Actress Priya Achar: ದುಂಡು ಮುಖದ ಚೆಲುವೆ ಪ್ರಿಯಾ ಆಚಾರ್ ಜಗಳಗಂಟಿ
ಗಟ್ಟಿಮಳ ಧಾರಾವಾಹಿಯಲ್ಲಿ ಚಟ-ಪಟ ಅಂತ ಮಾತನಾಡುವ ಅಧಿತಿ ರಿಯಲ್ ಲೈಫ್ ನಲ್ಲೂ ಜಗಳಗಂಟಿ ಅಂತೆ. ಹಾಗಂತ ಅವರು ಎಲ್ಲರ ಜೊತೆ ಜಗಳಕ್ಕೆ ಇಳಿಯೊಲ್ಲ. ಬಟ್ ತಮ್ಮ ಸಹೋದರಿ ಜೊತೆ ಇದ್ದಾಗ ಜಗಳ ಮಾಡದೆ ಇರೊಲ್ಲವಂತೆ. ಹೀಗಂತ ಅವರೇ ಹೇಳಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದ ತಮ್ಮ ಪ್ರೊಫೈಲ್ ನಲ್ಲೇ ಕನ್ನಡತಿ ಎಂದು ಹಾಕಿಕೊಂಡಿರುವ ಅಧಿತಿ ಅಲಿಯಾ ಪ್ರಿಯಾ ಆಚಾರ್ ಕನ್ನಡದ ಅಪ್ಪಟ ಅಭಿಮಾನಿ. ಡಬ್ ಸ್ಮ್ಯಾಶ್, ಟಿಕ್ ಟಾಕ್, ರೀಲ್ಸ್ ಮಾಡಿಕೊಂಡಿದ್ದ ಪ್ರಿಯಾ ಆಚಾರ್ ಅನ್ನು ನೋಡಿದ ಮಾಸ್ಟರ್ ಆನಂದ್ ಅವರು ನಟಿಸುವಂತೆ ಆಫರ್ ಕೊಟ್ಟರಂತೆ. ಹೀಗಾಗಿ ನಾನು 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ ಎಂದಿದ್ದಾರೆ.
ಮೂಲತಃ ದಾವಣಗೆರೆಯವರಾಗಿರುವ ಪ್ರಿಯಾ ಆಚಾರ್ ಕಳೆದ ವರ್ಷವಷ್ಟೇ ಬಿಸಿಎ ಪದವಿ ಮುಗಿಸಿದ್ದಾರೆ. 'ಗಟ್ಟಿಮೇಳ' ಧಾರಾವಾಹಿ ಶುರುವಾದಾಗ ಪ್ರಿಯಾ ಆಚಾರ್ ಅವರು ಓದು ಹಾಗೂ ನಟನೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದರು. ನಟನೆ ಬಗ್ಗೆ ಗಂಧಗಾಳಿ ತಿಳಿದಿರದ ಇವರು ಗಟ್ಟಿಮೇಳ ಧಾರಾವಾಹಿಗೆ ಬಂದ ಮೇಲೆ ನಟಿಸುವುದನ್ನು ಕಲಿತ್ತದ್ದು.

ರಿಯಲ್ ಲೈಫ್ ನಲ್ಲೂ ಜಗಳಗಂಟಿ
ಗಟ್ಟಿಮೇಳ ಧಾರಾವಾಹಿಯಲ್ಲಿ ಸದಾ ಅಕ್ಕ-ತಂಗಿ ಜೊತೆ ಜಗಳ ಮಾಡುತ್ತಲೇ ಇರುವ ಪ್ರಿಯಾ ಆಚಾರ್ ನಿಜ ಜೀವನದಲ್ಲೂ ಜಗಳಗಂಟಿಯಂತೆ. ಏನಾದರೂ ಒಂದು ಎಡವಟ್ಟು ಮಾಡಿ ಮನೆಯಲ್ಲಿ ಬೈಸ್ಕೊಳ್ತಾರಂತೆ. ಮನೆಯಲ್ಲಿ ಸದಾ ತಮ್ಮ ತಂಗಿ ಜೊತೆಗೆ ಜಗಳವಾಡುತ್ತಿರುತ್ತಾರಂತೆ. ಅಧಿತಿ ಪಾತ್ರಕ್ಕೂ ರಿಯಲ್ ಲೈಫ್‌ನಲ್ಲಿನ ಪ್ರಿಯಾಗೂ ಅಷ್ಟೇನು ವ್ಯತ್ಯಾಸವಿಲ್ಲವಂತೆ. ಅರಳು ಹುರಿದಂತೆ ಮಾತನಾಡುತ್ತಲೇ ಪ್ರಿಯಾ ಆಚಾರ್ ಹಲವರ ಮನಗೆದ್ದಿದ್ದಾರೆ. ಪ್ರಿಯಾ ಆಚಾರ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿ ಬಳಗವಿದೆ. ಇನ್ನು ಪ್ರಿಯಾ ಆಚಾರ್ ಗಟ್ಟಿಮೇಳ ಧಾರಾವಾಹಿ ಸೆಟ್ ನಲ್ಲಿ ತುಂಬಾ ಎಂಜಾಯ್ ಮಾಡುತ್ತಾರಂತೆ. ನಟನೆಯನ್ನು ಧಾರಾವಾಹಿಯಲ್ಲಿದ್ದವರು ಹೇಳಿಕೊಟ್ಟರು. ನಾನು ನಟಿಸಿದ ಮೊದಲ ಸೀರಿಯಲ್ ನಂಬರ್ ಒನ್ ಸ್ಥಾನದಲ್ಲಿರುವುದು ನನ್ನ ಹೆಮ್ಮೆ ಎನ್ನುತ್ತಾರೆ ಪ್ರಿಯಾ.

