'ಗಟ್ಟಿಮೇಳ' ಮುಕ್ತಾಯ.. ವಿಡಿಯೋ ನೋಡಿ ಖುಷಿಪಟ್ಟವರು ಪಾರ್ಟ್2 ಬರುತ್ತೆ ಅಂತ ಕಾದು ಕೂತಿದ್ದೇಕೆ?

By ಎಸ್ ಸುಮಂತ್

2019ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಎಲ್ಲರು ತಿರುಗಿ ನೋಡುವಂತ ಧಾರಾವಾಹಿ ಆರಂಭವಾಗಿತ್ತು. ಅದುವೇ 'ಗಟ್ಟಿಮೇಳ'. ನಾಲ್ಕು ಹೆಣ್ಣು ಮಕ್ಕಳು ಇದ್ದಂತಹ ಮುದ್ದಾದ ಸಂಸಾರ. ಮದುವೆಯಾಗಿ ಶ್ರೀಮಂತ ಕುಟುಂಬಕ್ಕೆ ಬರುವ ಹೆಣ್ಣು ಮಕ್ಕಳು. ಇದರ ನಡುವೆ ರೌಡಿ ಬೇಬಿಯಾಗಿ ಎಷ್ಟೋ ಹೆಣ್ಣು ಮಕ್ಕಳಿಗೂ ಅಮೂಲ್ಯ ಸ್ಪೂರ್ತಿಯಾಗಿದ್ದರು. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಕಿರುತೆರೆಯನ್ನೇ ಆಳಿದ ಧಾರಾವಾಹಿ ಇದು.

ಮೆಗಾ ಸೀರಿಯಲ್ ಅಂದ್ರೆ ಇದೆ. ನಾಲ್ಕು ವರ್ಷ.. ಸಾವಿರದ ಇನ್ನೂರು ಎಪಿಸೋಡ್ ಅಂದರೆ ಸುಮ್ಮನೆ ಅಲ್ಲ. ಆದರೆ ಇದರ ನಡುವೆ ಧಾರಾವಾಹಿ ನಿಲ್ಲಿಸುವುದಕ್ಕೆ ಯಾವುದೇ ಕಾರಣ ಸಿಗಲೇ ಇಲ್ಲ. ಇಷ್ಟು ವರ್ಷಗಳು ಉರುಳಿದರೂ ಟಿಆರ್‌ಪಿ ಗಿಟ್ಟಿಸಿಕೊಳ್ಳುವುದರಲ್ಲಿ ಸಾದಾ ಮುಂದಿತ್ತು. ಕಳೆದ ಕೆಲವು ದಿನಗಳಿಂದ ಜೀ ಕನ್ನಡದ ಧಾರಾವಾಹಿಗಳ ಪೈಕಿ ಎರಡು ಹಾಗೂ ಮೂರನೇ ಸ್ಥಾನದಲ್ಲಿಯೇ ಆಟವಾಡುತ್ತಿತ್ತು. ಹೀಗಾಗಿ, ಅಭಿಮಾನಿಗಳ ಆಸೆಯಂತೆ ಧಾರಾವಾಹಿ‌ ಮುಂದುವರೆದಿತ್ತು. ಆದರೆ ಇಂದಿಗೆ 'ಗಟ್ಟಿಮೇಳ' ಮುಕ್ತಾಯವಾಗಿದೆ.

Zee kannada serial Gattimela written update January 5th episode

ಕೊನೆಯ ಸಂಚಿಕೆ ಮುಗಿಸಿದ 'ಗಟ್ಟಿಮೇಳ'

ಜೀ ಕನ್ನಡದಲ್ಲಿ ಜನರೆಲ್ಲಾ ಹೆಚ್ಚು ಇಷ್ಟ ಪಡುತ್ತಿದ್ದ ಧಾರಾವಾಹಿ ಮುಕ್ತಾಯವಾಗಿದೆ. ನಾಲ್ಕೂವರೆ ವರ್ಷ ರಂಜಿಸಿದ ಧಾರಾವಾಹಿ ಇಂದು ಕೊನೆಯ ಹಂತ ತಲುಪಿದೆ. 'ಗಟ್ಟಿಮೇಳ' ಅಂತ್ಯವಾಗಿದ್ದು ಎಷ್ಟೋ ಜನರಿಗೆ ಬೇಸರ ತರಿಸಿದೆ. ಆ ಧಾರಾವಾಹಿಯಲ್ಲಿ ಸಾಕಷ್ಟು ಕಲಾವಿದರಿಗೆ ತಮ್ಮದೇ ಆದ ಅಭಿಮಾನಿಗಳಿದ್ದರು. ಇತ್ತೀಚೆಗೆ ವೇದಾಂತ್ ಕಾಣಿಸುತ್ತಿರಲಿಲ್ಲ. ವಿಕ್ರಾಂತ್ ಸಾವನ್ನಪ್ಪಿದ್ದರು. ತಂದೆ ಮಿಸ್ ಆಗಿದ್ದರು. ಸುಹಾಸಿನಿ ಕೆಟ್ಟದ್ದನ್ನೇ ಬಯಸುತ್ತಿದ್ದಳು. ಕಡೆಯಲ್ಲಿ ಎಲ್ಲವೂ ಸರಿಯಾಗಿದೆ. ಸುಹಾಸಿನಿ ಬದಲಾಗಿದ್ದಾಳೆ. ವೇದಾಂತ್ ಪ್ರೀತಿಯ ಮುಂದೆ ಸೋತಿದ್ದಾಳೆ. ವಿಕ್ರಾಂತ್ ಬದುಕಿ ಬಂದಿದ್ದಾನೆ. ತಂದೆ ತಾಯಿಯ ಷಷ್ಠಿ ಪೂರ್ತಿ ಮಾಡಿದ್ದಾರೆ.

