ಹಿಂದೆ ಚಿಂಟೂ ಟಿವಿ ನಿರೂಪಕಿ..ಈಗ ಗಟ್ಟಿಮೇಳ ಆರತಿ: ಗಗನಾ ಕಿರುತೆರೆ ಜರ್ನಿ ಹೇಗಿತ್ತು..?

By ಪ್ರಿಯಾ ದೊರೆ

ಗಟ್ಟಿಮೇಳ ಧಾರಾವಾಹಿಯಲ್ಲಿ ಈಗ ಆರತಿ ಗರ್ಭಿಣಿಯಾಗಿದ್ದು, ಇದೇ ಸಂದರ್ಭದಲ್ಲಿ ಅವರ ಮನೆಗೆ ವೇದಾಂತ್ ಅವರ ತಾಯಿ ವೈದೇಹೀಯ ಎಂಟ್ರಿಯಾಗಿದೆ. ಇನ್ನು ಆರತಿ ಮತ್ತು ಅಮೂಲ್ಯ ಸೇರಿಕೊಂಡು ಅವರ ತಂದೆ-ತಾಯಿಗೆ ಮನೆ ಕಟ್ಟಿಸಿಕೊಡಲು ಯೂಟ್ಯೂಬ್ ಚಾನೆಲ್ ತೆರೆದಿದ್ದಾರೆ. ಇದರಲ್ಲಿ ಅಡುಗೆ ಮಾಡಿ ಹಾಗೂ ಡ್ರಾಮಾ ಗಳನ್ನು ಮಾಡಿ ಅಪ್ ಲೋಡ್ ಮಾಡುತ್ತಿರುತ್ತಾರೆ.

ಇಂದು(ಸಪ್ಟೆಂಬರ್‌ ೩೦) ಆರತಿ ಪಾತ್ರದಲ್ಲಿ ನಟಿಸಿರುವ ಗಗನಾ ಅವರ ಜನ್ಮ ದಿನ. ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ಇಂದು ನಾವು ಗಗನಾ ಅವರ ನಟನಾ ಕ್ಷೇತ್ರದ ನಂಟು ಹಾಗೂ ಪಯಣದ ಬಗ್ಗೆ ಮಾಹಿತಿ ಇಲ್ಲಿದೆ. ನಟಿ ಗಗನಾ ಅವರ ಕಿರುತೆರೆ ಪಯಣಕ್ಕೆ ಈಗಾಗಲೇ ಒಂದು ದಶಕ ಕಳೆದಿದೆ ಎಂದರೆ ಸುಳ್ಳಲ್ಲ. ಯಾಕೆಂದರೆ ಬಾಲ್ಯದಿಂದಲೇ ಗಗನಾ ಅವರು ಕಿರುತೆರೆಗೆ ಪದಾರ್ಪಣೆ ಮಾಡಿದರು. ಪುಟಾಣಿ ನಿರೂಪಕಿಯಾಗಿ ಬಂದು ಇಂದು ಧಾರಾವಾಹಿಗಳಲ್ಲಿ ಮಿಂಚುತ್ತಿದ್ದಾರೆ.

