ಸೊಸೆಯರ ಆಟಕ್ಕೆ ಬ್ರೇಕ್ ಹಾಕುತ್ತಾಳಾ ಲೀಲಾ?

By ಪೂರ್ವ

ಹಿಟ್ಲರ್ ಕಲ್ಯಾಣ ಧಾರವಾಹಿ ದಿನಕ್ಕೊಂದು ತಿರುವು ಪಡೆಯುತ್ತಿದೆ ಇದರಿಂದ ಇತ್ತೀಚಿನ ದಿನಗಳಲ್ಲಿ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ಸೀರಿಯಲ್ ಪ್ರೇಮಿಗಳ ಮನಸೂರೆಗೊಳ್ಳುತ್ತಿದೆ. ಲೀಲಾ, ಹಿಟ್ಲರ್ ಏಜೆ ಮನೆಗೆ ಆಗಮಿಸಿರುವುದೇ ಇದೀಗ ಎಲ್ಲರ ಖುಷಿಗೆ ಕಾರಣವಾಗಿದೆ. ದುರ್ಗಾ, ಸರಸ್ವತಿ, ಲಕ್ಷ್ಮೀಯನ್ನು ಹೆಡೆಮುರಿ ಕಟ್ಟಲು ಲೀಲಾ ಸಜ್ಜಾಗಿದ್ದಾಳೆ. ಲೀಲಾ ಮಾರುವೇಷದಲ್ಲಿ ಏಜೆ ಮನೆಗೆ ಬಂದಾಗ ಈ ಮೂವರು ಆಕೆಯನ್ನು ಬಹಳ ಆಡಿಕೊಂಡಿದ್ದರು ಇದರಿಂದ ಸೊಸೆಯಂದಿರ ಮೇಲೆ ಕಿಡಿಕಾರುತ್ತಿರುವ ಲೀಲಾ ಮೂವರಿಗೂ ಪಾಠ ಕಲಿಸಲಿದ್ದಾಳೆ.

ಲೀಲಾಳನ್ನು ಕರೆತರಲು ಏಜೆ, ಲೀಲಾ ಮನೆಗೆ ಚಂದ್ರಶೇಖರ್‌ ಜೊತೆ ಆಗಮಿಸುತ್ತಾರೆ ಈ ವೇಳೆ ಲೀಲಾ ನಾಟಕೀಯವಾಗಿ ನಾನು ಏಜೆ ಮನೆಗೆ ಹೋಗುವುದಿಲ್ಲ ಎಂದೆಲ್ಲ ಹೇಳುತ್ತಾಳೆ. ಇದರ ಒಳ ಅರ್ಥ ತಿಳಿದುಕೊಂಡ ಚಂದ್ರಶೇಖರ್ ಏಜೆ ಮೇಲೆ ಅಷ್ಟೆಲ್ಲಾ ಪ್ರೀತಿ ಇದ್ದರು ಲೀಲಾ ನಾಟಕವಾಡುತ್ತಿರುವುದನ್ನು ನೋಡಿದ ಅವರಿಗೆ ನಗು ತಡೆದುಕೊಳ್ಳಲಾಗುತ್ತಿಲ್ಲ. ಇತ್ತ ರೇವತಿ ಅಕ್ಕನ ಕಾಲೆಳೆಯುತ್ತಿದ್ದಳು, ಹೋಗಕ್ಕ ಏಜೆ ಮನೆಗೆ ಅಷ್ಟು ಪ್ರೀತಿಯಿಂದ ಏಜೆ ಬಂದಿದ್ದಾರೆ ಎಂದೆಲ್ಲ ಹೇಳುತ್ತಾಳೆ ಇದರಿಂದ ಲೀಲಾ ಹುಸಿ ಮುನಿಸು ಮಾಡಿಕೊಂಡು ನೀವು ಇಲ್ಲಿಂದ ಹೋಗಿ ಎಂದು ಜೋರಾಗಿ ಹೇಳುತ್ತಾಳೆ.

ಲೀಲಾಳನ್ನು ಕರೆಯುತ್ತಾ ಏಜೆ, ಲೀಲಾ ರೂಮಿನ ಬಳಿ ಬಂದಾಗ ರೂಮಿನ ಬಾಗಿಲು ಹಾಕುತ್ತಾಳೆ. ಇದನ್ನು ಕಂಡ ಎಜೆಗೆ ಕೊಂಚ ಬೇಸರವಾದರೂ ಲೀಲಾಳನ್ನು ರೂಮಿನಿಂದ ಬರುವಂತೆ ಹೇಳುತ್ತಾನೆ ಆದರೆ ಲೀಲಾ ರೂಮಿನಿಂದ ಹೊರಬರದ ಕಾರಣ ಬಾಗಿಲನ್ನು ಜೋರಾಗಿ ಒದ್ದು ಆಕೆಯನ್ನು ಎಳೆದುಕೊಂಡು ಬರುತ್ತಾನೆ. ಬಿಡಿ ನನ್ನ ಕೈ ಬಿಡಿ ಎಂದು ಸೂಟ್ ಕೇಸ್ ಸಮೇತ ಎಜೆಯೊಂದಿಗೆ ಕೆಳಗಿಳಿದು ಬರುತ್ತಾಳೆ ಇದನ್ನು ನೋಡಿದ ಲೀಲಾ ತಾಯಿ ಕೌಸಲ್ಯ ಈ ರೀತಿ ಮಾಡುತ್ತಿರುವುದು ಸರಿಯಲ್ಲ ಏಜೆ ಲೀಲಾ ಎಂದೆಲ್ಲ ಹೇಳುತ್ತಿದ್ದರು ಏಜೆ ಅವರ ಮಾತನ್ನು ಸ್ವಲ್ಪವೂ ಕಿವಿಗೆ ಹಾಕಿಕೊಳ್ಳದೇ ಕಾರಿನಲ್ಲಿ ಕುಳ್ಳಿರಿಸಿ ಕಾರಿನಲ್ಲಿ ಕುಳ್ಳಿರಿಸುತ್ತಾರೆ.

