ಗಟ್ಟಿಮೇಳ: ರೌಡಿಗಳಿಗೆ ಹಂಚುತ್ತಿರುವ ಹಣದಲ್ಲಿ ಸಮಾಜ ಸೇವೆಯ ಲೆಕ್ಕ ತೋರಿಸುತ್ತಾಳಾ ಸುಹಾಸಿನಿ?

By ಎಸ್ ಸುಮಂತ್

ಸುಹಾಸಿನಿ ಎಷ್ಟು ಕೆಟ್ಟವಳು ಎಂಬುದು ಈಗಾಗಲೇ ವಿಕ್ರಾಂತ್ ಮತ್ತು ಅಮೂಲ್ಯಾಗೆ ಮನವರಿಕೆಯಾಗಿದೆ. ಈ ಮನವರಿಕೆಯಿಂದಾಗಿಯೇ ಸ್ವಂತ ತಾಯಿಯನ್ನು ಹುಡುಕುವ ಸಾಹಸಕ್ಕೆ ಕೈ ಹಾಕಿದ್ದಾರೆ. ಆ ಸಾಹಸದ ನಡುವೆ ಸೋಲುಗಳು ಎದುರಾಗುತ್ತಿವೆ. ಕೆಲವೊಂದು ಸಾಕ್ಷ್ಯಗಳು ಸಿಗುತ್ತಿವೆ. ಆದರೆ ಇದರ ನಡುವೆ ವಿಕ್ರಾಂತ್, ಸುಹಾಸಿನಿಯನ್ನು ಎಲ್ಲಿ ಲಾಕ್ ಮಾಡಬೇಕೋ ಅಲ್ಲಿಯೇ ಲಾಕ್ ಮಾಡಿದ್ದಾನೆ. ಹಣದ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿಸಿದ್ದಾನೆ.

ಸುಹಾಸಿನಿಗೆ ಈಗ ಹಣದ ಅವಶ್ಯಕತೆ ಇದೆ. ಬೇಕಾದಷ್ಟು ಹಣ ಸಿಗದೆ ಹೋದಲ್ಲಿ ಪುಡಿ ರೌಡಿಗಳಿಂದ ಆಗುವ ಸಮಸ್ಯೆ ಮನೆ ಬಾಗಿಲಿಗೆ ಬಂದು ನಿಲ್ಲುತ್ತದೆ. ಅದು ಸುಹಾಸಿನಿ ಇಷ್ಟು ದಿನ ಕಟ್ಟಿದ ಕೋಟೆ ಒಡೆದು ಬೀಳುತ್ತದೆ. ನಂಬಿಕೆ ನಾಶವಾಗುತ್ತದೆ. ಜೀವನ ಬೀದಿಗೆ ಬರುತ್ತದೆ. ಅಂತ ಹೀನಾಯ ಸ್ಥಿತಿ ತಲುಪಲು ಸುಹಾಸಿನಿಗೆ ಸಾಧ್ಯವಿಲ್ಲ. ಹೀಗಾಗಿಯೆ ಪುಡಿ ರೌಡಿಗಳಿಗೆ ಬೇಕಾದ ಹಣ ಕೊಡಲು ಈಗ ಫ್ಲ್ಯಾನ್ ಮಾಡಿದ್ದಾಳೆ.

