ಗಟ್ಟಿಮೇಳ: ಅದಿತಿ & ಧ್ರುವ ಪ್ರೀತಿ ತಿಳಿದರೆ, ಬೆಂಬಲವಾಗಿ ನಿಲ್ಲುತ್ತಾನಾ ವೇದಾಂತ್ ?

By ಎಸ್ ಸುಮಂತ್

ಕೆಮ್ಮು ಮತ್ತು ಪ್ರೀತಿಯನ್ನು ಯಾವತ್ತಿಗೂ ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ ಎಂಬ ಗಾಧೆನೇ ಇದೆ. ಅದರಂತೆ ಅಧಿತಿಯ ಪರಿಸ್ಥಿತಿಯಾಗಿದೆ. ಧ್ರುವನ ಮೇಲಿನ ಪ್ರೀತಿಯನ್ನು ಮುಚ್ಚಿಡುವುದಕ್ಕೆ ಪ್ರಯತ್ನಿಸಿದರೂ ಅದು ಸಾಧ್ಯವೇ ಆಗುತ್ತಿಲ್ಲ.

ಈಗ ಅದಿತಿ ಮತ್ತು ಧ್ರುವನ ಪ್ರೀತಿ ಒಂದಷ್ಟು ಜನರಿಗೆ ಜಗತ್‌ಜಾಹೀರಾಗಿದೆ. ಆದರೆ ಇದೀಗ ವೇದಾಂತ್ ಕೈಗೆ ಅದಿತಿ ಸಿಕ್ಕಿಬಿದ್ದಿದ್ದಾಳೆ. ಈಗ ಧ್ರುವನ ಬಗ್ಗೆ ಹೇಳಲೇಬೇಕಾದ ಸ್ಥಿತಿ ಬಂದೊದಗಿದೆ.

ಪರಿಮಳ ಫ್ಯಾಮಿಲಿಯನ್ನು ಕಂಡರೆ ಸುಹಾಸಿನಿಗೆ ಆಗುವುದೇ ಇಲ್ಲ. ಯಾವಾಗಲೂ ಅಂತಸ್ತಿನ ವಿಚಾರಕ್ಕೆ ಜಗಳ ಆಡುತ್ತಲೆ ಇರುತ್ತಾಳೆ. ಅದರಲ್ಲೂ ಬೀಗರಾದ ಮೇಲಂತು ಉರಿದು ಉರಿದು ಬೀಳುತ್ತಿದ್ದಾಳೆ. ಆದರೆ ಇಬ್ಬರು ಸೊಸೆಯ ವಿಚಾರಕ್ಕೆ ಈ ಬೀಗಿತ್ತಿ ಸಂಬಂಧ ನಿಲ್ಲುವುದಿಲ್ಲ. ಇದೀಗ ಮತ್ತೊಂದು ಭಾರೀ ಸುಹಾಸಿನಿಯ ಮನಸ್ಸು ಕೆಂಡಾಮಂಡಲವಾಗುವ ಸ್ಥಿತಿ‌ ಬಂದೊದಗಿದೆ. ಅದು ಅದಿತಿ ಮತ್ತು ಧ್ರುವ ಮುಂದಿನ ಮದುವೆ.

