Brahmagantu: ಅಧಿಕಾರ.. ಆಡಳಿತದ ದುರಾಸೆಗೆ ಸಂತಾನ ಭಾಗ್ಯವೇ ಇಲ್ಲದ ಹುಡುಗಿ ಹುಡಿಕಿದ ಅತ್ತಿಗೆ!
ಜೀ ಕನ್ನಡದಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿದ್ದಂತ ಧಾರಾವಾಹಿ 'ಬ್ರಹ್ಮಗಂಟು'. ಈಗ ಅದೇ ಹೆಸರಿನಲ್ಲಿ ಮತ್ತೆ ಹೊಸ ಕಥೆ ಬರುತ್ತಿದೆ. ಕಥೆ ಸ್ವಲ್ಪ ಚೇಂಜ್ ಇದೆ. ಹಳೇ ಧಾರಾವಾಹಿಯಲ್ಲಿ ದಡೂತಿ ದೇಹದ ಹೆಣ್ಣಿನ ಜೀವನ ಹೊಸ ಧಾರಾವಾಹಿಯಲ್ಲಿ ಅಂಧವೇ ಇಲ್ಲದ ಹೆಣ್ಣಿನ ಜೀವನದ ಕಥೆಯಾಗಿದೆ. ಆರಂಭದಿಂದಾನೂ ಬಹಳ ರಿಚ್ ಆಗಿ ಬರುತ್ತಿರುವ ಧಾರಾವಾಹಿ ಎಲ್ಲರ ಮನ ಗೆದ್ದಿದೆ.
ಮನೆ ತುಂಬಾ ಜನರಿದ್ದರು, ಮನೆಯಲ್ಲಿ ನಡೆಯುವುದು ಅತ್ತಿಗೆ ಸೌಂದರ್ಯಳ ಮಾತುಗಳಷ್ಟೇ. ಚಿರುಗಾಗಿ ಮನೆಯಲ್ಲಿರುವ ಸೊಸೆಯಂದಿರೆಲ್ಲಾ ಹೆಣ್ಣು ಹುಡುಕಿದರು ಫೈನಲ್ ಆಗಿ ಓಕೆ ಮಾಡಬೇಕಿರುವುದು ಸೌಂದರ್ಯ. ಯಾರಿಗೆ ಎಷ್ಟು ನೋವಾಯ್ತು ಅನ್ನೋದು ಸೌಂದರ್ಯಗೆ ಮುಖ್ಯವಲ್ಲ, ತನ್ನ ಸ್ವಾರ್ಥ ಮಾತ್ರ ಮುಖ್ಯವಾಗಿದೆ. ಅದಕ್ಕೆ ಈಗ ಸಂತಾನ ಭಾಗ್ಯವಿಲ್ಲದ ಹುಡುಗಿ ಹುಡುಕಿ ಹೊರಟಿದ್ದಾಳೆ.

ಮನೆಯವರೆಲ್ಲರಿಂದ ಹುಡುಗಿ ಹುಡುಕಾಟ
ಮನೆಯಲ್ಲಿ ಇರುವ ಚಿಕ್ಕಮ್ಮ, ಅತ್ತಿಗೆಯಂದಿರಿಗೆ ಚಿರು ಮದುವೆ ನೋಡಬೇಕೆಂಬ ಆಸೆ. ಅದಕ್ಕಾಗಿಯೇ ತಮ್ಮ ಸಂಬಂಧದಲ್ಲಿಯೂ ಇರುವ ಹುಡುಗಿಯನ್ನು ನೋಡುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಎಲ್ಲರೂ ಊಟಕ್ಕೆ ಕುಳಿತಾಗಲೂ ಆ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಆದರೆ ಸೌಂದರ್ಯ, ನಾಳೆ ಹುಡುಗಿ ಬರುವುದು ಬೇಡ ಅಂತ ಕಡ್ಡಿ ತುಂಡಾಗುವಂತೆ ಹೇಳಿದ್ದಾಳೆ. ಸೌಂದರ್ಯ ಮುಂದೆ ಬೇರೆ ಯಾರೂ ಮಾತನಾಡುವಷ್ಟು ಧೈರ್ಯ ಹೊಂದಿಲ್ಲ. ಚಿರುಗೆ ಅಮ್ಮನಿಲ್ಲದೆ ಇದ್ದಾಗ ಅತ್ತಿಗೆಯೇ ಅಮ್ಮನಾಗಿದ್ದಾಳೆ ಎಂಬುದೇ ಗೌರವ.
ಅರ್ಚಕರನ್ನು ಹುಡುಕಿ ಹೊರಟ ಸೌಂದರ್ಯ
ಚಿರುಗೆ ಹೆಂಡತಿಯಾಗಿ ಬರುವವಳು ಹೇಗಿರಬೇಕು ಎಂಬುದು ಸೌಂದರ್ಯಗೆ ಮಾತ್ರ ಗೊತ್ತು. ಎಲ್ಲರೂ ಮದುವೆಗಾಗಿ ಹೆಣ್ಣು ಹುಡುಕುತ್ತಿರುವುದು ಸೌಂದರ್ಯಗೆ ಕೋಪ ತರಿಸಿದೆ. ಅದಕ್ಕೆ ಅರ್ಚಕರನ್ನು ಹುಡುಕಿ ದೇವಸ್ಥಾನಕ್ಕೆ ಹೊರಟಿದ್ದಾಳೆ. ಅಲ್ಲಿ ಅರ್ಚಕರನ್ನು ಭೇಟಿ ಮಾಡಿ, ತನಗೆ ಬೇಕಾದ ಎರಡು ಷರತ್ತುಗಳನ್ನು ಹೇಳಿದ್ದಾಳೆ. ಒಂದು ನೋಡುವ ಹುಡುಗಿಯ ಮುಖದಲ್ಲಿ ಒಂದು ಕಲೆಯೂ ಇರಬಾರದು. ಹಾಗೇ ಆ ಹುಡುಗಿ ತಾಯಿಯಾಗುವ ಭಾಗ್ಯವನ್ನು ಹೊಂದಿರಬಾರದು. ಇದನ್ನು ಕೇಳಿದ ಅರ್ಚಕರು ಶಾಕ್ ಆದರು. ಸೌಂದರ್ಯ ಬಳಿ ಹೇಳಿದಷ್ಟೇ ಕೇಳಬೇಕು. ಪ್ರಶ್ನೆಗಳಿಗೆ ಉತ್ತರವೇ ಸಿಗುವುದಿಲ್ಲ.

