ಗಟ್ಟಿಮೇಳ: ಸುಹಾಸಿನಿಯ ಕುತಂತ್ರದಿಂದ ಮಕ್ಕಳನ್ನು ಪಾರು ಮಾಡುತ್ತಾಳಾ ಪರಿ..?

By ಎಸ್ ಸುಮಂತ್

ಸದ್ಯ 'ಗಟ್ಟಿಮೇಳ' ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ವಸಿಷ್ಠ ಮನೆತನದಲ್ಲಿ ಮಗುವಿನ ಶಬ್ಧ ಕೇಳುವ ಸಮಯ ಬಂದಾಗಿದೆ. ಆರತಿ ತಾಯಿಯಾಗುತ್ತಿದ್ದು, ಇದನ್ನೇ ಸುಹಾಸಿನಿ‌ ಬಂಡವಾಳ ಮಾಡಿಕೊಳ್ಳಲು ಹೊರಟಿದ್ದಾಳೆ. ಅಕ್ಕ ತಂಗಿಯರ ನಡುವೆ ತಂದಿಡುವ, ಸಂಬಂಧ ಹಾಳುಗೆಡುವ ಕೆಲಸವನ್ನು ಮಾಡಲು ಸಿದ್ಧಳಾಗಿದ್ದಾಳೆ. ಇದು ಅಮೂಲ್ಯಾಗೆ ಚೆನ್ನಾಗಿಯೇ ಗೊತ್ತಿದ್ದರು, ಆರತಿ ಅರ್ಥವೇ ಮಾಡಿಕೊಳ್ಳುತ್ತಿಲ್ಕ. ಮಗುವಿಗಾಗಿ ಅತ್ತೆ ಮಾಡುತ್ತಿರುವ ರಕ್ಷಣೆ ಇದು ಎಂದು ನಂಬಿದ್ದಾಳೆ.

ಆರತಿ ಮತ್ತು ಅಮೂಲ್ಯ ನಡುವಿನ ಕಿತ್ತಾಟ ಈಗ ಅತಿರೇಕ ತಲುಪಿದೆ. ಹೀಗಾಗಿ ಅಮ್ಮು ಏನನ್ನೇ ಹೇಳಿದರು ಯಾವುದು ಅರ್ಥವಾಗುತ್ತಿಲ್ಲ. ಅಮ್ಮುಳಿಂದ ಮಗುವಿಗೇನೋ ಬಹಳ ತೊಂದರೆಯಿದೆ ಎಂಬಂತೆ ಫೀಲ್ ಮಾಡುತ್ತಿದ್ದಾಳೆ. ಅಂದು ಅಮ್ಮ ಮನೆಗೆ ಬಂದರೂ ಗಮನ ಕೊಡದ ಆರತಿ, ಇಂದು ಸಮಸ್ಯೆ ಎಂದು ಅಮ್ಮನನ್ನೇ ಹುಡುಕಿಕೊಂಡು ಹೊರಟಿದ್ದಾಳೆ.

ಆರತಿ, ಅಮ್ಮು ವರ್ತನೆಗೆ ವೇದಾಂತ್, ವಿಕ್ರಾಂತ್ ಕಂಗಾಲು

ಆರತಿ, ಅಮ್ಮು ವರ್ತನೆಗೆ ವೇದಾಂತ್, ವಿಕ್ರಾಂತ್ ಕಂಗಾಲು

ಮನೆಯಲ್ಲಿ ಇಬ್ಬರಿಗೂ ವಾದ ಪ್ರತಿವಾದ ನಡೆದಿದೆ. ನಾನು ಕೇಳೇ, ನೀನು ಬಿಡೆ ಎಂಬಂತಹ ಸ್ಪರ್ಧೆ ಎದುರಾಗಿದೆ. ಇದೇ ಕಾರಣಕ್ಕೆ ಈಗ ಈ ಗಲಾಟೆಯನ್ನು ಅಮ್ಮು ಮತ್ತು ಆರತಿ ತವರಿನತ್ತ ತೆಗೆದುಕೊಂಡು ಹೊರಟಿದ್ದಾರೆ. ಮನೆಯಲ್ಲಿ ಇಬ್ಬರು ಮುಖ್ಯವಾದ ಸೊಸೆಯಂದಿರು ಕಾಣದೆ ಇದ್ದಿದ್ದಕ್ಕೆ ಗಂಡ್ ಹೈಕ್ಳು ಗಾಬರಿಯಾಗಿದ್ದಾರೆ. ಎಲ್ಲಿಗೆ ಹೋಗಿದ್ದಾರೆಂದು ತಲೆ ಕೆಡಿಸಿಕೊಂಡು ಕೂತಿದ್ದಾಗ ಆದ್ಯಾ ಗಂಡ ಬಂದು ಎಲ್ಲವನ್ನು ಬಗೆಹರಿಸಿದ್ದಾರೆ. ಆದರೆ ಈಗ ವಿಕ್ಕಿಗೆ ನಮ್ಮ ಮಾನ ಮರ್ಯಾದೆ ಮಾವನ ಮನೆಯಲ್ಲಿ ಹರಾಜು ಹಾಕಲು ಹೊರಟಿದ್ದಾರೆ ಎಂಬುದೇ ಒಂದೇ ಬೇಜಾರು.

