ಗಟ್ಟಿಮೇಳ ಧಾರಾವಾಹಿಯ ನಟಿ ಮಹತಿ ಎಸ್ಎಸ್ಎಲ್‌ಸಿಯಲ್ಲಿ ಪಡೆದ ಅಂಕ ಎಷ್ಟು?

By ಎಸ್ ಸುಮಂತ್

ನಿನ್ನೆ(ಮೇ 19)ಯಷ್ಟೇ ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದಿದೆ. ಈ ಬಾರಿಯ ಫಲಿತಾಂಶ ಕಂಡು ಮಕ್ಕಳ ಮುಖದಲ್ಲಿ ಸಾಕಷ್ಟು ಸಂತಸ ಕಂಡು ಬಂದಿದೆ. ಮಕ್ಕಳ ಫಲಿತಾಂಶ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಒಂದು ಕಾಲದಲ್ಲಿ ಜಸ್ಟ್ ಪಾಸ್‌ಗೆ ಒದ್ದಾಡುತ್ತಿದ್ದ ಮಕ್ಕಳು ಈಗ ಔಟ್ ಆಫ್ ಔಟ್ ಮಾರ್ಕ್ಸ್ ತೆಗೆದವರೇ ಹೆಚ್ಚು ಸಿಗುತ್ತಿದ್ದಾರೆ. ನಟನೆ, ವಿದ್ಯಾಭ್ಯಾಸ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿರುವ ಮಹತಿಯ ರಿಸಲ್ಟ್ ಕೂಡ ಬಂದಿದೆ. ಆಕೆ ಎಷ್ಟು ಮಾರ್ಕ್ಸ್ ತೆಗೆದಿದ್ದಾರೆ? ನಟನೆಯ ಜೊತೆಗೆ ಓದು ಹೇಗೆ ಸಾಧ್ಯವಾಯ್ತು? ಎಂಬುದೆಲ್ಲ ತಿಳಿಯಲು ಮುಂದೆ ಓದಿ.

ಮಹತಿ ಎಂದರೆ ನಿಮಗೆಲ್ಲಾ ಈಗಾಗಲೇ ಗೊತ್ತಾಗಿರುತ್ತೆ. ಜೀ ಕನ್ನಡದಲ್ಲಿ ಬರುತ್ತಿರುವ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಮಹತಿ ಕೊನೆಯ ತಂಗಿಯ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಆದರೆ ಕೆಲವು ದಿನಗಳಿಂದ ಮಹತಿ ಪಾತ್ರಧಾರಿ ಕಾಣಿಸುತ್ತಿರಲಿಲ್ಲ. ಅದಕ್ಕೆ ಕಾರಣ ಮಹತಿಯ ಪರೀಕ್ಷೆ. ಸದ್ಯ ಪರೀಕ್ಷೆಯೂ ಮುಗಿದು, ಫಲಿತಾಂಶವೂ ಬಂದಿದೆ. ಮಹತಿ ಶೇ.99ರಷ್ಟು ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ.

