Don't Miss!
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗೀತಾ: ಶ್ರುತಿ ಬಾಯ್ ಫ್ರೆಂಡ್‌ನಿಂದ ಗೀತಾಗೆ ಎದುರಾಗಿದ್ಯಾ ಆಪತ್ತು?
ಇತ್ತ ಕಡೆ ಅತ್ತೆಗೆ ಸೆಡ್ಡು ಹೊಡೆದು ನಿಂತ ಗೀತಾ ನೀತಿ ಪಾಠ ಹೇಳುತ್ತಿದ್ದಾಳೆ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ ಅತ್ತೆ ಎಂದು ಹೇಳಿದಾಗ ಭಾನುಮತಿಗೆ ಮೈಯೆಲ್ಲ ಉರಿದು ಹೋಗುತ್ತದೆ. ಯಾರು ನಾಶವಾಗೋದು ನಾನು ಬುಕ್ ಮಾಡಿದ ಆ ವ್ಯಕ್ತಿಗಳು ನಿನಗೆ ಹೇಗೆ ಸಿಕ್ಕಿದ್ದರು ಎಂದೆಲ್ಲಾ ಕೇಳುತ್ತಾಳೆ.
ನಂತರ ಭಾನುಮತಿ ಮುಂದುವರೆದು ನಾನು ದುಡ್ಡು ಕೊಟ್ಟಿದ್ದು ಹೇಗೆ ಗೊತ್ತಾಯಿತು ಎಂದು ಕೇಳಿದಾಗ. ಗೀತಾ ಕೆಟ್ಟದ್ದು ಮಾಡೋಕೆ ನೂರು ಜನ ನಿಂತಿದ್ದರೆ ಒಳ್ಳೆಯದು ಮಾಡೋಕೆ ಮೂರು ಜನರು ಆದರು ಇರ್ತಾರೆ ಅಲ್ವ, ಅಂತಹವರು ನನಗೆ ಮಾಹಿತಿ ನೀಡಿದರು ಎಂದು ಹೇಳ್ತಾಳೆ.
ಗೀತಾ
ಆರ್ಟ್ಸ್
ಬ್ಯಾನರ್‌ನಲ್ಲಿ
ರಿಷಬ್
ಶೆಟ್ಟಿಗೆ
ಬಂಪರ್
ಆಫರ್:
ಒಂದೇ
ಮಾತಲ್ಲಿ
ಡೀಲ್
ಕುದುರಿಸಿದ
ಅಲ್ಲು
ಅರವಿಂದ್!
ಅತ್ತೆ ನೀನು ಏನೇ ಪ್ಲ್ಯಾನ್ ಮಾಡಿದ್ರು ಅದು ನಂಗೆ ಗೊತ್ತಾಗುತ್ತದೆ. ನೀವು ಮಾಡಿದ ಪ್ಲ್ಯಾನ್ ಕಾರ್ಯರೂಪಕ್ಕೆ ಬರಬೇಕಾದರೆ ತುಂಬಾ ಶ್ರಮಪಡಬೇಕು ಎಂತಾಳೆ. ನೀನು ಇನ್ನೇನು ಗೆದ್ದೇ ಬಿಟ್ಟೆ ಎಂದು ಬೀಗೋವಷ್ಟರಲ್ಲಿ ಈ ಗೀತಾ ಅಲ್ಲಿ ಇರ್ತಾಳೆ, ನನ್ನ ದಾಟಿಕೊಂಡು ಹೋಗೋದು ಅಷ್ಟು ಸುಲಭ ಅಲ್ಲ ಅಂತಾಳೆ ಗೀತಾ.