ರೂಪಾಗೆ ಮನಸೋತ ಚಿರು
ಇನ್ನು ಚಿರು ಅದಾಗಲೇ ರೂಪಳನ್ನು ನೋಡಿ ಮನಸೋತಿದ್ದಾನೆ. ಆದರೆ ಇಬ್ಬರ ನಡುವೆ ಮಾತುಕತೆಯೂ ಆಗಿಲ್ಲ. ರೂಪಳನ್ನು ಚಿರು ನೋಡಿದ್ದಾನೆಯೇ ವಿನಃ, ಚಿರುನನ್ನು ರೂಪ ನೋಡಿಯೇ ಇಲ್ಲ. ಈಗ ಮತ್ತೆ ದೇವಸ್ಥಾನದಲ್ಲಿ ಸಿಕ್ಕಿದ್ದಾಳೆ. ಚಿರುನೇ ಅವಳ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾನೆ. ಆ ಮೊಬೈಲ್ ಕಿತ್ತುಕೊಂಡು ಅಲ್ಲಿಂದ ಹೋಗಿದ್ದಾಳೆ. ಚಿರು ಋಣಾನುಬಂಧ ನೆನಪಿಸಿಕೊಂಡು ಕನಸು ಕಾಣುತ್ತಾ ಅಲ್ಲಿಯೇ ನಿಂತಿದ್ದಾನೆ.
ಸೌಂದರ್ಯಳ ಎದುರಿಗೂ ಬಂದ ರೂಪ
ಚಿರು ಕಣ್ಣಿಗೂ ಕಾಣಿಸಿಕೊಂಡು ಈಗ ಸೌಂದರ್ಯ ಕಣ್ಣಿಗೂ ಬಿದ್ದಿದ್ದಾಳೆ ರೂಪ. ಈ ಮೊದಲೇ ರೂಪಾಳನ್ನು ಕಂಡಿದ್ದ ಸೌಂದರ್ಯ ಅವಳು ಕೂಡ ಅವಳ ಸೌಂದರ್ಯಕ್ಕೆ ಮಾರು ಹೋಗಿದ್ದಾಳೆ. ಅದೇ ಸಮಯಕ್ಕೆ ಅರ್ಚಕರು ಕೂಡ, ನೀವೂ ಕೇಳುತ್ತಿದ್ದ ಎಲ್ಲಾ ಗುಣ ಇವಳಲ್ಲಿ ಇದೆ. ಇವಳ ಜಾತಕದಲ್ಲಿ ಸಂತಾನ ಭಾಗ್ಯ ಇಲ್ಲ ಎಂದಿದ್ದಾರೆ. ಇದನ್ನು ಕೇಳಿದ ಸೌಂದರ್ಯಾಗೆ ಖುಷಿಯಾಗಿದೆ. ಹಾಗಾದ್ರೆ ನಾಳೆನೆ ಕಳಸಕ್ಕೆ ಹೋಗೋಣಾ. ಮನೆಯವರಿಗೆಲ್ಲಾ ಕಳಸದಲ್ಲಿ ಪೂಜೆ ಇದೆ ಅಂತ ಅಷ್ಟೇ ಹೇಳಿ ಅಂತ ರೂಪಾ ಮನೆಗೆ ಹೊರಟಿದ್ದಾಳೆ.


Click it and Unblock the Notifications











