'ಭೂಮಿಗೆ ಬಂದ ಭಗವಂತ' ಅಮ್ಮ, ಚಿಕ್ಕಮ್ಮ, ಮಗಳಿಗೆ ಒಂದೇ ವಯಸ್ಸಾ..? ಈ ಫೋಟೋ ಹೇಳ್ತಿರೋದೇನು?
ಫಿಟ್ನೆಸ್ ಇದ್ರೆ ನೋಡೋಕು ಚೆಂದ. ಇತ್ತೀಚಿನ ದಿನಗಳಲ್ಲಿ ವರ್ಕೌಟ್ ಮಾಡದವರೇ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರೋರಿಗೆ ಇದರ ಅನುಭವವಾಗಿರುತ್ತೆ. ಯಾರ ಪ್ರೊಫೈಲ್ ನೋಡಿದ್ರು ಆಗಾಗ ಅವರ ವರ್ಕೌಟ್ ವಿಡಿಯೋಗಳು ನಮ್ಮ ಕಣ್ಣು ಕುಕ್ಕುತ್ತವೆ. ವರ್ಕೌಟ್ ಮಾಡೋದ್ರಿಂದ ಫಿಟ್ನೆಸ್ ಕಾಪಾಡಿಕೊಳ್ಳಬಹುದು. ಫಿಟ್ನೆಸ್ ಕಾಪಾಡಿಕೊಳ್ಳುವುದರಿಂದ ವಯಸ್ಸಿನ ಅಂತರವನ್ನು ಕಡಿಮೆಗೊಳಿಸುತ್ತದೆ. ಅದೇ ಅದರ ಸೀಕ್ರೆಟ್.
ಏನಿವತ್ತು ಫಿಟ್ನೆಸ್ ಬಗ್ಗೆ ಇಷ್ಟೊಂದು ಟೀಚಿಂಗ್ ಮಾಡ್ತಾ ಇದ್ದಾರೆ ಅಂದ್ಕೊಂಡ್ರಾ? ಈ ಸ್ಟೋರಿಗೆ ಸಂಬಂಧಿಸಿದ ಫೋಟೋವೊಂದಿದೆ. ಅದನ್ನು ನೋಡಿದ್ರೆ, ನೆಕ್ಸ್ಟ್ ಮೂಮೆಂಟ್ ನೀವೂ ಕೂಡ ವರ್ಕೌಟ್ ಹೋಗುವ ಯೋಚನೆ ಮಾಡಿಯೇ ಮಾಡ್ತೀರ. 'ಭೂಮಿಗೆ ಬಂದ ಭಗವಂತ' ಧಾರಾವಾಹಿಯ ಸ್ಪೂರ್ತಿದಾಯಕ ಕಥೆ ಇದಾಗಿದೆ.

ಗಿರಿಜಾ, ತಂಗಿ, ಮಗಳು ಮಿಂಚಿಂಗ್
ಭೂಮಿಗೆ ಬಂದ ಭಗವಂತ ಧಾರಾವಾಹಿಯಲ್ಲಿ ಕೃತಿ, ಗಿರಿಜಾ ಆಗಿ ಕಾಣಿಸಿಕೊಂಡಿದ್ದಾರೆ. ಅಂಕಿತ ಅವರ ಮಗಳಾಗಿದ್ದರೆ ಅಶ್ವಿನಿ ತಂಗಿಯಾಗಿ ಕಾಣಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲೂ ಅಷ್ಟೇ ಅಕ್ಕ-ತಂಗಿಯರ ನಡುವೆ ಆತ್ಮೀಯತೆ ಸ್ವಲ್ಪ ಜಾಸ್ತಿನೇ ಇದೆ. ಅಕ್ಕ ಕಷ್ಟಕ್ಕೆ ತಂಗಿ, ತಂಗಿ ಕಷ್ಟಕ್ಕೆ ಅಕ್ಕ ಬೆಂಬಲವಾಗಿನೇ ನಿಲ್ತಾರೆ. ಸದ್ಯ ಮನೆಯ ಮೂರು ಮಂದಿ ಈಗ ಮಿಂಚುತ್ತಿದ್ದಾರೆ. ಮೆರೂನ್ ಕಲರ್ ಲೆಹಂಗಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಜುಮ್ಕಾ ಹಾಡಿಗೆ ರೀಲ್ಸ್
ಇತ್ತೀಚೆಗಂತು ಕೆಲವೊಂದು ಹಾಡುಗಳು ನೋಡ ನೋಡುತ್ತಲೇ ಫೇಮಸ್ ಆಗಿ ಬಿಡುತ್ತವೆ. ಅದರಲ್ಲಿ ಜುಮ್ಕಾ ಹಾಡು ಕೂಡ ಒಂದು. Instagram ಓಪನ್ ಮಾಡಿದ್ರೆ ಸಾಕು ಓ ಜುಮ್ಕಾ.. ಹೇ ಜುಮ್ಕಾ ಅಂತ ಎಲ್ಲರೂ ಜುಮ್ಕಾ ಹಾಕಿ, ಅದಕ್ಕೊಂದಿಷ್ಟು ಈಸಿ ಸ್ಟೆಪ್ ಆಗಿ ಅಪ್ಲೋಡ್ ಮಾಡಿರೋದೆ ಕಣ್ಣಿಗೆ ಬೀಳುತ್ತದೆ. ಟ್ರೆಂಡಿಂಗ್ ಇರುವಂತ ಹಾಡುಗಳಿಗೆ ಎಲ್ಲರೂ ರೀಲ್ಸ್ ಮಾಡುತ್ತಾರೆ. ಇದೀಗ 'ಭೂಮಿಗೆ ಬಂದ ಭಗವಂತ' ತಂಡದ ಮೂವರು ಹೆಣ್ಣು ಮಕ್ಕಳು ಜುಮ್ಕಾ ಹಿಡಿದು ಹಾಡಿದ್ದಾರೆ.