ಗೀತಾ ಎಲ್ಲೂ ಮರ್ಯಾದೆ ಸಿಗದ ಹಾಗೇ ಮಾಡ್ತೀನಿ ಅಂದಾಗ ಭಾನುಮತಿ ಅಕ್ಷರ ಸಹ ಕಂಗಾಲಾಗಿ ಹೋಗ್ತಾಳೆ. ಬಂದ ದಾರಿಗೆ ಸುಂಕ ಇಲ್ಲ ಅನ್ನೋ ರೀತಿ ಒಳ್ಳೆಯ ರೀತಿಯಲ್ಲಿ ಇದ್ರೆ ಪಕ್ಷದಲ್ಲಿ ಇನ್ನೂ ಅಷ್ಟು ದಿನ ಇರ್ತಿಯಾ ಇಲ್ಲ ಬದಲಾಗೋದಿಲ್ಲ ಅಂದರೆ ಮನೆಯಲ್ಲಿ ಹಾಗೂ ರಾಜಕೀಯದಲ್ಲಿ ಎರಡು ಕಡೆ ಮರ್ಯಾದೆ ಇಲ್ಲದ ರೀತಿ ಮಾಡ್ತಿನಿ ಅಂತಾಳೆ. ಎಲ್ಲೂ ಗೌರವ ಸಿಗದೇ ನರಳಿ ಸಾಯೋ ಥರ ಮಾಡ್ತಿನಿ ಅಂತಾಳೆ ಗೀತಾ. ಗೀತಾ ಕ್ಷಣ ಕ್ಷಣಕ್ಕೂ ಶಾಕ್ ಆಗೋತರ ಮಾಡ್ತಿನಿ ಎಂದು ಗೀತಾ ಭಾನುಮತಿಗೆ ಶಾಕ್ ಕೊಡ್ತಾಳೆ.

ಶೃತಿಗೆ ಕ್ಷಣ ಕ್ಷಣಕ್ಕೂ ವರುಣ್‌ನಿಂದ ಚಿತ್ರಹಿಂಸೆ
ಇತ್ತ ಶೃತಿ ಬಾಯ್ ಫ್ರೆಂಡ್ ವರುಣ್ ಶೃತಿಗೆ ಕ್ಷಣ ಕ್ಷಣಕ್ಕೂ ಚಿತ್ರಹಿಂಸೆ ನೀಡುತ್ತಾ ಬಂದಿದ್ದಾನೆ. ಯೋಚನೆಯಲ್ಲಿ ಮುಳುಗಿ ಹೋಗಿದ್ದ ಶೃತಿಗೆ ಅಲ್ಲಿಗೆ ಬಂದ ವರುಣ್ ನಂಗೆ ಆ ಗೀತಾ ಬೇಕು ಎಂದು ಹೇಳ್ತಾನೆ. ಯಾಕೋ ನಂಗೆ ಟಾರ್ಚರ್ ಕೊಡ್ತೀಯಾ ಈ ರೀತಿಯಲ್ಲಾ ಹಿಂಸೆ ಕೊಡಬೇಡ ಎಂದು ಅಳಲು ಶುರು ಮಾಡ್ತಾಳೆ. ನಾನು ಯಾಕೆ ಹಿಂಸೆ ಕೊಡಲಿ ನೀನು ನಂಗೆ ಗೀತಾಳನ್ನು ತಂದು ಕೊಡು ನಾನು ಅವಳನ್ನು ನೋಡಿದ ದಿನದಿಂದ ಹುಚ್ಚನಾಗಿ ಹೋಗಿದ್ದೇನೆ. ನೀನು ಏನು ಮಾಡ್ತೀಯೋ ನಂಗೆ ಗೊತ್ತಿಲ್ಲ ಅಂದಾಗ ನೀನು ಹೀಗೆ ಮಾಡಿದ್ರೆ ನನ್ನ ಮತ್ತು ನಿನ್ನ ಪ್ಯೂಚರ್ ಚನ್ನಾಗಿ ಇರುತ್ತದೆ ಅಂತಾನೆ. ಆಗ ಶೃತಿ ವರುಣ್‌ಗೆ ನೀನು ಈ ರೀತಿ ಮಾಡೋದು ತಪ್ಪು ಎಂದಾಗ ವರುಣ್ ಕೇಳೋದೆ ಇಲ್ಲ.

