ಸೆಲೆಬ್ರಿಟಿಗಳನ್ನು ಭೇಟಿಯಾದ ಲೀಲಾ: ಸರ್ಪ್ರೈಸ್ ನೀಡಿದ ಏಜೆ

By ಪೂರ್ವ

ಏಜೆ ಲೀಲಾಳನ್ನು ಕಾರಿನಲ್ಲಿ ಕೂರಿಸಿಕೊಂಡು ಹೊಟೇಲ್‌ಗೆ ಬರುತ್ತಾರೆ. ರಾತ್ರಿ ಡಿನ್ನರ್ ಲೀಲಾ ಜೊತೆ ಆಕೆಯನ್ನು ಇಂಪ್ರೆಸ್ ಮಾಡಲು ಏಜೆ ಇಟ್ಟುಕೊಂಡಿರುವ ಸಣ್ಣ ಪಾರ್ಟಿ ಇದು. ಲೀಲಾಗೆ ಆದ ನೋವನ್ನು ಎಜೆ ಈ ರೀತಿ ಮರೆಸಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ಇನ್ನೂ ಶಾಕ್‌ನಲ್ಲೇ ಇರುವ ಲೀಲಾಗೆ ಏಜೆ ನನ್ನ ಹೊಟೇಲ್‌ಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂಬುವುದೇ ಒಂದು ದೊಡ್ಡ ವಿಚಾರವಾಗಿದೆ. ಲೀಲಾ ಹಾಗೂ ಎಜೆ ಹೊಟೇಲ್‌ಗೆ ತಲುಪುತ್ತಾರೆ. ಎಜೆ ಲೀಲಾಳನ್ನು ಹೊಟೇಲ್ ಒಳಗೆ ಹೋಗಿರು ನಾನು ಒಂದು ಕಾಲ್ ಮಾಡಿ ಅಲ್ಲಿಗೆ ಬರುತ್ತೇನೆ ಎಂದು ಹೇಳುತ್ತಾರೆ. ಆ ವೇಳೆ ಲೀಲಾಗೆ ಕೊಂಚ ಗಲಿಬಿಲಿಯಾಗುತ್ತದೆ.

ಇಂಥಹ ಜಾಗಕ್ಕೆ ಮೊದಲ ಬಾರಿಗೆ ಬರುತ್ತಿದ್ದೇನೆ. ಆದರೆ ನನಗೆ ಏನು ಇಲ್ಲಿ ಗೊತ್ತಿಲ್ಲ. ಏಜೆ ನಾನಿಲ್ಲಿ ಎಲ್ಲಾ ಆರೆಂಜ್ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇತ್ತ ಒಬ್ಬಾತ ಬಂದು ಮೇಡಂ ಬನ್ನಿ ಎಂದು ಕರೆದುಕೊಂಡು ಹೋಗುತ್ತಿದ್ದಾನೆ.

ಇನ್ನೊಂದು ಕಡೆ ಲೀಲಾ ತಾಯಿ ಕೌಸಲ್ಯಗೆ ಎಜೆ ಹಾಗೂ ಲೀಲಾ ವಿಚ್ಚೇದನ ನೀಡುವ ಬಗ್ಗೆಯೇ ದೊಡ್ಡ ಆಲೋಚನೆಯಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಲೀಲಾ ತಾಯಿ ವಕೀಲರನ್ನು ಬರ ಹೇಳಿ ಏಜೆ ಮಾಡಿದ ಕೆಲಸವನ್ನು ಹೇಳುತ್ತಾರೆ. ಬಳಿಕ ಲೀಲಾಳನ್ನು ದರ ದರನೇ ಏಜೆ ಎಳೆದುಕೊಂಡು ಹೋದರು. ನನಗೇನು ಮಾಡಬೇಕು ತಿಳಿಯಲಿಲ್ಲ ಎಂದು ಹೇಳಿದಾಗ ವಕೀಲರು ಕೊಟ್ಟ ಸಲಹೆ ಖುಷಿ ಕೊಡುತ್ತದೆ.

