ಅಮ್ಮಾ ಎಂದ ದ್ರುವ ಸಂತೋಷದಲ್ಲಿ ತೇಲಿ ಹೋದ ಅದಿತಿ

By ಪೂರ್ವ

ಗಟ್ಟಿಮೇಳ ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಈ ಧಾರವಾಹಿಯಲ್ಲಿ ನಟಿಸುವ ಕಲಾವಿದರ ನಟನೆಯೂ ಗಮನ ಸೆಳೆಯುತ್ತಿದೆ. ಪಠ ಪಠ ಎಂದು ಮಾತಾನಾಡುತ್ತಾ ಎಲ್ಲರ ಮನಸೂರೆಗೊಳಿಸುತ್ತಿರುವ ಅಮೂಲ್ಯ ಜನರ ಮನ ಗೆದ್ದಿದ್ದಾಳೆ.

ಆದರೆ ಅಮೂಲ್ಯ ಹಾಗೂ ಆರತಿಗೆ ವೈರತ್ವ ಬೆಳೆಸುವ ಪ್ರಯತ್ನವನ್ನು ಸುಹಾಸಿನಿ ಮಾಡುತ್ತಿದ್ದಾಳೆ ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಹತ್ತಿರವಾಗುತ್ತಿದ್ದಾರೆ ರಕ್ತ ಸಂಬಂಧ ಅಂದರೆ ಹಾಗೆ ಒಬ್ಬರಿಗೊಬ್ಬರು ಅದೆಷ್ಟೇ ಮುನಿಸು ಮಾಡಿಕೊಂಡಿದ್ದರು ಕೊನೆಗೆ ನಾವಿಬ್ಬರು ಒಂದೇ ಎಂಬುವುದನ್ನು ತೋರಿಸಿಕೊಡುತ್ತಿದ್ದಾರೆ. ಇತ್ತ ಸುಹಾಸಿನಿ ಮಾತ್ರ ಮುನಿಸಿಕೊಳ್ಳುತ್ತಿದ್ದಾಳೆ.

ಅಮೂಲ್ಯ ಹಾಗೂ ಆರತಿಯನ್ನು ಎಷ್ಟೇ ದೂರ ಮಾಡಲು ಯತ್ನಸಿದರು ಸಾಧ್ಯವಾಗುತ್ತಿಲ್ಲ ಎಂದು ಕುಪಿತಗೊಳ್ಳುತ್ತಿದ್ದಾಳೆ ಸುಹಾಸಿನಿ. ಇತ್ತ ಅಮೂಲ್ಯ ಮತ್ತು ಆರತಿ ಮುನಿಸಿಕೊಂಡು ತವರು ಮನೆಗೆ ಆಗಮಿಸಿದ್ದರು. ಅಮ್ಮು, ಆರತಿ ಬಂದಿರುವುದನ್ನು ನೋಡಿದ ತಾಯಿ ಬಹಳ ಖುಷಿ ಪಡುತ್ತಾ ಏನು ಹೇಳದೇ ಕೇಳದೇ ಬಂದಿದ್ದೀರಿ ಅಲ್ವಾ ಎಂದು ಪ್ರಶ್ನೆ ಕೇಳಿದ್ದಾಳೆ. ಅಮೂಲ್ಯ ಮನೆಯತ್ತ ಕಣ್ಣು ಅರಳಿಸಿ ನೋಡುತ್ತಾಳೆ ಬಳಿಕ ಕ್ಯಾಟರಿಂಗ್ ಮಾಡುತ್ತಿದ್ದ ಪಾತ್ರೆಗಳೆಲ್ಲ ಮೂಲೆ ಸೇರಿಕೊಂಡಿದ್ದನ್ನು ನೋಡಿದ ಅಮ್ಮು ಯಾಕಮ್ಮ ಈಗ ಕ್ಯಾಟರಿಂಗ್ ನಡೆಸುತ್ತಿಲ್ವಾ ಯಾಕೆ? ಎಂದಾಗ ಅಮ್ಮ ಪರಿಮಳ ಕೇಳಿದಾಗ ತಬ್ಬಿಬ್ಬಾಗುತ್ತಾಳೆ.

