ಮೊಟ್ಟೆ ತಿಂದು ವಾಂತಿ ಮಾಡಿದ ಆರತಿ.. ಇದು ನೆಕ್ಸ್ಟ್ ಫ್ಯಾನ್ ಎಂದ ಫ್ಯಾನ್ಸ್!

By ಎಸ್ ಸುಮಂತ್

'ಗಟ್ಟಿಮೇಳ' ಧಾರಾವಾಹಿಯ ಮೊದಲ ಆರತಿ ನೆನಪಿರಬೇಕಲ್ಲ. ಎಷ್ಟೇ ಆರತಿಯಂದಿರು ಬದಲಾದರೂ ಮೊದಲ ಆರತಿಯನ್ನು ಹೇಗೆ ತಾನೇ ಮರೆಯುವುದಕ್ಕೆ ಸಾಧ್ಯ ಎಂಬುದು ಎಲ್ಲರ ಮಾತು. ಯಾಕೆಂದರೆ ಆ ಆರತಿ ಪಾತ್ರ ಎಷ್ಟು ಸಾಫ್ಟ್ ಆಗಿತ್ತೋ, ಆ ಪಾತ್ರಧಾರಿಯೂ ಅಷ್ಟೇ ಸಾಫ್ಟ್ ಆಗಿದ್ದರು. ಅಶ್ವಿನಿಯವರು ಆರತಿ ಪಾತ್ರಕ್ಕೆ ಹೇಳಿ ಮಾಡಿಸಿದ ಆಗಿದ್ದರು. ಆದರೆ 'ಗಟ್ಟಿಮೇಳ' ಧಾರಾವಾಹಿಯಿಂದ ಹೊರ ನಡೆದ ಮೇಲೆ ಆ ಸ್ಥಾನವನ್ನು ಇನ್ನೊಬ್ಬರು ತುಂಬುತ್ತಿದ್ದಾರೆ.

ಸದ್ಯ ಅಶ್ವಿನಿ ಧಾರಾವಾಹಿಯಿಂದ ಹೊರ ನಡೆದ ಮೇಲೆ ಏನು ಮಾಡುತ್ತಿದ್ದಾರೆ ಎಂಬುದು ಹಲವರ ಪ್ರಶ್ನೆಯಾದರೆ, ರಿಮೋಟ್ ಹಿಡಿದು ಚಾನೆಲ್ ಬದಲಾಯಿಸುತ್ತಾ ಅವರು ಯಾವ ಧಾರಾವಾಹಿಯಲ್ಲಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಹುಡುಕಿದವರು ಹಲವರು. ಆದರೆ ಅಶ್ವಿನಿ ಸದ್ಯ ಯಾವ ಧಾರಾವಾಹಿಯಲ್ಲೂ ಮಾಡುತ್ತಿಲ್ಲ. ಹಾಗಂತ ಎಲ್ಲರಿಂದ ದೂರವಾಗಿ ಅಜ್ಞಾತ ಸ್ಥಳದಲ್ಲಂತು ಕೂತಿಲ್ಲ. ಬದಲಿಗೆ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ.

