ವಿಕ್ರಾಂತ್‌ಗಾಗಿ ವಕೀಲನಾದ ವೇದಾಂತ್.. ಸಿಕ್ಕಿ ಬೀಳುತ್ತಾಳಾ ಸುಹಾಸಿನಿ?
ಜೀ ಕನ್ನಡದಲ್ಲಿ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಶುರುವಾದಾಗಿನಿಂದ ನಂಬರ್ ಒನ್ ಸ್ಥಾನವನ್ನು ಕಾಪಾಡಿಕೊಂಡು ಬಂದಿದೆ. ಅದಕ್ಕೂ ಮುನ್ನ 'ಗಟ್ಟಿಮೇಳ' ಧಾರಾವಾಹಿ ಮುನ್ನುಗ್ಗಿ ಎಲ್ಲರ ಮನಸ್ಸನ್ನು ಗೆದ್ದಿತ್ತು. ನಂಬರ್ ಒನ್ ಸ್ಥಾನದಲ್ಲಿ ಕುಳಿತಿತ್ತು. ಇದೀಗ ಮತ್ತೆ ಧಾರಾವಾಹಿಯಲ್ಲಿನ ಟ್ವಿಸ್ಟ್ ಅಂಡ್ ಟರ್ನಿಂಗ್ ಪಾಯಿಂಟ್‌ನಿಂದಾಗಿ ಮತ್ತೆ ಟಿಆರ್‌ಪಿಯಲ್ಲಿ ಮೇಲಕ್ಕೆ ಎದ್ದಿದೆ. 'ಗಟ್ಟಿಮೇಳ' ನೋಡುಗರ ಸಂಖ್ಯೆಯಲ್ಲಿ ಹೆಚ್ಚಾಗಿದೆ. ಅದಕ್ಕೆಲ್ಲಾ ಕಾರಣ ಧ್ರುವನ ಸಾವು.
ಧ್ರುವ ಮನೆಗೆ ಬಂದಾಗಿನಿಂದ ಮೂರು ಮಕ್ಕಳು ಅನ್ಯೋನ್ಯವಾಗಿದ್ದರು. ಆದರೆ ಈ ಮಧ್ಯೆ ನಡೆಯಬಾರದು ನಡೆದು ಹೋಗಿದೆ. ಧ್ರುವನ ಸಾವು ಮನೆಯವರೆನ್ನೆಲ್ಲಾ ಕಾಡುತ್ತಿದೆ. ಮನೆಯವರೆಂದರೆ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ವೇದಾಂತ್ ಮುಂದೆ ಈಗ ದೊಡ್ಡದೊಂದು ಸವಾಲು ಎದುರಾಗಿದೆ.
ಅಮೂಲ್ಯ ಒಬ್ಬಳು ಸುಳ್ಳನ್ನು ಹೇಳದೆ ಇದ್ದಿದ್ದರೆ ಸಾಕಿತ್ತು ಅಂದು ವಿಕ್ರಾಂತ್ ಜೈಲು ಶಿಕ್ಷೆಯಿಂದ ವಾಪಾಸ್ಸಾಗುತ್ತಿದ್ದ. ಆದರೆ ಅಮೂಲ್ಯಗೆ ಸುಳ್ಳು ಹೇಳುವುದು ಕೂಡ ಅಷ್ಟು ಸುಲಭವಾಗಿರಲಿಲ್ಲ. ಹೀಗಾಗಿ ವಕೀಲರ ಪ್ರಶ್ನೆಗೆ ಅಮೂಲ್ಯ ಸುಳ್ಳು ಹೇಳಬೇಕಾದ ಅನಿವಾರ್ಯತೆ ಎದುರಾಯಿತು. ಅಲ್ಲಿಗೆ ಕೇಸ್ ಸೋತಿತ್ತು. ವಿಕ್ರಾಂತ್ ಮತ್ತೆ ಜೈಲುಪಾಲಾದ. ಆದರೆ ಹೇಗಾದರೂ ಮಾಡಿ ವಿಕ್ರಾಂತ್ ನ ಬಿಡಿಸಿಕೊಂಡು ಬರಲೇಬೇಕೆಂದುಕೊಂಡು ಕುಳಿತಿದ್ದವರ ಸಹಾಯಕ್ಕೆ ಬಂದಿದ್ದು, ಪಾರು ಗಂಡ, ವೇದಾಂತ್ ಫ್ರೆಂಡ್ ಆದಿ.

