Gattimela: ಸತ್ಯ ತಿಳಿದುಕೊಳ್ಳಲು ಸುಹಾಸಿನಿಯನ್ನ ಹಿಂಬಾಲಿಸಿ ಹೊರಟ ಧ್ರುವ..! ಸುಹಾಸಿನಿ ರೂಮ್‌ನಲ್ಲಿ ಅಮೂಲ್ಯ ಶೋಧ!

By Shruthi Harish Gowda

ಗಟ್ಟಿಮೇಳ ಧಾರಾವಾಹಿಯಲ್ಲಿ ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ಬೊಂಬೆಯನ್ನು ವೈದೇಹಿ ಹಾಗೂ ಅಮೂಲ್ಯ, ಆದಿತಿ,‌ ಧ್ರುವ ಜೋಡಿಸುತ್ತಾ ಇದ್ದಾರೆ. ಇದೇ ವೇಳೆ ಆರತಿ ಗೊಂಬೆಯನ್ನು ಯಾಕೆ ಕೂರಿಸುವುದು ಎಂದು ಕೇಳಿದ್ದಾಳೆ.‌ಇದಕ್ಕೆ ಅಜ್ಜಿ ಪಾಂಡವರು ವಿಜಯವನ್ನು ಸಾಧಿಸಿದ ದಿನ ದುಷ್ಟರ ಸಂಹಾರವಾದ ದಿನ ಎಂದು ಅಜ್ಜಿ ಕಥೆಯನ್ನು ಹೇಳಿದ್ದಾರೆ. ಇದಕ್ಕೆ ಧ್ರುವ ಈಗಲೂ ಸಹ ರಾಕ್ಷಸರು ಇದ್ದಾರೆ ಮನುಷ್ಯನ ರೂಪದಲ್ಲಿ ಇದ್ದಾರೆ ಎಂದು ಸುಹಾಸಿನಿಯ ಬಗ್ಗೆ ವ್ಯಂಗ್ಯದ‌ ಮಾತುಗಳನ್ನು ಆಡಿದ್ದಾನೆ. ಈ ವೇಳೆ ಸುಹಾಸಿನಿ ಮಾತು‌ ಬಂದಿದೆ ಎಂದು ಮಾತನಾಡು ನಿನಗೆ ಒಂದು ಗತಿ ಕಾಣಿಸುತ್ತೇನೆ ಎಂದು ಮನಸಿನಲ್ಲೇ ಅಂದುಕೊಂಡಿದ್ದಾಳೆ.

ಇನ್ನೂ ಮನೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದ್ದು ಸುಹಾಸಿನಿ ಎಲ್ಲರನ್ನೂ ನೋಡಿ ಉರಿದುಕೊಳ್ಳುತ್ತಿದ್ದಾಳೆ. ವೈಜಯಂತಿ ಅಮ್ಮ ಮಗಳ ಮುಖವನ್ನು ನೋಡಿ ನೀನು ಉರಿದುಕೋ ಸುಹಾಸಿನಿ ಇನ್ನೂ ಉರಿದುಕೋ ಎಂದು ಹೇಳಿದ್ದಾರೆ. ಅಗ್ನಿ ಸುಹಾಸಿನಿಗೆ ಫೋನ್ ಮೇಲೆ ಪೋನ್ ಮಾಡಿತ್ತಾ ಇದ್ದಾನೆ. ಆದರೆ ಸುಹಾಸಿನಿ ಫೋನ್ ರಿಸೀವ್ ಮಾಡುತ್ತಾ ಇಲ್ಲವೆಂದು ಕೋಪ ಮಾಡಿಕೊಂಡಿದ್ದಾನೆ. ಪದೇ ಪದೇ ಅಗ್ನಿ ಪೋನ್ ಮಾಡುತ್ತಿರುವುದನ್ನು ನೋಡಿ ಫೋನ್ ರಿಸೀವ್ ಮಾಡಿದ್ದಾಳೆ. ಹಣವನ್ನು ಕಳಿಸಿರುವುದು ಕಡಿಮೆ ಆಗಿದ್ದು ಅಗ್ನಿ ಕೋಪ ಮಾಡಿಕೊಂಡಿದ್ದಾನೆ.

