Don't Miss!
- News
ಮಂಚದ ಜೊತೆ ಡ್ಯಾನ್ಸ್ ಮಾಡಿದ ವ್ಯಕ್ತಿ: ಬಿದ್ದು ಬಿದ್ದು ನಕ್ಕ ನೆಟ್ಟಿಗರು- ವಿಡಿಯೋ
- Technology
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- Finance
ಅದಾನಿ ಗ್ರೂಪ್ನ ಷೇರು ಕುಸಿತವು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಹೋಲಿಸಿದ ಅದಾನಿ ಗ್ರೂಪ್ ಸಿಎಫ್ಒ- ಕಾರಣ
- Sports
ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ವಿಶೇಷ ಅಭಿನಂದನೆ ತಿಳಿಸಿದ ಹಿರಿಯರ ಕ್ರಿಕೆಟ್ ತಂಡ
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಗಟ್ಟಿಮೇಳ'ದ ನಟಿ ಶಿವಮೊಗ್ಗದ ಅನ್ವಿತಾ ಸಾಗರ್‌ಗೆ ವಾಚ್ ಅಂದ್ರೆ ಬಲು ಇಷ್ಟ: ವಾಚ್ ಕಲೆಕ್ಷನ್ ಹೇಗಿದೆ?
ಜೀ ಕನ್ನಡದ 'ಗಟ್ಟಿಮೇಳ'ದ ಆದ್ಯಾ ಯಾರಿಗೆ ಇಷ್ಟವಿಲ್ಲ ಹೇಳಿ. ಆದ್ಯಾಳನ್ನು ನೋಡುತ್ತಾ ಇದ್ದರೆ ವಾವ್ ಎಂಬ ಉದ್ಘಾರ ಬಾರದೆ ಇರುವುದಿಲ್ಲ. ಅಷ್ಟು ಸುಂದರ, ಸುಮಧುರ, ಬ್ಯೂಟಿಫುಲ್ ಹುಡುಗಿ ಆದ್ಯಾ. ಸೀರೆಯಲ್ಲಿಯೇ ಸಿಂಪಲ್ ಅಂಡ್ ಬ್ಯೂಟಿಫುಲ್ ಆಗಿ ಕಾಣುವ ಆದ್ಯಾಗೆ ಕಲೆಕ್ಷನ್ ಕ್ರೇಜ್ ಕೂಡ ಇದೆ. ಹಾಗಾದ್ರೆ ಯಾವುದರಲ್ಲಿ ಹೆಚ್ಚು ಕಲೆಕ್ಷನ್ ಮಾಡುತ್ತಾರೆ ಆದ್ಯಾ ಎಂಬ ಕ್ಯೂರಿಯಾಸಿಟಿ ಇದ್ದರೆ ಈ ಸ್ಟೋರಿಯನ್ನೊಮ್ಮೆ ನೋಡಿ.
ಆದ್ಯಾ ಮೂಲತಃ ಶಿವಮೊಗ್ಗ ಜಿಲ್ಲೆಯವರು. ಆದ್ಯಾಳ ನಿಜವಾದ ಹೆಸರು ಅನ್ವಿತಾ ಸಾಗರ್. ಸಿನಿಮಾ, ಸೀರಿಯಲ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅದರ ಜೊತೆಗೆ ಡ್ಯಾನ್ಸಿಂಗ್ ಕ್ರೇಜ್ ಇರುವ ಅನ್ವಿತಾ ಡ್ಯಾನ್ಸಿಂಗ್ ರಿಯಾಲಿಟಿ ಶೋಗಳಲ್ಲೂ ಭಾಗಿಯಾಗುತ್ತಿರುತ್ತಾರೆ. ಈ ನಡುವೆ ಫಿಲ್ಮಿಬೀಟ್ ಜೊತೆಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು, ತಮಗೆ ಯಾವುದರ ಮೇಲೆ ಹೆಚ್ಚು ಕ್ರೇಜ್ ಇದೆ ಎಂಬುದನ್ನು ತಿಳಿಸಿದ್ದಾರೆ.

ವಾಚ್ ಕಲೆಕ್ಷನ್ ಹೊಂದಿರುವ ಅನ್ವಿತಾ
ಸೆಲೆಬ್ರೆಟಿಗಳು ಎಂದರೆ ಎಲ್ಲರ ಕಣ್ಣು ಅವರ ಮೇಲಿರುತ್ತೆ. ಅವರು ಹಾಕುವ ಡ್ರೆಸ್, ಅವರು ಉಪಯೋಗಿಸುವ ವಸ್ತುಗಳ ಮೇಲೆ ಒಂದಷ್ಟು ಕುತೂಹಲವಿರುತ್ತದೆ. ಅದು ಯಾವ ಬ್ರಾಂಡ್, ಎಷ್ಟು ರೇಟ್ ಎಂಬೆಲ್ಲಾ ಪ್ರಶ್ನೆಗಳು ಮನಸ್ಸಿನಲ್ಲಿ ಓಡುತ್ತಾ ಇರುತ್ತದೆ. ಅಷ್ಟೇ ಯಾಕೆ ಅವರಿಗೆ ಯಾವ ಕಲೆಕ್ಷನ್ ಮಾಡುವುದು ಇಷ್ಟ ಎಂಬುದರ ಕುತೂಹಲವೂ ಸಹಜವಾಗಿರುತ್ತದೆ. ಇದೀಗ 'ಗಟ್ಟಿಮೇಳ'ಆದ್ಯಾ ಅಲಿಯಾಸ್ ಅನ್ವಿತಾ ಸಾಗರ್ ತಮ್ಮಿಷ್ಟದ ವಿಚಾರವನ್ನು ಬಿಟ್ಟುಕೊಟ್ಟಿದ್ದಾರೆ. ಅನ್ವಿತಾ ಸಾಗರ್‌ಗೆ ವಾಚ್ ಕಲೆಕ್ಷನ್ ಎಂದರೆ ಸಿಕ್ಕಾಪಟ್ಟೆ ಇಷ್ಟವಂತೆ.