ಲೀಲಾ ವಿಚ್ಛೇದನ ಕೊಡಿಸಲು ಹೊರಟ ಕೌಸಲ್ಯ

ಲೀಲಾ ವಿಚ್ಛೇದನ ಕೊಡಿಸಲು ಹೊರಟ ಕೌಸಲ್ಯ

ಒಳ್ಳೆಯದೇ ಆಯಿತು. ಇದೆಲ್ಲ ಇದ್ದರೇ ಇನ್ನೂ ಕೇಸ್ ಗಟ್ಟಿಯಾಗುತ್ತದೆ. 80 ಕೋಟಿ ರೂ. ನಿಮ್ಮ ಪಾಲಾದ ಹಾಗೆಯೇ ಎಂದು ಹೇಳುತ್ತಾನೆ. ಇದಕ್ಕೆ ಖುಷಿಗೊಂಡ ಲೀಲಾ ತಾಯಿಗೆ ಸ್ವರ್ಗಕ್ಕೆ ಮೂರುಗೇಣಿ ಎಂದುಕೊಂಡು ಖುಷಿ ಪಡುತ್ತಾರೆ. ಚಂದ್ರಶೇಖರ್ ಮನೆಯಲ್ಲಿ ಮಿಕ್ಸಿ ರಿಪೇರಿ ಮಾಡುತ್ತಿರುತ್ತಾರೆ. ಇತ್ತ ಚಂದ್ರಶೇಖರ್ ಬಳಿ ಬಂದ ಲೀಲಾ ತಾಯಿ ಪೇಪರ್‌ನಲ್ಲಿ ಬಂದಿದ್ದ ಕಬೋರ್ಡ್ ಅದನ್ನೆಲ್ಲ ತೋರಿಸುತ್ತಾಳೆ. ಬಳಿಕ ಇದು ಚೆನ್ನಾಗಿದ್ಯಾ ಎಂದು ಕೇಳುತ್ತಾಳೆ. ಇದನ್ನು ನೋಡಿದ ಚಂದ್ರಶೇಖರ್ ಯಾಕೆ ಇದೆಲ್ಲ ತೋರಿಸುತ್ತಿದ್ದೀಯಾ ಎಂದು ಕೇಳುತ್ತಾರೆ. ಇದೆಲ್ಲ ಚೆನ್ನಾಗಿದೆ ಅಲ್ವಾ ಎಂದು ಹೇಳುತ್ತಾ ಮನದಲ್ಲಿಯೇ ಯೋಚಿಸುತ್ತಾಳೆ. ಇದೆಲ್ಲ ಇದ್ದರೆ ಎಷ್ಟು ಚೆಂದ? ಎಜೆಗೆ ವಿಚ್ಛೇದನ ಕೊಟ್ಟ ಮೇಲೆ 80 ಕೋಟಿ ರೂ. ಸಿಗುತ್ತೆ. ಆ ಮೇಲೆ ಇದನ್ನೆಲ್ಲ ತೆಗೆದುಕೊಳ್ಳಬೇಕು ಎಂದು ಮನದಲ್ಲಿಯೇ ಅಂದುಕೊಂಡು ಅಲ್ಲಿಂದ ತೆರಳುತ್ತಾಳೆ.

ಲೀಲಾಗೆ ಸೀರಿಯಲ್‌ನಲ್ಲಿ ನಟಿಸುವ ಆಸೆ

ಲೀಲಾಗೆ ಸೀರಿಯಲ್‌ನಲ್ಲಿ ನಟಿಸುವ ಆಸೆ

ಇತ್ತ ಲೀಲಾ ಒಂಟಿಯಾಗಿ ಹೋಟೇಲ್ ಒಳಗೆ ಹೋಗುತ್ತಾಳೆ ಅಲ್ಲಿ ಗೀತಾ ಭಾರತಿ ಭಟ್‌ರನ್ನು ಮತ್ತು ಗುರುಮೂರ್ತಿಯನ್ನು ಕಂಡು ಖುಷಿ ಪಡುತ್ತಾಳೆ. ಅವಳಿಗೆ ಅವಳನ್ನೇ ನಂಬಲು ಸಾಧ್ಯವಾಗಲಿಲ್ಲ. ಅವಳ ಕೈಗೆ ಅವಳೆ ಗಿಂಡಿಕೊಳ್ಳುತ್ತಾಳೆ. ಅರೇ ಗೀತಾ ಮತ್ತು ಗುರುಮೂರ್ತಿ ಬಂದಿದ್ದಾರಲ್ಲ ಎಂದು ಬಹಳ ಖುಷಿ ಪಡುತ್ತಾಳೆ. ಬಳಿಕ ಅವರಿಬ್ಬರ ಬಳಿ ಲೀಲಾ ಓಡಿ ಬರುತ್ತಾಳೆ. ಅರೇ ಗೀತಾ ಮೇಡಂ , ಗುರು ಮೂರ್ತಿ ಸರ್. ನಾನು ನಿಮ್ಮಿಬ್ಬರ ದೊಡ್ಡ ಫ್ಯಾನ್ ಎಂದೆಲ್ಲ ಹೇಳುತ್ತಾಳೆ. ಇದನ್ನು ಕಂಡ ಗೀತಾ ಅವರಿಗೂ ಖುಷಿಯಾಗುತ್ತೆ. ನಾವು ಎಜೆ ಫ್ಯಾನ್, ನೀವು ಅವರ ಹೆಂಡತಿ. ನೀವು ಕೂಡ ದೊಡ್ಡ ಸೆಲೆಬ್ರೆಟಿಯೇ ಎಂದು ಹೇಳುತ್ತಾರೆ.

