Gattimela: ಗುಣಮುಖನಾಗಿ ಮನೆಗೆ ಬಂದ ಧ್ರುವ: ವೈದೇಹಿಗೆ ಖುಷಿ ಸುಹಾಸಿನಿಗೆ ಫುಲ್ ಶಾಕ್..!
ವೈದೇಹಿಗೆ ಒಂದು ಕಡೆ ಸುಹಾಸಿನಿ ಯಾಕೆ ಇಷ್ಟು ಧೈರ್ಯದಿಂದ ಇದ್ದಾಳೆ ಎಂಬುವುದು ತಿಳಿಯುತ್ತಿಲ್ಲ. ಇದಕ್ಕಾಗಿ ಆಕೆಯ ಬಾಯನ್ನ ಮುಚ್ಚಿಸಲು ತನ್ನ ಬಳಿ ಇದ್ದ ವಿಡಿಯೋ ತೋರಿಸಲು ಹೋಗಿದ್ದಾಳೆ. ಆದರೆ ಸುಹಾಸಿನಿ ಅದಕ್ಕೆ ಹೆದರದೆ ಜೋರಾಗಿ ನಗುತ್ತಿದ್ದಾಳೆ. ಇದೆ ವೇಳೆ ಸೂರ್ಯ ನಾರಾಯಣರ ವಿಡಿಯೋವನ್ನು ತೋರಿಸಿದ್ದಾಳೆ. ವೈದೇಹಿ ತನ್ನ ಗಂಡನ ಮುಖ ನೋಡಿದ ಕೂಡಲೇ ಜೋರಾಗಿ ಕಣ್ಣೀರನ್ನ ಹಾಕಿದ್ದಾಳೆ. ನನ್ನ ಗಂಡ ಎಲ್ಲಿ ಇದ್ದಾರೆ ಎಂಬುದನ್ನ ತಿಳಿಸು. ನಾನು ದೂರದಿಂದಲೇ ನೋಡಿ ಖುಷಿಪಡುತ್ತೇನೆ ಎಂದು ಅಂಗಲಾಚಿದ್ದಾಳೆ. ನಿನ್ನ ಕಾಲಿಗೆ ಬೇಕಾದರೂ ಬೀಳುತ್ತೇನೆ ಎಂದು ಸುಹಾಸಿನಿಗೆ ವೈದೇಹಿ ಬೇಡಿಕೆಯನ್ನು ಇಟ್ಟಿದ್ದಾಳೆ.
ಅಮೂಲ್ಯ ರೂಮಿನಲ್ಲಿ ಯೋಚನೆ ಮಾಡುತ್ತಾ ಕುಳಿತಾಗ ಆರತಿ ಅಲ್ಲಿಗೆ ಬಂದಿದ್ದು ಅಮ್ಮು ಏನು ಯೋಚನೆ ಮಾಡುತ್ತಾ ಇದ್ದೀಯಾ ಎಂದು ಕೇಳಿದ್ದಾಳೆ. ಇದಕ್ಕೆ ಅಮೂಲ್ಯ ಈ ಮನೆಗೂ ಹಾಗೂ ವೈದೇಹಿ ಅಮ್ಮನಿಗೂ ಈ ಮನೆಗೂ ಏನೋ ಬಲವಾದ ಸಂಬಂಧವಿದೆ ಎಂದು ನನಗೆ ಅನ್ನಿಸುತ್ತಿದೆ. ಆದರೆ ಅಜ್ಜಿ ಹೇಳಿದ್ದು ಸರಿಯಾಗಿದೆ ಎಂದು ಅನಿಸುತ್ತಿದೆ. ಆದರೆ ಅದು ಸರಿಯಾಗಿ ಇಲ್ಲ ನಾನು ಈ ಮನೆಯಲ್ಲಿ ಏನಾಗುತ್ತಿದೆ ಎಂಬುದನ್ನು ಕಂಡು ಹಿಡಿಯಬೇಕು ಎಂದು ಅಮೂಲ್ಯ ಹೇಳಿದ್ದಾಳೆ. ಆರತಿ ಅಮೂಲ್ಯ ಹೇಳುತ್ತಿರುವುದಕ್ಕೆ ಸರಿ ನಾವು ಕಂಡು ಹಿಡಿಯೋಣ ಎಂದು ಹೇಳಿದ್ದಾಳೆ.