ಬ್ಯೂಟಿಫುಲ್ ವಿಡಿಯೋ ಬಿಟ್ಟ ಜೀ ಕನ್ನಡ

'ಗಟ್ಟಿಮೇಳ' ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಹೈಲೇಟ್ ಆದವರುವೆಂದರೆ ಅಮೂಲ್ಯ ಹಾಗೂ ವೇದಾಂತ್ಮ ಇವರಿಬ್ಬರ ಹೆಸರಲ್ಲಿ ಅದೆಷ್ಟು ಫ್ಯಾನ್ ಪೇಜ್‌ಗಳು ಒಪನ್ ಆಗಿದೆಯೋ ಏನೋ. ವೇದ್ಯಾ ಅಂತಾನೇ ಫೇಮಸ್ ಆಗಿ ಹೋಗಿದ್ದಾರೆ. ರೌಡಿ ಬೇಬಿಯಾದಾಗಿನಿಂದ ಹಿಡಿದು, ವೇದಾಂತ್ ಲವ್ವಲ್ಲಿ ಬಿದ್ದು, ಪ್ರಪೋಸ್ ಮಾಡಿ, ಮದುವೆಯಾಗಿ, ಸಂಸಾರವನ್ನು ಯಶಸ್ವಿಯಾಗಿ ನಿರ್ವಹಿಸುವ ತನಕವೂ ಸುಂದರವಾದ ವಿಡಿಯೋ ಮಾಡಿ ಬಿಡಲಾಗಿದೆ.

ವೇದ್ಯಾ ವಿಡಿಯೋಗೆ ನೆಟ್ಟಿಗರು ಫಿದಾ

ಮೊದಲೇ ಅಮೂಲ್ಯ ಹಾಗೂ ವೇದಾಂತ್‌ಗೆ ಅಭಿಮಾನಿಗಳ ಬಳಗ ಜಾಸ್ತಿಯೇ ಇದೆ. ಅವರ ವಿಡಿಯೋ ನೋಡುವುದಕ್ಕೇನೆ ಕಾಯುತ್ತಿರುತ್ತಾರೆ‌. ಅಭಿಮಾನಿಗಳ ನಾಡಿಮಿಡಿತ ಅರಿತಿದ್ದ ಜೀ ಕನ್ನಡ, ಅವರಿಬ್ಬರ ಜೋಡಿಯ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದೆ. ಇದನ್ನು ಕಂಡು ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದು, ಜೀ ಕನ್ನಡಕ್ಕೆ ಧನ್ಯವಾದ ತಿಳಿಸಿದ್ದಾರೆ. ನಾವೂ ಬಯಸಿದ್ದನ್ನು ನೀಡಿದ್ದಕ್ಕೆ ಥ್ಯಾಂಕ್ಸ್ ಎಂದಿದ್ದಾರೆ.

Zee kannada serial Gattimela written update January 5th episode

'ಗಟ್ಟಿಮೇಳ 2' ಬರ್ತಾ ಇದೆಯಾ..?

'ಗಟ್ಟಿಮೇಳ' ಧಾರಾವಾಹಿ ನೋಡುಗರಿಗೆ ಮುಜುಗರ ಉಂಟು ಮಾಡಲಿಲ್ಲ, ಕಿರಿಕಿರಿ ಉಂಟು ಮಾಡಲಿಲ್ಲ. ಬದಲಿಗೆ ಕಡೆಯ ತನಕವೂ ಟರ್ನಿಂಗ್ ನೀಡುತ್ತಾ, ಧಾರಾವಾಹಿಯನ್ನು ಯಶಸ್ಸಿನ ಹಾದಿಯಲ್ಲಿಯೇ ತೆಗೆದುಕೊಂಡು ಹೋಗಿದೆ. ಹೀಗಾಗಿ ಫ್ಯಾನ್ಸ್ ಆ ಧಾರಾವಾಹಿಯ ಅಂತ್ಯವನ್ನು ಸ್ವೀಕಾರ ಮಾಡುತ್ತಿಲ್ಲ. ಅದರ ಬದಲಿಗೆ 'ಗಟ್ಟಿಮೇಳ2' ಬರುತ್ತಂತೆ ಹೌದಾ ಎಂಬಂತೆ ಚರ್ಚೆ ಶುರು ಮಾಡಿದ್ದಾರೆ. ಆದರೆ ಅದು ಎಷ್ಟು ಸತ್ಯ ಎಂಬುದು ಮಾತ್ರ ತಿಳಿದಿಲ್ಲ. ಆದರೆ 'ಗಟ್ಟಿಮೇಳ 2' ಬಗ್ಗೆ ಮಾತ್ರ, ಸಾಕಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ.

More from Filmibeat

English summary
Zee Kannada serial Gattimela ended audience waiting for part 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X