ಅಮೂಲ್ಯನ ಪ್ರಶ್ನೆಗೆ ತಬ್ಬಿಬ್ಬಾದ ಪರಿಮಳ

ಅಮೂಲ್ಯನ ಪ್ರಶ್ನೆಗೆ ತಬ್ಬಿಬ್ಬಾದ ಪರಿಮಳ

ತಂದೆ ಏನು ಮಾಡುತ್ತಿದ್ದಾರೆ ಎಂದೆಲ್ಲ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಿದ್ದಳು ಅಮ್ಮು, ಅದಕ್ಕೆ ತಾಯಿ ಅವರು ಸೆಕ್ಯುರಿಟಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದಾಗ ಅಮೂಲ್ಯಗೆ ಅದನ್ನು ಕೇಳಿ ಸಂಕಟವಾಗುತ್ತದೆ. ಮನೆಯ ಪರಿಸ್ಥಿತಿ ಕಂಡು ಕೋಪವನ್ನು ಮರೆತ ಆರತಿ, ಅಮೂಲ್ಯ ಇದೀಗ ಒಂದಾಗಿದ್ದಾರೆ ಮಕ್ಕಳಿಬ್ಬರು ಇಷ್ಟು ಖುಷಿಯಲ್ಲಿರುವುದನ್ನು ಕಂಡು ಪರಿಮಳ ಕೂಡ ಬಹಳ ಖುಷಿಗೊಂಡಳು ಬಳಿಕ ಆರತಿ, ಅಮ್ಮು ಮನೆಯಿಂದ ಹೊರಗೆ ಬರುತ್ತಾರೆ ಬಳಿಕ ಅಮೂಲ್ಯಳೊಂದಿಗೆ ಆರತಿ ಕೂಡ ಬೈಕ್‌ನಲ್ಲಿ ಬರುತ್ತಾಳೆ. ಇದನ್ನು ಕಂಡ ವೇದಾಂತ್, ವಿಕ್ರಾಂತ್‌ಗೆ ಆಶ್ಚರ್ಯವಾಗುತ್ತದೆ.

ವೇದಾಂತ್‌ನನ್ನು ತಬ್ಬಿಕೊಂಡ ಅಮ್ಮು

ವೇದಾಂತ್‌ನನ್ನು ತಬ್ಬಿಕೊಂಡ ಅಮ್ಮು

ಸುಹಾಸಿನಿ ಇದನ್ನು ನೋಡಿ ದಿಗ್ಬ್ರಾಂತಳಾಗುತ್ತಾಳೆ ಬಳಿಕ ಸುಧಾರಿಸಿಕೊಂಡು ಮಾತನಾಡುತ್ತಾಳೆ. ಬಳಿಕ ಅಮ್ಮು ರೂಮಿಗೆ ಹೋಗಿ ವೇದಾಂತ್‌ನನ್ನು ಬಿಗಿಯಾಗಿ ತಬ್ಬಿಕೊಂಡು ತನಗೆ ಆಗಿರುವ ಖುಷಿಯ ಬಗ್ಗೆ ಹೇಳಿಕೊಳ್ಳುತ್ತಾಳೆ ಆಗ ವೇದಾಂತ್ ಆ ರೀತಿ ಕೋಪಿಸಿಕೊಂಡು ಹೋಗಿ ವಾಪಸ್ ಅದು ಹೇಗೆ ಖುಷಿಯಾಗಿ ಬಂದಿದ್ದೀರಿ ಎಂದು ಪ್ರಶ್ನಿಸುತ್ತಾನೆ. ಬಳಿಕ ಧ್ರುವ ಬಾಯಿ ತುಂಬಾ ಅಮ್ಮ ಎಂದು ಕರೆದಿದ್ದನ್ನು ನೋಡಿದ ವೇದಾಂತ್‌ಗೆ ಖುಷಿಯೂ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಇದಕ್ಕೆ ಅಮ್ಮೂ ನಗುಮೊಗದಿಂದ ವೇದಾಂತ್ ಮುಖ ನೋಡುತ್ತಾನೆ.