ಈ ಕಡೆ ಸುಹಾಸಿನಿ ಸೂರ್ಯನಾರಾಯಣರ ಫೋಟೋವನ್ನು ತೋರಿಸಿ ವೈದೇಹಿ ಕಣ್ಣಲ್ಲಿ ನೀರನ್ನು ಹಾಕಿಸುತ್ತಾ ಇದ್ದಾಳೆ. ಅಷ್ಟೇ ಅಲ್ಲದೆ ಸುಹಾಸಿನಿ ವೈದೇಹಿ ಬೇಡುವಂತೆ ಮಾಡಿದ್ದಾಳೆ. ಸುಹಾಸಿನಿಗೆ ಸೂರ್ಯನಾರಾಯಣರು ಎಲ್ಲಿದ್ದಾರೆ ಎಂಬುವುದು ತಿಳಿದಿದೆ ಎಂದು ವೈದೇಹಿಗೆ ಅನಿಸಿದೆ. ಆದರೆ ಇಷ್ಟು ದಿನ ನನ್ನನ್ನ ನೀನು ಆಟವಾಡಿಸುತ್ತಾ ಇದ್ದೆ ಈಗ ನನ್ನ ಸರದಿ ನಾನು ಅಷ್ಟು ಬೇಗ ನಿನಗೆ ಹೇಳುತ್ತೇನೆ ಎಂದು ಸುಹಾಸಿನಿ ವೈದೇಹಿಗೆ ಹೇಳಿದ್ದಾಳೆ. 25 ವರ್ಷದ ಬಳಿಕ ತನ್ನ ಗಂಡನ ಮುಖವನ್ನು ನೋಡಿದ ವೈದೇಹಿಗೆ ಆದಷ್ಟು ಬೇಗ ತಾನು ತನ್ನ ಗಂಡನನ್ನ ನೋಡಬೇಕು ಎನಿಸಿದೆ.
ಅಮ್ಮನ ಕಾಲಿಗೆ ಬೀಳುವುದನ್ನ ತಪ್ಪಿಸಿದ ಧ್ರುವ
ಧ್ರುವನನ್ನ ನೋಡಿ ಶಾಕ್ ಆದ ಸುಹಾಸಿನಿ
ಇನ್ನೇನು ಸುಹಾಸಿನಿಯ ಕಾಲಿಗೆ ವೈದೇಹಿ ಬೀಳಬೇಕಿತ್ತು ಅಷ್ಟರಲ್ಲಿ ಧ್ರುವ ಬಂದು ಅದನ್ನ ತಪ್ಪಿಸಿದ್ದಾನೆ. ಧ್ರುವನನ್ನು ನೋಡಿ ಸುಹಾಸಿನಿ ಶಾಕ್ ಆಗಿದ್ದಾಳೆ. ವೈದೇಹಿಯ ಬಳಿ ಬಂದ ಧ್ರುವ ಅಮ್ಮ ನೀನು ಮೇಲೆ ಎದ್ದೇಳು. ಅನ್ಯಾಯ ಮಾಡಿದವರ ಕಾಲಿಗೆ ಬೀಳುವುದು ಸರಿಯಲ್ಲ ಎಂದು ವೈದೇಹಿಯನ್ನ ಮೇಲಕ್ಕೆ ಎತ್ತಿದ್ದಾನೆ. ಇನ್ನು ವೈದೇಹಿ ದ್ರುವ ನನ್ನ ನೋಡಿ ತುಂಬಾ ಸಂತೋಷವನ್ನ ಪಟ್ಟಿದ್ದಾಳೆ. ಆದರೆ ಸುಹಾಸಿನಿ ಧ್ರುವ ಮಾತನಾಡುತ್ತಿರುವುದಕ್ಕೆ ಆತಂಕದಲ್ಲಿದ್ದಾಳೆ.
