ಗಟ್ಟಿಮೇಳ: ತೇಜಸ್ ಓಡಿ ಹೋಗುತ್ತಾನಾ..? ಸುಹಾಸಿನಿ ಸಿಕ್ಕಿಬೀಳುತ್ತಾಳಾ..? ಏನಾಗುತ್ತೆ ಇವತ್ತಿನ ಗಟ್ಟಿಮೇಳ..?
ಸುಹಾಸಿನಿ ತನ್ನ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡುತ್ತಾಳೆ. ಅದು ಈಗಾಗಲೇ ಸಾಕಷ್ಟು ಸಲ ಪ್ರೂವ್ ಆಗಿದೆ. ಹಣ, ಆಸ್ತಿಗಾಗಿ ಸ್ವಂತ ತಂಗಿಯ ಸಂಸಾರವನ್ನೇ ಆಳು ಮಾಡಿ, ಮಸಣಕ್ಕೆ ಕಳುಹಿಸಿದವಳು ಸುಹಾಸಿನಿ. ತಂಗಿಯ ಮಕ್ಕಳನ್ನು ಸ್ವಂತದವರಂತೆ ಸಾಕಿದ್ದೀನಿ ಅಂತ ಹೇಳಿ, ನಂಬಿಸಿ ಮೋಸ ಮಾಡುತ್ತಿರುವವಳು ಸುಹಾಸಿನಿ. ವಿಕ್ರಾಂತ್ ಹಾಗೂ ಅಮೂಲ್ಯಗೆ ಸುಹಾಸಿನಿಯ ಕೆಟ್ಟ ಬುದ್ದಿ ಗೊತ್ತಾಗಿದೆ. ಆದರೂ ಏನು ಮಾಡಲು ಆಗದ ಸ್ಥಿತಿಯಲ್ಲಿದ್ದಾರೆ. ಈಗ ಅದಿತಿ ಬಾಳಲ್ಲೂ ಆಟವಾಡಲು ಹೊರಟಿದ್ದಾಳೆ ಸುಹಾಸಿನಿ.
ಧ್ರುವನನ್ನು ಸಾಯಿಸಬೇಕೆಂಬ ಹಠ ಮಾಡಿದ್ದಾಳೆ ಸುಹಾಸಿನಿ. ಈಗಾಗಲೇ ಒಮ್ಮೆ ಸಾಯಿಸಲು ಪ್ರಯತ್ನ ಪಟ್ಟು ಸೋತಿದ್ದಾಳೆ. ಇದರ ಪರಿಣಾಮವೇ ಇಂದು ಧ್ರುವ ಓಡಾಡಲು ಆಗದ ಸ್ಥಿತಿಯಲ್ಲಿ ಕುಳಿತಲ್ಲಿಯೇ ಕುಳಿತಿದ್ದಾನೆ. ಮಾತನಾಡಲು ಆಗದೇ ಸತ್ಯವನ್ನು ತನ್ನೊಳಗೆ ಅದುಮಿಟ್ಟುಕೊಂಡಿದ್ದಾನೆ. ಇಷ್ಟೆಲ್ಲಾ ಅನ್ಯಾಯ ಮಾಡಿದ ಮೇಲೂ, ಸುಹಾಸಿನಿ ಇದೀಗ ಧ್ರುವನ ಪ್ರೀತಿ ವಿಚಾರದಲ್ಲಿ ಆಟವಾಡುತ್ತಿದ್ದಾಳೆ. ಈ ಕುತಂತ್ರ ಬುದ್ಧಿಗೆ ಖಂಡಿತ ವಿಕ್ರಾಂತ್ ಸರಿಯಾದ ಪಾಠ ಕಲಿಸುತ್ತಾನೆ.