ಕೊನೆ ಹಾದಿ ಹಿಡಿದ ಸುಹಾಸಿನಿ

ಕೊನೆ ಹಾದಿ ಹಿಡಿದ ಸುಹಾಸಿನಿ

ಸುಹಾಸಿನಿಯ ಕುತಂತ್ರ ಒಂದೆರಡಲ್ಲ. ಆದರೆ ಆ ಕುತಂತ್ರಗಳು ನಾಳೆ ಸುಹಾಸಿನಿಯ ಬುಡವನ್ನೇ ಸುಡುವುದರಲ್ಲಿ ಅನುಮಾನವೂ ಇಲ್ಲ. ಸ್ವಂತ ಅಕ್ಕ ಎಂಬುದನ್ನು ನೋಡದೆ ವೈದೇಹಿಯ ಜೀವನವನ್ನೇ ಹಾಳು ಮಾಡಿದ್ದಾಳೆ. ಫೈನಾನ್ಸಿಯಲಿ ಎಲ್ಲವನ್ನು ತನ್ನ ಕಂಟ್ರೋಲ್ ನಲ್ಲಿಯೇ ಇಟ್ಟುಕೊಳ್ಳುವುದಕ್ಕೆ ಪ್ರಯತ್ನ‌ಮಾಡಿದ್ದಾಳೆ.. ಇದಕ್ಕೆಲ್ಲಾ ರೌಡಿಗಳ ಸಪೋರ್ಟ್ ತೆಗೆದುಕೊಂಡಳು. ಇಂದು ಅದೇ ರೌಡಿಗಳು ಸುಹಾಸಿನಿಯ ಹಿಂದೆ ಬಿದ್ದಿದ್ದಾರೆ. ಹಣಕ್ಕಾಗಿ ಡಿಮ್ಯಾಂಡ್ ಇಡುತ್ತಿದ್ದಾರೆ. ಹಣದ ಅವಶ್ಯಕತೆಯಿಂದಾಗಿ ಇದೀಗ ಸುಹಾಸಿನಿ, ವೇದಾಂತ್ ಮುಂದೆ ಮನವಿ ಮಾಡುತ್ತಿದ್ದಾಳೆ. ಹಣ ಬೇಕಾಗಿದೆ ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದಾಳೆ.

ಸುಹಾಸಿನಿಗೆ ವಿಕ್ರಾಂತ್ ಬುದ್ದಿ ಕಲಿಸುತ್ತಾನಾ?

ಸುಹಾಸಿನಿಗೆ ವಿಕ್ರಾಂತ್ ಬುದ್ದಿ ಕಲಿಸುತ್ತಾನಾ?

ವಿಕ್ರಾಂತ್‌ಗೆ ಸುಹಾಸಿನಿ ಮೇಲೆ ಅನುಮಾನ ಬಂದಾಗಿನಿಂದ ಅಲರ್ಟ್ ಆಗಿದ್ದಾನೆ. ತನ್ನನ್ನೇ ಜೈಲಿಗೆ ಕಳುಹಿಸಲು ನೋಡಿದವಳ ಮನಸ್ಸಲ್ಲಿ ಅದಿನೆಷ್ಟು ವಿಷವಿರಬಹುದು ಎಂಬುದನ್ನು ತಿಳಿದಿದ್ದಾನೆ. ಇದೇ ಕಾರಣಕ್ಕೆ ಅವಳನ್ನು ಎಲ್ಲೆಲ್ಲಿ ಲಾಕ್ ಮಾಡಬಹುದು ಅಲ್ಲಿ ಲಾಕ್ ಮಾಡಿದ್ದಾನೆ. ಪ್ರತಿ ತಿಂಗಳು ಸುಹಾಸಿನಿ ಅಕೌಂಟ್ ಗೆ ಲಕ್ಷ ಲಕ್ಷ ಹಣ ಹೋಗುತ್ತಿತ್ತು. ಆದರೆ ಅದನ್ನು ವಿಕ್ರಾಂತ್ ಬುದ್ದಿವಂತಿಕೆಯಿಂದ ನಿಲ್ಲಿಸಿದ್ದಾನೆ. ವೇದಾಂತ್‌ಗೆ ಸಮಾಧಾನವಾಗಿ ಹೇಳಿ ಜಾಯಿಂಟ್ ಅಕೌಂಟ್ ಮಾಡಿಸಿದ್ದಾನೆ.

