Gattimela: ತಂದೆಗೆ ನೆನಪು ಮರಳಿಸೋ ಪ್ರಯತ್ನದಲ್ಲಿ ವೇದಾಂತ್: ಮಂಜುನಾಥ್ ಮನೆಗೆ ಸೂರ್ಯನಾರಾಯಣ!

By Shruti Harish Gowda

ಅಗ್ನಿಗೆ ತನ್ನ ತಮ್ಮನ ಡೆಡ್ ಬಾಡಿ ಎಲ್ಲಿದೆ ಅಥವಾ ನನ್ನ ತಮ್ಮ ಬದುಕಿದ್ದಾನಾ ಅಥವಾ ಸತ್ತಿದ್ದಾನಾ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಮಂಜುನಾಥ್ ಅವರ ಮನೆಗೆ ಸೂರ್ಯನಾರಾಯಣರನ್ನ ಕರೆದುಕೊಂಡು ಬಂದಿದ್ದಾನೆ. ಸೂರ್ಯನಾರಾಯಣರಿಗೆ ಮಂಜುನಾಥ್ ಮನೆಗೆ ಹೋಗುವುದು ಇಷ್ಟವಿಲ್ಲ. ಯಾಕೆಂದರೆ ಅವರು ಯಾವಾಗಲೂ ಧರ್ಮದ ಪರವಾಗಿ ಬದುಕಿದವರು. ನಾನು ನನ್ನ ಸ್ವಾರ್ಥಕ್ಕಾಗಿ ಇಂದು ನಾನು ಇವರ ಮನೆಗೆ ಹೋಗಲೇಬೇಕಾ ಎಂದು ಅಗ್ನಿಯನ್ನ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಅಗ್ನಿ ಹೌದು ನೀವು ನನಗೋಸ್ಕರ ಈ ಕೆಲಸವನ್ನ ಮಾಡಲೇಬೇಕು ಎಂದು ಹೇಳಿದ್ದಾನೆ.

ನೀವು ಸರಿಯಾಗಿ ಅವಾಜ್‌ನ್ನು ಹಾಕಿ ಇಲ್ಲದಿದ್ದರೆ ಆ ಮನುಷ್ಯ ಕೇಳೋದಿಲ್ಲ. ನಾನು ಹೇಳಿರುವುದು ಎಲ್ಲವೂ ಸಹ ನಿಮಗೆ ನೆನಪಿದೆ ತಾನೇ ಎಂದು ಅಗ್ನಿ ಸೂರ್ಯನಾರಾಯಣರಿಗೆ ಹೇಳಿದ್ದಾನೆ. ಇದಕ್ಕೆ ಸೂರ್ಯನಾರಾಯಣರು ಹೌದು ನೀವು ಹೇಳಿದ್ದು ಎಲ್ಲವೂ ಸಹ ನನಗೆ ನೆನಪಿದೆ ಎಂದು ಅಗ್ನಿ ಬಳಿ ಹೇಳಿದ್ದಾರೆ. ನಂತರ ಒಂದೊಂದೇ ಹೆಜ್ಜೆಯನ್ನು ಇಟ್ಟುಕೊಂಡು ಮಂಜುನಾಥ್ ಮನೆಯ ಬಾಗಿಲ ಬಳಿ ಹೋಗಿದ್ದಾರೆ. ಈ ವೇಳೆ ಇನ್ನೊಮ್ಮೆ ತಿರುಗಿ ಅಗ್ನಿಯ ನೋಡಿದ್ದಾರೆ. ಇದಕ್ಕೆ ಅಗ್ನಿ ಹೋಗಿ ಎಂದು ಕೈಸನ್ನೆ ಮಾಡಿದ್ದಾನೆ.

Zee Kannada serial gattimela serial september 11th episode update

ಅಮೂಲ್ಯಾಗೆ ವೈದೇಹಿ ತಮ್ಮ ಮನೆಯಲ್ಲಿ ಇದ್ದಾರೆ ಎಂಬ ವಿಷಯವನ್ನು ವೇದಾಂತ್ ತಿಳಿಸಿದ್ದಾನೆ. ಅಮೂಲ್ಯ ಯಾಕೆ ನಮ್ಮ ಮನೆಗೆ ಅವರು ಹೋದರು, ನೀನು ಇಲ್ಲಿಗೆ ಕರೆದುಕೊಂಡು ಬರಬೇಕು ತಾನೆ ಎಂದು ಹೇಳಿದ್ದಾಳೆ. ಇದಕ್ಕೆ ಸ್ವಲ್ಪ ದಿನ ಅವರು ಅಲ್ಲೇ ಇರಲಿ ಎಲ್ಲವೂ ಮುಗಿದ ಕೂಡಲೇ ಅವರನ್ನ ನಾನು ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾನೆ. ನಾನು ಏನೇ ಮಾಡಿದರೂ ಸಹ ಅದಕ್ಕೊಂದು ಬಲವಾದ ಕಾರಣ ಇದ್ದೇ ಇರುತ್ತದೆ. ನಾನು ಹೇಳುವ ತನಕ ನೀನು ಯಾವುದೇ ವಿಷಯವನ್ನು ನನ್ನ ಬಳಿ ಕೇಳುವಂತಿಲ್ಲ ಎಂದು ವೇದಾಂತ ಅಮೂಲ್ಯಾಗೆ ಹೇಳಿದ್ದಾನೆ.

ಮಂಜುನಾಥ್ ಮನೆಯಲ್ಲಿ ಸೂರ್ಯನಾರಾಯಣ, ಗಂಡನ ಇರುವಿಕೆ ತಿಳಿದ ವೈದೇಹಿ!