ಪ್ರತಿ ದಿನ ವಿಚಾರ ಹಂಚಿಕೊಳ್ಳುತ್ತಿರುವ ಅಶ್ವಿನಿ

ಪ್ರತಿ ದಿನ ವಿಚಾರ ಹಂಚಿಕೊಳ್ಳುತ್ತಿರುವ ಅಶ್ವಿನಿ

ಅಶ್ವಿನಿ ತೆರೆಮೇಲೆ ಕಾಣಿಸಿಕೊಳ್ಳಲಿಲ್ಲ ಎಂದರು ಕೂಡ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡುತ್ತಾರೆ. ಅವರು ಏನು ಮಾಡುತ್ತಿದ್ದಾರೆ ಎಂದು ತಿಳಿಯುವ ಕುತೂಹಲಕ್ಕೆ ಅಶ್ವಿನಿ ಕೂಡ ಒಳ್ಳೊಳ್ಳೆ ವಿಡಿಯೋ ಹಾಕಿ ಉತ್ತರ ನೀಡುತ್ತಾ ಇರುತ್ತಾರೆ. ರೀಲ್ಸ್ ಅನ್ನು ಮಾಡಿ ಶೇರ್ ಮಾಡುತ್ತಾರೆ. ಎಲ್ಲಾದರೂ ಟ್ರಿಪ್ ಹೋದರೆ, ಸ್ಪೆಷಲ್ ಏನಾದರೂ ಮಾಡಿದರೂ ಆ ಎಲ್ಲವನ್ನೂ ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಿರುತ್ತಾರೆ. ಅಶ್ವಿನಿಗೆ ಸುಮಾರು 168 ಸಾವಿರ ಫಾಲೋವರ್ಸ್ ಇದ್ದಾರೆ. ಅವರ ಎಲ್ಲಾ ವಿಡಿಯೋಗಳಿಗೆ ಲೈಕ್ ಕೊಡುತ್ತಾ, ಕಮೆಂಟ್ಸ್ ಮಾಡುತ್ತಾ ಖುಷಿ ಪಡುತ್ತಾರೆ.

ಊರಿಗೆ ಹೋದಾಗ ಅಶ್ವಿನಿ ಫುಲ್ ಹ್ಯಾಪಿ

ಊರಿಗೆ ಹೋದಾಗ ಅಶ್ವಿನಿ ಫುಲ್ ಹ್ಯಾಪಿ

ಅಶ್ವಿನಿ ಮೂಲತಃ ದಾವಣಗೆರೆಯವರು. ಬಿಡುವಿನ ವೇಳೆಯಲ್ಲಿ ಊರಿಗೆ ಹೋಗಿ ಹಳ್ಳಿಯಲ್ಲೆಲ್ಲಾ ರೌಂಡ್ ಹೊಡೆದು ಬರುತ್ತಾರೆ. ಅದರ ನಡುವೆ ತೋಟಕ್ಕೆ ಹೋಗುವುದನ್ನು ಮಾತ್ರ ಮರೆಯುವುದಿಲ್ಲ. ಅಶ್ವಿನಿ ತೋಟ ತುಂಬಾ ಚೆನ್ನಾಗಿದೆ. ಸಾಕಷ್ಟು ಬೆಳೆಗಳನ್ನು ಬೆಳೆದಿದ್ದಾರೆ. ವೀಳ್ಯದೆಲೆ, ಬಾಳೆ, ತೆಂಗು ಹೀಗೆ ಏನೆಲ್ಲಾ ಬೇಕು ಅದೆಲ್ಲವನ್ನು ಬೆಳೆದಿದ್ದಾರೆ. ಅಶ್ವಿನಿಗೆ ಸಮಯ ಸಿಕ್ಕಿದರೆ ಸಾಕು ತೋಟಕ್ಕೆ ಹೋಗಿ ಸಮಯ ಕಳೆಯೋದು ಅಷ್ಟೇ ಅಲ್ಲ, ಕೆಲಸವನ್ನು ಮಾಡಿ ಬರುತ್ತಾರೆ. ಆ ವಿಡಿಯೋಗಳನ್ನು ಸಾಕಷ್ಟು ಶೇರ್ ಮಾಡಿಕೊಂಡಿದ್ದಾರೆ.