ಚಿಂಟೂ ಟಿವಿಯಲ್ಲಿ ನಿರೂಪಣೆ ಮಾಡಿದ್ದ ಗಗನಾ

ಚಿಂಟೂ ಟಿವಿಯಲ್ಲಿ ನಿರೂಪಣೆ ಮಾಡಿದ್ದ ಗಗನಾ

ನಟಿ ಗಗನಾ ಅವರು ಬಾಲ್ಯ ನಟಿ. ಕಿರುತೆರೆಗೆ ಚಿಕ್ಕವಯಸ್ಸಿನಲ್ಲೇ ಪದಾರ್ಪಣೆ ಮಾಡಿದ ಗಗನಾ ಅವರು ಚಾನೆಲ್ ಒಂದರಲ್ಲಿ ನಿರೂಪಣೆಯನ್ನು ಮಾಡುತ್ತಿದ್ದರು. ನಿರೂಪಣೆ ಮೂಲಕ ಬಣ್ಣದ ಲೋಕಕ್ಕೆ ಬಂದ ಗಗನಾ ಅವರು ಡ್ಯಾನ್ಸರ್, ನಟಿ ಕೂಡ ಆಗಿದ್ದಾರೆ. ನಟಿ ಗಗನಾ ಅವರಿಗೆ ಗಟ್ಟಿಮೇಳ ಧಾರಾವಾಹಿ ಮೊದಲಲ್ಲ. ಇದಕ್ಕೂ ಮುನ್ನ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಭಿನಯದಲ್ಲಿ ಹಲವು ಕನಸನ್ನು ಹೊತ್ತು ಬಂದಿರುವ ಗಗನಾ ಅವರ ಕಿರುತೆರೆ ಜರ್ನಿ ಕಲರ್ ಫುಲ್ ಆಗಿದೆ. ಆರು ವರ್ಷವಿದ್ದಾಗ ಚಿಂಟೂ ಟಿವಿಗೆ ನಿರೂಪಕಿಯಾಗಿ ಗಗನಾ ಅವರು ಕಿರುತೆರೆಗೆ ಬಂದರು. ಬಳಿಕ ಓದಿನಲ್ಲಿ ಬ್ಯುಸಿಯಾಗಿ ಬಿಟ್ಟರು.

ಮಿಸ್ ಕರ್ನಾಟಕ ರನ್ನರ್ ಅಪ್ ಗಗನಾ

ಮಿಸ್ ಕರ್ನಾಟಕ ರನ್ನರ್ ಅಪ್ ಗಗನಾ

ಗಗನಾ ಅವರ ತಾಯಿಗೆ ಮಗಳ ಬಗ್ಗೆ ಸಾಕಷ್ಟು ಕನಸುಗಳಿದ್ದವು. ಹಾಗಾಗಿ ಮ್ಯೂಸಿಕ್, ಡ್ಯಾನ್ಸ್, ಕಲೆ ಸಂಸ್ಕೃತಿ ಸೇರಿದಂತೆ ಗಗನಾರನ್ನು ವಿವಿಧ ತರಗತಿಗಳಿಗೆ ಸೇರಿಸಿದ್ದರು. ಹೀಗಾಗಿ ಚಿಕ್ಕವಯಸ್ಸಿನಲ್ಲಿ ಗಗನಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ನಿರೂಪಕಿಯಾದ ಮೇಲೆ ಗಗನಾ ಅವರು ಆದರ್ಶ ಫಿಲಂ ಇನ್ಸ್ಟಿಟ್ಯೂಟ್‌ನಲ್ಲಿ ಮೂರು ತಿಂಗಳ ಕೋರ್ಸ್ ಮಾಡಿದ್ದರು. ಹೀಗೆ ನಟನೆಯ ಬಗ್ಗೆ ಆಸಕ್ತಿಯನ್ನೂ ಬೆಳೆಸಿಕೊಂಡ ಗಗನಾ ಅವರು ಅವರ ತಾಯಿಯ ಆಸೆಗಳನ್ನು ಪೂರೈಸುತ್ತಾ ಬಂದರು. ಚಿಂಟೂ ಟಿವಿಯಲ್ಲಿ ನಿರೂಪಣೆ ಮಾಡಿ ಸೈ ಎನಿಸಿಕೊಂಡ ಗಗನಾ ಅವರು ಓದಿಗಾಗಿ ಬ್ರೇಕ್ ಪಡೆದರು. ಇದೇ ವೇಳೆಯಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ ಗಗನಾ ಅವರು 2016ರಲ್ಲಿ ಗಗನಾ ಅವರು ಮಿಸ್ ಕರ್ನಾಟಕ ಇಂಟರ್ ನ್ಯಾಷನಲ್ ಸ್ಫರ್ಧೆಯಲ್ಲಿ ರನ್ನರ್ ಅಪ್ ಆದರು.