ಅಗ್ನಿ ಹೇಳಿದ ಎಂದು ಮಂಜುನಾಥ್ ಹುಡುಕಿಕೊಂಡು ಸೂರ್ಯನಾರಾಯಣ ಬಂದಿದ್ದಾರೆ. ಈ ವೇಳೆ ವೈದೇಹಿಗೆ ಎದೆಯಲ್ಲಿ ಢವಢವ ಶುರುವಾಗಿದೆ. ಇಲ್ಲಿ ಎಲ್ಲೋ ನನ್ನ ಗಂಡ ಬಂದಿದ್ದಾರೆ ಎಂದು ಮೇಲಕ್ಕೆ ಎದ್ದಿದ್ದಾಳೆ ನಂತರ ಇನ್ನೇನು ಹೊರಡಲು ಹೋದಾಗ ಪರಿಮಳ ವೈದೇಹಿ ಎಂದು ಕರೆದಾಗ ವಾಸ್ತವಕ್ಕೆ ಬಂದಿದ್ದಾಳೆ. ಮಂಜುನಾಥ್ ಹುಡುಕಿಕೊಂಡು ಸೂರ್ಯನಾರಾಯಣ ಹೊರಟಾಗ ಮಗು ಕಂಡಿದೆ.

ಈ ವೇಳೆ ಮಗುವನ್ನು ಎತ್ತಿಕೊಂಡು ಮುದ್ದು ಮಾಡಿದ್ದಾರೆ. ನಂತರ ಅಲ್ಲಿಗೆ ಆರತಿ ಬಂದು ಯಾರು ನೀವು ಎಂದು ಮಗುವನ್ನು ಕಿತ್ತುಕೊಂಡಿದ್ದಾಳೆ. ಈ ವೇಳೆ ನಾನು ಮಂಜುನಾಥ್ ಅವರನ್ನು ನೋಡಲು‌ ಬಂದಿರುವುದಾಗಿ ಹೇಳುತ್ತಾರೆ. ಈ ವೇಳೆ ಮಂಜುನಾಥ್ ಸೂರ್ಯನಾರಾಯಣ ಅವರನ್ನು ನೋಡಲು ಬಂದಿದ್ದಾರೆ. ವೈದೇಹಿಗೆ ತನ್ನ ಗಂಡ ಇಲ್ಲೇ ಎಲ್ಲೋ ಇದ್ದಾರೆ ಎಂದು ಅನಿಸುತ್ತಿದೆ. ವೈದೇಹಿಯನ್ನು ಸೂರ್ಯನಾರಾಯಣ ನೋಡಿದರೆ ಹಳೆಯ ನೆನಪುಗಳು ಬರುವ ಸಾಧ್ಯತೆ ಹೆಚ್ಚಿದೆ.

Zee Kannada serial gattimela serial september 11th episode update

ತಂದೆಗೆ ಹಳೆಯ ನೆನಪು ತರಿಸಲು ವೇದಾಂತ್ ಪ್ಲಾನ್

ತಂದೆಗೆ ಹಳೆಯ ನೆನಪು ತರಿಸಲು ವೇದಾಂತ್ ಪ್ಲ್ಯಾನ್ ಮಾಡುತ್ತಿದ್ದಾನೆ. ಅಮೂಲ್ಯ ಅಪ್ಪಾಜಿಗೆ ಹಳೆಯ ನೆನಪು ಬಂತಾ ಎಂದು ಕೇಳಿದ್ದಾನೆ. ಇದಕ್ಕೆ ಇಲ್ಲ ಎಂದು ವೇದಾಂತ ಹೇಳಿದ್ದಾನೆ. ಇದಕ್ಕೆ ಅಮೂಲ್ಯ ನಾವು ಅಪ್ಪಾಜಿಗೆ ಹಳೆಯ ನೆನಪುಗಳನ್ನ ತರಿಸಲು ಏನಾದರೂ ಒಂದು ಪ್ರಯತ್ನ ಮಾಡೋಣ ಎಂದು ಹೇಳಿದ್ದಾಳೆ. ಅದೇ ಸಮಯಕ್ಕೆ ಕಾಂತ ಬಂದಿದ್ದು ಕಾಂತನನ್ನು ವೇದಾಂತ್ ಅಡುಗೆ ಮಾಡಲು ಬರುತ್ತಾ ಎಂದು ಕೇಳಿದ್ದಾನೆ.

ಇದಕ್ಕೆ ಕಾಂತ ನನಗೆ ಅಡುಗೆ ಮಾಡಲು ಬರುವುದಿಲ್ಲ ಅನ್ನ ಮಾಡೋದನ್ನೇ ಯೂಟ್ಯೂಬ್ ನೋಡಿ ಮಾಡುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ವೇದಾಂತ್ ನಿನ್ನ ನಾನು ರೌಡಿ ಮನೆಗೆ ಅಡುಗೆ ಮಾಡಲು ಕಳಿಸೋಣ ಎಂದರೆ ನೀನು ಯಾಕೆ ಬರೋದಿಲ್ಲ ಎನ್ನುತ್ತಿರುವೆ.‌ ನಿನ್ನಿಂದ ನನಗೆ ಈ ಸಹಾಯ ಆಗಲೇಬೇಕು ನೀನು ಮಾಡಲೇಬೇಕು ಎಂದು ವೇದಾಂತ್ ಹೇಳಿದಾಗ ಕಾಂತ ಶಾಕ್ ಆಗಿದ್ದಾನೆ‌.

More from Filmibeat

English summary
gattimela serial september 11th episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X