ಎಡವಟ್ಟು ಲೀಲಾ: ಹಿಟ್ಲರ್ ಕಲ್ಯಾಣದ ಲೀಲಾಗೆ ಯಶ್ ಜೊತೆ ಸಿನಿಮಾ ಮಾಡುವ ಆಸೆ

By ಎಸ್ ಸುಮಂತ್

ಎಡವಟ್ಟು ಸುಂದರಿ ಅನ್ನೋ ಟೈಟಲ್ ಸಾಂಗ್ ಇದೆ. ಈ ಹಾಡಿಗೆ ತಕ್ಕನಾಗಿ ಎಡವಟ್ಟು ಲೀಲಾ ಏನಾದರೊಂದು ಎಡವಟ್ಟು ಮಾಡುತ್ತಿರುತ್ತಾರೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾ ಎಲ್ಲರನ್ನೂ ಗಮನ ಸೆಳೆಯುವ ಸುಂದರಿ. ಮುದ್ದು ಮುದ್ದು ಮಾತು, ತಂಟೆ, ತರಲೆ ಈ ಎಲ್ಲವೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಬಿಟ್ಟಿದೆ. ಇದು ಅವರ ಮೊದಲ ಧಾರಾವಾಹಿ ಅಂತ ಅನ್ನಿಸುತ್ತಲೇ ಇಲ್ಲ. ಅಷ್ಟು ಅದ್ಭುತವಾಗಿ ಲೀಲಾ ಕೂಡ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.

ಆದರೆ ಲೀಲಾ ಮತ್ತು ಎಜೆ ನಡುವೆ ಅದ್ಯಾವಾಗ ಲವ್ ಆಗುತ್ತೋ ಅಂತ ಪ್ರೇಕ್ಷಕರು ಕಾಯುತ್ತಿದ್ದಾರೆ. ಆಗಾಗ ಮಿಸ್ ಆಗಿ ಶುರುವಾಗುವ ಕಣ್ಣಿನ ನೋಟದ ದೃಶ್ಯಕ್ಕೆ ಬರುವ ಹಿನ್ನೆಲೆ ಸಂಗೀತಕ್ಕೆ ಪ್ರೇಕ್ಷಕ ಪ್ರಭುಗಳು ಅದೆಷ್ಟೋ ಸಲ ಬೇಸರ ಕೂಡ ಮಾಡಿಕೊಂಡಿದ್ದಾರೆ. ಲೀಲಾ ಹಣೆಯಲ್ಲಿ ಎಜೆ ಹೆಸರೇ ಬರೆದಿರಲಪ್ಪಾ ಅಂತ ಆ ದೇವರನ್ನು ಕೇಳಿಕೊಂಡಿದ್ದಾರೆ. ಇದೆಲ್ಲಾ ಧಾರಾವಾಹಿಗೆ ಆಯಿತು. ಆದರೆ ಅದರ ಹೊರತಾಗಿಯೂ ಲೀಲಾ ಪ್ರಪಂಚ ಬೇರೆಯೇ ಇದೆ. ಆ ಬಗ್ಗೆ ಲೈವ್ ಬಂದು ಎಲ್ಲವನ್ನೂ ಹೇಳಿಕೊಂಡಿದ್ದಾರೆ.

ಮೊದಲೇ ಹೇಳಿದಂತೆ ಇದು ಲೀಲಾಗೆ ಮೊದಲ ಧಾರಾವಾಹಿ. ಸೆಟ್ ಹೇಗಿರುತ್ತೋ? ಜನ ಹೇಗಿರುತ್ತಾರೋ? ಎಂಬ ಆತಂಕ ಸಹಜವಾಗಿ ಇರುತ್ತದೆ. ಆದರೆ 'ಹಿಟ್ಲರ್ ಕಲ್ಯಾಣ' ಟೀಂ ಇದೆಲ್ಲವನ್ನೂ ದೂರ ಮಾಡಿದೆ. ಲೀಲಾ ಹೇಳಿರುವಂತೆ, ಹಿಟ್ಲರ್ ಕಲ್ಯಾಣ ಟೀಂ ತುಂಬಾ ಅದ್ಭುತವಾಗಿ ನೋಡಿಕೊಳ್ಳುತ್ತಾರೆ. ಅದು ಮನೆಯಂತೆಯೇ ಸರಿ. ಅದು ಯಾವತ್ತಿಗೂ ಸೆಟ್ ಎನ್ನುವ ಫೀಲ್ ಬಂದಿಲ್ಲ. ಪ್ರತಿಯೊಬ್ಬರು ಮುದ್ದಾಗಿ ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಯಶ್ ಜೊತೆ ಲೀಲಾಳ ಸಿನಿಮಾ ಕನಸು