ವಸಿಷ್ಠ ಕುಟುಂಬದ ಸಂತೋಷ ಸಹಿಸದ ಸುಹಾಸಿನಿ

ವಸಿಷ್ಠ ಕುಟುಂಬದ ಸಂತೋಷ ಸಹಿಸದ ಸುಹಾಸಿನಿ

ಆ ವೇಳೆ ಅಮ್ಮುಗೆ ಅದಿತಿ ಕಾಲ್ ಮಾಡುತ್ತಾಳೆ. ಅದಿತಿಯ ಬಳಿ ಧ್ರುವ ಮಾತನಾಡಿರುವ ವಿಚಾರವನ್ನು ಪ್ರಸ್ತಾಪ ಮಾಡಿ ಖುಷಿ ಪಡುತ್ತಾನೆ. ಬಳಿಕ ಅಮ್ಮೂಲ್ಯ ಮೊಬೈಲನ್ನು ಕಸಿದುಕೊಂಡು ಇವತ್ತು ರಾಜಣ್ಣ ಅಮ್ಮ ಅಂತ ಕರೆದ್ರು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅದಿತಿಗೆ ಬಹಳ ಖುಷಿಯಾಗುತ್ತದೆ. ಬಳಿಕ ಅಮ್ಮು ಹೇಳುತ್ತಾಳೆ ನಾವೇನೆ ಮಾಡಿದ್ರು ಅದಕ್ಕೆ ಅವರು ರಿಯಾಕ್ಟ್ ಮಾಡುತ್ತಾರೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಅದಿತಿ ಸಂತೋಷದ ಅಲೆಯಲ್ಲಿ ತೇಲುತ್ತಾಳೆ.

ಮನೆಯ ಸಂಕಷ್ಟ ನೆನೆಯುತ್ತಿರುವ ಅಮ್ಮು

ಮನೆಯ ಸಂಕಷ್ಟ ನೆನೆಯುತ್ತಿರುವ ಅಮ್ಮು

ಅಮ್ಮು ಮನೆಯಲ್ಲಿ ಇರುವ ಸಂಕಷ್ಟದ ಬಗ್ಗೆ ಯೋಚಿಸುತ್ತಾ ಅತ್ತಿಂದ ಇತ್ತ ಹೋಗುತ್ತಿರುವಾಗ ಆರತಿ ಬರುತ್ತಾಳೆ, ಅಮ್ಮೂ ಯಾಕೆ ಇಷ್ಟು ಯೋಚನೆ ಮಾಡುತ್ತಿದ್ದೀಯಾ ಏನಾಯಿತು ಎಂದು ಕೇಳಿದಾಗ ಮನೆಯಲ್ಲಿ ತಿನ್ನಲು ಕಷ್ಟಪಡುತ್ತಿದ್ದಾರೆ. ಅಪ್ಪ ಕೆಲಸಕ್ಕೆ ಹೋಗುತ್ತಾರೆ ಹೀಗಿರುವಾಗ ಹೇಗೆ ಇರಲು ಸಾಧ್ಯ ಎಂದು ಅಮ್ಮು ಹೇಳುತ್ತಾಳೆ. ಅದಕ್ಕೆ ಆರತಿ ಹೌದು ಕಣೆ ಇದಕ್ಕೆ ಏನಾದರೂ ಮಾಡಬೇಕು ಎಂದು ಹೇಳುತ್ತಿದ್ದಳು. ತವರು ಮನೆಯ ನಮದಾದೀಪ ಆದ ಆರತಿ, ಅಮ್ಮು ಮುಂದೇನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.

More from Filmibeat

English summary
Zee Kannada serial Gattimela Written Update on June 20th episode. Here is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X