ಲಕ್ಷ್ಮೀನಿವಾಸ ವೆಂಕಿ ಆಡಿಷನ್ ಕೊಟ್ಟಿದ್ದೇ ಬೇರೆ ಪಾತ್ರಕ್ಕೆ; ಮಾಡ್ತಿರೋದೆ ಬೇರೆ ಪಾತ್ರ!
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ವೆಂಕಿ ಪಾತ್ರ ಆಲ್ಮೋಸ್ಟ್ ಎಲ್ಲರಿಗೂ ಇಷ್ಟವಾಗುತ್ತದೆ. ಯಾಕಂದ್ರೆ ಆತನಿಗೆ ಮಾತು ಬಾರದೆ ಇದ್ರು, ಕಿವಿ ಕೇಳಿಸದೆ ಇದ್ದರೂ ಮನಸ್ಸು ಅರಿಯುತ್ತದೆ.
ಎಲ್ಲೋ ಇದ್ದವನನ್ನು ಕರೆದುಕೊಂಡು ಬಂದು ಸ್ವಂತ ಮಗನಂತೆ ನೋಡಿಕೊಂಡವರು ಲಕ್ಷ್ಮೀ ಹಾಗೂ ಶ್ರೀನಿವಾಸ. ಅವರ ಸ್ವಂತ ಮಕ್ಕಳೇ ತಂದೆ ತಾಯಿಯ ಕಷ್ಟಕ್ಕೆ ಮರುಗುತ್ತಿರಲಿಲ್ಲ. ಆದರೆ ಸಾಕಿದ ಮಗ ವೆಂಕಿ ಕಷ್ಟ ಎಂದರೆ ಸಾಕು ತನ್ನಲ್ಲಿದ್ದದ್ದೆಲ್ಲವನ್ನು ಕೊಟ್ಟು ಬಿಡುತ್ತಿದ್ದ. ಲಕ್ಷ್ಮೀಯೇ ಸೇರಿಸಿದ ಕೆಲಸವನ್ನ ಅಚ್ಚುಕಟ್ಟಾಗಿ ಮಾಡಿಕೊಂಡು, ಮನೆಗೂ ಸಹಾಯವಾಗಿ ನಿಂತ.

ಹೂ ಮಾರುತ್ತ ಚೆಲ್ವಿಯನ್ನು ಮದುವೆಯಾಗಿದ್ದಾನೆ. ಅವನದ್ದು ಒಂದು ಸಂಸಾರ ಶುರುವಾಗಿದೆ. ಇದೆಲ್ಲಾ ಧಾರಾವಾಹಿಯ ಕಥೆ.ಧಾರಾವಾಹಿಯಲ್ಲಿ ನೋಡಿ ನೋಡಿ ಓ ವೆಂಕಿ ನಿಜವಾಗಲೂ ಹೀಗೆ ಇದ್ದಾರೇನೋ ಎಂಬ ಲೆವೆಲ್ಲಿಗೆ ಭಾಸವಾಗುತ್ತದೆ. ಆದರೆ ವೆಂಕಿಯ ರಿಯಲ್ ಲೈಫ್ ಬೇರೆನೆ ಇದೆ. ಇಟ್ಸ್ ಮಜ್ಜಾ ಕನ್ನಡ ಎಂಬ ಯೂಟ್ಯೂಬ್ ಚಾನೆಲ್ ಗೆ ಕೊಟ್ಟ ಸಂದರ್ಶನದಲ್ಲಿ ಒಂದಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ವೆಂಕಿ ಪಾತ್ರ ಸಿಕ್ಕಿದ್ದೇಗೆ?
ನಾನು ಆಕ್ಚುಲಿ ಹೋಗಿದ್ದು ಸಂತೋಷ್ ಪಾತ್ರದ ಆಡಿಷನ್ ಕೊಡೋದಕ್ಕೆ. ಅದು ಕೊಟ್ಟಾಗ ನಮ್ಮ ಡೈರೆಕ್ಟರ್ ಮುಖದಲ್ಲಿ ಕಾನ್ಫಿಡೆನ್ಸ್ ಇರಲಿಲ್ಲ. ನನಗೂ ಈ ಪಾತ್ರ ಒಪ್ಪಲ್ಲ ಅನ್ನಿಸ್ತು. ಆಮೇಲೆ ನಮ್ಮ ಡೈರೆಕ್ಟರ್ ವೆಂಕಿ ಪಾತ್ರದ ಸ್ಕ್ರಿಪ್ಟ್ ಕೊಟ್ಟರು. ನಾನು ಹೇಳುವುದಕ್ಕೆ ಶುರು ಮಾಡಿದೆ. ನಮ್ಮ ನಿರ್ದೇಶಕರು ಸ್ಮೈಲ್ ಮಾಡಿ, ಆ ಡೈಲಾಗ್ ನೋಡಿಕೊಂಡು ಅಭಿನಯಿಸಬೇಕು ಮಾಡಬೇಕು. ಇದರಲ್ಲಿ ನೀವೂ ಮೂಗ ಅಂದ್ರು. ನಂಗೆ ಅಲ್ಲಿನೇ ಶಾಕ್ ಆಯ್ತು. ಆದ್ರೆ ಆಡಿಷನ್ ಕೊಟ್ಟಾಗ ಈ ಪಾತ್ರವನ್ನ ನಾನು ಮಾಡಬಹುದು ಎಂಬ ನಂಬಿಕೆ ನನಗೇನೆ ಬಂದಿತ್ತು.