ವಕೀಲನಾದ ವೇದಾಂತ್
ಅಮೂಲ್ಯ ಸುಳ್ಳು ಹೇಳಲಿಲ್ಲ. ಇನ್ನು ಈ ಕೇಸಿನಿಂದ ತಪ್ಪಿಸಿಕೊಳ್ಳುವುದು ಕಷ್ಟ ಅಂತ ವೇದಾಂತ್ ನೇಮಕ ಮಾಡಿದ್ದ ಲಾಯರ್ ಪದೇ ಪದೇ ಹೇಳಿದ್ದರು. ಇದು ವೇದಾಂತ್ ಕೋಪಕ್ಕೂ ಕಾರಣವಾಗಿ ನಿಮಗಿಂತ ಫೇಮಸ್ ಆದವರಿಂದಾನೇ ಈ ಕೇಸ್ ಗೆಲ್ಲುವಂತೆ ಮಾಡಿಸುತ್ತೇನೆ ಅಂತ ಹೇಳಿ ಚಾಲೆಂಜ್ ಹಾಕಿದ್ದ. ಆದರೆ ಈಗ ಲಾಯರ್ ಸಿಗುತ್ತಿಲ್ಲ. ಆದರೆ ಆ ವಕೀಲರ ಕೆಲಸವನ್ನು ಖುದ್ದು ವೇದಾಂತ್ ಮಾಡಲು ಹೊರಟಿದ್ದಾನೆ. ಇದಕ್ಕೆಲ್ಲ ಹುಮ್ಮಸ್ಸು ತುಂಬಿದ್ದು ಕೂಡ ಇದೇ ಆದಿತ್ಯ. ಎಲ್ಲಾ ಸಾಕ್ಷಿಗಳು ಸಿಕ್ಕಿವೆ ಅದನ್ನು ವಾದದ ಮೂಲಕ ಮಂಡಿಸುವುದಷ್ಟೇ ಬಾಕಿ. ಅದಕ್ಕಾಗಿಯೇ ಅನುಭವಕ್ಕಿಂತ ಬುದ್ದಿವಂತಿಕೆ ಇಲ್ಲಿ ವರ್ಕ್ ಆಗುತ್ತೆ ಅಂತ ಆದಿ ಧೈರ್ಯ ತುಂಬಿದ್ದಾನೆ.

ವೇದಾಂತ್‌ಗೆ ಆದಿ ಸಪೋರ್ಟ್
ವಿಕ್ರಾಂತ್ ನನ್ನು ಹೇಗಾದರೂ ಮಾಡಿ ಮರಳಿ ಮನೆಗೆ ಕರೆದುಕೊಂಡು ಬರಬೇಕು. ಇದಕ್ಕೆ ಬೇಕಾದ ಎಲ್ಲಾ ಸಾಕ್ಷಿಗಳನ್ನು ತಡಕಾಡುತ್ತಿದ್ದಾರೆ. ಹಗಲು-ರಾತ್ರಿಯೆನ್ನದೆ ನಿದ್ದೆಗೆಟ್ಟು ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ. ಹೀಗಿರುವಾಗ ತಂದೆಯ ಕರೆಯೊಂದು ಬಂದಿದೆ. ಅರ್ಜೆಂಟಾಗಿ ಬರುವುದಕ್ಕೆ ಹೇಳಿದ್ದಾರೆ ವಿನಃ ಮ್ಯಾಟರ್ ಏನು ಎನ್ನುವುದು ಇನ್ನೂ ಬಯಲಾಗಿಲ್ಲ. ಆದರೆ ವೇದಾಂತ್ ಅಲ್ಲಿಂದ ಹೋಗಲೇಬೇಕಾದಂತ ಸಂದರ್ಭದಲ್ಲೂ ಆದಿ ಸಹಾಯಕ್ಕೆ ನಿಂತಿದ್ದಾನೆ. ನಿನ್ನ ಅನಿವಾರ್ಯತೆ ಅಲ್ಲಿಗಿಂತ ಇಲ್ಲಿಯೇ ಹೆಚ್ಚಾಗಿದೆ. ನಾನು ಅಲ್ಲಿಗೆ ಹೋಗುತ್ತೇನೆ ಎಂದು ಹೊರಟಿದ್ದಾನೆ.