ಲೀಲಾಳನ್ನು ಮನೆಗೆ ಕರೆತಂದ ಏಜೆ

ಲೀಲಾಳನ್ನು ಮನೆಗೆ ಕರೆತಂದ ಏಜೆ

ಬಳಿಕ ಲೀಲಾ ತಾಯಿ ಕೌಸಲ್ಯಾ, ಏಜೆ ಈ ರೀತಿ ಮಾಡಿರುವುದು ಒಳ್ಳೆದಾಯಿತು. ಕೇಸ್‌ ಅನ್ನು ಇನ್ನು ಬಲಪಡಿಸಿಕೊಳ್ಳಬಹುದು ಎಂದುಕೊಳ್ಳುತ್ತಾಳೆ. ಇನ್ನೂ ಲೀಲಾ ಎಲ್ಲರಿಗೂ ಬಾಯ್ ಹೇಳಿ ಅಲ್ಲಿಂದ ತೆರಳುತ್ತಾಳೆ. ಕಾರಿನಲ್ಲಿ ಏಜೆಯನ್ನು ಅದೆಷ್ಟು ಬಾರಿ ಮಾತನಾಡಿಸಿದರು ಲೀಲಾ ಮಾತಿಗೆ ಪ್ರತ್ಯುತ್ತರ ಮಾತ್ರ ಬರುತ್ತಿತ್ತು. ಬೇರೆ ಯಾವುದೇ ವಿಚಾರ ಏಜೆ ಮಾತನಾಡಲಿಲ್ಲ, ಇದು ಲೀಲಾಗೆ ತುಸು ವಿಚಿತ್ರ ಎನಿಸಿದೆ.

 ದಂಗಾದ ಮೂವರು ಸೊಸೆಯಂದಿರು

ದಂಗಾದ ಮೂವರು ಸೊಸೆಯಂದಿರು

ಏಜೆ ಮನೆಗೆ ತಲುಪಿದರು ಏಜೆ ಕಾರಿನಿಂದ ಲೀಲಾಳನ್ನು ಇಳಿಯಲು ಹೇಳಿದರು ಲೀಲಾ ಕಾರಿನಿಂದ ಇಳಿಯದೇ ಮನೆಯಿಂದ ನೀವೇ ಕರೆದುಕೊಂಡು ಬಂದಿದ್ದು ಅಲ್ವಾ ಇದೀಗ ನೀವೇ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ ಇದನ್ನು ಕೇಳಿಸಿಕೊಂಡ ಏಜೆ ಆಕೆಯ ಕೈಹಿಡಿದು ಮನೆಗೆ ಕರೆತರುತ್ತಾನೆ. ಮೊದಲಿಗೆ ಲೀಲಾಗೆ ಎಜೆಗೆ ಎದುರಾಗಿದ್ದು ಮೂವರು ಸೊಸೆಯಂದಿರು. ಸೊಸೆಯಂದಿರ ಬಳಿ ಲೀಲಾಳನ್ನು ಕರೆತಂದಾಗ ನಾಟಕೀಯವಾಗಿ ಮಾತನಾಡುವ ದುರ್ಗಾ ''ನೀವು ಬಂದಿರುವುದು ನಮಗೆಲ್ಲರಿಗೂ ಬಹಳ ಖುಷಿ ತಂದಿದೆ'' ಎಂದು ಹೇಳುತ್ತಾಳೆ. ಬಳಿಕ ನೇರವಾಗಿ ಅಜ್ಜಿ ರೂಮಿಗೆ ಲೀಲಾಳನ್ನು ಕರೆದುಕೊಂಡು ಬರುತ್ತಾನೆ ಏಜೆ.