ಅಮ್ಮ, ಚಿಕ್ಕಮ್ಮ, ಮಗಳು ವಯಸ್ಸೇ ಆಗಲ್ವಾ?
ಗಿರಿಜಾ, ಮಗಳಿ, ತಂಗಿ ಮೂವರು ಲೆಹೆಂಗಾ ಹಾಕಿದ್ದಾರೆ. ಮದು ಮಕ್ಕಳಂತೆ ರೆಡಿಯಾಗಿದ್ದಾರೆ. ಅಪ್ಸರೆಯರಂತೆ ಕಾಣುತ್ತಿದ್ದಾರೆ. ಮೂವರನ್ನು ನೋಡಿದರೆ ವಾವ್ ಇವ್ರು ಅಮ್ಮ ಮಕ್ಕಳು ಅನಿಸುವುದೇ ಇಲ್ಲ. ಫ್ರೆಂಡ್ಸ್ ರೀತಿ, ಮೂವರು ಚಿಕ್ಕ ವಯಸ್ಸಿನವರಂತೆ ಕಾಣುತ್ತಾರೆ. ಎಲ್ಲರೂ ಶಬ್ಬಾಶ್ ಅಂತಿದ್ದಾರೆ. ಸೂಪರ್ ಆಗಿದೆ, ಬ್ಯೂಟಿಫುಲ್, ಮುದ್ದಾಗಿ ಕಾಣ್ತಿದ್ದೀರಾ ಅಂತೆಲ್ಲ ಕಮೆಂಟ್ ಹಾಕ್ತಾ ಇದ್ದಾರೆ.
ಜೀ ಜಾತ್ರೆಗೆ ರೆಡಿಯಾಗಿರುವ ಫ್ಯಾಮಿಲಿ
ಈಗಾಗಲೇ 'ಭೂಮಿಗೆ ಬಂದ ಭಗವಂತ' ಧಾರಾವಾಹಿ ಎಲ್ಲರ ಗಮನ ಸೆಳೆದಿದೆ. ಭಗವಂತ ನೀಡುವ ಒಂದೊಂದು ಸಲಹೆಯನ್ನು ಬರೀ ಶಿವಪ್ರಸಾದ್ ಮಾತ್ರವಲ್ಲ, ನೋಡುಗರು ಕೂಡ ಪಾಲನೆ ಮಾಡಬೇಕು ಆ ರೀತಿ ಇರುತ್ತದೆ. ಸರಿ, ತಪ್ಪುಗಳನ್ನು ತಿದ್ದುವುದರ ಜೊತೆಗೆ ಈ ಧಾರಾವಾಹಿಯಲ್ಲಿ ಬದುಕಿನ ಮೌಲ್ಯಗಳನ್ನು ತಿಳಿಸುತ್ತಿದೆ. ತುಮಕೂರಿನಲ್ಲಿ 'ಭೂಮಿಗೆ ಬಂದ ಭಗವಂತನ' ಜಾತ್ರೆ ನಡೆದಿದೆ. ಅಂದ್ರೆ ಜೀ ಜಾತ್ರೆಯಲ್ಲಿ ಈ ಧಾರಾವಾಹಿ ಭಾಗಿಯಾಗಿತ್ತು. ತುಮಕೂರಿನಲ್ಲೆಲ್ಲಾ ಸಂಚರಿಸಿ, ಮನೆ ಮನೆಗೂ ಭಗವಂತ ಹೋಗಿ ಆಶೀರ್ವಾದ ಮಾಡಿದ್ದಾನೆ. ಜೊತೆಗೆ ದೊಡ್ಡ ಸ್ಟೇಜ್ ಮೇಲೆ ಭಗವಂತನ ಫ್ಯಾಮಿಲಿ ಕುಣಿದು ಕುಪ್ಪಳಿಸಿದ್ದಾರೆ. ಇದೇ ಸ್ಪೆಷಲ್ ಕಾರ್ಯಕ್ರಮಕ್ಕಾಗಿ ಇಡೀ ಟೀಂ ಅದರಲ್ಲೂ ಗಿರಿಜಾ, ಮಗಳು, ತಂಗಿ ಬ್ಯೂಟಿಫುಲ್ ಆಗಿ ರೆಡಿಯಾಗಿದ್ದಾರೆ.


Click it and Unblock the Notifications