ತೇಜಸ್ ಜೊತೆ ಅದಿತಿ ನಿಶ್ಚಿತಾರ್ಥ
ತೇಜಸ್ ತಾನೊಬ್ಬ ಡಾಕ್ಟರ್ ಎಂದು ಮನೆಯವರನ್ನೆಲ್ಲ ನಂಬಿಸಿದ್ದಾನೆ. ಪುರೋಹಿತರು ಕರೆದುಕೊಂಡು ಬಂದ ಕಾರಣ ಪರಿಮಳ ಕೂಡ ನಂಬಿದ್ದಾಳೆ. ಆತನ ಬಣ್ಣದ ಮಾತುಗಳಿಗೆ ಮರುಳಾದ ವೇದಾಂತ್ ಕೂಡ ತೇಜಸ್ ಪರ್ಫೆಕ್ಟ್ ಎಂಬುದನ್ನು ಒಪ್ಪಿದ್ದಾನೆ. ವೇದಾಂತ್ ಒಪ್ಪಿದ ಮೇಲೆ ಮುಗೀತು, ಯಾರು ತುಟಿಕ್ ಪಿಟಿಕ್ ಎನ್ನುವುದಿಲ್ಲ. ಸುಹಾಸಿನಿ ಕೂಡ ಈ ಮದುವೆಗೆ ಸಪೋರ್ಟ್ ಮಾಡಿದ್ದು, ಮುಂದೆ ನಿಂತು ಗ್ರ್ಯಾಂಡ್ ಆಗಿ ನಿಶ್ಚಿತಾರ್ಥ ಮಾಡುತ್ತಿದ್ದಾರೆ. ಆದರೆ ಈ ಮಧ್ಯೆ ತೇಜಸ್ ಬಂಡವಾಳ ವಿಕ್ರಾಂತ್‌ಗೆ ಗೊತ್ತಾಗಿದೆ.

ವಿಕ್ರಾಂತ್‌ಗೆ ಗೊತ್ತಾಯ್ತು ಸತ್ಯ
ಧ್ರುವ ಮತ್ತು ಅದಿತಿ ಪ್ರೀತಿಯ ವಿಚಾರ ಆದ್ಯಾಳಿಗೆ ಗೊತ್ತಿತ್ತು. ಹೀಗಾಗಿ ಧ್ರುವನನ್ನು ಕಿಡ್ನ್ಯಾಪ್ ಮಾಡುವುದಕ್ಕೆ ಸಾಕಷ್ಟು ಬಾರಿ ಪ್ರಯತ್ನ ಕೂಡ ಮಾಡಿದ್ದಳು. ಆದರೆ ಅದು ಫೇಲ್ ಆಗಿತ್ತು. ಆದರೆ ಹೇಗಾದರೂ ಮಾಡಿ, ಇಬ್ಬರ ಪ್ರೀತಿಯನ್ನು ಉಳಿಸಬೇಕು ಎಂಬುದಷ್ಟೇ ಆದ್ಯಾಳ ತಲೆಯಲ್ಲಿ ಇತ್ತು. ಅದಕ್ಕಾಗಿಯೇ ವಿಕ್ರಾಂತ್‌ಗೆ ತೇಜಸ್ ಹಿನ್ನೆಲೆ ಸರ್ಚ್ ಮಾಡಲು ಹೇಳಿದ್ದಳು. ಆದ್ಯಾ ಮಾತಿನಲ್ಲಿ ಸತ್ಯಾಂಶವಿದ್ದಂತೆ, ತೇಜಸ್ ನಡವಳಿಕೆಯಲ್ಲಿ ಒಂದಷ್ಟು ಮೋಸವಿದ್ದಂತೆ ವಿಕ್ರಾಂತ್‌ಗೂ ಕೂಡ ಅನ್ನಿಸಿತ್ತು. ಇದೇ ಕಾರಣಕ್ಕೆ ಆತನ ಹಿನ್ನೆಲೆ ಹುಡುಕಿ ಹೊರಟಾಗ ಅಲ್ಲಿ ಅವನೊಬ್ಬ ಕ್ರಿಮಿನಲ್ ಎಂಬುದು ಗೊತ್ತಾಗಿದೆ.