ಸೆಲೆಬ್ರೆಟಿಗಳ ಜೊತೆ ಮಾತಿಗಿಳಿದ ಲೀಲಾ

ಸೆಲೆಬ್ರೆಟಿಗಳ ಜೊತೆ ಮಾತಿಗಿಳಿದ ಲೀಲಾ

ನನಗೂ ಸೀರಿಯಲ್‌ನಲ್ಲಿ ನಟಿಸಲು ಆಸೆ. ಏನು ಮಾಡುವುದು ಮದುವೆ ಆಯ್ತು ಎಂದು ಹೇಳುತ್ತಾಳೆ. ಅದೇನೇ ಇರಲಿ ನಿಮ್ಮಿಬ್ಬರ ಜೊತೆ ಒಂದು ಫೋಟೋ ತೆಗೆಯಲೇ ಬೇಕು ಎಂದು ಹೇಳಿ ಮೊಬೈಲ್ ಪರ್ಸ್‌ನಿಂದ ತೆಗೆಯಲು ನೋಡುತ್ತಾಳೆ. ಮೊಬೈಲ್ ಇಲ್ಲದೇ ಇರುವುದನ್ನು ನೋಡಿದ ಲೀಲಾ, ಅಯ್ಯೋ ನಾನು ಮೊಬೈಲ್ ತರುವುದನ್ನು ಮರೆತುಬಿಟ್ಟಿದ್ದೇನೆ ಎಂದು ಹೇಳುತ್ತಾಳೆ. ಇದಕ್ಕೆ ಗೀತಾ ನಗುತ್ತಾರೆ.

ಲಾಯರ್ ಮಾತು ಕೇಳಿ ದಂಗಾದ ಸೊಸೆಯಂದಿರು

ಇತ್ತ ಲಾಯರ್ ಲೀಲಾ ಮೊಬೈಲ್‌ಗೆ ಕಾಲ್ ಮಾಡಿ ನಿಮ್ಮ ವಿಚ್ಛೇದನದ ಪತ್ರ ರೆಡಿ ಆಗಿದೆ. ನಾಳೆ ಪೇಪರ್ ಮನೆಗೆ ಕಳಿಸಿಕೊಡುತ್ತೇನೆ ಎಂದು ಹೇಳುತ್ತಾರೆ. ಮೊಬೈಲ್ ಮನೆಯಲ್ಲಿ ಇದ್ದಿದ್ದುದರಿಂದ ಮೊಬೈಲನ್ನು ಮೂವರು ಸೊಸೆಯಂದಿರ ಬಳಿ ಇರುತ್ತದೆ. ಲಾಯರ್ ಹೇಳಿದ ಮಾತು ಕೇಳಿದ ಮೂವರು ಸೊಸೆಯಂದಿರಿಗೆ ಸಿಡಿಲೆರಗಿದಂತಾಗುತ್ತದೆ. ಲೀಲಾ ಹಾಗೂ ಎಜೆ ಮಧ್ಯೆ ವಿಚ್ಛೇದನವಾಗುತ್ತಾ? ಚಿಗುರುತ್ತಿರುವ ಎಜೆ ಪ್ರೀತಿ ಮೊಳಕೆಯಲ್ಲಿ ಚಿವುಟಿ ಹಾಕುತ್ತಾರಾ? ಇನ್ನೂ ಈ ವಿಚಾರ ಅಜ್ಜಿಗೆ ತಿಳಿದರೆ ಏನು ಗತಿ? ಅಮ್ಮ ಮಾಡಿದ ಎಡವಟ್ಟಿನಿಂದ ಮಗಳು ಪೇಚಿಗೆ ಸಿಲುಕುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಮುಂದೇನಾಗುತ್ತದೆ ಎಂಬುದು ಮುಂದಿನ ವಾರ ತಿಳಿಯಲಿದೆ.

More from Filmibeat

English summary
Zee kannada serial Hitler Kalyana Written Update on 10th June. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X