ಭೂಮಿಗೆ ಬಂದು ವಿವಾದ ಹುಟ್ಟುಹಾಕಿದ 'ಭಗವಂತ'!: ಕನ್ನಡಪರ ಹೋರಾಟಗಾರರನ್ನು ಕೆಣಕಿತಾ ಜೀ ಕನ್ನಡ!?
ಭೂಮಿಗೆ ಬಂದ ಭಗವಂತ ಪ್ರತಿದಿನವೂ ಒಂದು ಸಾಮಾಜಿಕ ಕಳಕಳಿಯನ್ನ ಸಾರುವ ಕಥೆಯ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿತ್ತು. ಈಗಲೂ ಸಹ ಕನ್ನಡ ರಾಜ್ಯೋತ್ಸವ ಬಂದ ಹಿನ್ನೆಲೆಯಲ್ಲಿ ಕನ್ನಡದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಕಥೆಯನ್ನು ಬರೆಯಲಾಗಿದೆ. ಕನ್ನಡದ ಬಗ್ಗೆ ಸಂಭಾಷಣೆಯನ್ನು ಬರೆದು ಕಳೆದ ಮೂರು ದಿನದಿಂದಲೂ ಎಪಿಸೋಡ್ ಮಾಡುತ್ತಾ ಬರಲಾಗುತ್ತಿದೆ. ಕೆಲವೊಂದು ಸಂಭಾಷಣೆಗೆ ಪರವಿರೋಧ ಎರಡು ಸಹ ವ್ಯಕ್ತವಾಗಿದೆ. ಭಗವಂತ ಇಲ್ಲಿ ಕನ್ನಡದ ಮಾಸ್ಟರ್ ಆಗಿ ಎಂಟ್ರಿ ಕೊಟ್ಟಿದ್ದಾರೆ.
ಇಲ್ಲಿ ಎಲ್ಲರಿಗೂ ಸಹ ಕನ್ನಡದ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಭಗವಂತ ದತ್ತ ಮೇಷ್ಟ್ರಾಗಿದ್ದಾರೆ. ಶಿವಪ್ರಸಾದ್ ಸಹ ತನ್ನ ಮಗನಿಗೆ ಕನ್ನಡದಲ್ಲಿ ಪ್ರತಿಯೊಂದು ಹೇಳಿಕೊಡುವ ಕೆಲಸವನ್ನ ಮಾಡುತ್ತಾ ಇದ್ದಾರೆ ನಮ್ಮ ಸುತ್ತಮುತ್ತ ಪ್ರತಿಭಟನೆಗಳು ನಡೆಯುವ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ ಎಂಬೆಲ್ಲಾ ಕಥೆಯನ್ನು ಸಹ ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಪ್ರತಿದಿನವೂ ಸಹ ಕನ್ನಡವನ್ನ ಉಳಿಸಿ ಬೆಳೆಸಬೇಕು ಎಂಬುದನ್ನು ಸಾರಲು ಈ ಎಪಿಸೋಡ್ ಗಳನ್ನು ತರಲಾಗುತ್ತಿದೆ ಆದರೆ ಭಗವಂತ ಆಡಿದ ಆ ಒಂದೇ ಒಂದು ಮಾತು ಈಗ ವಿರೋಧ ಚರ್ಚೆಗೆ ಕಾರಣವಾಗಿದೆ.

ಶಿವಪ್ರಸಾದ್ ಹಾಗೂ ಗಿರಿಜಾ ಮೂಲಕ ಕನ್ನಡದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನ ಮಾಡಲಾಗಿತ್ತು. ಕರ್ನಾಟಕಕ್ಕೆ ಯಾರೇ ಬಂದರೂ ಸಹ ನೀರು ಕೇಳಿದರೆ ಪಾನಕವನ್ನ ಕೊಡುವ ಸಂಪ್ರದಾಯ ನಮ್ಮದು, ಎಂದೆಲ್ಲಾ ತೋರಿಸುವ ಮೂಲಕ ಕನ್ನಡಿಗರು ವಿಶಾಲ ಹೃದಯದವರು. ಯಾರೇ ಕರ್ನಾಟಕಕ್ಕೆ ಬಂದರು ಅವರೆಲ್ಲರನ್ನು ಪ್ರೀತಿಯಿಂದ ಸ್ವಾಗತ ಮಾಡುತ್ತಾರೆ ಎಂಬ ಸಂದೇಶವನ್ನು ಸಾರಲಾಗಿತ್ತು. ನಂತರ ಭಗವಂತ ದತ್ತ ಮೇಷ್ಟ್ರಾಗಿ ಬಂದಿದ್ದು ಶಿವಪ್ರಸಾದ್ ಮಗನಿಗೆ ಕನ್ನಡದ ಬಗ್ಗೆ ಸಾಕಷ್ಟು ಜ್ಞಾನ ಬೆಳೆಸಿಕೊಳ್ಳಲು ಕಾರಣರಾಗಿದ್ದಾರೆ. ಈ ವೇಳೆ ಶಿವಪ್ರಸಾದ್ ಮನೆ ಮುಂದೆ ಒಂದು ಟೈಲರಿಂಗ್ ಅಂಗಡಿ ಇದ್ದು ಆತ ಇಂಗ್ಲಿಷ್ ನಲ್ಲಿ ಬೋರ್ಡ್ ಹಾಕಿಕೊಂಡಿದ್ದ ಇಲ್ಲಿ ಬಂದಂತಹ ಒಂದು ಸೀನ್‌ನ ಸಾರಾಂಶ ಪರ ವಿರೋಧಕ್ಕೆ ಕಾರಣವಾಗಿದೆ.