ಏನು ಮದರ್ ಇಂಡಿಯಾ ಚೆನ್ನಾಗಿದ್ದೀರಾ ಎಂದು ಧ್ರುವ ಹೇಳಿದರೆ ಸುಹಾಸಿನಿ ಚೆನ್ನಾಗಿ ಇದ್ದೇನೆ. ನೀನು ಮಾತನಾಡುತ್ತಾ ಇದ್ದೀಯಾ ಎಂದು ಕೇಳಿದ್ದಾಳೆ. ಇದಕ್ಕೆ ಧ್ರುವ ನನಗೆ ಹಾಗೂ ನನ್ನ ಅಮ್ಮನಿಗೆ ತೊಂದರೆ ನೀಡಿದರೆ ಚೆನ್ನಾಗಿ ಇರೋದಿಲ್ಲ ಎಂದು ವಾರ್ನಿಂಗ್ ಮಾಡಿದ್ದಾನೆ. ಸುಹಾಸಿನಿ ಧ್ರುವನ ಮಾತನ್ನ ಕೇಳಿ ಭಯ ಬೀತಳಾಗಿದ್ದಾಳೆ ಯಾಕೆಂದರೆ ಅವನಿಗೆ ವೈದೇಹಿ ತನ್ನ ಅಮ್ಮ ಎಂಬುದು ಗೊತ್ತಾಗಿದೆ ಇಬ್ಬರು ಸೇರಿ ಏನಾದರೂ ಪ್ಲಾನ್ ಮಾಡಿದರೆ ಎಂದು ಯೋಚಿಸಿದ್ದಾಳೆ.

ಸೂರ್ಯನಾರಾಯಣರಿಗೆ ಅಗ್ನಿ ಟಾರ್ಚರ್
ಅಗ್ನಿ ಸೂರ್ಯನಾರಾಯಣರಿಗೆ ತೊಂದರೆ ಕೊಡುತ್ತಾ ಇದ್ದಾನೆ. 25 ವರ್ಷದ ದ್ವೇಷ ಇನ್ನೂ ನನ್ನಲ್ಲಿ ಇನ್ನೂ ಹಾಗೇ ಇದೆ. ನಿಮಗೆ ಇನ್ನಷ್ಟು ಕಾಡಿಸಿ ಸಾವನ್ನು ಕೊಡುತ್ತೇನೆ. ನನ್ನ ತಂದೆ ತಾಯಿ ಅನುಭವಿಸಿದ ನರಕವನ್ನು ನೀವು ಸಹ ಅನುಭವಿಸಬೇಕು ಎಂದು ಹೇಳಿದ್ದಾನೆ. ನನ್ನ ಹೆಂಡತಿಯ ಮುಖವನ್ನಾದರೂ ನನ್ನಗೆ ತೋರಿಸಿ ಎಂದು ಸೂರ್ಯನಾರಾಯಣರು ಕೇಳಿದ್ದಾರೆ.
ನೀವೇ ನೆನಪಿಸಿಕೊಳ್ಳಿ ಇದೇ ಇವತ್ತು ನಾನು ನಿಮಗೆ ಕೊಡುತ್ತಿರುವ ಟಾಸ್ಕ್ ಎಂದು ಅಗ್ನಿ ಹೇಳಿದ್ದಾನೆ. ಸೂರ್ಯನಾರಾಯಣರು ತಮ್ಮ ಹೆಂಡತಿಯ ಮುಖವನ್ನು ನೆನಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರೂ ಅವರಿಗೆ ಹಳೆಯ ನೆನಪು ಯಾವುದು ಬರುತ್ತಿಲ್ಲ. ಇದರಿಂದ ಅಗ್ನಿ ತುಂಬಾ ಖುಷಿಯನ್ನ ಪಟ್ಟಿದ್ದಾನೆ. ಹೀಗೆ ನೀವು ನೋವು ಅನುಭವಿಸಿ ಸಾಯಬೇಕು ಎಂದು ಹೇಳಿದ್ದಾನೆ.


Click it and Unblock the Notifications