Zee Kannada serial Gattimela October 25th episode update

ಈ ಕ್ಷಣವೇ ಫೈಲ್ ತೆಗೆದುಕೊಂಡು ಮನೆಗೆ ಬರಬೇಕು ಎಂದು ಸುಹಾಸಿನಿ ಬಳಿ ಹೇಳಿದ್ದಾನೆ. ಸುಹಾಸಿನಿ ಮನೆಯಲ್ಲಿ ಹಬ್ಬ ನಡೆಯುತ್ತಿದೆ ಹೇಗೆ ಬರಲಿ ಎಂದು ಹೇಳಿದರು ಅಗ್ನಿ ಕೇಳುತ್ತಿಲ್ಲ ನಾನು ಬಿಸಿನೆಸ್‌ನಲ್ಲಿ ತುಂಬಾ ಸೀರಿಯಸ್ ಬಾ ಎಂದು ಫೋನ್ ಕಟ್ ಮಾಡಿದ್ದಾನೆ. ಅಷ್ಟರಲ್ಲಿ ರೌಡಿ ಬಂದು ಸೂರ್ಯನಾರಾಯಣರು ಬಾಟಲ್‌ನಿಂದ ತಲೆಗೆ ಹೊಡೆದುಕೊಂಡು ರಕ್ತ ಸುರಿಯುತ್ತಿದೆ ಎಂದು ಅಗ್ನಿ ಬಳಿ ಹೇಳಿದ್ದಾನೆ. ಅಗ್ನಿ ಸುಹಾಸಿನಿಗೆ ಫೋನ್ ಮಾಡಿ ಸೂರ್ಯನಾರಾಯಣ ಬಾಟೆಲ್‌ನಲ್ಲಿ ಹೊಡೆದುಕೊಂಡಿರುವುದನ್ನು ತಿಳಿಸಿದ್ದಾನೆ.‌ ಸುಹಾಸಿನಿ ಟೆನ್ಷನ್‌ನಲ್ಲಿ ಹೊರಡಲು‌ ಹೋದಾಗ ವೈಜಯಂತಿ ಅಮ್ಮ ಎಲ್ಲಿಗೆ ಎಂದು ಪ್ರಶ್ನೆಯನ್ನು ಮಾಡಿದ್ದಾರೆ.

ಅಗ್ನಿ ಮನೆಗೆ ಹೊರಟ ಸುಹಾಸಿನಿ, ಫಾಲೋ ಮಾಡಿದ ಧ್ರುವ

ಸುಹಾಸಿನಿ ಅಮ್ಮನಿಗೆ ಬೈದು ಮನೆಯಿಂದ ಹೊರಗೆ ಹೋಗುತ್ತಾ ಇದ್ದಾಳೆ. ನಿನಗೆ ಕೆಟ್ಟದ್ದೆ ಆಗಬೇಕು ಹೋಗು ಎಂದು ಮನಸ್ಸಿನಲ್ಲಿ ಶಾಪ ಹಾಕಿದ್ದಾರೆ. ಇನ್ನು ಸುಹಾಸಿನಿ ಮನೆಯಿಂದ ಹೊರಗೆ ಬಂದಾಗ ಧ್ರುವ ಹಾಗೂ ಅಮೂಲ್ಯ ಇಬ್ಬರು ಸುಹಾಸಿನಿಯ ಬಗ್ಗೆ ಕೇಳಿದ್ದಾರೆ. ಇದಕ್ಕೆ ಅಜ್ಜಿ ಅವಳು ಎಲ್ಲಿಗೋ ಹೋದಳು ಎಂದು ಹೇಳಿದ್ದಾರೆ. ಧ್ರುವ ಸುಹಾಸಿನಿ ಹೋದ ದಾರಿಯನ್ನೇ ಹುಡುಕುತ್ತಾ ಬಂದಿದ್ದಾನೆ. ಸುಹಾಸಿನಿ ಮನೆಯಿಂದ ಹೊರಗಡೆ ಇದ್ದು ಕ್ಯಾಬ್ ನಲ್ಲಿ ಹೋಗಬೇಕು ಎಂದು ಚಿಂತಿಸುತ್ತಿದ್ದಾಳೆ ಸ್ವಂತ ಕಾರಿನಲ್ಲಿ ಹೋದರೆ ಯಾರಿಗಾದರೂ ಅನುಮಾನ ಬರುತ್ತದೆ ಎಂದು ಅಂದುಕೊಂಡಿದ್ದಾಳೆ.

