ಅಮೂಲ್ಯಗೆ ಪ್ರೀತಿ ಮಾಡೋದು ಗೊತ್ತು.. ಗದರೋದು ಗೊತ್ತು.. ಸರಿ ದಾರಿಗೆ ಬರ್ತಾಳಾ ಆರತಿ?
ಆರತಿ ಸ್ವಲ್ಪ ಆ ಕಡೆ ಈ ಕಡೆ ಸ್ವಭಾವದವಳು. ರಿಯಾಲಿಟಿ ಏನು ಅಂತ ಅರ್ಥ ಮಾಡಿಕೊಳ್ಳದೆ ಮಾತುಗಳಲ್ಲಿ ಪ್ರೀತಿ ತೋರಿಸಿ, ವಿಷಕೊಟ್ಟರು ತಿಂದು ಬಿಡುವ ಸ್ವಭಾವದವಳು. ಹೀಗಾಗಿ ಅತ್ತೆ ಸುಹಾಸಿನಿ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಾಳೆ. ಇದು ಆರತಿಗೆ ಗೊತ್ತಾಗುತ್ತಿಲ್ಲ. ಸುಹಾಸಿನಿಯ ಕೆಟ್ಟ ಯೋಚನೆಯನ್ನು ಪ್ರೀತಿ ಎಂದು ನಂಬಿ, ತಪ್ಪು ಮಾಡುತ್ತಿದ್ದಾಳೆ. ಎಷ್ಟರಮಟ್ಟಿಗೆ ಎಂದರೆ ತನ್ನವರು ಯಾರೆಂದು ತಿಳಿಯದೆ ಇರುವಷ್ಟರ ಮಟ್ಟಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಾಳೆ.
ವಸಿಷ್ಠ ಕುಟುಂಬಕ್ಕೆ ಮಗು ಬರುತ್ತಿರುವುದು ಎಲ್ಕರಿಗೂ ಖುಷಿಯ ವಿಚಾರವೇ ಸರಿ. ಅದನ್ನು ಎಲ್ಲರೂ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಆರತಿಯ ನಡವಳಿಕೆ ವಿಕ್ರಾಂತ್ ಮತ್ತು ವೇದಾಂತ್ ಗೂ ಇಷ್ಟವಿಲ್ಲ. ಆದರೆ ಈ ಪರಿಸ್ಥಿತಿಯಲ್ಲಿ ಏನನ್ನು ಮಾತನಾಡಲು ಆಗದೆ ಸುಮ್ಮನೆ ಉಳಿದುಬಿಟ್ಟಿದ್ದಾರೆ. ಹೆಚ್ಚಾಗಿ ಅಮೂಲ್ಯ ಮೇಲಿನ ನಂಬಿಕೆ. ಅಮೂಲ್ಯ ಇದೆಲ್ಲೆವನ್ನೂ ತಹಬದಿಗೆ ತರುತ್ತಾಳೆ. ಅರ್ಥ ಮಾಡಿಕೊಳ್ಳುತ್ತಾಳೆ ಎಂಬ ಕಾರಣಕ್ಕೆ. ಈ ವಿಚಾರ ಅಮೂಲ್ಯಗೂ ತುಂಬಾನೇ ಚೆನ್ನಾಗಿ ಅರ್ಥ ಆಗಿದೆ. ಹೀಗಾಗಿ ಅಕ್ಕನಿಗೆ ಬುದ್ಧಿ ಹೇಳುವುದಕ್ಕೆ ಟ್ರೈ ಮಾಡುತ್ತಿದ್ದಾಳೆ.

