ಗಟ್ಟಿಮೇಳ: ವೇದಾಂತ್ ಮೇಲಿನ ಗೌರವವೇ ಅಧಿತಿ-ಧ್ರುವನನ್ನು ದೂರ ಮಾಡುತ್ತಾ?

By ಎಸ್ ಸುಮಂತ್

ಈಗಾಗಲೇ ಅಧಿತಿ ಮತ್ತು ಧ್ರುವನ ಪ್ರೀತಿ ಆದ್ಯಾಳಿಗೆ ಗೊತ್ತಾಗಿದೆ. ಹೇಗಾದರು ಮಾಡಿ ಅಧಿತಿಯನ್ನು ನಮ್ಮ ಮನೆಯ ಸೊಸೆ ಮಾಡಿಕೊಳ್ಳಬೇಕು ಎಂದು ಆದ್ಯಾ ಸಾಕಷ್ಟು ಫ್ಲ್ಯಾನ್ ಮಾಡುತ್ತಿದ್ದಾಳೆ. ಈ ಮಧ್ಯೆ ಅಧಿತಿ ಪ್ರೀತಿ ಸುಹಾಸಿನಿಗೆ ತಿಳಿದಿದೆ. ಯಾರಿಗೆ ತಿಳಿಯಬಾರದಿತ್ತೋ ಅವರಿಗೆ ವಿಷಯ ತಿಳಿದಿದೆ. ಇದು ಅಧಿತಿಯ ಪ್ರೀತಿಯೇ ಬ್ರೇಕಪ್ ಆಗುವ ಹಂತ ತಲುಪುವುದರಲ್ಲಿ ಅನುಮಾನವೇ ಇಲ್ಲ ಎಂಬಂತಾಗಿದೆ.

ಮೊದಲೇ ಪರಿಮಳ ಸಂಸಾರವನ್ನು ಕಂಡರೆ ಆಗದ ಸುಹಾಸಿನಿಗೆ ಅಮೂಲ್ಯ ಮತ್ತು ಆರತಿ ಬಂದಿರುವುದನ್ನೇ ಸಹಿಸಲು ಆಗುತ್ತಿಲ್ಲ. ಈಗ ಕೊನೆ ಮಗನಿಗೂ ಅದೇ ಮನೆಯ ಹುಡುಗಿ ಹೆಂಡತಿಯಾಗಿ ಬರುವುದನ್ನು ಸುಹಾಸಿನಿ ಸಹಿಸುತ್ತಿಲ್ಲ. ಇದೇ ಕಾರಣಕ್ಕೆ ಸುಹಾಸಿನಿ ಅಧಿತಿ ಮೇಲೆ ಕೆಂಡಕಾರುತ್ತಿದ್ದಾಳೆ. ಫ್ಲ್ಯಾನ್ ಮಾಡಿ, ಅಧಿತಿಯ ಜೀವನಕ್ಕೆ ಕೊಳ್ಳಿ ಇಡಲು ಹೊರಟಿದ್ದಾಳೆ.

ವೇದಾಂತ್ ಮಾತಿಗೆ ಧ್ರುವನಿಂದ ದೂರಾಗ್ತಾಳಾ ಅಧಿತಿ

ವೇದಾಂತ್ ಮಾತಿಗೆ ಧ್ರುವನಿಂದ ದೂರಾಗ್ತಾಳಾ ಅಧಿತಿ

ಪರಿಮಳ ಮನೆಯ ಹೆಣ್ಣು ಮಕ್ಕಳ ವಿಚಾರಕ್ಕೆ ಹೋಲಿಕೆ ಮಾಡಿಕೊಂಡರೆ ವಿಕ್ರಾಂತ್ ದೊಡ್ಡ ಅಳಿಯ. ಆದರೆ ವಸಿಷ್ಠ ಕುಟುಂಬದಲ್ಲಿ ವೇದಾಂತ್ ದೊಡ್ಡ ಮಗ. ವೇದಾಂತ್ ಕೂಡ ಪರಿಮಳ ಮನೆಗೆ ಮಗನ ಸ್ಥಾನದಲ್ಲಿ ನಿಂತು ಜವಾಬ್ದಾರಿ ತೆಗೆದುಕೊಳ್ಳಲು ರೆಡಿಯಾಗಿದ್ದಾನೆ. ಅಧಿತಿಗೆ ಗಂಡಿನ ಕಡೆಯವರು ಬಂದಾಗ, ದೊಡ್ಡವರಾಗಿ ವೇದಾಂತ್ ಮತ್ತು ಅಮೂಲ್ಯ ನಿಂತಿಂದ್ದಾರೆ. ಅಧಿತಿ ತನ್ನ ತಾಯಿ ಮಾತಿಗೆ ಎಷ್ಟು ಬೆಲೆ ಕೊಡುತ್ತಾಳೋ ವೇದಾಂತ್ ಮಾತಿಗೂ ಅಷ್ಟೇ ಬೆಲೆ ಕೊಡುತ್ತಾಳೆ. ಇದೇ ಕಾರಣಕ್ಕೆ ಧ್ರುವನನ್ನು ಅಧಿತಿ ಕಳೆದುಕೊಳ್ಳುತ್ತಾಳಾ ಎಂಬ ಅನುಮಾನ ಶುರುವಾಗಿದೆ.