ಸಿನಿಮಾದಲ್ಲೂ ಪ್ರಿಯಾ ಧಮಾಕಾ
ಪ್ರಿಯಾ ಆಚಾರ್ ಕೇವಲ ಕಿರುತೆರೆ ನಟಿಯಷ್ಟೇ ಅಲ್ಲ. ಅವರು ಚಿತ್ರದಲ್ಲಿಯೂ ನಟಿಸಿದ್ದಾರೆ. ಆ ಚಿತ್ರದ ಹೆಸರು 'ಧಮಾಕಾ'. ಇದರ 'ತುಕಾಲಿ' ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ. ಚಿತ್ರದಲ್ಲಿ ಸಿದ್ದು ಮೂಲಿಮನಿ, ಪ್ರಿಯಾ ಆಚಾರ್, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ.

ರಿಯಾಲಿಟಿ ಶೋನಲ್ಲಿ ಕುಣಿದಿದ್ದ ಬಜಾರಿ
ಪ್ರಿಯಾ ಆಚಾರ್ ಅವರಿಗೆ ಕುಣಿಯೋದು ಎಂದರೆ ತುಂಬಾ ಇಷ್ಟ. ಆದರೆ ಡ್ಯಾನ್ಸ್ ಕಲಿತಿರಲಿಲ್ಲ. ಆದರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿದ್ರು. ಡ್ಯಾನ್ಸ್ ಕಲಿತು ಪರ್ಫಾಮ್ ಮಾಡಿದ್ರು. ಇದು ಅವರಿಗೆ ಖುಷಿ ಕೊಟ್ಟಿದ್ದ ಸಂದರ್ಭ ಎಂದು ಹೇಳುತ್ತಾರೆ. ಇನ್ನು ಧಾರಾವಾಹಿಯಲ್ಲಿ ಟ್ರೆಡಿಷನಲ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ಪ್ರಿಯಾ, ಮಾರ್ಡನ್ ಬಟ್ಟೆಗಳನ್ನೂ ಧರಿಸುತ್ತಾರೆ. ಗೌನ್, ಫ್ರಾಕ್, ಜೀನ್ಸ್ ಧರಿಸಿ ಫೋಟೋಶುಟ್ ಮಾಡಿಸಿಕೊಳ್ಳುವ ಪ್ರಿಯಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇವರ ಲುಕ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಪರಭಾಷೆಯಲ್ಲೂ ನಟಿಸುತ್ತಿರುವ ಚೆಲುವೆ
ಇದೀಗ ಕಳೆದ ನಾಲ್ಕು ತಿಂಗಳಿಂದ ಪ್ರಿಯಾ ಆಚಾರ್ ಅವರು ತೆಲುಗಿನ ಧಾರಾವಾಹಿಗೂ ಬಣ್ಣ ಹಚ್ಚಿದ್ದಾರೆ. ಜೆಮಿನಿಯಲ್ಲಿ ಮೂಡಿಬರುತ್ತಿರುವ ಆನಂದರಾಗಂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಂಡಿದ್ದು, ಮಂಗಳಮುಖಿಯ ಸುತ್ತ ಕಥಾಹಂದರ ಈ ಸೀರಿಯಲ್ ನದ್ದು. ಇದರಲ್ಲಿನ ಪ್ರಿಯಾ ಆಚಾರ್ ಅವರ ಪಾತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.


Click it and Unblock the Notifications











