'ಹಿಟ್ಲರ್ ಕಲ್ಯಾಣ' ಜಾತ್ರೆ ಶುರುವಾಗ್ತಿದೆ ಎಲ್ಲರೂ ಸಿದ್ಧರಾಗಿ!

ಕಿರುತೆರೆ ಧಾರಾವಾಹಿಗಳಲ್ಲಿ 'ಹಿಟ್ಲರ್ ಕಲ್ಯಾಣ' ಸೀರಿಯಲ್ ಕೂಡ ಒಂದು ಜನಪ್ರಿಯ ಧಾರಾವಾಹಿ. ಪ್ರೇಕ್ಷಕರು ನಿತ್ಯವೂ ತಪ್ಪದೇ ತಮ್ಮ ಮನೆಗೆ ಎಜೆ ಮತ್ತು ಲೀಲಾಳನ್ನು ಬರ ಮಾಡಿಕೊಳ್ಳುತ್ತಾರೆ. ಎಜೆ ಮತ್ತು ಲೀಲಾ ಜೊತೆಗೆ ಮೂರು ಜನ ಸೊಸೆಯರ ಸ್ವಾರಸ್ಯಕರ ಕಥೆ ಈ ಧಾರಾವಾಹಿಯಲ್ಲಿ ಇದೆ.

ಜೀ ಕನ್ನಡ ವಾಹಿನಿಯಲ್ಲಿ ಸಂಜೆ 7 ಗಂಟೆಗೆ 'ಹಿಟ್ಲರ್ ಕಲ್ಯಾಣ' ಪ್ರಸಾರ ಆಗುತ್ತದೆ. 'ಹಿಟ್ಲರ್ ಕಲ್ಯಾಣ' ಇಂದು ಕನ್ನಡಿಗರ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಆರಂಭದಿಂದಲೇ 'ಹಿಟ್ಲರ್ ಕಲ್ಯಾಣ' ಕನ್ನಡದ ಮೊದಲ ಧಾರವಾಹಿಯಾಗಿ ಜನಪ್ರಿಯಗೊಂಡಿದೆ. ಟಿಆರ್‌ಪಿಯಲ್ಲಿ ಅದೇ ಚಾಪನ್ನು ಹಾಗೆ ಉಳಿಸಿಕೊಂಡಿದೆ.

Zee Kannada Serial Hitler Kalyana Jathre Telecast Soon

ಎಜೆಗೆ ಇರುವ ಮೂರು ಜನ ಸೊಸೆಯಂದಿರು ಸೇರಿ ಮಾವನಿಗೆ ಪರ್ಫೆಕ್ಟ್ ಅತ್ತೆಯನ್ನು ಹುಡುಕುವ ವಿಭಿನ್ನ ಕಥೆಯೇ ಈ 'ಹಿಟ್ಲರ್ ಕಲ್ಯಾಣ'. ಲೀಲಾ ಎನ್ನುವ ಎಡವಟ್ಟು ಅತ್ತೆ 3 ಜನ ಸೊಸೆಯಂದಿರನ್ನು ಹೇಗೆ ತರಾಟೆ ತೆಗೆದುಕೊಳ್ಳುತ್ತಾರೆ ಎನ್ನುವ ಸನ್ನಿವೇಶಗಳು ಸದ್ಯಕ್ಕೆ ಹಲವು ತಿರುವುಗಳ ಮೂಲಕ ವೀಕ್ಷಕರ ಗಮನ ಸೆಳೆದಿದೆ.

ಮನೆಯಲ್ಲಿ ಕೂತು ಧಾರಾವಾಹಿ ನೋಡುವವರಿಗೆ 'ಹಿಟ್ಲರ್ ಕಲ್ಯಾಣ' ತಂಡವನ್ನು ಭೇಟಿ ಮಾಡುವ ಅವಕಾಶ ಇದೆ. ನಿಮ್ಮೂರಿಗೆ 'ಹಿಟ್ಲರ್ ಕಲ್ಯಾಣ' ತಂಡ ಬರ್ತಿದೆ. ಹೌದು 'ಹಿಟ್ಲರ್ ಕಲ್ಯಾಣ' ಸೀರಿಯಲ್ ಜಾತ್ರೆ ನಡೆಯಲಿದೆ. ಈ ಬಾರಿಯ ಜಾತ್ರೆ ಕಾರ್ಯಕ್ರಮ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಾಯಕ ಎ ಜೆ, ನಾಯಕಿ ಲೀಲಾ, ದುರ್ಗ, ಲಕ್ಷ್ಮೀ, ಸರಸ್ವತಿ, ಅಂತರ, ವಿಶ್ವರೂಪ ಸೇರಿದಂತೆ ಮುಂತಾದ ಪಾತ್ರಗಳ ಕಲಾವಿದರು ನೇರವಾಗಿ ಜನರ ಜೊತೆಗೆ ಮಾತನಾಡಲಿದ್ದಾರೆ. ವಿಶೇಷ ಅಂದರೆ ಪಾರು ಧಾರಾವಾಹಿ ಖ್ಯಾತಿಯ ಆದಿತ್ಯ ಮತ್ತು ಪಾರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಮಾರ್ಚ್ 3ರಂದು ಕಾರ್ಯಕ್ರಮ ನಡೆಯಲಿದೆ. ಇದೇ ಕಾರ್ಯಕ್ರಮ ಟಿವಿಯಲ್ಲಿ ಮಾರ್ಚ್ 6ರಂದು ಭಾನುವಾರ ಪ್ರಸಾರಗೊಳ್ಳಲಿದೆ. ಈ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರ ಆಗಲಿದೆ ಧಾರಾವಾಹಿಯ ಪಾತ್ರಗಳು. ಈ ಹಿಂದೆ ಗಣೇಶೋತ್ಸವ ಕಾರ್ಯಕ್ರಮದಲ್ಲಿ 'ಹಿಟ್ಲರ್ ಕಲ್ಯಾಣ' ಜೋಡಿ ಅಬ್ಬರಿಸಿತ್ತು.

More from Filmibeat

English summary
Zee Kannada Serial Hitler Kalyana Special Celelbration Telecast Soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X