ವಿಚ್ಛೇಧನ ನೋಟಿಸ್ ನೋಡಿ ಬಿಟ್ಟರೆ ಅಜ್ಜಿ? ಏಜೆಗೆ ಆತಂಕ

By ಪೂರ್ವ

ಏಜೆ ಮೇಲೆ ಲೀಲಾಗೆ ಪ್ರೀತಿ ಹುಟ್ಟಿದೆ. ಆದರೆ ಲೀಲಾ ತಾಯಿ ಮಾಡಿದ ಎಡವಟ್ಟು ಕೆಲಸದಿಂದ ಏಜೆನಾ ಲೀಲಾ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇವರಿಬ್ಬರು ದೂರ ಆಗುತ್ತಾರ?

ಅನೇಕ ಅಡೆ ತಡೆಗಳನ್ನು ಎದುರಿಸಿ ಈಗ ಪ್ರೀತಿಯ ಬಲೆಗೆ ಬಿದ್ದ ನವ ಜೋಡಿ ಮೇಲೆ ದುರ್ಗಾ ಕಣ್ಣು ಬಿದ್ದಿದೆ. ಏಜೆಗೆಂತ ಲೀಲಾ ಕೊಟ್ಟ ಸರ್‌ಪ್ರೈಸ್ ಲೆಟರ್ ಏಜೆ ಕೈಗೆ ಸಿಗದ ರೀತಿಯಲ್ಲಿ ಮೂವರು ಸೊಸೆಯಂದಿರು ಮಾಡಿದ್ದಾರೆ. ಆದರೆ ಈ ವಿಚಾರ ಮಾತ್ರ ಲೀಲಾಗೆ ಇನ್ನೂ ತಿಳಿದಿಲ್ಲ.

ಹಣದ ಮೋಹಕ್ಕೆ ಸಿಲುಕಿ ತಾಯಿ ಮಾಡಿದ ಕೆಲಸದಿಂದ ಮಗಳ ಜೀವನ ಹಾಳಾಗುವ ಹಂತ ತಲುಪಿದೆ. ಆದರೆ ಈ ಬಗ್ಗೆ ಏಜೆಗೆ ಬಹಳ ಬೇಸರವಾಗಿದೆ. ಒಂದು ವೇಳೆ ಅಮ್ಮನಿಗೆ ಈ ವಿಚಾರ ತಿಳಿದರೆ ಆಕೆಗೆ ಆಗುವ ಆಘಾತದ ಬಗ್ಗೆ ಏಜೆ ನೆನಪಿಸಿಕೊಂಡು ಭಯಪಡುತ್ತಿದ್ದಾನೆ. ಇತ್ತ ಲಾಯರ್ ಕೌಸಲ್ಯಗೆ ಕರೆ ಮಾಡುತ್ತಾರೆ. ಕಾಲ್ ರಿಂಗ್ ಆಗಬೇಕಾದರೆ ರೇವತಿ ಅಮ್ಮ ಅಮ್ಮ ಎಂದು ಎಷ್ಟೇ ಕರೆದರೂ ಕೌಸಲ್ಯ ಮಾತ್ರ ಬರಲೇ ಇಲ್ಲ.