ಯಶ್ ಜೊತೆ ಲೀಲಾಳ ಸಿನಿಮಾ ಕನಸು

ಯಶ್ ಅಂದರೆ ಸಿಕ್ಕಾಪಟ್ಟೆ ಇಷ್ಟ. ಇಂದು ನಿನ್ನೆಯಿಂದಲ್ಲ ಮುಂಚೆಯಿಂದಲೂ ಯಶ್ ಅಂದರೆನೇ ಇಷ್ಟ. ಅವರ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಇದೆ. ನೋಡೋಣಾ ಆ ಅದೃಷ್ಟ ಇದೆಯಾ ಅಂತ. ಸಿನಿಮಾದಲ್ಲಿಯೂ ಮಾಡುವ ಆಸೆ ಇದೆ. ಅದರಲ್ಲೂ ಯಶ್ ಜೊತೆ ಮಾಡಬೇಕೆಂಬ ಆಸೆ ಹೆಚ್ಚಾಗಿದೆ ಅಂತ ತಮ್ಮ ಮನದಾಸೆಯನ್ನು ಹೇಳಿದ್ದಾರೆ.

ಎಜೆ ಬಗ್ಗೆ ಬೇಸರವಿದೆ

ಎಜೆ ಬಗ್ಗೆ ಬೇಸರವಿದೆ

ಇತ್ತೀಚೆಗೆ ರೀಲ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ನಟ-ನಟಿಯರು ಇದರಿಂದ ಹೊರತಾಗಿಲ್ಲ. ಶೂಟಿಂಗ್ ಟೈಮ್‌ನಲ್ಲಿ ಸೈಕಲ್ ಗ್ಯಾಪ್ ಸಿಕ್ಕಿದ್ದರು ಸಾಕು ತೆರೆ ಮೇಲೆ ವಿಲನ್ ಗಳಾದವರು ಕೂಡ ಹೀರೋ-ಹೀರೋಯಿನ್ ಜೊತೆಗೆ ಒಂದೆರಡು ಹೆಜ್ಜೆ ಹಾಕುತ್ತಾರೆ. ರೀಲ್ಸ್ ಮಾಡದೆ ಇರುವವರನ್ನು ಎಲ್ಲಾದರೂ ನೋಡಿದ್ದೀರಾ? ಚಾನ್ಸೇ ಇಲ್ಲ. ಈ ವಿಚಾರದಲ್ಲಿ ಮಲೈಕಾಗೆ ತುಂಬಾನೇ ಬೇಸರ ಇದೆ. ಸೆಟ್‌ನಲ್ಲಿ ಅತ್ತೆ-ಸೊಸೆಯಂದಿರೆಲ್ಲಾ ಸೇರಿಕೊಂಡು ರೀಲ್ ಮಾಡುತ್ತಿದ್ದರೆ ಇವರು ಮಾತ್ರ ಆ ಕಡೆ ತಲೆಯನ್ನು ಹಾಕುವುದಿಲ್ಲವಂತೆ. ಬನ್ನಿ ಬನ್ನಿ ಎಂದರು ಬರಲ್ಲಾ ಅಂತಾರಂತೆ. ಅದಕ್ಕೆ ಫ್ಯಾನ್ಸ್‌ಗೆಲ್ಲಾ ಲೀಲಾ ಹಾಕಿಕೊಟ್ಟಿದ್ದಾರೆ. ನೀವೆಲ್ಲಾ ಲೀಲಾ ಜೊತೆ ಅಥವಾ ಸೊಸೆಯಂದಿರ ಜೊತೆ ಒಂದೇ ಒಂದು ರೀಲ್ ಮಾಡುವುದಕ್ಕೆ ದಿಲೀಪ್ ರಾಜ್‌ಗೆ ಹೇಳಿ ಎಂದಿದ್ದಾರೆ. ನನ್ನ ಜೊತೆಗೂ ಬೇಡ, ಸೊಸೆಯಂದಿರ ಜೊತೆಗೂ ಬೇಡ ಅಟ್ ಲೀಸ್ಟ್ ಅಜ್ಜಿ ಜೊತೆಗಾದರೂ ಒಂದು ರೀಲ್ ಮಾಡುವುದಕ್ಕೆ ಹೇಳಿ ಅಂತ ಫ್ಯಾನ್ಸ್ ಬಳಿ ರಿಕ್ವೆಸ್ಟ್ ಮಾಡಿಕೊಂಡಿದ್ದಾರೆ.