ಹಣಕ್ಕೆ ಕಾರಣ ಕೇಳಿದ ವೇದಾಂತ್

ಹಣಕ್ಕೆ ಕಾರಣ ಕೇಳಿದ ವೇದಾಂತ್

ವೇದಾಂತ್, ಸುಹಾಸಿನಿಯನ್ನು ತುಂಬಾ ನಂಬುತ್ತಾನೆ. ಹೆತ್ತಮ್ಮ ಅಲ್ಲದೆ ಇದ್ದರು ನಮ್ಮನ್ನೆಲ್ಲ ಅಷ್ಟೇ ಪ್ರೀತಿಯಿಂದ ಸಾಕಿದ ಕರುಣಾಮಯಿ, ಅವರಿಗೆ ನೀವಾಗಬಾರದು ಎಂದೇ ಬಯಸುತ್ತಾನೆ. ಆದರೆ ಹೆತ್ತಮ್ಮನನ್ನು ಸುಹಾಸಿನಿಯೇ ಆ ಸ್ಥಿತಿಗೆ ತಂದದ್ದು ಎಂಬುದು ತಿಳಿದರೆ ಅಷ್ಟೇ ನಂಬಿಕೆಯ ಗೋಪುರ ಕುಸಿದು ಬೀಳುತ್ತದೆ. ಆದರೆ ಸುಹಾಸಿನಿ ಆ ಗೋಪುರವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಂಡು ಬಂದಿದ್ದಾಳೆ. ಈಗ ರೌಡಿಗಳ ಕಾಟದಿಂದ ವೇದಾಂತ್ ಬಳಿ ಹಣ ಕೇಳುತ್ತಿದ್ದಾಳೆ. ಹಣವನ್ನೇನೋ ಕೊಡುತ್ತೀನಿ ಎಂದ ವೇದಾಂತ್. ಇದ್ದಕ್ಕಿದ್ದ ಹಾಗೇ ಆ ಹಣ ಯಾತಕ್ಕಾಗಿ ಎಂದು ಕೇಳಿದ್ದಾನೆ. ಇದನ್ನು ನಿರೀಕ್ಷೆಯೇ ಮಾಡದ ಸುಹಾಸಿನಿ, ಏನೋ ಒಂದು ಉತ್ತರ ಹೇಳಿದ್ದಾಳೆ. ಅದು ಹೆದರಿಕೊಳ್ಳದೆ ಮಾತನಾಡಿದ್ದಾಳೆ.

ಸುಳ್ಳು ಆಸ್ರಮ ಸೃಷ್ಟಿಸುತ್ತಾಳಾ ಸುಹಾಸಿನಿ

ಸುಳ್ಳು ಆಸ್ರಮ ಸೃಷ್ಟಿಸುತ್ತಾಳಾ ಸುಹಾಸಿನಿ

ವೇದಾಂತ್ ಹಣ ಕೊಡುವುದಾಗಿ ಏನೋ ಹೇಳಿದ್ದಾನೆ. ಆದರೆ ಹಣವನ್ನು ಖರ್ಚು ಮಾಡುತ್ತಿರುವ ದಾಖಲೆಯನ್ನು ಕೇಳುತ್ತಿದ್ದಾನೆ. ನೀವೂ ಯಾವ ಆಶ್ರಮಕ್ಕೆ ಖರ್ಚು ಮಾಡುತ್ತಿದ್ದೀರೋ ಅದನ್ನು ದಾಖಲೆ ಮೆಂಟೈನ್ ಮಾಡಿ, ಸರ್ಕಾರಕ್ಕೆ ಈ ಎಲ್ಲಾ ದಾಖಲೆಗಳನ್ನು ಸರಿಯಾಗಿ ಕಾಪಾಡಿಕೊಳ್ಳದೆ ಹೋದಲ್ಲಿ, ಸಮಸ್ಯೆ ಎದುರಾಗಬಹುದು ಎಂದಿದ್ದಾನೆ. ಇದೀಗ ಸುಹಾಸಿನಿಗೆ ಫೇಕ್ ಡಾಕ್ಯುಮೆಂಟ್ಸ್ ಮೆಂಟೈನ್ ಮಾಡುವಂತ ಸ್ಥಿತಿ ಬಂದಿದೆ.

More from Filmibeat

English summary
Zee Kannada Serial Gattimela August 23rd Episode Written Update. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X