ಲಾಯರ್ ಮಾತು ಕೇಳಿ ಶಾಕ್

ಲಾಯರ್ ಮಾತು ಕೇಳಿ ಶಾಕ್

ಆದ ಕಾರಣ ರೇವತಿಯೇ ಕಾಲ್ ರಿಸಿವ್ ಮಾಡುತ್ತಾಳೆ. ಈ ಕಡೆಯಿಂದ ಹಲೋ ಅಂದ ಕೂಡಲೇ ಆ ಕಡೆಯಿಂದ ಡೈವರ್ಸ್ ನೋಟಿಸ್ ಈಗಾಗಲೇ ಎಜೆ ಮನೆಗೆ ಕಳುಹಿಸಿಕೊಡಲಾಗಿದೆ. ಎಂದೆಲ್ಲ ಹೇಳುತ್ತಿದ್ದಾನೆ ಲಾಯರ್. ಇದನ್ನು ಕೇಳಿದ ರೇವತಿ ಗರಬಡಿದವಳಂತೆ ನಿಂತು ಬಿಡುತ್ತಾಳೆ. ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗದೇ ಇರಬೇಕಾದರೆ ಕೌಸಲ್ಯ ಬಂದು ಫೋನ್ ಕಸಿದುಕೊಂಡು ಹೌದಾ ಸರ್ ಎಂದೆಲ್ಲ ಹೇಳಿ ಕಾಲ್ ಕಟ್ ಮಾಡುತ್ತಾಳೆ. ಅಮ್ಮನ ವರ್ತನೆಯಿಂದ ಚುಕ್ಕಿಗೆ ಇದೀಗ ಅನುಮಾನ ಶುರುವಾಗಿದೆ.

ಮೆಡಿಕಲ್ ರಿಪೋರ್ಟ್ ಹುಡುಕಾಟದಲ್ಲಿ ಅಜ್ಜಿ

ಮೆಡಿಕಲ್ ರಿಪೋರ್ಟ್ ಹುಡುಕಾಟದಲ್ಲಿ ಅಜ್ಜಿ

ಇತ್ತ ಅಜ್ಜಿ ಹೆಲ್ತ್ ರಿಪೋರ್ಟ್‌ನ್ನು ಹುಡುಕುತ್ತಿದ್ದಾರೆ. ಆದರೆ ಇದು ಸಿಕ್ಕಿಲ್ಲ. ಆದರೆ ಬಳಿಕ ನೆನಪಿಸಿಕೊಳ್ಳುತ್ತಾರೆ ನಾನು ಆವತ್ತು ಹೆಲ್ತ್ ಚೆಕಪ್ ಮಾಡಿಸಿದಂದು ರಾಮ್ ಕೂಡ ಜೊತೆ ಇದ್ದ ಅಲ್ವಾ ಅವನ ಬಳಿಯೇ ಕೇಳೋಣ ಎಂದು ಅವನಿಗೆ ಕಾಲ್ ಮಾಡುತ್ತಾರೆ. ಏಜೆ ಬಳಿ ಅಜ್ಜಿ ಕೇಳುತ್ತಾರೆ ನನ್ನ ಮೆಡಿಕಲ್ ರಿಪೋರ್ಟ್ ಎಲ್ಲ ಇಟ್ಟೀದ್ದೀನಿಂತ ಗೊತ್ತಿಲ್ಲ, ನಿಗೇನಾದರೂ ಗೊತ್ತಾ ಎಂದು ಕೇಳುತ್ತಾರೆ ಆಗ ಏಜೆ ರಿಪೋರ್ಟ್ ಯಾಕಮ್ಮ ನಿನಗೆ, ಏನಾಯ್ತು ಹುಷಾರಾಗಿದ್ದಿಯ ಎಂದು ಕೇಳುತ್ತಾರೆ. ಆಗ ಅಜ್ಜಿ ನಾನು ಹುಷಾರಿದ್ದೀನಿ ಡಾಕ್ಟರ್ ಕೇಳಿದ್ರು ಅದಕ್ಕೆ ಅವರಿಗೆ ಕಳುಹಿಸಬೇಕಿತ್ತು ಎನ್ನುತ್ತಾರೆ ಅಜ್ಜಿ.

