ಹಸಿರು ಡ್ರೆಸ್, ಹಸಿರು ಮೇಕಪ್, ಹಸಿರು ಜ್ಯುವೆಲ್ಲರಿ: ಮಿರ ಮಿರ ಮಿಂಚಿದ 'ಗಟ್ಟಿಮೇಳ' ಆರತಿ
'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿ ಸದ್ಯ ತಾಯಿಯಾಗುತ್ತಿದ್ದಾಳೆ. ಮನೆಯವರ ಆರೈಕೆಯ ಜೊತೆಗೆ ಸುಹಾಸಿನಿಯ ಕುತಂತ್ರಕ್ಕೂ ಬಲಿಯಾಗುತ್ತಿದ್ದಾಳೆ. ಅಷ್ಟು ಪ್ರೀತಿ ಮಾಡುವ ತಂಗಿಯನ್ನು ಸುಹಾಸಿನಿಯ ಮಾತು ಕೇಳಿ ಹೀಯಾಳಿಸುವುದಕ್ಕೆ ಹೋಗಿ, ನಿಷ್ಠುರವಾಗಿಯೇ ಮಾತನಾಡುತ್ತಾಳೆ. ಆದರೆ ಅಮೂಲ್ಯ ಎಂದಿಗೂ ತನ್ನ ಅಕ್ಕನನ್ನು ಬಿಟ್ಟುಕೊಡುವುದಿಲ್ಲ. ಸುಹಾಸಿನಿಯ ಕುತಂತ್ರಕ್ಕೆ ಒಂದಷ್ಟು ಬ್ರೇಕ್ ಹಾಕಿ, ಸಂಸರದ ಜೊತೆಗೆ, ಅಕ್ಕನ ಸಂಬಂಧವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾಳೆ.
ಸದ್ಯ ಸುಹಾಸಿನಿ ಹಚ್ವಿದ್ದ ಬೆಂಕಿಗೆ ಸಿಡಿಮಿಡಿಗೊಳ್ಳುತ್ತಿದ್ದ ಆರತಿ ಮತ್ತು ಅಮೂಲ್ಯ ಅಮ್ಮನ ಮನೆಗೆ ಹೋಗಿ ಬಂದ ಮೇಲೆ ಶಾಂತರಾಗಿದ್ದಾರೆ. ತವರು ಮನೆಯ ಕಷ್ಟವನ್ನು ಅರಿತು ಸಹಾಯವನ್ನು ಮಾಡುತ್ತಿದ್ದಾರೆ. ಇನ್ನು ಎಂದೂ ಜಗಳವೇ ಆಡಬಾರದು ಎಂಬ ಪ್ರಾಮೀಸ್ ಮಾಡಿಕೊಂಡಿದ್ದಾರೆ. ಇದು ಧಾರಾವಾಹಿಯ ವಿಚಾರ. ಆದರೆ ಇದೀಗ ಇಲ್ಲಿ ಹೇಳಲು ಹೊರಟಿದ್ದು ಆರತಿ ಅಲಿಯಾಸ್ ಗಗನಾ ಹೊಸ ಫೋಟೊಶೂಟ್ ಬಗ್ಗೆ.