ಅಮೂಲ್ಯ ಮೇಲೆ ಆರತಿ ನಿಗಿನಿಗಿ

ಅಮೂಲ್ಯ ಮೇಲೆ ಆರತಿ ನಿಗಿನಿಗಿ

ಅಕ್ಕ ತಂಗಿಯರ ಮುಸುಕಿನ ಗುದ್ದಾಟ ಆರತಿ ತಾಯಿಯಾಗುತ್ತಿದ್ದಾರೆಂಬ ವಿಚಾರ ಗೊತ್ತಾದಾಗಿನಿಂದ ಇತ್ತು. ಲೈಟ್ ಆಗಿ ಕಿಡಿ ಹಚ್ಚಿದ್ದ ಸುಹಾಸಿನಿ, ಆ ಕಿಡಿಗೆ ಆಗಾಗ ತುಪ್ಪ ಹಾಕುತ್ತಿದ್ದಳು. ಇಂದು ಸ್ವಲ್ಪ ಜಾಸ್ತಿ ತುಪ್ಪ ಸುರಿದ ಕಾರಣ, ಬೆಂಕಿ ಸ್ವಲ್ಪ ಜೋರಾಗಿಯೇ ಹೊತ್ತಿಕೊಂಡಿದೆ. ಅದು ಪರಿಯ ಮನೆ ಕಡೆಗೆ ಪಯಣ ಬೆಳೆಸಿದೆ. ಅಮ್ಮು ತನ್ನ ರಾಣಿಯನ್ನು ತೆಗೆದುಕೊಂಡು ಹೊರಟರೆ , ಆರತಿ ಕ್ಯಾಬ್ ಬುಕ್ ಮಾಡಿಸಿಕೊಂಡು ಹೊರಡಿದ್ದಾಳೆ. ಹೋಗುವಾಗ ಇಬ್ಬರದ್ದು ವಿಭಿನ್ನ ರಾಗ. ವಸಿಷ್ಠ ಕುಟುಂಬದ ಸೊಸೆಯಾಗಿ ಹೇಗಿರಬೇಕೆಂಬುದು ಅವಳಿಗೆ ಗೊತ್ತಿಲ್ಲ. ತಾನೂ ದೊಡ್ಡ ಸೊಸೆಯೆಂಬುದು ನೆತ್ತಿಗೇರಿದೆ. ಅದಕ್ಕೆ ಹೀಗೆಲ್ಲಾ ಆಡುತ್ತಿದ್ದಾಳೆ. ಬಾ ಅಮ್ಮನಿಗೆ ಹೇಳಿ ಗ್ರಹಚಾರ ಬಿಡಿಸುತ್ತೀನಿ ಎಂದು ಆರತಿ ಕ್ಯಾಬ್ ನಲ್ಲಿಯೇ ಕುಳಿತು ಗೊಣಕುತ್ತಿದ್ದರೆ, ಅತ್ತ ಅಮೂಲ್ಯ ತನ್ನ ರಾಣಿ ಜೊತೆ ಹೋಗುತ್ತಾ, ಆ ಸುಹಾಸಿನಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾಳೆ. ವಸಿಷ್ಠ ಮನೆ ಸೊಸೆಯಾಗಿಬಿಟ್ಟರೆ ಹೀಗೆಲ್ಲಾ ಆಡಬೇಕಾ? ಅಮ್ಮನ ಬಳಿ ಇದೆ ಬಾ ನಿಂಗೆ ಅಂತ ಯುದ್ಧಕ್ಕೆ ನಿಂತಿದ್ದಾರೆ.

ಪರಿ ಇಬ್ಬರನ್ನೂ ಮತ್ತೆ ಒಂದು ಗೂಡಿಸುತ್ತಾಳಾ?

ಪರಿ ಇಬ್ಬರನ್ನೂ ಮತ್ತೆ ಒಂದು ಗೂಡಿಸುತ್ತಾಳಾ?