ಅಜ್ಜಿಯನ್ನು ಸಮಾಧಾನಿಸಿದ ಲೀಲಾ

ಅಜ್ಜಿಯನ್ನು ಸಮಾಧಾನಿಸಿದ ಲೀಲಾ

ಲೀಲಾಳನ್ನು ನೋಡಿದ ಅಜ್ಜಿ ಕೊಂಚ ಹುಸಿಮುನಿಸು ಮಾಡಿಕೊಳ್ಳುತ್ತಾರೆ. ಅಮ್ಮ ಲೀಲಾಳನ್ನು ನೋಡಿ ಕೋಪ ಮಾಡಿಕೊಂಡಿದ್ದನ್ನು ನೋಡಿದ ಏಜೆ ಅಮ್ಮನನ್ನು ಸಮಾಧಾನಿಸಲು ಹೋಗುತ್ತಾನೆ. ಇದನ್ನು ನೋಡಿದ ಲೀಲಾ ಅಜ್ಜಿ ನನ್ನಿಂದ ಕೋಪ ಮಾಡಿಕೊಂಡಿರುವ ಅಜ್ಜಿಯನ್ನು ನಾನೇ ಸಮಾಧಾನಿಸುತ್ತೇನೆ ಎಂದು ಹೇಳಿ ಅಜ್ಜಿ ಬಳಿ ತೆರಳುತ್ತಾಳೆ. ಲೀಲಾಳನ್ನು ನೋಡಿದ ಅಜ್ಜಿ ಈಗ ಅಜ್ಜಿ ನೆನಪಾದ್ಲಾ ನಿನಗೆ ಇಷ್ಟು ದಿನ ನೆನಪಾಗಲಿಲ್ಲವಾ ಎಂದಾಗ ಆಕೆಗೆ ಅಳು ಉಮ್ಮಳಿಸಿ ಬಂತು.

ಸಾರಿ ಕೇಳ್ತಾಳ ಲೀಲಾ?

ಸಾರಿ ಕೇಳ್ತಾಳ ಲೀಲಾ?

ಲೀಲಾ ಹೇಳುತ್ತಾಳೆ ಅಜ್ಜಿ ನೀವು ಮನೆಗೆ ಬಂದು ಹೋದ ಮೇಲೆ ರಾತ್ರಿ ಸರಿಯಾಗಿ ನಿದ್ದೆನೆ ಮಾಡಿಲ್ಲ ಬಹಳ ಬೇಸರವಾಗಿತ್ತು ಆದರೆ ಇದೀಗ ನಾನು ಬಂದಿದ್ದೀನಲ್ಲ ನಿಮ್ಮನ್ನ ಮಾತನಾಡಿಸಿದೆನಲ್ಲ ಇನ್ನೇನು ಬೇಕಜ್ಜಿ ನೀವು ಯಾವತ್ತು ಕಣ್ಣೀರು ಹಾಕಬೇಡಿ ಅಜ್ಜಿ ಎಂದು ಬೇಸರಿಸಿಕೊಳ್ಳುತ್ತಾಳೆ. ಬಳಿಕ ಅಜ್ಜಿಯನ್ನು ಅಪ್ಪಿಕೊಳ್ಳುತ್ತಾಳೇ, ಬಳಿಕ ಅಜ್ಜಿಗೆ ಕಚಗುಳಿಯನ್ನು ಹಾಕಿ ನಗಿಸುತ್ತಾಳೆ ಲೀಲಾ ಇದನ್ನು ಕಂಡ ಏಜೆಗೆ ಬಹಳ ಖುಷಿಯಾಗುತ್ತದೆ. ಅಲ್ಲಿಂದ ಏಜೆ ತೆರಳುತ್ತಾರೆ. ಅಜ್ಜಿ ಹೇಳುತ್ತಾರೆ ಏಜೆ ಬಳಿ ಎಷ್ಟು ಹಠ ಮಾಡಿದೆ ಗೊತ್ತಾ, ಲೀಲಾ ಬರಲಿಲ್ಲವೆಂದರೆ ನಾನು ಮನೆಬಿಟ್ಟು ಹೋಗುತ್ತೇನೆ ಎಂದು ಹೇಳಿದ್ದೆ ಆದರೆ ಏಜೆ ಯಾವ ವಸ್ತುವನ್ನು ಏಜೆ ಕಾಡಿ ಬೇಡಿ ಪಡೆದುಕೊಂಡವನಲ್ಲ ಆದರೆ ನಿನ್ನ ವಿಚಾರದಲ್ಲಿ ಏಜೆ ಹಾಗೆ ಮಾಡಲಿಲ್ಲ. ನಿನ್ನ ಮನೆಯವರನ್ನೊಪ್ಪಿಸಿ ನಿನ್ನ ಕರೆತಂದಿದ್ದಾನೆ ಎಂದು ಹೇಳುತ್ತಾರೆ ಇದನ್ನು ಕೇಳಿಸಿಕೊಂಡ ಲೀಲಾಗೆ ಮಾತೆ ಹೊರಡದಾಗುತ್ತದೆ. ಏಜೆ ಬಳಿ ಸಾರಿ ಕೇಳ್ತಾಳಾ ಲೀಲಾ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee kannada serial Hitler Kalyana Written Update on 8th June. Hitler kalyana is an kannada language television serial. Hear is more details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X