ಏಜೆಗೆ ಸರ್‌ಪ್ರೈಸ್ ನೀಡಲು ಹೊರಟ ಲೀಲಾ: ಕಾದಿದೆಯಾ ಗಂಡಾಂತರ?

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿಯಲ್ಲಿ ದಿನಕ್ಕೊಂದು ಹೊಸ ಹೊಸ ತಿರುವು ಉದ್ಭವವಾಗುತ್ತಿದೆ ಮನೆಗೆ ಬಂದಿರುವ ಸೊಸೆಯನ್ನು ಲೀಲಾ ಹೇಗಾದರೂ ಮಾಡಿ ಓಡಿಸಲೇಬೇಕು ಎಂದು ಸಂಚು ಮಾಡುತ್ತಿದ್ದಾರೆ. ಆದರೆ ದಿನ ಕಳೆದಂತೆ ಏಜೆ ಲೀಲಾಗೆ ಹತ್ತಿರವಾಗುತ್ತಿರುವುದಂತೂ ಸತ್ಯ. ಏಜೆಗೆ ಲೀಲಾ ಕಂಡರೆ ಇದೀಗ ಕೊಂಚ ಮಟ್ಟಿಗೆ ಪ್ರೀತಿಯಾಗುತ್ತಿದೆ.

ತನ್ನ ಇಷ್ಟಾರ್ಥವನ್ನೆಲ್ಲ ಎಜೆ ಅರ್ಥಮಾಡಿಕೊಂಡು ಅದನ್ನು ಪೂರ್ಣ ಮಾಡುತ್ತಿರುವುದನ್ನು ಕಂಡ ಲೀಲಾಗೆ ಖುಷಿಯಾಗಿದೆ. ಇನ್ನೂ ಅಜ್ಜಿಗೆ ಮಾತ್ರ ಇವರಿಬ್ಬರಲ್ಲಿ ಪ್ರೇಮಾಂಕುರವಾಗುತ್ತಿರುವುದನ್ನು ಕಂಡು ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಇಷ್ಟಾಯಿತು ಎನ್ನುವಷ್ಟರಲ್ಲಿ ಕೌಸಲ್ಯ ಮಾಡಿದ ಯಡವಟ್ಟಿನಿಂದ ಲೀಲಾ ಬೆಲೆ ತೆರಲೇಬೇಕಾಗಿದೆ. ಮಗಳನ್ನೇ ಕೇಳದೇ ಕೌಸಲ್ಯ ವಿಚ್ಚೇಧನಕ್ಕೆ ಅರ್ಜಿ ಸಲ್ಲಿಸಿದ್ದಾಳೆ!

ವಕೀಲರನ್ನು ಮನೆಗೆ ಬರ ಹೇಳಿ ಅವರ ಬಳಿ ಮಾತನಾಡಿ 70 ಕೋಟಿಯ ಆಸೆಗೆ ಮಗಳ ಜೀವನವನ್ನೇ ಬುಡಮೇಲು ಮಾಡಲು ಹೊರಟಿದ್ದಾಳೆ. ಕೌಸಲ್ಯಳ ನಿರ್ಧಾರ ಯಾರಿಗೂ ತಿಳಿದಿಲ್ಲ ಮನೆಯವರಿಂದ ಗೌಪ್ಯವಾಗಿಟ್ಟುಕೊಂಡು ಮಗಳು ನಾನೇನೇ ಹೇಳಿದರು ಮಾಡುತ್ತಾಳೆ ಎಂಬ ನಂಬಿಕೆಯಿಂದ ಈ ರೀತಿ ಕೆಲಸ ಮಾಡುತ್ತಿದ್ದಾಳೆ.

ಸೊಸೆಯರಿಗೆ ತಿಳಿದಿದೆ ವಿಚ್ಛೇಧನದ ಸಮಾಚಾರ

ಸೊಸೆಯರಿಗೆ ತಿಳಿದಿದೆ ವಿಚ್ಛೇಧನದ ಸಮಾಚಾರ

ಇನ್ನೂ ಈಗಾಗಲೇ ಮೂವರು ಸೊಸೆಯಂದಿರಿಗೂ ಈ ವಿಚ್ಚೇದನದ ವಿಚಾರ ತಿಳಿದುಬಿಟ್ಟಿದೆ. ಇದೀಗ ಈ ವಿಚಾರವನ್ನು ಎಜೆಗೆ ತಿಳಿಸಿ ಲೀಲಾಳನ್ನು ಮನೆಯಿಂದ ಓಡಿಸುವ ಪ್ಲಾನ್ ಇವರದ್ದು. ಲೀಲಾಳ ಮೇಲೆ ಇನ್ನೊಂದು ಬ್ರಹ್ಮಾಸ್ತ್ರ ಬಿಡಲು ದುರ್ಗಾ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾಳೆ.