 ಅದಿತಿಯ ಬಗ್ಗೆ ವೇದಾಂತ್ ಕಾಳಜಿ

ಅದಿತಿಯ ಬಗ್ಗೆ ವೇದಾಂತ್ ಕಾಳಜಿ

ವೇದಾಂತ್ ತುಂಬಾ ಮಾನವೀಯತೆ ಇರುವ ಮನುಷ್ಯ. ಮದುವೆಯಾದ ಬಳಿಕ ಅತ್ತೆ ಮಾವನಿಗೆ ಸಹಾಯ ಮಾಡುವುದಕ್ಕೂ ಯೋಚಿಸಿದ್ದ. ಮಾವನಿಗೆ ಹಣದ ಸಹಾಯ ಮಾಡಲು ಹೋದಾಗ ಅಮೂಲ್ಯ ತಂದೆ ಇದು ಬೇಡವೆಂದರು. ಸ್ವಾಭಿಮಾನದ ಬದುಕು ಬದುಕಬೇಕು ಎಂದು ಹೇಳಿದಾಗ ವೇದಾಂತ್ ಸುಮ್ಮನಾಗಿದ್ದ. ಇದೀಗ ನಾದಿನಿಯ ಬಗ್ಗೆಯೂ ಕಾಳಜಿ ತೋರುತ್ತಿದ್ದಾನೆ. ಅದಿತಿಯ ಮನಸ್ಸಲ್ಲಿ ಒಂದಷ್ಟು ತಳಮಳವಿದೆ ಅದನ್ನು ನಿಭಾಯಿಸಲು ಯತ್ನಿಸುತ್ತಿದ್ದಾನೆ.

 ವೇದಾಂತ್ ಬೆಂಬಲ ಸಿಗುತ್ತಾ?

ವೇದಾಂತ್ ಬೆಂಬಲ ಸಿಗುತ್ತಾ?

ಅದಿತಿ ಅಮ್ಮನ ಬಳಿ ನಡೆದುಕೊಂಡ ರೀತಿಗೆ ವೇದಾಂತ್ ಬೇಸರ ಪಟ್ಟುಕೊಂಡಿದ್ದಾನೆ. ಪರಿಮಳ ಮೂರನೇ ಮಗಳ ಮದುವೆ ತಯಾರಿ ನಡೆಸಿದ್ದಾಳೆ. ಆದರೆ ಅದಿತಿ ಇದಕ್ಕೆ ಬಿಲ್ ಕೂಲ್ ಒಪ್ಪುತ್ತಿಲ್ಲ. ಇದು ಪರಿಯನ್ನು ಸಂಕಷ್ಟಕ್ಕೆ ದೂಡಿದೆ. ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದಿದೆ. ಇದನ್ನು ನೋಡಿದ ವೇದಾಂತ್ ನಾದಿನಿಯ ನಡವಳಿಕೆಗೆ ಬುದ್ಧಿ ಮಾತು ಹೇಳಿದ್ದಾನೆ. ನಿನಗೆ ಹೆಚ್ಚು ಜವಾಬ್ದಾರಿ ಇದೆ ಎಂದು ಭಾವಿಸಿದ್ದೆ. ಆದರೆ ಈ ರೀತಿ ನಡೆದುಕೊಂಡಿದ್ದು ಅದ್ಯಾಕೋ ಸರಿ ಇಲ್ಲ ಎಂದಾಗ, ಅಧಿತಿಗೆ ಮನಸ್ಸಲ್ಲಿಯೇ ಕಳವಳ ಶುರುವಾಗಿದೆ. ಮದುವೆ ಬೇಡ ಎಂಬುದಕ್ಕೆ ಸರಿಯಾದ ಕಾರಣ ಹೇಳು ಎಂದಾಗ ಅದಿತಿ ಶಾಕ್ ಆಗಿದ್ದಾಳೆ. ಒಂದು ವೇಳೆ ಅದಿತಿ ತನ್ನ ಪ್ರೀತಿ ಬಗ್ಗೆ ವೇದಾಂತ್ ಬಳಿ ಹೇಳಿದರೆ ಬೆಂಬಲವಾಗಿ ನಿಲ್ಲುವ ಸಾಧ್ಯತೆಯೂ ಇದೆ. ಯಾಕೆಂದರೆ ವೇದಾಂತ್‌ ಹೇಳಿದಂತೆ ಪ್ರೀತಿಗೆ ಬೆಲೆ ಕೊಡುತ್ತಾನೆ.