ಮುದ್ದು ಮುದ್ದಾಗಿ ಕಾಣುತ್ತಿರುವ ವಿಕ್ಕಿ ಪತ್ನಿ
'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿ ಪಾತ್ರವನ್ನು ಮಾಡುತ್ತಿರುವ ಗಗನಾ, ವಸಿಷ್ಠನ ಮನೆಗೆ ಸೊಸೆಯಾಗಿ ಬಂದಾಗಿನಿಂದ ಸೀರೆಯಲ್ಲಿಯೇ ದರ್ಶನ ಕೊಡುತ್ತಿದ್ದಾರೆ. ಆದರೆ ಗಗನಾ ರಿಯಲ್ ಲೈಫ್‌ನಲ್ಲಿ ಬೇರೆ ರೀತಿಯಲ್ಲಿಯೇ ಕಾಣುತ್ತಾರೆ. ಧಾರಾವಾಹಿಯಲ್ಲಿ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸುವ ಗಗನಾ ರಿಯಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಮಾಡ್ರನ್ ಗರ್ಲ್. ಇತ್ತೀಚೆಗೆ ಹೊಸದೊಂದು ಫೋಟೊಶೂಟ್ ಮಾಡಿಸಿದ್ದಾರೆ. ಅದು ಹಸಿರು ಥೀಮ್‌ನಲ್ಲಿ. ಗಗನಾ ಹಾಕಿರುವ ಹಸಿರು ಬಣ್ಣದ ಗೌನ್ ಎಲ್ಲರನ್ನೂ ಆಕರ್ಷಿಸುವಂತಿದೆ. ಅದರ ಜೊತೆಗೆ ಮೇಕಪ್ ಕೂಡ ಹಸಿರು ಬಣ್ಣದಲ್ಲೇ ಮಾಡಲಾಗಿದೆ. ಹಸಿರು ಬಣ್ಣದಲ್ಲಿ ಮೇಕಪ್ ಹೇಗಪ್ಪ ಎಂದುಕೊಂಡವರಿಗೆ ಗಗನಾ ಮೇಕಪ್‌ನಿಂದ, ಈ ರೀತಿಯೂ ಮಾಡಬಹುದು ಎಂಬುದು ಗೊತ್ತಾಗುತ್ತಿದೆ. ಇನ್ನು ಅದಕ್ಕೆ ಒಪ್ಪುವಂತಹ ಹಸಿರು, ಬಿಳಿ ಕಲ್ಲು ಮಿಶ್ರಿತ ಒಡವೆಗಳನ್ನೇ ತೊಟ್ಟಿದ್ದಾರೆ. ಹೀಗಾಗಿ ಎಲ್ಲಾ ಆ್ಯಂಗಲ್‌ನಿಂದಲೂ ಮುದ್ದಾಗಿ ಕಾಣುತ್ತಿದ್ದಾರೆ.

ಆರತಿ ಹೊಸ ಲುಕ್ಕಿಗೆ ಫಿದಾ
ಇತ್ತೀಚಿನ ದಿನಗಳಲ್ಲಿ ಸಿನಿಮಾ ಸ್ಟಾರ್ ಗಳಂತೆ ಧಾರಾವಾಹಿ ಸ್ಟಾರ್‌ಗಳಿಗೂ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಇದ್ದಾರೆ. ಆರತಿ ಅಲಿಯಾಸ್ ಗಗನಾ ಅವರಿಗೂ ಅಭಿಮಾನಿಗಳ ಬಳಗವೇನು ಕಡಿಮೆ ಇಲ್ಲ. ಅವರ ಇನ್‌ಸ್ಟಾಗ್ರಾಂ ನೋಡಿದರೇನೇ ಇದು ತಿಳಿಯುತ್ತದೆ. ಗಗನಾಗೆ ಸುಮಾರು 41 ಸಾವಿರ ಫಾಲೋವರ್ಸ್ ಇದ್ದಾರೆ. ಹೀಗಾಗಿ ಅವರು ಹಾಕುವ ಒಂದೊಂದು ಪೋಸ್ಟ್‌ಗೂ ಸಿಕ್ಕಾಪಟ್ಟೆ ಲೈಕ್ಸ್, ಕಮೆಂಟ್ ಜೊತೆಗೆ ಪ್ರಪೋಸಲ್ಸ್ ಕೂಡ ಬರ್ತಿದೆ. ಗಗನಾಗೆ ಸೂಪರ್ ಆಗಿದ್ದೀರಾ ಎಂಬ ಕಮೆಂಟ್ ಜೊತೆಗೆ 'ಐ ಲವ್ ಯೂ' ಎಂದು ಹೇಳುವ ಕಮೆಂಟ್‌ಗಳೇ ಹೆಚ್ಚು ಕಾಣಿಸುತ್ತಿದೆ.

