Gattimela: ಆತ್ಮಹತ್ಯೆಗೆ ಮುಂದಾದ ಅಂಜಲಿ: ತಂದೆ ಮಂಜುನಾಥ್‌ಗೆ ವಿಷಯ ಗೊತ್ತಾಗುತ್ತಾ?
ಅಂಜಲಿ ಅರಶಿನ ಶಾಸ್ತ್ರ ಆಗುತ್ತಾ ಇರುವಾಗಲೇ ಮೆತ್ತಗೆ ಎದ್ದು ತನ್ನ ರೂಮ್‌ನತ್ತ ಬರುತ್ತಾಳೆ. ಏನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ. ತೇಜಸ್ ಬ್ಲಾಕ್‌ಮೇಲ್‌ಗೆ ಹೆದರಿ ಅಕ್ಕನ ಮದುವೆ ಹೇಗೆ ತಡೆಯಲಿ. ಆಕೆಗೆ ಧ್ರುವ ಅಂದರೆ ಪ್ರಾಣ. ಇಂಥ ನೀಚನನ್ನು ಮದುವೆ ಆಗು ಎಂದು ಹೇಳುವುದು ಆದರೂ ಹೇಗೆ ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.
ಅಂಜಲಿ, ಈ ವಿಚಾರವನ್ನು ಬಾವನ ಬಳಿ ಹೇಳಬಹುದು ಎಂದು ಕೊಂಡರೆ ನನ್ನ ಮರ್ಯಾದೆಯನ್ನು ನಾನೇ ತೆಗೆದುಕೊಂಡ ಹಾಗೆ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ಯಾಕಾದರೂ ನಾನು ಹೇಳಬೇಕು. ಇದಕ್ಕೆಲ್ಲ ಒಂದೇ ಪರಿಹಾರ ಅದು ಬೇರೇನೂ ಇಲ್ಲ, ನನ್ನ ಸಾವು ಎಂದು ಹೇಳಿಕೊಳ್ಳುವ ವೇಳೆ ಅಲ್ಲಿಗೆ ಮಂಜುನಾಥ್ ಬರುತ್ತಾರೆ.

ಮಗಳು ಏನೋ ಯೋಚನೆ ಮಾಡುತ್ತಾ ಇರುವುದನ್ನು ನೋಡಿದ ಮಂಜುನಾಥ್ ಹೇಳುತ್ತಾರೆ. ಯಾಕಮ್ಮ ಏನಾಯಿತು ಏನು ಯೋಚನೆ ಮಾಡುತ್ತಾ ಇದ್ದೀಯಾ ಎಂದು ಕೇಳುತ್ತಾರೆ. ಬಹಳ ಯೋಚನೆ ಮಾಡುತ್ತಾ ಇರುತ್ತಿದ್ದಿಯಾ ಏನಾಯಿತು ಎಂದು ಕೇಳಿದಾಗ ಅಂಜಲಿ ಅಪ್ಪ ಏನು ಇಲ್ಲ ಎನ್ನುತ್ತಾಳೆ. ಅದಕ್ಕೆ ಮಂಜುನಾಥ್ ನನಗೆ ನನಗೆ ಎಲ್ಲಾ ಗೊತ್ತು ಎನ್ನುತ್ತಾರೆ.
ಅಂಜುಗೆ ಅಪನ ಸಾಂತ್ವನ
ನೀನು ಯಾತಕ್ಕಾಗಿ ಇಷ್ಟೆಲ್ಲ ಬೇಸರ ಮಾಡಿಕೊಂಡು ಇದ್ದೀಯಾ ಎಂಬುವುದು ನನಗೆ ಗೊತ್ತಾಗಿದೆ ಎನ್ನುತ್ತಾರೆ. ಇದನ್ನು ಕೇಳಿದ ಅಂಜಲಿಗೆ ಶಾಕ್ ಆಗುತ್ತದೆ. ಇಷ್ಟು ಬೇಗ ಅಪ್ಪನಿಗೆ ಎಲ್ಲಾ ವಿಚಾರ ತಿಳಿದು ಹೋಯಿತಾ? ಅಪ್ಪನಿಗೆ ಹೇಗೆ ವಿಚಾರ ತಿಳಿಯಲು ಸಾಧ್ಯ ಎಂದೆಲ್ಲ ಯೋಚನೆ ಮಾಡುತ್ತಾ ಇರುವಾಗ ಮಂಜುನಾಥ್ ಹೇಳುತ್ತಾನೆ.
ಇಷ್ಟು ದಿನ ನಮ್ಮ ಜೊತೆ ಅದಿತಿ ಇದ್ದಳು. ಆದರೆ ಇನ್ನೂ ಮುಂದೆ ಅದಿತಿ ಕೂಡ ನಮ್ಮ ಮನೆಯಲ್ಲಿ ಇರುವುದು ಇಲ್ಲ. ಎಲ್ಲರನ್ನೂ ಮದುವೆ ಮಾಡಿ ಒಂದೇ ಮನೆಗೆ ಕಳುಹಿಸಿದೆ .ಆದರೆ ಇದೀಗ ನೀನು ಒಬ್ಬೊಂಟಿಯಾಗಿ ಬಿಟ್ಟೆ ಎಂಬುವುದು ಅಲ್ವಾ ನಿನ್ನ ಬೇಸರ. ನನಗೆ ಅರ್ಥ ಆಗುತ್ತದೆ ಎಂದೆಲ್ಲಾ ಹೇಳಿದಾಗ ಸುಮ್ಮನೆ ಆಗುತ್ತಾಳೆ ಅಂಜಲಿ.