ಸುಹಾಸಿನಿ ವಿಕ್ರಾಂತ್ ಜೀವ ತೆಗೆಯುತ್ತಾಳಾ
ಧ್ರುವನಿಗೆ ತನ್ನ ಸ್ವಂತ ತಾಯಿ ಯಾರು ಎಂಬ ಸತ್ಯದ ಅರಿವಾಗಿತ್ತು. ಅದನ್ನು ಎಲ್ಲರಿಗೂ ತಿಳಿಸುವ ಆತುರದಲ್ಲಿ ಬರುವಾಗ ಇದೇ ತೇಜಸ್ ಅವನಿಗೆ ಆಕ್ಸಿಡೆಂಟ್ ಮಾಡಿದ್ದ. ಇದೀಗ ತೇಜಸ್ ಒಬ್ಬ ಕ್ರಿಮಿನಲ್ ಎಂಬುದು ವಿಕ್ರಾಂತ್‌ಗೆ ಗೊತ್ತಾಗಿದೆ. ಆ ಸತ್ಯವನ್ನು ವೇದಾಂತ್‌ಗೆ ತಿಳಿಸಬೇಕೆಂದು ಕಾಲ್ ಮಾಡಿದಾಗ ಆ ಕರೆಯನ್ನು ಸುಹಾಸಿನಿ ರಿಸೀವ್ ಮಾಡಿದ್ದಾಳೆ. ವೇದಾಂತ್ ಎಂದುಕೊಂಡು ಎಲ್ಲಾ ಸತ್ಯವನ್ನು ವಿಕ್ರಾಂತ್ ಹೇಳಿಬಿಟ್ಟಿದ್ದಾನೆ. ಈಗ ಸುಹಾಸಿನಿ ಏನಾದರೂ ನೆಗೆಟಿವ್ ಆಗಿ ಯೋಚಿಸಿದರೆ ವಿಕ್ರಾಂತ್ ಜೀವಕ್ಕೂ ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತದೆ.

ನಿಶ್ಚಿತಾರ್ಥ ನಿಲ್ಲುತ್ತಾ
ವಿಕ್ರಾಂತ್ ಈ ರೀತಿ ಸತ್ಯ ಕಲೆ ಹಾಕುತ್ತಾನೆ ಅಂತ ಸುಹಾಸಿನಿ ಅಂದಾಜು ಕೂಡ ಮಾಡಿರಲಿಲ್ಲ. ಹೀಗಾಗಿ ಎಲ್ಲಾ ಸತ್ಯ ವಿಕ್ರಾಂತ್‌ಗೆ ಗೊತ್ತಾಗಿದೆ. ವಿಕ್ರಾಂತ್‌ಗೆ ಸತ್ಯ ಗೊತ್ತಾಗಿದೆ ಎಂದು ಸುಹಾಸಿನಿಗೆ ಗೊತ್ತಾಗಿದೆ. ನಿಶ್ಚಿತಾರ್ಥಕ್ಕೆ ಈಗಾಗಲೇ ಎಲ್ಲಾ ಏರ್ಪಾಡು ಮಾಡಿಕೊಂಡಾಗಿದೆ. ಹೀಗಿರುವಾಗ ವಿಕ್ರಾಂತ್ ಬಂದು ಎಲ್ಲಾ ಸತ್ಯವನ್ನು ಹೇಳಿದರೆ ತೇಜಸ್ ಜೊತೆಗೆ ಸುಹಾಸಿನಿ ಕೂಡ ಜೈಲು ಸೇರಬೇಕಾಗುತ್ತದೆ. ಹೀಗಾಗಿ ವಿಕ್ರಾಂತ್ ಸತ್ಯ ಹೇಳುವುದಕ್ಕೂ ಮುನ್ನ ತೇಜಸ್‌ಗೆ ಓಡಿ ಹೋಗಲು ಹೇಳುವ ಪ್ಲ್ಯಾನ್ ಮಾಡಿಕೊಂಡಿದ್ದಾಳೆ ಸುಹಾಸಿನಿ.


Click it and Unblock the Notifications