ಭಾನುಮತಿಯ ಮುಂದಿನ ನಡೆಯೇನು..?
ಭಾನುಮತಿಗೆ ಗೀತಾ ಮುಂದೆ ಸೋಲು ಸೋಲು..ಸಾಲು ಸಾಲು ಸೋಲಿನಿಂದ ಕಂಗೆಟ್ಟ ಭಾನುಮತಿಗೆ ಮುಂದೆ ಎನು ಮಾಡಬೇಕು ಅಂತಾ ಗೊತ್ತಾಗದೇ ತನ್ನ ಅಣ್ಣನಿಗೆ ಉಮೇಶನನ್ನು ಕರೆದುಕೊಂಡು ಬರಲು ತಿಳಿಸುತ್ತಾಳೆ.
ಉಮೇಶ ನನ್ನ ಕೈಗೆ ಸಿಗಲಿ ಅವನಿಗೆ ಸರಿಯಾಗಿ ಮಾಡ್ತಿನಿ ಅಂತಾಳೆ. ಅಣ್ಣನಿಗೆ ಫೋನ್ ಮಾಡಿ ಅವನು ಸಿಕ್ರೆ ಎಲ್ಲೂ ಬಿಡಬೇಡ ಮೊದಲು ಅವನನ್ನು ಕರೆದುಕೊಂಡು ಬಾ. ಎಮೋಷನ್‌ನಲ್ಲಿ ಎಲ್ಲವನ್ನೂ ಬಾಯಿ ಬಿಟ್ಟಿದ್ದಾನೆ ಎಂದು ಕೈಕೈ ಹಿಸುಕಿಕೊಳ್ತಾಳೆ. ಗೀತಾ ನೀನು ಪ್ರತಿ ಹೆಜ್ಜೆಗೂ ನಂಗೆ ಮುಳ್ಳು ಆಗಿದ್ದಾಳೆ ನಿನಗೆ ಮುಂದೆ ಸರಿಯಾಗಿ ಮಾಡ್ತಿನಿ ಎಂದು ಭಾನುಮತಿ ಪ್ಲ್ಯಾನ್ ಮಾಡ್ತಿದ್ದಾಳೆ. ಆದರೆ ಭಾನುಮತಿ ಮಾಡೋ ಪ್ಲ್ಯಾನ್ ನಿಗೂಢವಾಗಿದೆ.

ಗೀತಾ ಮುಂದೆ ವಿಜಿ ಮಾಡಿದ ನಿವೇದನೆ
ಗೀತಾ ಮುಂದೆ ಬಂದ ವಿಜಿ ತನ್ನ ತಾಯಿ ಭಾನುಮತಿಗೆ ಈ ರೀತಿಯಾಗಿ ಅವಮಾನ ಮಾಡಬೇಡ. ಅವರು ಮನೆಗೆ ಬಂದು ಅಳೋದನ್ನು ನಾನು ನೋಡೋಕೆ ಆಗಲ್ಲ ಅಂತಾ ಕೇಳಿಕೊಳ್ತಾನೆ. ಅತ್ತೆಗೆ ನಾನು ಅವಮಾನ ಮಾಡಲ್ಲ ಅಂತಾ ಗೀತಾ ವಿಜಿಯನ್ನು ಸಮಾಧಾನ ಮಾಡ್ತಾಳೆ. ಇತ್ತ ಜೈಲಿನಲ್ಲಿರುವ ಚಂದ್ರಿಕಾಳನ್ನು ಭೇಟಿಯಾಗಲು ವಿಜಿ ಮತ್ತು ಗೀತಾ ಬರ್ತಾರೆ. ಅಷ್ಟರಲ್ಲಿ ವಿಜಿಯನ್ನು ಜೈಲಿನೊಳಗೆ ಗೀತಾ ಕರೆಯುತ್ತಾಳೆ. ನಿನಗೆ ಒಂದು ಸತ್ಯದ ದರ್ಶನ ಮಾಡಿಸ್ತೀನಿ ಅಂದ್ರೂ ಸಹ ಬರಲ್ಲ.