ಅಧಿತಿಗಾಗಿ ವಂಚಕರನ್ನು ಕಳುಹಿಸಿದ ಸುಹಾಸಿನಿ

ಅಧಿತಿಗಾಗಿ ವಂಚಕರನ್ನು ಕಳುಹಿಸಿದ ಸುಹಾಸಿನಿ

ಸುಹಾಸಿನಿಗೆ ಅದ್ಯಾವಾಗ ಅಧಿತಿ ಮೇಲೆ ಅನುಮಾನ ಮೂಡಿತೋ ಅಲ್ಲಿಂದ ಅಧಿತಿ ಜೀವನ ಹಾಳು ಮಾಡಲು ಫ್ಲ್ಯಾನ್ ಮಾಡಿದ್ದಳು. ಅದಕ್ಕಾಗಿಯೇ ವಂಚನೆ ಮಾಡುವವರನ್ನು ಗಂಡಿನ ಕಡೆಯವರು ಎಂದು ಪರಿಮಳ ಮನೆಗೆ ಕಳುಹಿಸಿದ್ದಾಳೆ. ಅದರಲ್ಲಿ ಪುರೋಹಿತನ ಪಾತ್ರವೂ ಜೋರಾಗಿಯೇ ಇದೆ. ಹೀಗಾಗಿಯೇ ಪರಿಮಳ ಮನೆಯವರು ಆತನನ್ನು ನಂಬಿದ್ದಾರೆ. ಹುಡುಗನ ಕೆಲಸ ಚೆನ್ನಾಗಿದೆ, ಕುಟುಂಬ ಚೆನ್ನಾಗಿದೆ ಎಂದು ನಂಬಿಸಿ, ಅಧಿತಿಯನ್ನು ಮದುವೆ ಮಾಡಲು ತಯಾರಿ ನಡೆದಿದೆ.

ಹೊಸ ಅಳಿಯನ ಮಾತಿಗೆ ವೇದಾಂತ್ ಫಿದಾ

ಹೊಸ ಅಳಿಯನ ಮಾತಿಗೆ ವೇದಾಂತ್ ಫಿದಾ

ಹೆಣ್ಣು ನೋಡುವ ಶಾಸ್ತ್ರಕ್ಕೆ ಬಂದಿರುವವರು ವಂಚಕರು ಎಂಬುದು ಎಲ್ಲಿಯೂ ಸುಳಿವೆ ಸಿಗುತ್ತಿಲ್ಲ. ಯಾಕೆಂದರೆ ಸುಹಾಸಿನಿ ಅಷ್ಟು ಪರ್ಫೆಕ್ಟ್ ಆಗಿ ತಯಾರಿ ಮಾಡಿ‌ ಕಳುಹಿಸಿದ್ದಾಳೆ. ಇದೇ ವಂಚಕರನ್ನು ವೇದಾಂತ್ ಸುಲಭವಾಗಿ ನಂಬಿದ್ದಾನೆ. ಹೊಸ ಅಳಿಯನ ಬಣ್ಣ ಬಣ್ಣದ ಮಾತಿಗೆ ವೇದಾಂತ್ ಕೂಡ ಫಿದಾ ಆಗಿದ್ದಾನೆ. ಇವನ ಜೊತೆ ನಮ್ಮ ಅಧಿತಿ ತುಂಬಾ ನೆಮ್ಮದಿಯಾಗಿ ಇರುತ್ತಾಳೆ ಎಂದು ಭಾವಿಸಿದ್ದಾನೆ. ಇದನ್ನೇ ಅತ್ತೆ ಮಾವನಿಗೂ ಹೇಳಿರುವುದು ಅಧಿತಿಯ ಪ್ರೀತಿಗೆ ಮುಳ್ಳು ಬಿದ್ದಂತಾಗಿದೆ.

ನಂಬಿದ ಭಾವನೇ ಅಧಿತಿ ಪಾಲಿನ ವಿಲನ್

ನಂಬಿದ ಭಾವನೇ ಅಧಿತಿ ಪಾಲಿನ ವಿಲನ್

ಮದುವೆ ಇಷ್ಟವಿಲ್ಲದೆ ಹೋದರೂ ಭಾವ ಎಂಬ ಗೌರವಕ್ಕೆ ವೇದಾಂತ್ ಹೇಳಿದ ಕೂಡಲೇ ಅಧಿತಿ ಒಪ್ಪಿಗೆ ಸೂಚಿಸಿದ್ದಾಳೆ. ಇದೇ ಖುಷಿಯಲ್ಲಿ ಪರಿ ಕೂಡ ತನ್ನ ಮಗಳಿಗೆ ಹುಡುಗ ಒಪ್ಪಿಗೆಯಂತೆ ಎಂದಿದ್ದಾಳೆ. ಮದುವೆ ತಯಾರಿ ಮಾಡಿಕೊಳ್ಳಲು ಹೇಳಿದ್ದಾಳೆ. ಆದರೆ ಪರಿ ಬಳಿ ಬಂದು ಈ ಮದುವೆ ನಡೆದರೆ ನಿನ್ನ ಮಗಳನ್ನ ಕಳೆದುಕೊಳ್ಳುತ್ತೀಯಾ ಎನ್ನುತ್ತಿದ್ದಂತೆ ಪರಿ ಹೆದರಿದ್ದಾಳೆ. ಆದರೆ ಈ ಮಧ್ಯೆ ವೇದಾಂತ್ ಮತ್ತೆ ಧೈರ್ಯ ತುಂಬಿದ್ದಿ, ನಾನೇ ಒಪ್ಪಿಸಿ ಮದುವೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾನೆ. ಈ ಮೂಲಕ ಅಧಿತಿಗೆ ಭಾವನೇ ದುಷ್ಮನ್ ಆಗುತ್ತಿದ್ದಾನೆ.

Recommended Video

PuneethRajkumar ಅವರ ಹೆಸರಿನಲ್ಲಿ ಪ್ರಶಸ್ತಿ, ಪ್ರಶಸ್ತಿ ಪ್ರದಾನ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್ *Sandalwood

More from Filmibeat

English summary
Zee Kannada serial Gattimela Written Update on july 21th episode. Here detail about Adithi marriage plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X