ಇಂಗ್ಲೀಷ್ ಬೋರ್ಡ್ ಬಗ್ಗೆ ಮಾತನಾಡಿದ್ದಕ್ಕೆ ಪರ-ವಿರೋಧ
ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಕನ್ನಡದ ಮಹತ್ವವನ್ನು ಸಾರುವ ಕೆಲಸ ಮಾಡಬೇಕು ಎಂದುಕೊಂಡು ಸಂಭಾಷಣೆಯನ್ನ ಬರೆಯಲಾಗಿದೆ. ಆದರೆ ಇಲ್ಲಿ ಆಡಿದ ಪ್ರತಿಯೊಂದು ಮಾತಿಗೂ ಕೂಡ ಪರ ವಿರೋಧ ವ್ಯಕ್ತವಾಗಿದೆ. ಕನ್ನಡವನ್ನು ಕರುಣೆಯ ಭಾಷೆ ಕೆಣಕುವ ಭಾಷೆಯಲ್ಲ ನಾವು ಕನ್ನಡವನ್ನ ಬಳಸಿ ಬೆಳೆಸಬೇಕು ಎಂದು ಹೇಳಿದ್ದರು. ಇನ್ನು ಹೋರಾಟಗಾರರು ಸಹ ಹೋರಾಟ ಮಾಡುವಾಗ ಪ್ರತಿಯೊಂದು ಪ್ರೀತಿಯಿಂದ ಹೇಳಬೇಕು ಎಂದು ಹೇಳಿದ ಮಾತಿಗೆ ಇಲ್ಲಿ ವಿರೋಧ ಪರ ಎರಡು ವ್ಯಕ್ತವಾಗಿವೆ.
ಶಿವಪ್ರಸಾದ್ ಮನೆ ಮುಂದೆ ಒಂದು ಟೈಲರಿಂಗ್ ಶಾಪ್ ಇದ್ದು ಅಲ್ಲಿ ಟೈಲರ್ ತನ್ನ ಅಂಗಡಿಗೆ ಇಂಗ್ಲಿಷ್‌ನಲ್ಲಿ ಬೋರ್ಡ್ ಬರೆದು ನೇತು ಹಾಕಿಸಿದ್ದನು. ಇದನ್ನು ನೋಡಿದ ಕನ್ನಡಪರ ಹೋರಾಟಗಾರರು ಬೋರ್ಡ್ ಗೆ ಮಸಿ ಬೆಳೆಯುವ ಕೆಲಸವನ್ನ ಮಾಡಿದ್ದರು. ನಂತರ ಟೈಲರ್‌ಗೂ ಮಸಿ ಬಳೆಯಲು ಹೋಗಿದ್ದರು ಇದೇ ವೇಳೆ ಶಿವಪ್ರಸಾದ್ ಶಂಕರಣ್ಣ ಕನ್ನಡ ಅಭಿಮಾನಿಗೆ ಮಸಿ ಬೆಳೆಯುವ ಕೆಲಸ ಆಗಬಾರದು ಎಂದು ಭಗವಂತನ ಬಳಿ ಬೇಡಿಕೊಂಡನು ಅಲ್ಲಿಗೆ ಬಂದ ಭಗವಂತ ನೀವು ಮಸಿ ಬೆಳೆಯುವ ಕೆಲಸ ಮಾಡಬಾರದು ಎಂದಿದ್ದಾರೆ.

ಹೋರಾಟಗಾರರ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದ್ಯಾ?
ಭಗವಂತ ಪಾತ್ರಧಾರಿ ಕನ್ನಡಪರ ಹೋರಾಟಗಾರರನ್ನು ಕನ್ನಡದ ವ್ಯಾಕರಣ, ಮಹತ್ವದಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅವರು ಮಾತನಾಡಿರುವ ಮಾತುಗಳೆಲ್ಲವೂ ಕನ್ನಡ ಪರ ಹೋರಾಟಗಾರರ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಸಂಧಿ ಸಮಾಸ ಇದ್ಯಾವುದು ಸಹ ಗೊತ್ತಿಲ್ಲದಿದ್ದರೆ ಕನ್ನಡ ಹೋರಾಟ ಮಾಡಲು ಆಗುವುದಿಲ್ಲವೇ ಎಂದು ಜನ ಪ್ರಶ್ನೆ ಮಾಡಿದ್ದಾರೆ. ಪರಭಾಷಿಕರ ಮೇಲೆ ನಾವು ಕರುಣೆ ತೋರುತ್ತಿರುವುದರಿಂದಲೇ ಕನ್ನಡ ಕರುನಾಡಲ್ಲಿ ಕಣ್ಮರೆಯಾಗುತ್ತಿರುವುದು ಎಂದೆಲ್ಲ ಅಸಮಾಧಾನ ವ್ಯಕ್ತವಾಗಿದೆ.
ಟಿವಿ ಚಾನೆಲ್‌ಗಳು ಕನ್ನಡ ಹೋರಾಟಗಾರರಿಗೆ ಪಾಠ ಹೇಳುವ ಮಟ್ಟಕ್ಕೆ ಹೋಗಿದ್ದಾರೆ ಇದು ಯಾವುದೂ ಕೂಡ ಸರಿಯಲ್ಲ. ಕನ್ನಡ ಪ್ರೇಮ ಅಭಿಮಾನವನ್ನು ಈ ರೀತಿ ಚಿತ್ರಿಸಿದರೆ ಮುಂದೆ ಕನ್ನಡ ಭಾಷೆಗೆ ಅತಿ ದೊಡ್ಡ ಹೊಡೆತ ಬೀಳುತ್ತದೆ ಎಂದೆಲ್ಲಾ ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