ಮಂಜುನಾಥ್‌ಗೆ ತೇಜಸ್ ವಾರ್ನಿಂಗ್
ಬಳಿಕ ಅಂಜಲಿ ಅಪ್ಪನನ್ನು ತಬ್ಬಿಕೊಳ್ಳುತ್ತಾಳೆ. ಇನ್ನು ಮಂಜುನಾಥ್ ಮನೆಯಲ್ಲಿ ಮದುವೆ ಸಂಭ್ರಮದಲ್ಲಿ ಇರುತ್ತಾರೆ. ಆದರೆ ಮಂಜುನಾಥ್‌ಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತ ಇರುತ್ತದೆ. ಅಂಜಲಿ ಬಳಿ ಮಾತನಾಡಿಕೊಂಡು ಇರುವ ವೇಳೆ ಮಂಜುನಾಥ್‌ಗೆ ಕರೆ ಮಾಡುತ್ತಾನೆ ತೇಜಸ್. ಆತನದ್ದು ಒಂದೇ ಹಠ ಇದೆಲ್ಲವನ್ನೂ ವೇದಾಂತನ ಬಳಿ ಹೇಳಿದರೆ ನಿಮ್ಮ ಮರ್ಯಾದೆ ತೆಗೆದು ಬಿಡುತ್ತೇನೆ ಎಂದೆಲ್ಲ ಹೇಳುತ್ತಾನೆ.
ಮಂಜುನಾಥ್ ಮನದಲ್ಲಿ ಭಯ
ತೇಜಸ್ ಮಾತು ಕೇಳಿದ ಮಂಜುನಾಥ್‌ಗೆ ಏನು ಮಾಡಬೇಕು ಎಂದು ತಿಳಿಯದೇ ಆಗುತ್ತದೆ. ಮಂಜುನಾಥ್ ಫೋನ್ ಇಡುತ್ತಾನೆ. ಆಗ ಅಂಜು ಅಪ್ಪನ ಬಳಿ ಬಂದು ಯಾರದ್ದು ಫೋನ್ ಅಪ್ಪ ಎಂದು ಕೇಳಿದಾಗ ಏನೇನೋ ಸಬೂಬು ಹೇಳಿ ಸುಮ್ಮನೆ ಆಗುತ್ತಾನೆ. ಇನ್ನು ವಸಿಷ್ಠ ಕುಟುಂಬದಲ್ಲಿ ಮದುವೆ ಸಂಭ್ರಮ ಎದ್ದು ಕಾಣುತ್ತಿದೆ. ಮನೆಯಲ್ಲಿ ಖುಷಿಯ ವಾತಾವರಣ ಇರುತ್ತದೆ ಒಂಟಿ ಆಗಿದ್ದ ಧ್ರುವ ಇದೀಗ ಜಂಟಿ ಆಗುವ ಕಾಲ ಹತ್ತಿರದಲ್ಲೇ ಇದೆ. ಈ ವೇಳೆ ಧ್ರುವನ ಕಾಲು ಎಳೆಯುತ್ತಾ ಮಾತನಾಡುತ್ತಾ ಇರುತ್ತಾರೆ.
ಮಧುವನಗಿತ್ತಿಯಂತೆ ಮದುವೆ ಮನೆ ಸಿಂಗಾರ
ಹಾಗೆಯೇ ಮದುವೆಗೆ ಸಿದ್ಧತೆ ಮಾಡಿಕೊಂಡು ಇರುತ್ತಾರೆ. ಮರುದಿನ ಮದುವೆಯ ರಂಗು ಮಾತ್ರ ಎಲ್ಲೆಡೆ ತುಂಬಿತ್ತು. ತಳಿರು ತೋರಣಗಳಿಂದ ಅಲಂಕಾರ ಮಾಡಿ ಮದುವೆ ಮನೆ ಕಂಗೊಳಿಸುತ್ತಾ ಇತ್ತು.


Click it and Unblock the Notifications