ಮಹತಿಗೆ ಸಾಧನೆ ಮೆಚ್ಚಿದ ನೆಟ್ಟಿಗರು

ಮಹತಿಗೆ ಸಾಧನೆ ಮೆಚ್ಚಿದ ನೆಟ್ಟಿಗರು

ಮಹತಿ ವೈಷ್ಣವಿ ಭಟ್ ಓದುತ್ತಲೇ ಧಾರಾವಾಹಿಯಲ್ಲೂ ನಟಸಿದ್ದರು. ಇದರೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದರು. ಆದರೆ ಪರೀಕ್ಷೆ ಸಮಯ ಇದ್ದಿದ್ದರಿಂದ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿರಲಿಲ್ಲ. ಆದರೆ ಇಂದು ಫಲಿತಾಂಶವನ್ನು ತನ್ನ ಫಾಲೋವರ್ಸ್ ಬಳಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ಮಹತಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡುವುದು ಅಂದರೆ ಸುಲಭದ ಮಾತಲ್ಲ. ಹೀಗಾಗಿ ಒಬ್ಬೊಬ್ಬರೇ ಮಹತಿಗೆ ಶುಭಾಶಯ ತಿಳಿಸುತ್ತಿದ್ದಾರೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ಡಿಂಪಲ್ ಕ್ವೀನ್ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ಇನ್ನು ಒಂದಷ್ಟು ಮಂದಿ ಮುಂದಿನ ಶೈಕ್ಷಣಿಕ ಜೀವನಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.

ಧಾರಾವಾಹಿ ಮತ್ತು ಶಿಕ್ಷಣ ಎರಡನ್ನೂ ನಿಭಾಯಿಸಿದ್ದು ಮಹತಿ?

ಧಾರಾವಾಹಿ ಮತ್ತು ಶಿಕ್ಷಣ ಎರಡನ್ನೂ ನಿಭಾಯಿಸಿದ್ದು ಮಹತಿ?

ಮಹತಿ ಡ್ರಾಮಾ ಜ್ಯೂನಿಯರ್ ಮೂಲಕ ನಟನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟವರು. ಬಳಿಕ ಧಾರಾವಾಹಿಯಲ್ಲಿ ಆಫರ್ ಬಂದಿದೆ. ಧಾರಾವಾಹಿಯಲ್ಲಿ ನಟಿಸುತ್ತಾ ಓದಿನ ಕಡೆ ಗಮನ ಕೊಡುವುದು ಅಷ್ಟು ಸುಲಭದ ಮಾತಲ್ಲ. ಅದರಲ್ಲೂ ನಾಲ್ಕು ಜನ ಮಕ್ಕಳಿರುವಾಗ ಎಲ್ಲರನ್ನೂ ಯಾವಾಗಲೂ ಒಟ್ಟಿಗೆ ತೋರಿಸುತ್ತಿದ್ದ ಸಮಯವದು. ಹೀಗಾಗಿ ಒಂದು ದಿನವೂ ಶೂಟಿಂಗ್‌ಗೆ ಚಕ್ಕರ್ ಹಾಕುವ ಹಾಗಿರಲಿಲ್ಲ. ಆದರೆ ಇತ್ತೀಚೆಗೆ 'ಗಟ್ಟಿಮೇಳ' ಕಥೆ ಬೇರೆಯ ಹಾದಿ ಹಿಡಿದಿದೆ. ಎಲ್ಲಾ ಮಕ್ಕಳನ್ನು ಒಟ್ಟಾಗಿ ಧಾರಾವಾಹಿಯಲ್ಲಿ ತೋರಿಸುತ್ತಿರಲಿಲ್ಲ. ಹೀಗಾಗಿ ಮಹತಿಗೆ ಓದುವುದಕ್ಕೂ ಸ್ವಲ್ಪ ಸಮಯ ಸಿಕ್ಕಿದೆ. ಹೀಗಾಗಿಯೇ ಚೆನ್ನಾಗಿ ಓದಿ ಶೇ.99 ರಷ್ಟು ಕಂಡ ತೆಗೆದುಕೊಂಡಿದ್ದಾರೆ. ಇದು ಅವರ ಮನೆಯವರಿಗೆ, ಆತ್ಮೀಯರಿಗೆ, ಅಷ್ಟೇ ಯಾಕೆ 'ಗಟ್ಟಿಮೇಳ' ಕುಟುಂಬದವರಿಗೆ ಖುಷಿ ತಂದಿದೆ.

ಮಹತಿಗೆ ಇವರ ಬೆಂಬಲ ಸಿಕ್ಕಿದೆ!

ಮಹತಿಗೆ ಇವರ ಬೆಂಬಲ ಸಿಕ್ಕಿದೆ!