ತಮಿಳಿನಲ್ಲೂ ಗಗನಾ ಕಮಾಲ್

ತಮಿಳಿನಲ್ಲೂ ಗಗನಾ ಕಮಾಲ್

ಇದಾದ ಬಳಿಕ ಗಗನಾ ಅವರಿಗೆ 'ದೊಡ್ಮನೆ ಸೊಸೆ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಒದಗಿ ಬಂತು. ಅಲ್ಲಿಂದ ಗಗನಾ ಅವರು ಮತ್ತೆ ಕಿರುತೆರೆಯಲ್ಲಿ ನಟಿಯಾಗಿ ನಟಿಸಲು ಶುರು ಮಾಡಿದರು. ಇಂದಿಗೂ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ದೊಡ್ಮನೆ ಸೊಸೆ ಧಾರಾವಾಹಿಯಾದ ಮೇಲೆ, ಮಹಾದೇವಿ ಸೀರಿಯಲ್‌ನಲ್ಲೂ ಬಣ್ಣ ಹಚ್ಚಿದ್ದರು. ಇದೀಗ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಗಗನಾ ಅವರು ಈ ಹಿಂದೆ ತಮಿಳಿನ ಜಯಾ ಟಿವಿಯಲ್ಲೂ ಕಾಣಿಸಿಕೊಂಡಿದ್ದರು. ಕನ್ನಡದ ಜೊತೆಗೆ ತಮಿಳಿನ ಧಾರಾವಾಹಿಗೂ ಬಣ್ಣ ಹಚ್ಚಿದ್ದ ಗಗನಾ ಅವರು ವೆಬ್ ಸಿರೀಸ್ ನಲ್ಲೂ ನಟಿಸಿದ್ದಾರೆ.

ವೆಬ್ ಸಿರೀಸ್‌ನಲ್ಲೂ ನಟನೆ

ವೆಬ್ ಸಿರೀಸ್‌ನಲ್ಲೂ ನಟನೆ

ಮೊದಲೇ ಡ್ಯಾನ್ಸ್ ಎಂದರೆ ಗಗನಾ ಅವರಿಗೆ ತುಂಬಾ ಇಷ್ಟ. ಹಾಗಾಗಿ ರಿಯಾಲಿಟಿ ಶೋನಲ್ಲಿ ಹೆಜ್ಜೆ ಹಾಕಿದರು. 'ಕುಣಿಯೋಣು ಬಾರ' ರಿಯಾಲಿಟಿ ಶೋನಲ್ಲಿ ಕುಣಿದು ಜನರನ್ನು ರಂಜಿಸಿದರು. ಬಳಿಕ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್' ನಲ್ಲಿ ಗಗನಾ ಭಾಗವಹಿಸಿದ್ದರು. ಇದೀಗ ಗಗನಾ ಅವರು ತಮ್ಮದೇ ಆದ ಒಂದು ಡ್ಯಾನ್ಸ್ ಕ್ಲಾಸ್ ಅನ್ನು ಶುರು ಮಾಡಬೇಕು ಎಂದು ಕನಸು ಕಾಣುತ್ತಿದ್ದಾರೆ. ಟಾಕೀಸ್ ಎಂಬ ಅಪ್ಲಿಕೇಶನ್‌ನಲ್ಲಿ ಗಗನಾ ಅವರು ಚಕ್ರವರ್ತಿ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಇಂದು(ಸಪ್ಟೆಂಬರ್‌ 30) ಗಗನಾ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಗಗನಾಗೆ ಅಭಿಮಾನಿಗಳು ಹಾಗೂ ಸ್ನೇಹಿತರು ಸೋಶಿಯಲ್‌ ಮೀಡಿಯಾದಲ್ಲಿ ಶುಭಾಶಯ ಕೋರಿದ್ದಾರೆ.

More from Filmibeat

English summary
Zee Kannada serial Gattimela actress gagana celebrating her birthday today
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X