ಅಪ್ಪನ ಸಾವಿನ ಸುದ್ದಿ ಬಗ್ಗೆ ಒಂದು ಸತ್ಯ ಕಲೆಕ್ಟ್ ಮಾಡೋಕೆ ಬಂದಿದ್ದೇನೆ ಅಂತಾನೆ.ವಿಜಿಗೆ ಫೋನ್ ಬಂದ ಕಾರಣ ನಾನು ಮಾತಾಡಿ ಬರ್ತಿನಿ ಅಂತಾ ವಿಜಿ ಹೇಳಿದಾಗ ಗೀತಾ ಒಬ್ಬಳೇ ಚಂದ್ರಿಕಾಳನ್ನು ಭೇಟಿ ಮಾಡ್ತಾಳೆ. ಗೀತಾಳನ್ನು ನೋಡಿದ ಚಂದ್ರಿಕಾ ಸಿಕ್ಕಾಪಟ್ಟೆ ಖುಷಿಯಾಗ್ತಾಳೆ.

ಗೀತಾಗೆ ಬೇಸರ
ನಂತರ ಗೀತಾ ವಿಜಿ ಸಹ ಬಂದಿದ್ದಾನೆ ಅಂದಾಗ ಚಂದ್ರಿಕಾಗೆ ತುಂಬಾನೆ ಖುಷಿಯಾಗುತ್ತದೆ. ನಮ್ ವಿಜಿ ಬಂದಿದ್ದಾನಾ ಎನ್ನುತ್ತಾಳೆ. ಆನಂತರ ಬೇಸರದಲ್ಲಿ ಎನು ಅಂತಾ ಪರಿಚಯ ಮಾಡಿಸುತ್ತೀಯಾ. ಅರ್ಧ ಜನರ ಸಾವಿಗೆ ಕಾರಣವಾದ ಸೂರ್ಯ ಪ್ರಕಾಶ್ ತಂಗಿ ಚಂದ್ರಿಕಾ ಅಂತಾ ಪರಿಚಯ ಮಾಡಿಸ್ತೀಯಾ ಅಂತಾ ಕಣ್ಣೀರು ಹಾಕ್ತಾಳೆ. ಗೀತಾ ಕೂಡ ಬೇಜಾರ್ ಆಗ್ತಾಳೆ. ಗೀತಾ ಸಹ ಬೇಜಾರ್ ಆಗ್ತಾಳೆ. ನಾನು ನಿರಾಪರಾಧಿ ಎಂದು ಗೊತ್ತಾಗಲಿ ಅಂತಾಳೆ. ನಂತರ ಗೀತಾಗೆ ಒಂದು ವಿಷಯ ಹೇಳಬೇಕು ಅಂತಾ ಹೇಳಿ ಗೀತಾಳ ಚಿಕ್ಕ ವಯಸ್ಸಿನ ಫೋಟೋ ತೋರಿಸಿ ಇವಳೇ ನನ್ನ ಮಗಳು ಅಂತಾ ಹೇಳ್ತಾಳೆ. ಆ ಫೋಟೋ ನೋಡಿ ಗೀತಾಗೆ ಶಾಕ್ ಆಗುತ್ತದೆ. ಅದು ಗೀತಾಳ ಚಿಕ್ಕವಯಸ್ಸಿನ ಫೋಟೋ ಆಗಿರುತ್ತದೆ. ಮುಂದೆ ಗೀತಾ ಚಂದ್ರಿಕಾ ಮಗಳ ಅಂತಾ ಗೊತ್ತಾಗುತ್ತಾ ಇಲ್ವ ಕಾದು ನೋಡಬೇಕಿದೆ.