ಗಗನಾ ಆಕ್ಟಿಂಗ್ ಜೊತೆಗೆ ಏನೆಲ್ಲಾ ಮಾಡ್ತಾರೆ ಗೊತ್ತಾ?
ಗಗನಾ ಬಾಲ ನಟಿಯಾಗಿಯೇ ಕಿರುತೆರೆಗೆ ಬಂದವರು. ಚಿಕ್ಕ ವಯಸ್ಸಿನಲ್ಲಿಯೇ ಡ್ಯಾನ್ಸ್, ಹಾಡು, ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಹೀಗಾಗಿ ಆದರ್ಶ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ಕೋರ್ಸ್ ಕೂಡ ಮಾಡಿದ್ದಾರೆ. ಧಾರಾವಾಹಿಗೆ ಬರುವ ಮುನ್ನ ಕೆಲ ಪ್ರೋಗ್ರಾಂಗಳನ್ನು ನಿರೂಪಣೆ ಕೂಡ ಮಾಡಿದ್ದಾರೆ. ಜೀ ಕನ್ನಡದ ಡಿಕೆಡಿಯಲ್ಲೂ ಕುಣಿದು ಜನಮನ್ನಣೆ ಗಳಿಸಿದ್ದರು. ಅಷ್ಟೇ ಅಲ್ಲ 2016ರಲ್ಲಿ ನಡೆದ ಮಿಸ್ ಕರ್ನಾಟಕ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ರನ್ನರ್ ಅಪ್ ಕೂಡ ಆಗಿದ್ದವರು. ದೊಡ್ಮನೆ ಸೊಸೆ ಧಾರಾವಾಹಿಯಲ್ಲಿ ನಟಿಸಿದ್ದ ಗಗನಾ ಸದ್ಯ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿಯಾಗಿ ಮಿಂಚುತ್ತಿದ್ದಾರೆ.

'ಗಟ್ಟಿಮೇಳ'ದ ಆರತಿ ತಮಿಳಿನಲ್ಲೂ ಮಿಂಚಿಂಗ್
ಗಗನಾ ಕನ್ನಡದ ಹಲವು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ತಮಿಳಿನ ಜಯಾ ಟಿವಿಯಲ್ಲಿ ಧಾರಾವಾಹಿಯೊಂದರಲ್ಲಿ ನಟಿಸಿದ್ದಾರೆ. ಅಷ್ಟೆ ಅಲ್ಲ ಡ್ಯಾನ್ಸ್ ಎಂದರೆ ಸಿಕ್ಕಾಪಟ್ಟೆ ಇಷ್ಟಪಡುವ ಗಗನಾ ಸ್ವಂತ ಡ್ಯಾನ್ಸ್ ಕ್ಲಾಸ್ ತೆಗೆಯಬೇಕೆಂಬ ಬಯಕೆ ಹೊಂದಿದ್ದಾರೆ. ಜೊತೆ ಜೊತೆಗೆ ಸಖತ್ ಫೋಟೊಶೂಟ್‌ನಲ್ಲಿ ತೊಡಗಿಕೊಂಡಿದ್ದಾರೆ. ವೆರೈಟಿ ವೆರೈಟಿ ಡ್ರೆಸ್ ಗಳಲ್ಲಿ ಫೋಟೊಗೆ ಪೋಸ್ ನೀಡುತ್ತಾ, ಇದು ನಿಜವಾಗಲೂ ವಿಕ್ಕಿ ಹೆಂಡತಿ ಆರತಿಯೇನಾ ಎಂಬ ಪ್ರಶ್ನೆ ಹುಟ್ಟುಹಾಕುತ್ತಿದ್ದಾರೆ.


Click it and Unblock the Notifications











