿರಬೇಕಾದರೆ ನೀವಿಬ್ಬರೂ ಮನೆಯಲ್ಲಿ ಇರಲಿಲ್ಲ. ನಮಗೆ ಬಹಳ ಭಯವಾಗಿತ್ತು. ಆ ಕಾರಣದಿಂದ ಆಗಿ ಈ ರೀತಿ ಕೇಳಿದೆ.. ಇನ್ನೂ ನಿಮ್ಮ ಬಳಿ ಎನು ಕೇಳುವುದು ಇಲ್ಲ ಎಂದು ಶಕುಂತಲಾ ಹೇಳಿದಾಗ ಗೌತಮ್ ತನ್ನ ತಾಯಿಯ ಬಳಿ ಕ್ಷಮೆ ಕೇಳುತ್ತಾನೆ.


Click it and Unblock the Notifications