 ಅದಿತಿಗೆ ಆದ್ಯಾ ಬೆಂಬಲ

ಅದಿತಿಗೆ ಆದ್ಯಾ ಬೆಂಬಲ

ಧ್ರುವನಿಗೆ ಅಪಘಾತವಾದ ಮೇಲೆ ಯಾರನ್ನು ಕಂಡು ಹಿಡಿಯಲಾಗದ, ವೀಲ್ ಚೇರ್ ಮೇಲೆಯೇ ಜೀವನ ಸಾಗಿಸುವ ಸ್ಥಿತಿಯಲ್ಲಿದ್ದಾನೆ. ಇದು ಅಧಿತಿಗೆ ತುಂಬಾ ನೋವಿನ ಸಂಗತಿಯಾಗಿದೆ. ಯಾಕೆಂದರೆ ಪ್ರೀತಿ ಹೇಳಿಕೊಂಡ ದಿನವೇ ಇಂಥ ಸ್ಥಿತಿ ತಲುಪಿದ್ದು ಅಧಿತಿಗೆ ನೋವು ಹೆಚ್ಚು ಮಾಡಿದೆ. ಧ್ರುವನನ್ನು ತಾನೇ ನೋಡಿಕೊಳ್ಳಬೇಕೆಂದು ನರ್ಸ್ ವೇಷ ತೊಟ್ಟು ವೇದಾಂತ್ ಮನೆಗೆ ಬಂದಿದ್ದಾಳೆ. ದಿನಕಳೆದಂತೆ ಯಾವುದೋ ಕಾರಣಕ್ಕೆ ಆದ್ಯಾಳನ್ನು ಫ್ಲೋನಲ್ಲಿ ಅತ್ತಿಗೆ ಎಂದು ಸಿಕ್ಕಿಬಿದ್ದಿದ್ದಾಳೆ. ಎಲ್ಲವೂ ಗೊತ್ತಾದ ಮೇಲೆ ಅದಿತಿ ಪ್ರೀತಿಗೆ ಆದ್ಯಾಳೇ ಬೆಂಬಲ ನೀಡಿದ್ದಾಳೆ. ಆಗಾಗ ಸಂಕಷ್ಟಕ್ಕೆ ಸಿಲುಕಿದಾಗಲೂ ಆದ್ಯಾಳೇ ಕಾಪಾಡುತ್ತಿದ್ದಾಳೆ.

ಅದಿತಿ ಮೇಲೆ ಸುಹಾಸಿನಿಗೆ ಶುರು ಅನುಮಾನ

ಅದಿತಿ ಧ್ರುವನಿಗೆ ಹಾರೈಕೆ ಮಾಡುತ್ತಿರುವುದು ಸುಹಾಸಿನಿಗೆ ಅನುಮಾನ ಮೂಡಿದೆ. ಮನೆಯ ಒಳಗೆ ಬರುವಾಗ ಬುಕ್‌ನಲ್ಲಿ ಕೂಡ ಅದಿತಿ ಎಂದು ಸಹಿ ಹಾಕಿದ್ದಾಳೆ. ಕೆಲವೊಂದು ಸಾಕ್ಷಿಗಳು ಅದಿತಿಯೇ ಎಂಬುದನ್ನು ಸಾರುತ್ತಿದೆ. ಇದರಿಂದ ರೊಚ್ಚಿಗೆದ್ದಿರುವ ಸುಹಾಸಿನಿ, ಮತ್ತೊಬ್ಬಳು ಅದೇ ಮನೆಯಿಂದ ಸೊಸೆಯಾಗಿ ಬಂದರೆ ನನ್ನನ್ನು ಬದುಕುವುದಕ್ಕೆ ಬಿಡುವುದಿಲ್ಲ. ಇದನ್ನು ಹೇಗಾದರೂ ಮಾಡಿ ಚಿವುಟಿ ಹಾಕಬೇಕು ಎಂದು ಕಾಯುತ್ತಿದ್ದಾಳೆ.

More from Filmibeat

English summary
Zee Kannada Serial Gattimela Written Update On July 18th Episode, Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X