ಸದ್ಯ ಮಹತಿ ವೈಷ್ಣವಿ ಭಟ್ ಫಲಿತಾಂಶದ ವಿಚಾರದಲ್ಲಿ ಒಳ್ಳೆಯ ಸಾಧನೆಯನ್ನೇ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, "ನಿಮ್ಮ ಬೆಂಬಲಕ್ಕೆ ಅಮ್ಮಾ, ಪಪ್ಪಾ, ಅಣ್ಣಯ್ಯ, ಅಮ್ಮಮ್ಮ, ತಾತಯ್ಯ.. ನನ್ನ ಶಿಕ್ಷಕರು ಮತ್ತು ಶಾಲೆ ಕೂಡ ನನ್ನ ಅಧ್ಯಯನ ಹಾಗೂ ನಟನೆಯಲ್ಲಿ ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ನಿರಂತರ ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು 'ಗಟ್ಟಿಮೇಳ' ತಂಡ ಮತ್ತು ಜೀ ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನೀವು ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನನ್ನ insta ಕುಟುಂಬಕ್ಕೆ ವಿಶೇಷ ಧನ್ಯವಾದಗಳು. ಏಕೆಂದರೆ ಪರೀಕ್ಷೆಗಳ ಕಾರಣದಿಂದಾಗಿ, ನನಗೆ ಏನನ್ನೂ ಪೋಸ್ಟ್ ಮಾಡಲು ಅಥವಾ ನಿಮ್ಮೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿಲ್ಲ!! ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು." ಎಂದು ಪೋಸ್ಟ್ ಹಾಕಿದ್ದಾರೆ.

ಮತ್ತೆ ಮಹತಿ ವೈಷ್ಣವಿ ಎಂಟ್ರಿ

ಮತ್ತೆ ಮಹತಿ ವೈಷ್ಣವಿ ಎಂಟ್ರಿ

ಮಹತಿಗೂ ತನ್ನದೆ ಆದ ಅಭಿಮಾನಿ ಬಳಗವಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ನಟನೆ ಬಗ್ಗೆ ಖುಷಿ ವ್ಯಕ್ತಪಡಿಸುತ್ತಿರುತ್ತಾರೆ. ರೀಲ್ಸ್ ಮಾಡುತ್ತಾ ತನ್ನ ಫಾಲೋವರ್ಸ್ ಅನ್ನ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಧಾರಾವಾಹಿಯಿಂದ ನಾಪತ್ತೆಯಾಗಿದ್ದ ಮಹತಿಯನ್ನು ಕಾಣದೆ ಬೇಸರದಲ್ಲಿದ್ದ ಫಾಲೋವರ್ಸ್ ಇತ್ತೀಚೆಗೆ ನೋಡಿ ಖುಷಿಯಾಗಿದ್ದಾರೆ. ಆರತಿ ತಾಯಿಯಾಗುತ್ತಿದ್ದಾಳೆಂಬ ವಿಚಾರ ತಿಳಿದು ಪರಿಮಳ ತನ್ನ ಗಂಡ ಮತ್ತು ಮಕ್ಕಳನ್ನು ಕರೆದುಕೊಂಡು ಬಂದಿದ್ದರು. ಆಗ ಮಹತಿ ಕೂಡ ನಾನು ಚಿಕ್ಕಮ್ಮ ಆಗುತ್ತಿದ್ದೀನಿ ಅಂತ ಖುಷಿ ಪಟ್ಟಿದ್ದಳು. ಧಾರಾವಾಹಿಯಲ್ಲಿ ಮಹತಿಯನ್ನು ನೋಡಿದವರು ಮತ್ತೆ ಖುಷಿಯಾಗಿದ್ದಾರೆ.

More from Filmibeat

English summary
Zee Kannada Serial Gattimela Actress Mahati Vaishnavi Bhat got 99 percent in SSLC Exam. Here is the details about mahati share her SSLC Score.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X