ತಮ್ಮ ವಿಕ್ಕಿಗಾಗಿ ಲಾಯರ್ ಕೋರ್ಟ್ ಧರಿಸಿದ ವೇದಾಂತ್
ಒಬ್ಬ ತಮ್ಮನನ್ನು ಈಗಾಗಲೇ ಕಳೆದುಕೊಂಡು ದುಖಃದಲ್ಲಿ ವೇದಾಂತ್ ವಸಿಷ್ಠ ಇದ್ದಾನೆ. ಈ ನಡುವೆ ಈಗ ಮತ್ತೊಬ್ಬ ಸಹೋದರ ವಿಕ್ರಾಂತ್ ವಸಿಷ್ಠನಿಗೆ ಬೇಲ್ ಕೊಡಿಸುವ ಪರಿಸ್ಥಿತಿ ಬಂದಿದೆ. ಹೀಗಾಗಿ ಈಗ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಕೋರ್ಟ್ ಸೀನ್ ಮುಂದುವರಿದಿದೆ.
ಈಗಾಗಲೇ ಒಂದು ಬಾರಿ ವಿಕ್ಕಿಗೆ ಬೇಲ್ ಕೊಡಿಸುವ ಸಲುವಾಗಿ ಅಮೂಲ್ಯಳನ್ನು ಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಗಿತ್ತು. ಆದರೆ ವಕೀಲರ ಕ್ರಾಸ್ ಎಕ್ಸಾಮಿನೇಷನ್ ನಲ್ಲಿ ಸಿಕ್ಕಿ ಹಾಕಿಕೊಂಡು, ವಿಕ್ಕಿಗೆ ಬೇಲ್ ಕೊಡಿಸಲು ಆಗಲಿಲ್ಲ. ಇನ್ನು ವಿಕ್ಕಿ ಪರ ವಕೀಲರು ಕೂಡ ಕೈಕೊಟ್ಟಿದ್ದಾರೆ.
ಹಾಗಾಗಿ ವಿಕ್ಕಿಗಾಗಿ ಅನುಭವವುಳ್ಳ ಲಾಯರ್ ಗಳನ್ನು ವೇದಾಂತ್ ಸಂಪರ್ಕಿಸಿದ್ದಾನೆ. ಆದರೆ ಯಾರೂ ವಿಕ್ಕಿ ಪರ ವಾದ ಮಂಡಿಸಲು ಮುಂದೆ ಬಂದಿಲ್ಲ. ಈ ಸಂದರ್ಭದಲ್ಲಿ ವೇದಾಂತ್ ಕೈ ಹಿಡಿದಿದ್ದೇ ಆದಿತ್ಯ. ಕೈಯಲ್ಲೇ ಬೆಣ್ಣೆ ಹಿಡಿದುಕೊಂಡು. ತುಪ್ಪಕ್ಕಾಗಿ ಊರೆಲ್ಲಾ ಹುಡುಕುತ್ತಿದ್ದೀಯಾ. ನೀನೇ ಯಾಕೆ ತಮ್ಮನ ಪರವಾಗಿ ವಾದ ಮಾಡಬಾರದು ಎಂದು ಹೇಳಿದ್ದಾನೆ.

ಈ ಮಾತನ್ನು ಕೇಳಿ ವೇದಾಂತ್ ಮೊದಮೊದಲು ಇದು ಸಾಧ್ಯವಿಲ್ಲ ಎಂದಿದ್ದ. ಆದರೆ ನಂತರ ಒಪ್ಪಿಕೊಂಡಿದ್ದು, ಆ ವಕೀಲರ ಕೆಲಸವನ್ನು ಖುದ್ದು ವೇದಾಂತ್ ಮಾಡುತ್ತಿದ್ದಾನೆ. ಇದಕ್ಕೆಲ್ಲ ಆದಿತ್ಯ ಹುಮ್ಮಸ್ಸು ತುಂಬಿದ್ದು, ಅದಕ್ಕಾಗಿಯೇ ಅನುಭವಕ್ಕಿಂತ ಬುದ್ದಿವಂತಿಕೆ ಇಲ್ಲಿ ವರ್ಕ್ ಆಗುತ್ತೆ ಅಂತ ಆದಿ ಧೈರ್ಯ ಹೇಳಿದ್ದಾನೆ. ಎಲ್ಲಾ ಸಾಕ್ಷಿಗಳನ್ನೂ ಇಬ್ಬರೂ ಸೇರಿ ಕಲೆ ಹಾಕಿದ್ದಾರೆ. ಅದನ್ನು ವಾದದ ಮೂಲಕ ವೇದಾಂತ್ ನ್ಯಾಯಾಲಯದ ಮುಂದೆ ಮಂಡಿಸುತ್ತಿದ್ದಾನೆ. ಈಗ ವಿಕ್ರಾಂತ್ ಗೆ ಬೇಲ್ ಕೊಡಿಸುವುದಷ್ಟೇ ಬಾಕಿ ಇದೆ.
