ಹಿಟ್ಲರ್ ಕಲ್ಯಾಣ: ಏಜೆ ಪಾಲಿನ ವಿಲನ್ ಆಗುತ್ತಾನಾ ಕೃಷ್ಣ?

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿ ಚೆನ್ನಾಗಿ ಮೂಡಿ ಬರುತ್ತಿದೆ. ಜನರು ಲೀಲಾಳನ್ನು ಕೊಂಡಾಡುತ್ತಿದ್ದಾರೆ. ಇತ್ತೀಚೆಗೆ ಲೀಲಾಗೆ ಏಜೆ ಮೇಲೆ ಮನಸಾಗಿದೆ, ಸರ್‌ಪ್ರೈಸ್ ಲೆಟರ್ ಕೊಟ್ಟರು ಎಜೆ ಅದಕ್ಕೆ ಪ್ರತಿಕ್ರಿಯೆ ನೀಡುತ್ತಾರೋ ಇಲ್ಲವೋ ಎಂಬುವುದನ್ನು ಲೀಲಾ ಯೋಚಿಸುತ್ತಿದ್ದಾಳೆ. ಇತ್ತ ಏಜೆ ಮಾತ್ರ ಬಹಳ ಆತಂಕದಲ್ಲಿದ್ದಾನೆ. ಲೀಲಾ ಕೊಟ್ಟಿರುವ ವಿಚ್ಛೇಧನದ ಪತ್ರ ಅಮ್ಮನಿಗೆ ಸಿಕ್ಕಿಬಿಟ್ಟಿದೆಯಾ ಎಂಬ ಆತಂಕ ಏಜೆಗೆ.

ವಿಚ್ಚೇಧನ ಪತ್ರ ಇರುವ ಡ್ರವರ್ ಓಪನ್ ಮಾಡಬೇಕಾದರೆ ಅಲ್ಲಿ ಲೀಲಾ ಬಂದು ಅಜ್ಜಿ ಎಂದು ಕರೆಯುತ್ತಾಳೆ ಆ ವೇಳೆ ಅವರು ಹಿಂದೆ ತಿರುಗಿ ನೋಡುತ್ತಾರೆ ಅಲ್ಲಿ ಲೀಲಾ ನಿಂತಿರುತ್ತಾಳೆ. ಲೀಲಾಳನ್ನು ನೋಡಿದ ಅಜ್ಜಿ ಹೆಲ್ತ್ ಕಾರ್ಡ್ ಇಲ್ಲಿದೆ ಎಂದು ರಾಮ್ ಹೇಳಿದ ಅದಕ್ಕಾಗಿ ಹುಡುಕಲು ಬಂದೆ ಎನ್ನುತ್ತಾರೆ. ಅದಕ್ಕೆ ಲೀಲಾ ಅಷ್ಟೇ ಅಲ್ವಾ ಸರಿ ನಾನೇ ಹುಡುಕಿಕೊಡುತ್ತೇನೆ ಎಂದು ಹೇಳಿ ಲೀಲಾ ಹುಡುಕಲು ಅನುವಾಗುತ್ತಾಳೆ. ಹೆಲ್ತ್ ರಿಪೋರ್ಟ್ ಲೀಲಾ ಕೈಗೆ ಸಿಕ್ಕಿತು. ಅದನ್ನು ಲೀಲಾ ಅಜ್ಜಿ ಬಳಿ ಲೀಲಾ ನೀಡುತ್ತಾಳೆ.