ಸದ್ಯ ಇಬ್ಬರು ಮಕ್ಕಳು ತವರು ಮನೆ ತಲುಪಿದ್ದಾರೆ. ಅಮ್ಮನ ಬಳಿ ಹೇಳುವುದಕ್ಕೆ ರಾಶಿ ರಾಶಿ ದೂರುಗಳನ್ನು ಹೊತ್ತು ತಂದಿದ್ದಾರೆ. ಈಗಾಲೇ ಸುಹಾಸಿನಿಯ ಕೆಡುಕು ಬುದ್ದಿ ಪರಿಮಳಾಗೂ ಗೊತ್ತಿದೆ. ಆದರೆ ಬೀಗಿತ್ತಿ ಎಂಬ ಒಂದೇ ಒಂದು ಕಾರಣಕ್ಕೆ ಸುಮ್ಮನೆ ಆಗಿದ್ದಾರೆ. ಇತ್ತೀಚೆಗೆ ಅಮೂಲ್ಯಾಗೂ ಚೆನ್ನಾಗಿಯೇ ಅರಿವಾಗಿದೆ. ಮುಖದ ಮೇಲೆ ಹೊಡೆದಂಗೆ ತಿರುಗೇಟು ನೀಡುತ್ತಾಳೆ. ಹೀಗಾಗಿ ಮುಗ್ಧ ಆರತಿಯನ್ನು ಟಾರ್ಗೆಟ್ ಮಾಡಿದ್ದಾಳೆ ಸುಹಾಸಿನಿ. ಈ ವಿಷಯ ಮಕ್ಕಳು ದೂರು ನೀಡುವಾಗ ಪರಿಗೆ ತಿಳಿದರೆ ಒಂದು ಬೆಸ್ಟ್ ಸಲೂಷನ್ ಹುಡುಕಬಹುದು. ಆ‌ ಮೂಲಕ ಅಮ್ಮನ ಮಾತಿಗೆ ಬೆಲೆ ಕೊಟ್ಟು ಮಕ್ಕಳು ಹಿಂದೇಟು ಹಾಕಿದರೆ, ಸುಹಾಸಿನಿಗೆ ಹೊಟ್ಟೆಗೆ ಕೆಂಡವೇ ಬಿದ್ದಂತಾಗುತ್ತದೆ.

ಇವತ್ತಿನ ಸಂಚಿಕೆ ಮೇಲ್ಯಾಕೆ ಬೇಸರ?

ಈಗಾಗಲೇ ಜೀ ಕನ್ನಡ ತನ್ನ ಅಧಿಕೃತ ಖಾತೆಯಲ್ಲಿ ಇವತ್ತಿನ ಎಪಿಸೋಡಿನ ಪ್ರೋಮೊ ಹಾಕಿದ್ದಾರೆ. ಅದರಲ್ಲಿ ಆರತಿ ಮತ್ತು ಅಮ್ಮು ಕೋಪದಲ್ಲಿ ಅಮ್ಮನ ಮನೆ ಕಡೆ ಹೊರಟಿದ್ದಾರೆ. ಇದಕ್ಕೆ 'ಗಟ್ಟಿಮೇಳ' ನೋಡುಗರು ಬೇಸರ ಮಾಡಿಕೊಂಡಿದ್ದಾರೆ. ಆರತಿ ನೀನು ಗರ್ಭಿಣಿಯಮ್ಮ, ಹೀಗೆಲ್ಲಾ ಆಡಿದರೆ ಹೇಗೆ ಎಂಬ ಸಲಹೆಯನ್ನು ನೀಡಿದ್ದಾರೆ. ಇದು ಎತ್ತ ಕಡೆಗೋ ಸಾಗುತ್ತಿದೆ? ಏನಾಗುತ್ತಿದೆ ನಮ್ಮ 'ಗಟ್ಟಿಮೇಳ' ಅಂತ ಹಲವರು ಬೇಸರ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲದರ ನಡುವೆ ಅಮ್ಮು ಇವತ್ತು ಉಟ್ಟಿರುವ ತಿಳಿ ಗುಲಾಬಿ ಬಣ್ಣದ ಸೀರೆಗೆ ಹಲವರು ಫಿದಾ ಆಗಿದ್ದಾರೆ. ಸೀರೆ ತುಂಬಾ ಚೆನ್ನಾಗಿದೆ. ಅಮ್ಮು ಸಖತ್ತಾಗಿ ಕಾಣ್ತಿದ್ದೀಯಾ ಎಂದು ಕಮೆಂಟ್ ಹಾಕಿದ್ದಾರೆ.

More from Filmibeat

English summary
Zee Kannada Serial Gattimela Written Update On June 13th Episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X