ಲೀಲಾ ಮಾತಿಗೆ ಮರುಳಾಗುತ್ತಿರುವ ಏಜೆ

ಲೀಲಾ ಮಾತಿಗೆ ಮರುಳಾಗುತ್ತಿರುವ ಏಜೆ

ದಿನ ಕಳೆದಂತೆ ಇಬ್ಬರು ಜೋಡಿಗಳು ಒಂದಾಗುತ್ತಿದ್ದಾರೆ ಆದರೆ ಇವರಿಬ್ಬರನ್ನು ಬೇರೆ ಮಾಡಲು ಮಾತ್ರ ದುರ್ಗಾ ಬಕಪಕ್ಷಿಯಂತೆ ಕಾಯುತ್ತಿದ್ದಾಳೆ. ಇತ್ತ ಲೀಲಾ ಏಜೆ ತಂಗಿಯನ್ನು ಚೆನ್ನಾಗಿ ರೆಡಿ ಮಾಡಿ ಗಾರ್ಡನ್‌ನಲ್ಲಿ ಮಾತನಾಡಿಸುತ್ತಿದ್ದಳು ಆದರೆ ಏಜೆ ಮಾತ್ರ ತಂಗಿ ರೂಮಲ್ಲಿ ಇಲ್ಲದ್ದನ್ನು ಕಂಡು ಹೆದರಿ ತಂಗಿಯನ್ನು ಕರೆಯುತ್ತಾನೆ. ಅಲ್ಲಿ ಇಲ್ಲದ್ದನ್ನು ನೋಡಿ ಗಾರ್ಡನ್‌ನತ್ತ ಬರುತ್ತಾರೆ ಅಲ್ಲಿ ಲೀಲಾ ಹೇಳುತ್ತಾಳೆ, ರೂಮಿನಲ್ಲಿ ಇದ್ದರೇ ಹೇಗೆ ಅವರಿಗೆ ಸ್ವಲ್ಪ ಚೇಂಜ್ ಇರಲಿ ಎಂದು ಗಾರ್ಡನ್‌ಗೆ ಕರೆದುಕೊಂಡು ಬಂದೆ ಎಂದು ಸೌಮ್ಯ ಅವರನ್ನು ತೋರಿಸುತ್ತಾಳೆ.

ಲೀಲಾ ಪ್ರಯತ್ನಕ್ಕೆ ಖುಷಿಯಾದ ಏಜೆ

ಲೀಲಾ ಪ್ರಯತ್ನಕ್ಕೆ ಖುಷಿಯಾದ ಏಜೆ

ಸೌಮ್ಯಳನ್ನು ನೋಡಿದ ಏಜೆಗೆ ಕಣ್ಣಂಚಲಿ ನೀರು ಜಿನುಗಿತು. ಅದೆಷ್ಟೋ ಪ್ರೀತಿಯಿಂದ ನೋಡಿಕೊಂಡ ತಂಗಿ ಇದೀಗ ವೀಲ್‌ಚೇರ್ ಮೇಲೆ ಕುಳಿತುಕೊಳ್ಳುವ ಪರಿಸ್ಥಿತಿ ಬಂತಲ್ಲ ಎಂದು ಬೇಸರಿಸಿಕೊಂಡಿದ್ದರು. ಇದೀಗ ಲೀಲಾ ಏಜೆಯನ್ನು ಆಫೀಸ್‌ಗೆ ಹೋಗಬೇಡಿ ಎಂದು ತಡೆಯುತ್ತಿದ್ದಾಳೆ, ಅದೇ ರೀತಿ ದುರ್ಗಾ ಕೂಡ ವಿಚ್ಚೇಧನ ವಿಚಾರವನ್ನು ಹೇಳಲು ಕಾತರದಿಂದ ಕಾಯುತ್ತಿದ್ದಾಳೆ. ಏಜೆಯನ್ನು ಎಷ್ಟೇ ಲೀಲಾ ನಿಲ್ಲಲು ಹೇಳಿದರೂ ಏಜೆ ಮಾತ್ರ ಆಫೀಸಿನಲ್ಲಿ ಮೀಟಿಂಗ್ ಇದೆ ಎನ್ನುತ್ತಿದ್ದಾರೆ.

ಸರ್ಪ್ರೈಸ್ ನೀಡಲು ಕಾಯುತ್ತಿರುವ ಲೀಲಾ

ಸರ್ಪ್ರೈಸ್ ನೀಡಲು ಕಾಯುತ್ತಿರುವ ಲೀಲಾ

ಬಳಿಕ ನೀರು ಹಿಡಿದುಕೊಂಡು ಬಂದಿದ್ದ ಲೀಲಾಗೆ ಸೀನು ಬಂದಂತೆ ನಟಿಸಿ ಏಜೆ ಶರ್ಟ್ ಮೇಲೆ ಚೆಲ್ಲಿ ಬಿಡುತ್ತಾಳೆ ಇದರಿಂದ ಕುಪಿತಗೊಂ ಏಜೆ ಚಿಕ್ಕ ಮಗು ತರ ಆಡುತ್ತಿದ್ದೀಯಾ ಅಲ್ವಾ, ಟೈಂ ಆಗಿದೆ ಅಂತ ಹೇಳುತ್ತಿದ್ದೀನಿ ಛೇ ಎಂದು ಹೇಳಿ ಹೋಗುತ್ತಾರೆ. ಇದನ್ನು ನೋಡಿದ ಲೀಲಾ ಖುಷಿ ಪಡುತ್ತಾಳೆ ಏಜೆಗೆ ಲೀಲಾ ಸರ್‌ಪ್ರೈಸ್ ನೀಡಲು ಕಾಯುತ್ತಿದ್ದಾಳೆ. ಇಂದೇನಾದರೂ ಲೀಲಾ ಎಡವಟ್ಟು ಮಾಡಿಕೊಳ್ಳುತ್ತಾಳ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee kannada serial Hitler Kalyana written update on 14th June. Hitler kalyana is an Kannada language television serial. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X