ಇಷ್ಟೊಂದು ವಾಚ್‌ಗಳಿವೆ?
ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭ್ಯಾಸವಿರುತ್ತದೆ. ಅನ್ವಿತಾ ಸಾಗರ್‌ಗೆ ವಾಚ್ ಮೇಲೆ ಸಿಕ್ಕಾಪಟ್ಟೆ ಮೋಹವಿದೆ. ಆ ವಾಚ್‌ಗಳ ಕಲೆಕ್ಷನ್ ಮಾಡುವುದರಲ್ಲಿ ಸಿಕ್ಕಾಪಟ್ಟೆ ಆಸಕ್ತಿದಾಯಕರು. ಹೀಗಾಗಿಯೇ ಅವರ ಬಳಿ ದುಬಾರಿ ಪಿಂಕ್ ರೆಡ್, ವೈಟ್ ಸೇರಿದಂತೆ ಹಲವು ಕಲರ್ ವಾಚ್‌ಗಳಿವೆ. ಅದರಲ್ಲೂ ದುಬೈನಲ್ಲಿ ತಂದಿರುವ ವಾಚ್ ಎಂದರೆ ಅನ್ವಿತಾಗೆ ಬಲು ಇಷ್ಟವಂತೆ.

ಅನ್ವಿತಾ ಬಳಿ ಇರುವ ವಾಚ್‌ನ ಬ್ರ್ಯಾಂಡ್‌ಗಳೇನು?
ಅನ್ವಿತಾ ಸಾಗರ್‌ಗೆ ಗಿಫ್ಟ್ ಬಂದಿರುವ ವಾಚ್ ಒಂದಿದೆ. ಅದು ದುಬೈನಿಂದ ತರಿಸಿ ಕೊಟ್ಟ ಗಿಫ್ಟ್ ವಾಚ್. ಈ ಬಗ್ಗೆ ಕೇಳಿದಾಗ ಅನ್ವುತಾ ಸಾಗರ್ ಹೇಳಿದ್ದು ಹೀಗೆ, " ನನ್ನ ಬಳಿ ದುಬಾರಿ ವಾಚ್ ಇದೆ. ನಂಗೆ ಗಿಫ್ಟ್ ಬಂದಿತ್ತು. ಆದರೆ ಆ ವಾಚ್ ಬಳಿಕ ಕಳೆದು ಹೋಗಿತ್ತು. ಮತ್ತೆ ಅದೇ ರೀತಿಯ ವಾಚ್ ಅನ್ನು ನಾನೇ ಹಣ ಕೊಟ್ಟು ತೆಗೆದುಕೊಂಡಿದ್ದೆ. ಯಾಕಂದ್ರೆ ಆ ವಾಚ್ ನನಗೆ ತುಂಬಾ ಲಕ್ಕಿಯಾಗಿತ್ತು. ಹೀಗಾಗಿ ಆ ವಾಚ್ ಯಾವಾಗಲೂ ನನ್ನ ಬಳಿ ಇರುತ್ತೆ ಎಂದಿದ್ದಾರೆ.
ಬೇರೆ ಏನೆಲ್ಲಾ ಕ್ರೇಜ್ ಇದೆ
ಅನ್ವಿತಾ ಸಾಗರ್ ಸದ್ಯ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಆದ್ಯಾ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮುದ್ದಿನ ತಂಗಿಯಾಗಿ, ಮಡದಿಯಾಗಿ, ಮಗಳಾಗಿ ಎಲ್ಲರಿಗೂ ಅಚ್ಚುಮೆಚ್ಚು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ನಟಿ. ಪರ್ಸನಲ್ ಲೈಫ್‌ನಲ್ಲಿ ಅಷ್ಟೇ ಫ್ಯಾಷನ್ ಐಕಾನ್. ಆದರೆ ಧಾರಾವಾಹಿಯಲ್ಲಿ ಸೀರೆಯನ್ನೇ ಹಾಕುವ ಅನ್ವಿತಾಗೆ ಸೀರೆ ಮೇಲೆ ಇನ್ನಿಲ್ಲದ ಮೋಹ ಬಂದಿದೆ. ಅದಕ್ಕೆಂದೇ ತಮ್ಮ ವಾರ್ಡ್ ರೂಬ್‌ನಲ್ಲಿ ಸೀರೆ ಕಲೆಕ್ಷನ್ ಹೆಚ್ಚಾಗಿ ಮೆಂಟೈನ್ ಮಾಡಿದ್ದಾರೆ.