ಸುಹಾಸಿನಿ ಮಾತಿನಿಂದ ಹೆತ್ತ ತಾಯಿಗೆ ನೋವು
ಸುಹಾಸಿನಿ ಆರತಿ ತಲೆಗೆ ಎಷ್ಟು ಸ್ಟ್ರಾಂಗ್ ಆಗಿ ತುಂಬಬೇಕೋ ಅಷ್ಟು ಸ್ಟ್ರಾಂಗ್ ಆಗಿ ಎಲ್ಲರ ಬಗ್ಗೆ ವಿಷಬೀಜ ಬಿತ್ತಿದ್ದಾಳೆ. ಮಗು ಮಾತ್ರ ಮುಖ್ಯ, ಮಗುವಿನ ಬೆಳವಣಿಗೆ ಮುಖ್ಯ ಆದ್ದರಿಂದ ಹೆಚ್ಚು ಕಡಿಮೆಯಾದರೆ ನಿನಗೆ ಕಷ್ಟ ಎಂದಿದ್ದಾಳೆ. ಯಾರು ಎಚ್ಚರಿಕೆಯಿಂದ ನೋಡಿಕೊಳ್ಳಲ್ಲ ಎಂಬುದನ್ನು ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ತುಂಬಿದ್ದಾಳೆ. ಅದಕ್ಕೆ ತಕ್ಕಂತೆ ಒಂದಷ್ಟು ಕೆಟ್ಟ ಸನ್ನಿವೇಶಗಳನ್ನು ನಿರ್ಮಿಸಿದ್ದಾಳೆ. ಅಮೂಲ್ಯ ನಿರ್ಲಕ್ಷ್ಯ ಮಾಡುವುದು, ಹೊರಗಡೆ ತಿಂಡಿಯಿಂದ ಮಗುವಿಗೆ ಅಪಾಯ ಎಂಬಂತೆ ಬಿಂಬಿಸಿದ್ದಾಳೆ. ಇದೇ ಕಾರಣಕ್ಕೆ ಹೆತ್ತ ತಾಯಿ ಗರ್ಭಿಣಿಗೆ ಎಂದು ಪ್ರೀತಿಯಿಂದ ಅಡುಗೆ ಮಾಡಿಕೊಂಡು ಬಂದರು. ಅದನ್ನು ಸ್ವೀಕರಿಸುವುದಿರಲಿ, ಪ್ರೀತಿಯಿಂದ ಮಾತನಾಡಿಸಲು ಹೋಗಲಿಲ್ಲ. ಇದು ಪರಿಗೆ ಸಹಜವಾಗಿಯೇ ನೋವು ತರಿಸಿದೆ. ಬಳಿಕ ಅಲ್ಲಿಂದ ತಾವೂ ತಂದಿದ್ದ ತಿಂಡಿಯನ್ನು ವಾಪಾಸ್ ತೆಗೆದುಕೊಂಡು ಹೊರಟಿದ್ದಳು. ಆದರೆ, ವೈದೇಹಿ ಅದನ್ನು ತೆಗೆದುಕೊಂಡು, ಮಗಳಿಗೆ ಇದನ್ನು ನೀಡುವ ಜವಾಬ್ದಾರಿ ನನ್ನದು ಎಂದು ಒಳಗೆ ತೆಗೆದುಕೊಂಡು ಹೋಗಿದ್ದಾರೆ.

ಆರತಿಯನ್ನೇ ಟಾರ್ಗೆಟ್ ಮಾಡುತ್ತಿರುವ ಸುಹಾಸಿನಿ
ಆರತಿ ಸ್ವಲ್ಪ ಮುಗ್ಧಳು. ಏನನ್ನೇ ಹೇಳಿದರು ಸರಿ, ತಪ್ಪು ಎಂಬುದನ್ನು ಯೋಚಿಸದೆ ಹೇಳಿದವರ ಪರವೇ ನಿಲ್ಲುತ್ತಾಳೆ. ಅಮೂಲ್ಯ ಮದುವೆಯಾಗಿ ಬಂದಾಗಿನಿಂದ ಅಕ್ಕ ತಂಗಿಯರ ನಡುವೆ ತಂದಿಡುವ ಕೆಲಸಕ್ಕೆ ಕೈ ಹಾಕಿದ್ದಾಳೆ. ಅಕ್ಕ ತಂಗಿಯರು ಸ್ವಲ್ಪ ಚೆನ್ನಾಗಿದ್ದಾರೆ ಎಂದು ನೋಡಿದ್ದೇ ತಡ ಅಲ್ಲಿ ಹುಳಿ ಹಿಂಡುವ ಕೆಲಸ ಶುರು ಮಾಡಿಕೊಳ್ಳುತ್ತಿದ್ದಾಳೆ. ಇದು ಅಮೂಲ್ಯಗೆ ಗೊತ್ತಿರುವ ವಿಚಾರವೇ ಸರಿ. ಯಾಕಂದ್ರೆ, ಈಗಾಗಲೇ ಅಣ್ಣ ತಮ್ಮಂದಿರನ್ನು ದೂರ ಮಾಡುವುದಕ್ಕೆ ಸುಹಾಸಿನಿ ಪಟ್ಟ ಪಾಡನ್ನು ಅಮ್ಮು ನೋಡಿದ್ದಾಳೆ. ಹೀಗಾಗಿ ಇದು ಸುಹಾಸಿನಿ ಬಿತ್ತಿರುವ ಬೀಜ ಎಂದು ಗ್ರಹಿಸುವುದಕ್ಕೆ ಹೆಚ್ಚು ಸಮಯ ಹಿಡಿಯುತ್ತಿಲ್ಲ. ಈ ಹಿಂದೆ ಇದೇ ರೀತಿ ಆದಾಗ ಆರತಿಯ ಮನವೊಲಿಸಿ, ಮತ್ತೆ ಅಕ್ಕ ತಂಗಿಯರ ಬಾಂಧವ್ಯ ಸರಿ ಮಾಡಿಕೊಂಡಿದ್ದರು. ಆದರೆ ಈಗ ಮತ್ತೆ ಸರಿಯಾಗದಂತೆ ವಿಷಬೀಜ ಬಿತ್ತಿದ್ದಾಳೆ.