ಲೀಲಾ ಆರ್‌ಸಿಬಿ ಫ್ಯಾನ್

ಲೀಲಾ ಆರ್‌ಸಿಬಿ ಫ್ಯಾನ್

ಆರ್‌ಸಿಬಿಗೆ ಫ್ಯಾನ್ಸ್ ಯಾರಿಲ್ಲ ಹೇಳಿ. ಎಷ್ಟೋ ಸಲ ಸೋತರು ಪ್ರತಿ ವರ್ಷ ಮ್ಯಾಚ್ ಶುರುವಾದಾಗೆಲ್ಲ ಈ ಸಲ ಕಪ್ ನಮ್ಮದೆ ಎಂದು ಆತ್ಮ ವಿಶ್ವಾಸದಿಂದ, ಅದೇ ಧೈರ್ಯವನ್ನು ಟೀಂಗೂ ತುಂಬುವವರು ಅಭಿಮಾನಿಗಳು. ನಮ್ಮ ಟೀಮ್ ಆರ್‌ಸಿಬಿ ಗುರು ಏನಿವಾಗ, ಕಳೆದ ಸಲ ಆಗಲಿಲ್ಲ ಈ ಸಲ ಗೆಲ್ಲುತ್ತಾರೆ ಬಿಡು. ಅದ್ಯಾಕೆ ಅಷ್ಟು ಉರಿದುಕೊಳ್ಳುವುದು ಅಂತೆಲ್ಲಾ ಕಿಚಾಯಿಸುವ, ಸಮಾಧಾನ ಮಾಡಿಕೊಳ್ಳುವ ಅಭಿಮಾನಿಗಳೇ ಹೆಚ್ಚು ಇದ್ದಾರೆ. ಇದರ ನಡುವೆ ಲೀಲಾ ಕೂಡ ಆರ್‌ಸಿಬಿ ಫ್ಯಾನ್ ಅಂತ ಹೇಳಿದ್ದಾರೆ. ಈ ತಂಡ ಸೋಲಲಿ, ಗೆಲ್ಲಲಿ ಆರ್‌ಸಿಬಿಯೇ ಯಾವಾಗಲೂ ಇಷ್ಟ ಎಂದಿದ್ದಾರೆ.