ಹಸಿ ಕೊಟ್ಟೆ ಕುಡಿದು ವಾಂತಿ ಮಾಡಿಕೊಂಡ ನಟಿ

ಅಶ್ವಿನಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಮೊಟ್ಟೆಯನ್ನು ಕುಡಿಯಲು ಹೋಗಿದ್ದಾರೆ. ಅದು ಹಸಿ ಮೊಟ್ಟೆ. ಬಾಯಿಗೆ ಬಿಟ್ಟುಕೊಂಡ ಕೂಡಲೇ ವಾಂತಿ ಮಾಡಿಕೊಂಡಿದ್ದಾರೆ. ಅವರ ಎದುರಿಗೆ ಕ್ಯಾಮೆರಾ ಇದೆ. ಜೊತೆಗೆ ಸಹಜವಾದ ಡ್ರೆಸ್‌ನಲ್ಲಿ ಅಶ್ವಿನಿ ಇಲ್ಲ. ಬದಲಿಗೆ ಯಾವುದೋ ಶೂಟ್ ರೀತಿಯೇ ಕಾಣಿಸಿದೆ. ಹೀಗಾಗಿ ಇಷ್ಟು ದಿನ ಬರೀ ಸೋಶಿಯಲ್ ಮೀಡಿಯಾದಲ್ಲಿಯೇ ಅಶ್ವಿನಿಯನ್ನು ನೋಡಿದವರಿಗೆ ಇದು ಖುಷಿ ಕೊಟ್ಟಿದೆ. ಇದು ಹೊಸ ಧಾರಾವಾಹಿಯ ಎಂದು ಸಾಕಷ್ಟು ಜನ ಕಮೆಂಟ್ಸ್ ಹಾಕಿದ್ದಾರೆ. ಮತ್ತೆ ನೀವೂ ಧಾರಾವಾಹಿಗೆ ಬರಬೇಕು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನೊಂದಷ್ಟು ಜನ ಮೊಟ್ಟೆಯನ್ನು ಆರಾಮವಾಗಿ ಕುಡಿಯಿರಿ ಅದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಸಲಹೆ ನೀಡಿದ್ದಾರೆ.

ಅಶ್ವಿನಿ ಸಿಕ್ಕಾಪಟ್ಟೆ ಫೋಟೊಶೂಟ್ ಕ್ರೇಜ್

ಅಶ್ವಿನಿ ಸದ್ಯ 'ಗಟ್ಟಿಮೇಳ' ಧಾರಾವಾಹಿಯಿಂದ ಹೊರ ನಡೆದ ಬಳಿಕ ಯಾವ ಧಾರಾವಾಹಿಯಲ್ಲಿಯೂ ಕಾಣಿಸಿಕೊಂಡಿಲ್ಲ. ಅದಕ್ಕೆ ಕಾರಣ ಇಷ್ಟಪಟ್ಟ ಪಾತ್ರಗಳು ಬರುತ್ತಿಲ್ಲ ಎಂಬುದು. 'ಗಟ್ಟಿಮೇಳ'ದಿಂದ ಹೊರ ಬಂದ ಬಳಿಕ ಅವರೇ ಈ ಬಗ್ಗೆ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. 'ರಾಧಾ ರಮಣ' ಆವನಿ ಪಾತ್ರ ತುಂಬಾ ಚಾಲೆಂಜಿಂಗ್ ಅನ್ನಿಸಿತ್ತು. ಅದಾದ ಬಳಿಕ 'ಗಟ್ಟಿಮೇಳ'ದಲ್ಲೂ ಡಿಫ್ರೆಂಟ್ ಪಾತ್ರ. ಆದರೆ ನಂತರ ಬಂದ ಪಾತ್ರಗಳು ಅದೇ ರೀತಿ ಬರುತ್ತಿವೆ. ಹೀಗಾಗಿ ನಾನು ವಿಭಿನ್ನ ಪಾತ್ರಗಳನ್ನು ಬಯಸುತ್ತಿದ್ದೇನೆ ಎಂದಿದ್ದರು. ಆದರೆ ಅವರು ಧಾರಾವಾಹಿಯಿಂದ ದೂರವಿದ್ದರು, ತೆರೆಮೇಲೆ ಕಾಣಿಸಿಕೊಳ್ಳದೆ ಇದ್ದರು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಹೊಸ ಹೊಸ ವಿಭಿನ್ನ ಫೋಟೊಶೂಟ್ ಮಾಡಿಸಿ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

More from Filmibeat

English summary
Zee Kannada Serial Gattimela Actress Arathi aka Ashwini Biography and Life style. Here is the details about actress Ashwini current Status.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X