ಕೊಲೆಗಾರ ಕೊನೆಗೂ ಸಿಕ್ಕಿ ಬಿದ್ದಿದ್ದ
ಧ್ರುವನಿಗೆ ಆಕ್ಸಿಡೆಂಟ್ ಆದರೂ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿರಲಿಲ್ಲ. ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ತಾಯಿಯ ಬಗ್ಗೆ ಧ್ರುವನಿಗೆ ಎಲ್ಲಾ ವಿಚಾರಗಳು ತಿಳಿದು ಹೋಗಿತ್ತು. ಮನೆಯಲ್ಲಿರುವ ವೈಜಯಂತಿ ಅಮ್ಮನೇ ಸ್ವಂತ ವೈದೇಹಿ ಅನ್ನೋದು ವಿಡಿಯೋದಲ್ಲಿ ಗೊತ್ತಾಗಿತ್ತು. ಇದೇ ಸತ್ಯವನ್ನು ತಿಳಿಯಲು ವಿಕ್ಕಿ ಮತ್ತೆ ಅಮೂಲ್ಯ ಕೂಡ ಹೋಗುತ್ತಿದ್ದರು. ಆದರೆ ಇದು ಧ್ರುವನ ಪ್ರಾಣಕ್ಕೆ ಕುತ್ತು ತರುತ್ತೆ ಎಂದು ಯಾರೂ ಭಾವಿಸಿರಲಿಲ್ಲ. ಆಕ್ಸಿಡೆಂಟ್‌ನಿಂದಾಗಿ ಧ್ರುವ ಗಂಭೀರ ಗಾಯಗೊಂಡಿದ್ದ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು, ಅಲ್ಲಿ ಕೊಲೆ ಮಾಡಲಾಗಿತ್ತು. ಈ ಕೊಲೆ ಮಾಡಿದಾತ ಕಡೆಗೂ ಸಿಕ್ಕಿಬಿದ್ದಿದ್ದಾನೆ.

ಸುಹಾಸಿನಿ ಮೇಲೆ ಅನುಮಾನದ ಹುತ್ತ
ಆದಿ ಮತ್ತು ವೇದಾಂತ್ ಸೇರಿಕೊಂಡು ಕೊಲೆ ಹಿಂದಿನ ಎಲ್ಲಾ ಸಂಚನ್ನು ಬೇಧಿಸಿದ್ದಾರೆ. ಲಾಯರ್ ಕೋಟ್ ಧರಿಸಿ ವೇದಾಂತ್ ಕೋರ್ಟ್‌ಗೂ ಬಂದಾಗಿದೆ. ಅದಕ್ಕೂ ಮುನ್ನ ಇನ್ನೂ ಪ್ರಾಣವಿದ್ದ ಧ್ರುವನನ್ನು ಆಸ್ಪತ್ರೆಯಲ್ಲಿಯೇ ಕೊಂದ ಕೊಲೆಗಡುಕ ಕೂಡ ಸಿಕ್ಕಿಬಿದ್ದಿದ್ದಾನೆ. ಆದಿ ಮತ್ತು ವೇದಾಂತ್ ಕೈ ರುಚಿ ನೋಡಿದ ಬಳಿಕ ಸತ್ಯಾಂಶ ಹೇಳಿದ್ದಾನೆ. ಮಹಿಳೆಯೊಬ್ಬರು ಕರೆ ಮಾಡಿ ಆಸ್ಪತ್ರೆಯಲ್ಲಿರುವ ವ್ಯಕ್ತಿಯನ್ನು ಕೊಲ್ಲಲು ಹೇಳಿದರು ಎನ್ನಲಾಗಿದೆ. ಇದರಿಂದ ಇಬ್ಬರು ಶಾಕ್ ಆಗಿದ್ದಾರೆ. ಆದರೆ ಆ ಲೇಡಿ ಯಾರು ಎಂಬುದನ್ನು ಕೊಲೆ ಮಾಡಿದಾತ ಹೇಳಿಲ್ಲ. ಅದರ ಜಾಡು ಹಿಡಿದು ಹೊರಟವರಿಗೆ ಸುಹಾಸಿನಿಯೇ ತಮ್ಮನ ಕೊಲೆಗೆ ಕಾರಣ ಎಂದು ಗೊತ್ತಾದರೆ ಏನು ಆಗಬಹುದು..? ಎಂಬ ಚಿಂತೆ ವೇದಾಂತ್ ಅಭಿಮಾನಿಗಳನ್ನು ಕಾಡುತ್ತಿದೆ.


Click it and Unblock the Notifications