ಧ್ರುವ ಸುಹಾಸಿನಿ ಎಲ್ಲಿಗೆ ಹೋಗುತ್ತಾಳೆ ಎಂಬುದನ್ನು ಕಂಡು ಹಿಡಿಯಬೇಕು ಎಂದು ಧ್ರುವ ಸುಹಾಸಿನಿಯ ಹಾದಿಯನ್ನೇ ಹಿಂಬಾಲಿಸಿದ್ದಾನೆ. ಸುಹಾಸಿನಿ ಎಲ್ಲಿಗೆ ಹೋಗುತ್ತಾಳೆ ಎಂಬುವುದನ್ನು ಈಗ ಧ್ರುವ ಕಂಡು ಹಿಡಿಯಬೇಕಾಗಿದೆ. ಯಾಕೆಂದರೆ ಸೂರ್ಯನಾರಾಯಣ್ ತಲೆಗೆ ಹೊಡೆದುಕೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲು ಅಗ್ನಿ ಹಾಗು ಸುಹಾಸಿನಿ ಇಬ್ಬರು ಹೋಗುತ್ತಾರೆ. ಈ ವೇಳೆ ಸೂರ್ಯನಾರಾಯಣರನ್ನು ಮನೆಗೆ ಕರೆದುಕೊಂಡು ಬರುತ್ತಾನಾ ಧ್ರುವ ಎಂಬುವುದೇ ಕುತೂಹಲವಾಗಿದೆ.

Zee Kannada serial Gattimela October 25th episode update

ಸುಹಾಸಿನಿ ರೂಮಿಗೆ ಬಂದ ಅಮೂಲ್ಯ

ವಿಡಿಯೋ ಹುಡುಕಿ ಬಂದ ವೈದೇಹಿ

ಸುಹಾಸಿನಿ ಒಂದು ಚಾರಿಟ್ರಬಲ್ ಟ್ರಸ್ಟ್ ನಡೆಸುತ್ತಾ ಇದ್ದು ಅದರ ಮೂಲಕ ಅಗ್ನಿಗೆ ಹಣವನ್ನು ಟ್ರಾನ್ಸ್ಫರ್ ಮಾಡಿದ್ದಳು. ಆ ಫೈಲ್ ಅಮೂಲ್ಯ ಕೈಗೆ ಸಿಕ್ಕಿತು ಈಗ ಅದೇ ಫೈಲ್ ಹುಡುಕಿಕೊಂಡು ಅಮೂಲ್ಯ ಸುಹಾಸಿನಿಯ ರೂಮಿಗೆ ಬಂದಿದ್ದಾಳೆ. ಇನ್ನು ಸುಹಾಸಿನಿ ಹೋದ ಬಳಿಕ ವೈದೇಹಿಯು ಸಹ ಸೂರ್ಯನಾರಾಯಣರ ಬಗ್ಗೆ ವಿಡಿಯೋ ತೋರಿಸಿದ್ದನ್ನು ಹುಡುಕಿಕೊಂಡು ರೂಮಿಗೆ ಬಂದಿದ್ದಾಳೆ.

ಈ ವೇಳೆ ಅಮೂಲ್ಯ ವೈದೇಹಿ ಬಂದಿರಬೇಕು ಎಂದು ಅವಿತುಕೊಂಡಿದ್ದಾಳೆ. ನಂತರ ಅದು ಸುಹಾಸಿನಿ ಅಲ್ಲ ವೈದೇಹಿ ಅಮ್ಮ ಎಂದು ತಿಳಿದು ಹೊರಗಡೆ ಬಂದು ನೀವು ಇಲ್ಲಿಗೆ ಏಕೆ ಬಂದಿರಿ ಎಂದು ಕೇಳಿದ್ದಾಳೆ.ವೈದೇಹಿ ಏನನ್ನು ಹೇಳದೆ ಹೊರಗಡೆ ಹೋಗಿದ್ದಾಳೆ. ಇದೇ ವೇಳೆ ಅಮೂಲ್ಯ ವೈದೇಹಿ ಅಮ್ಮ ಈ ಮನೆಗೆ ಏನು ಆಗಬೇಕು? ಗಾಢವಾದ ಸಂಬಂಧವಿದೆ ಅದನ್ನ ನಾನು ಕಂಡುಹಿಡಿಯುತ್ತೇನೆ ಎಂದುಕೊಂಡಿದ್ದಾಳೆ.

More from Filmibeat

English summary
Gattimela serial October 25th episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X