ಆಕ್ಸಿಡೆಂಟ್ ಆದ ಜಾಗಕ್ಕೂ ವಿಕ್ರಾಂತ್ ಫೋನ್ ಇದ್ದ ನೆಟ್ ವರ್ಕ್ ಸ್ಥಳ ಎರಡೂ ಲೊಕೇಷನ್ ಬೇರೆ ಬೇರೆ ಇದೆ. ಇದು ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದೇ, ಆದರೆ ಆ ಕೆಲಸವನ್ನು ವಿಕ್ರಾಂಕ್ ಮಾಡಿಲ್ಲ. ವಿಕ್ರಾಂತ್ ತಲೆ ಮೇಲೆ ಈ ಅಪವಾದ ಬರಲಿ ಎಂಬ ಕಾರಣಕ್ಕೆ ಆತನ ಫೋನ್ ಗೆ ವಾಯ್ಸ್ ಮೆಸೇಜ್ ಅನ್ನು ಕಳಿಸಲಾಗಿದೆ. ವಿಕ್ರಾಂತ್ ಜೊತೆ ಅಮೂಲ್ಯ ಇದ್ದದ್ದು ಕೂಡ ಸತ್ಯ. ವಿಕ್ರಾಂತ್ ಮೇಲೆ ಕೊಲೆ ಆರೋಪ ಬಂದಿದ್ದು, ತಮ್ಮ ಧೃವನ ಮೇಲೆ ಅಪಾರವಾದ ಪ್ರೀತಿ ಇಟ್ಟಿದ್ದ ವಿಕ್ರಾಂತ್ ಈ ಕೊಲೆ ಮಾಡಿಸಲು ಸಾಧ್ಯವೇ ಇಲ್ಲ ಎಮದು ವಾದ ಮಂಡಿಸಿದ್ದು, ಅಮೂಲ್ಯ, ಸಾರ್ಥಕ್ ಅವರನ್ನೆಲ್ಲಾ ಕಟಕಟೆ ಮೇಲೆ ಕರೆಸಿ ವಿಚಾರಣೆ ನಡೆಸಿದ್ದಾನೆ ವೇದಾಂತ್.
ಅಷ್ಟೇ ಅಲ್ಲದೇ ಸುಪಾರಿ ಪಡೆದು ಧೃವನಿಗೆ ಆಕ್ಸಿಡೆಂಟ್ ಮಾಡಿದ ಲಾರಿ ಡ್ರೈವರ್ ಅನ್ನು ಕೂಡ ಕಟಕಟೆ ಮೇಲೆ ಕರೆಸಿ ಈಗ ವೇದಾಂತ್ ವಿಚಾರಣೆ ನಡೆಸುತ್ತಿದ್ದಾನೆ. ಲಾರಿ ಚಾಲಕ ವಾಯ್ಸ್ ಮೆಸೇಜ್ ನಲ್ಲಿ ವಿಕ್ಕಿ ನೀವು ಹೇಳಿದಂತೆ ಧೃವನನ್ನು ಆಕ್ಸಿಡೆಂಟ್ ನಲ್ಲಿ ಕೊಲೆ ಮಾಡಲಾಗಿದೆ. ಇನ್ನು ನನ್ನ ಹಣವನ್ನು ಕೊಟ್ಟುಬಿಡಿ ಎಂಬ ಅರ್ಥದಲ್ಲಿ ಲಾರಿ ಡ್ರೈವರ್ ವಾಯ್ಸ್ ಮೆಸೇಜ್ ಅನ್ನು ವಿಕ್ಕಿ ಮೊಬೈಲ್ ನಂಬರ್ ಗೆ ವಾಟ್ಸಪ್ ಮಾಡಲಾಗಿದೆ. ವಿಕ್ಕಿಯನ್ನು ಮನೆಯವರು ಹಾಗೂ ತುಂಬಾ ಹತ್ತಿರದವರು ಬಿಟ್ಟು ಬೇರೆ ಯಾರು ವಿಕ್ಕಿ ಎಂದು ಕರೆಯುವುದಿಲ್ಲ. ವಿಕ್ರಾಂತ್ ವಸಿಷ್ಠ ಎಂದು ಗುರುತಿಸುತ್ತಾರೆ. ಆದರೆ, ಲಾರಿ ಚಾಲಕ ವಿಕ್ಕಿ ಎಂದು ಕರೆದಿರುವ ಪಾಯಿಂಟ್ ಅನ್ನು ವೇದಾಂತ್ ತೆಗೆದುಕೊಂಡಿದ್ದಾನೆ. ಇದೇ ಪ್ರಶ್ನೆಯನ್ನು ಲಾರಿ ಚಾಲಕನನ್ನು ಕೇಳಿದ್ದಾನೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ. ಇನ್ನು ವೇದಾಂತ್ ಲಾಯರ್ ಕೋರ್ಟ್ ಧರಿಸಿ ನ್ಯಾಯಾಲಯಕ್ಕೆ ಬಂದಿರುವುದು ಮನೆಯವರಲ್ಲಿ ಅಚ್ಚರಿಯನ್ನು ಮೂಡಿಸಿದೆ.


Click it and Unblock the Notifications