ದುರ್ಗ-ಲೀಲಾ ಫ್ರೆಂಡ್ಸ್

ದುರ್ಗ-ಲೀಲಾ ಫ್ರೆಂಡ್ಸ್

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ದುರ್ಗ ದೊಡ್ಡ ಸೊಸೆ. ಲೀಲಾ ಬರುವುದಕ್ಕೂ ಮುನ್ನ ಇಡೀ ಮನೆಯ ಅಧಿಕಾರ ದುರ್ಗ ಬಳಿಯೇ ಇತ್ತು. ಲೀಲಾ ಬಂದ ಮೇಲೆ ಒಂದೊಂದೆ ಅಧಿಕಾರ ಕಸಿದುಕೊಳ್ಳುತ್ತಿದ್ದಾಳೆ. ಇದು ದುರ್ಗಾ ಮತ್ತು ಲೀಲಾ ನಡುವಿನ ಮಾತಿನ ವಾರ್‌ಗೆ ಆಗಾಗ ಕಾರಣವಾಗುತ್ತಿರುತ್ತೆ. ಆದರೆ ಲೀಲಾಗೆ ದುರ್ಗಾ ಕಂಡರೆ ತುಂಬಾ ಇಷ್ಟವಂತೆ. ಅದು ತೆರೆಮೇಲೆ ಅಲ್ಲ ತೆರೆ ಹಿಂದೆ. ಈ ಬಗ್ಗೆ ಖುಷಿ ಹಂಚಿಕೊಂಡಿರುವ ಲೀಲಾ, ದುರ್ಗಾ ಅಕ್ಕ ನಮಗೆಲ್ಲಾ ದೊಡ್ಡವರು. ಅವರ ಅನುಭವ ಹೆಚ್ಚಾಗಿಯೇ ಇದೆ. ಹೀಗಾಗಿ ಸೆಟ್ ನಲ್ಲಿ ಎಲ್ಲರಿಗೂ ಟ್ರೈನ್ ಮಾಡುತ್ತಾರೆ. ನಾವೂ ಕೂಡ ಅದನ್ನು ಸ್ವೀಕರಿಸುತ್ತೇವೆ ಎಂದಿದ್ದಾರೆ.

ಫ್ಯಾನ್ಸ್ ಪೇಜ್ ಬಗ್ಗೆ ಖುಷಿ

ಫ್ಯಾನ್ಸ್ ಪೇಜ್ ಬಗ್ಗೆ ಖುಷಿ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಎಡವಟ್ಟು ಲೀಲಾಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ ಅನ್ನೋದನ್ನು ನಾವೂ ಸಪರೇಟ್ ಆಗಿ ಹೇಳುವ ಅವಶ್ಯಕತೆ ಇಲ್ಲ. ಯಾಕೆಂದರೆ ಸೋಶಿಯಲ್ ಮೀಡಿಯಾ ಉಪಯೋಗಿಸುವವರ ಗಮನಕ್ಕೆ ಈಗಾಗಲೇ ಮಲೈಕಾ ಹೆಸರಲ್ಲಿ ಕ್ರಿಯೇಟ್ ಆಗಿರುವ ಫ್ಯಾನ್ಸ್‌ಗಳ ಬಗ್ಗೆ ಅರಿವಿಗೆ ಬಂದಿದೆ. ಈ ಬಗ್ಗೆ ಲೀಲಾ ಕೂಡ ಖುಷಿ ಪಟ್ಟಿದ್ದಾರೆ. ನಿಜವಾಗಲೂ ಫ್ಯಾನ್ಸ್ ಪೇಜ್‌ಗಳ ಬಗ್ಗೆ ಖುಷಿ ಇದೆ. ಅವರು ಮಾಡುವ ಎಡಿಟ್‌ಗಳು ನಾವೂ ಮಾಡುವುದಕ್ಕಿಂತಲೂ ತುಂಬಾ ಚೆನ್ನಾಗಿರುತ್ತೆ. ಹೊರಗಡೆ ಎಲ್ಲಿಯೇ ಹೋದರೂ ಜನ ನನ್ನ ತುಂಬಾ ಗುರುತು ಹಿಡಿಯುತ್ತಾರೆ. ಫ್ಯಾನ್ಸ್ ಪೇಜ್‌ಗಳಿಗೂ ತುಂಬಾ ಥ್ಯಾಂಕ್ಸ್ ಎಂದು ಧನ್ಯವಾದ ತಿಳಿಸಿದ್ದಾರೆ.

More from Filmibeat

English summary
Zee Kannada Serial Hitler Kalyana Malaika Biography And Lifestyle. Here is the details Malaika's interesting story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X