ಪೌರಾಣಿಕ ಪಾತ್ರದಲ್ಲಿ ಮಿಂಚಿದ್ದ ವೆಂಕಿ
ವೆಂಕಿ ಪಾತ್ರಧಾರಿ ಈಗಾಗಲೇ ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿದ್ದರು. 'ದಾಸ ಪುರಂದರ' ಹಾಗೂ 'ಉಘೇ ಉಘೇ ಮಾದೇಶ್ವರ' ಧಾರಾವಾಹಿಯಲ್ಲಿ. ಈ ಬಗ್ಗೆ ಮಾತನಾಡುವ ವೆಂಕಿ, ನಂಗೆ ಪೌರಾಣಿಕ ಬಹಳ ಇಷ್ಟದ ಪಾತ್ರಗಳು. ರಂಗಭೂಮಿ ಹಿನ್ನೆಲೆಯಿಂದ ಬಂದವನಾಗಿರೋ ಕಾರಣ ಹೆಚ್ಚಿನ ಪೌರಾಣಿಕ ಪಾತ್ರಗಳನ್ನೇ ಮಾಡಿದ್ದೀನಿ. ರಾವಣ, ರಾಮ, ಅರ್ಜುನ, ಕರ್ಣ ಈ ಥರದ ಪವರ್ ಫುಲ್ ಕ್ಯಾರೆಕ್ಟರ್‌ಗಳನ್ನೆ ಮಾಡಿಕೊಂಡು ಬಂದವನು.
ಮೂಕನೆಂದೇ ಭಾವಿಸಿದ್ದಾರೆ ಜನ
2018ನಿಂದಾನೂ ಇಂಡಸ್ಟ್ರಿಯಲ್ಲಿದ್ರು ಕೂಡ ನನ್ನನ್ನ ಗುರುತಿಸಿದ್ದು ಕಡಿಮೆ ಜನ. ವೆಂಕಿ ಪಾತ್ರ ಅದು ಬೇರೆಯದ್ದೇ ರೀತಿ ಖುಷಿ ಕೊಟ್ಟಂತ ಪಾತ್ರ. ಈಗ ನಾನು ನಾರ್ಮಲ್ ಆಗಿ ಓಡಾಡಿದ್ರು ಕಷ್ಟ ಆಗುತ್ತೆ. ಜನ ಬೇಗ ಗುರುತು ಹಿಡಿದು ಮಾತಾಡಿಸ್ತಾರೆ. ನಿಜವಾಗಲೂ ನಂಗೆ ಮಾತು ಬರಲ್ಲ, ಕಿವಿ ಕೇಳಲ್ಲ ಅಂದುಕೊಂಡು ಬಿಟ್ಟಿದ್ದಾರೆ.
ಪಾತ್ರಕ್ಕೆ ತಯಾರಿ ಹೇಗಿತ್ತು..?
ಈ ಪಾತ್ರ ಒಪ್ಪಿಕೊಳ್ಳುವುದಕ್ಕೂ ಮುನ್ನ ನನ್ನ ಜೊತೆಗಿರೋರಿಗೆ ಕೇಳಿದ್ದೆ. ಈ ಥರದ್ದೊಂದು ಪಾತ್ರವಿದೆ, ಹೆಂಗೆ ಮಾಡ್ಲಾ ಬೇಡ್ವಾ ಎಂದು ಕೇಳಿದ್ದೆ. ಅವರೆಲ್ಲಾ ನೀವೂ ಒಳ್ಳೆಯ ಕಲಾವಿದ ಯಾಕೆ ಆ ರೀತಿ ಪಾತ್ರ ಮಾಡಬೇಕು ಎಂದು ಕೇಳಿದ್ದರು. ಆದ್ರೆ ನಾನು ರಂಗಭೂಮಿಯಿಂದ ಬಂದವನು. ಸವಾಲಿನ ಪಾತ್ರಗಳು ಅಂದ್ರೆ ನಂಗಿಷ್ಟ. ನನ್ನನ್ನ ನಾನೇ ಕೇಳಿಕೊಂಡು, ಇದನ್ನ ಟ್ರೈ ಮಾಡೋಣಾ ಅನ್ನಿಸಿತ್ತು.


Click it and Unblock the Notifications