ಆರತಿ ಮೇಲೆ ಅಮ್ಮು ಕೋಪ
ಆರತಿ ಸ್ವಲ್ಪವೂ ಯೋಚನೆಯನ್ನೇ ಮಾಡುತ್ತಿಲ್ಲ. ಹೆತ್ತ ತಾಯಿ ತನಗೆ ಕೆಟ್ಟದ್ದು ಮಾಡಲು ಸಾಧ್ಯವೇ ಎಂಬುದು ಆಕೆಯ ತಲೆಗೆ ಹೋಗುತ್ತಿಲ್ಲ. ಅತ್ತೆಯ ಮಾತಿಗೆ ಬದ್ಧಳಾಗಿದ್ದಾಳೆ. ಅಮ್ಮ ತಂದುಕೊಟ್ಟ ಬಾದಾಮಿ ಹಾಲು ಕುಡಿ ಎಂದರೆ ಆರತಿ ಬೇಡ ಎನ್ನುತ್ತಿದ್ದಳು. ಸುಹಾಸಿನಿ ನಿನ್ನ ತಲೆಯಲ್ಲಿ ಬೇಡದ್ದನ್ನೇ ತುಂಬುತ್ತಿದ್ದಾಳೆ. ಆಕೆಯಿಂದ ಹುಷಾರಾಗಿರು ಎಂದರೆ ಇಲ್ಲ ಅವರು ನನ್ನನ್ನು ತುಂಬಾ ಪ್ರೀತಿಸುತ್ತಾರೆ ಎನ್ನುತ್ತಿದ್ದಳು. ಆಯ್ತು ಏನಾದರೂ ಆಗಲಿ ಮೊದಲು ಅಮ್ಮ ತಂದುಕೊಟ್ಟ ಬಾದಾಮಿ ಪುಡಿ ಹಾಕಿರುವ ಹಾಲು ಕುಡಿ ಎಂದರೆ ಒಲ್ಲೆ ಎನ್ನುವುದಾ..? ಅಷ್ಟು ಸಮಯ ಬುದ್ದಿ ಹೇಳಿದರೂ ಕೇಳದ ಆರತಿಯ ನಡೆಗೆ ಕೋಪಗೊಂಡ ಅಮ್ಮು, ಕುಡಿತಿಯೋ ಇಲ್ಲ ಮೂಗು ಹಿಡಿದು ಕುಡಿಸಲೋ ಎಂಬ ಒಂದೇ ಒಂದು ಮಾತು ಆರತಿ ಗಡಗಡ ಎಂದು ನಡುಗಿದಳು. ಅಮ್ಮು ಕೈನಲ್ಲಿದ್ದ ಹಾಲು ತೆಗೆದುಕೊಂಡು ಕುಡಿದಳು.
ಪ್ರೋಮೋಗಾಗಿ ಫುಲ್ ಡಿಮ್ಯಾಂಡ್
'ಗಟ್ಟಿಮೇಳ' ಧಾರಾವಾಹಿ ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್ ನೊಂದಿಗೆ ಸಾಗುತ್ತಿದೆ. ಸುಹಾಸಿನಿಯ ಬಣ್ಣ ಬಯಲು ಮಾಡುವುದಕ್ಕೆ ಅಮೂಲ್ಯ, ವಿಕ್ರಾಂತ್ ಫ್ಲ್ಯಾನ್ ಮಾಡುತ್ತಿದ್ದಾರೆ. ಧ್ರುವ ಸತ್ಯ ತಿಳಿದು ಮಾತನಾಡಲು ಸಾಧ್ಯವಾಗದ ಸ್ಥಿತಿ ತಲಯಪಿದ್ದಾನೆ. ಹೀಗೆ ಕ್ಯೂರಿಯಾಸಿಟಿ ನೀಡುತ್ತಿರುವ ಧಾರಾವಾಹಿಗೆ ಅದೆಷ್ಟು ಅಭಿಮಾನಿ ಬಳಗವಿದೆ ಅನ್ನೋದನ್ನು ಊಹೆ ಮಾಡಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ಪ್ರತಿದಿನ ಮಧ್ಯಾಹ್ನದ ವೇಳೆಗೆ ಜೀ ಕನ್ನಡ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಇಂದಿನ ಎಪಿಸೋಡಿನ ಪ್ರೋಮೊ ಹಾಕುತ್ತಾರೆ. ಆ ಪ್ರೋಮೊಗಾಗಿ ನೋಡುಗರು ತುದಿಗಾಲಲ್ಲಿ ನಿಂತು ಕಾಯುತ್ತಾರೆ. ಅದಕ್ಜೆ ನೋಡುಗರು ಹಾಕುವ ಕಮೆಂಟ್ಸ್ ಸಾಕ್ಷಿ.


Click it and Unblock the Notifications