ಏಜೆ ರೂಮಿನಲ್ಲಿ ರಿಪೋರ್ಟ್ ಹುಡುಕುತ್ತಿರುವ ಅಜ್ಜಿ

ಏಜೆ ರೂಮಿನಲ್ಲಿ ರಿಪೋರ್ಟ್ ಹುಡುಕುತ್ತಿರುವ ಅಜ್ಜಿ

ನನ್ನ ಕಬೋರ್ಡ್‌ನಲ್ಲಿ ರಿಪೋರ್ಟ್ ಇದೆ ಎಂದು ಹೇಳಿ ಕಾಲ್ ಕಟ್ ಮಾಡುತ್ತಾನೆ ಏಜೆ. ಆ ಬಳಿಕ ಅಜ್ಜಿ ಏಜೆ ರೂಮಿಗೆ ಹೋಗಿ ರಿಪೋರ್ಟ್ ಹುಡುಕಾಟದಲ್ಲಿ ನಿರತರಾಗುತ್ತಾರೆ ಎಷ್ಟೆ ಹುಡುಕಿದರು ರಿಪೋರ್ಟ್ ಮಾತ್ರ ಕೈಗೆ ಸಿಗುವುದಿಲ್ಲ. ಲೀಲಾ ಮಾತ್ರ ಕುಣಿದು ಕುಪ್ಪಳಿಸುತ್ತಿರುತ್ತಾಳೆ. ಏಜೆ ನಾನು ಕೊಟ್ಟ ಗ್ರೀಟಿಂಗ್ ಕಾರ್ಡ್‌ಗೆ ರಿಪ್ಲೈ ಮಾಡಲು ಇನ್ನೆರಡು ದಿನ ಇದೆ ಎಂದು ಖುಷಿ ಪಡುತ್ತಿರುತ್ತಾಳೆ.

ಡೈವರ್ಸ್ ನೋಟೀಸ್ ಲೀಲಾ ಖುಷಿನ ಕಿತ್ತುಕೊಳ್ಳುತ್ತಾ?

ಡೈವರ್ಸ್ ನೋಟೀಸ್ ಲೀಲಾ ಖುಷಿನ ಕಿತ್ತುಕೊಳ್ಳುತ್ತಾ?

ಈಗಲೇ ಇಷ್ಟು ಖುಷಿಯಾಗುತ್ತಿದೆ ಇನ್ನೂ ಅವರು ರಿಪ್ಲೈ ಮಾಡಿದರೆ ಇನ್ನೆಷ್ಟು ಖುಷಿಯಾಗಬೇಡ ಎಂದೆಲ್ಲ ಹೇಳುತ್ತಾ ಆ ಕಡೆಯಿಂದ ಈ ಕಡೆ ತಿರುಗುತ್ತಿರುತ್ತಾಳೆ. ಆಗ ಏಜೆ, ಲೀಲಾಗೆ ಕಾಲ್ ಮಾಡುತ್ತಾರೆ. ಬಳಿಕ ಹೇಳುತ್ತಾರೆ ಲೀಲಾ ನೀನೇನು ಮಾಡುತ್ತಿ ನನಗೊತ್ತಿಲ್ಲ ಅಮ್ಮನಿಗೆ ನೀನು ಕೊಟ್ಟ ಕವರ್ ಸಿಗದ ಹಾಗೆ ನೋಡಿಕೊ ಎಂದು ಹೇಳಿ ಕಾಲ್ ಕಟ್ ಮಾಡುತ್ತಾರೆ. ಲೀಲಾ ರೂಮಿನ ಒಳಗೆ ಓಡಿಕೊಂಡು ಹೋಗುತ್ತಾಳೆ, ಆ ವೇಳೆ ಆ ಕಬೋರ್ಡ್ ಬಳಿಯೇ ಅಜ್ಜಿ ನಿಂತಿರುವುದನ್ನು ಕಂಡು ಲೀಲಾ ಶಾಕ್ ಆಗುತ್ತಾಳೆ ಮುಂದೇನಾಗುತ್ತದೇ ಎಂಬುವುದನ್ನ ಕಾದು ನೋಡಬೇಕಿದೆ.

More from Filmibeat

English summary
Zee Kannada serial Hitler Kalyana written update on 16th June. Many twists are in Hitler Kalyana serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X