ಅಲ್ಲಿಗೆ ಬಂದ ಏಜೆ ಅಮ್ಮನ ಬಳಿ ಕುಳಿತುಕೊಳ್ಳುತ್ತಾನೆ. ಲೀಲಾಳು ಪಕ್ಕದಲ್ಲಿ ಇರುತ್ತಾಳೆ. ಆಗ ಅಜ್ಜಿ ಹೇಳುತ್ತಾರೆ ನೀವಿಬ್ಬರೂ ಹೀಗೆಯೇ ಖುಷಿ ಖುಷಿಯಾಗಿ ಒಗ್ಗಾಟಗಿದ್ದರೇ ನನಗೆ ಇನ್ನೇನು ಚಿಂತೆ ಇಲ್ಲ. ನಾನು ನೆಮ್ಮದಿಯಿಂದ ಇರುತ್ತೇನೆ, ನೀವಿಬ್ಬರು ಸದಾ ಒಗ್ಗಟ್ಟಾಗಿರಬೇಕು ಎಂಬುವುದು ನನ್ನ ಆಶಯ ಎಂದು ಏಜೆ ಕೈ ಮೇಲೆ ಲೀಲಾಳ ಕೈ ಇಟ್ಟು ಅಜ್ಜಿ ಹೇಳುತ್ತಿರುತ್ತಾರೆ, ಇತ್ತ ಲೀಲಾಳ ತಾಯಿ ದೊಡ್ಡ ದೊಡ್ಡ ಕನಸುಗಳನ್ನು ಕಾಣಲು ಶುರುಮಾಡಿದ್ದಾಳೆ.

ಸೊಸೆಯರ ಆಸೆ-ದುರಾಸೆ

ಸೊಸೆಯರ ಆಸೆ-ದುರಾಸೆ

ತನ್ನ ಜೀವನದಲ್ಲಿ ಏನೇನೆಲ್ಲ ಕಳೆದುಕೊಂಡಿದ್ದೇನೋ ಅದನ್ನೆಲ್ಲ ಪಡೆದುಕೊಳ್ಳಬೇಕು ಎಂಬ ಆಶಯ, ಹಣದ ಮೋಹ ಕೂಡ ದುಪ್ಪಟ್ಟು. ರೇವತಿ ಊಟಕ್ಕೆ ಕುಳಿತಿರಬೇಕಾದರೆ ಕೌಸಲ್ಯ ಹೇಳುತ್ತಾಳೆ, ನಾವು ಕುಳಿತುಕೊಳ್ಳುವ ಟೇಬಲ್ ಹಾಗೆ ಗ್ಲಾಸ್ ಇದೆಲ್ಲವೂ ಬದಲಾಗಬೇಕು. ಬೆಳ್ಳಿಯ ಲೋಟದಲ್ಲಿ ನೀರು ಕುಡಿಯಬೇಕು ಎಂದೆಲ್ಲ ಕನಸುಕಾಣುತ್ತಿರುತ್ತಾಳೆ ಅದಕ್ಕೆ ರೇವತಿ ಇದ್ದಿದರಲ್ಲಿಯೇ ಸುಖವಾಗಿದ್ದೀವಿ ಇನ್ನೂ ಅದೆಲ್ಲ ಬೇಕಾ ಸುಮ್ಮನೆ ಆಸೆ ಪಡಬೇಡ ಎಂದು ಹೇಳುತ್ತಾಳೆ, ಅದಕ್ಕೆ ಕೌಸಲ್ಯ ನೀನು ಸುಮ್ಮನಿರೇ ಎಂದು ಬಾಯಿಮುಚ್ಚಿಸುತ್ತಾಳೆ.

ಗರಂ ಆದ ತಾಯಿ ಕೌಸಲ್ಯ

ಗರಂ ಆದ ತಾಯಿ ಕೌಸಲ್ಯ

ನಿನಗೆ ಅಪ್ಪ ಬ್ಯಾಂಕ್‌ನಲ್ಲಿ ಗಂಡನನ್ನು ಹುಡುಕುತ್ತಿದ್ದಾರೆ, ನನ್ನ ಮಾತು ಕೇಳು ನೀನು ಅವರನ್ನೆಲ್ಲ ಮದುವೆಯಾಗಬೇಡ ನಾನು ಹೇಳಿದ ಹುಡುಗನನ್ನು ಮದುವೆ ಆಗು ಆಗ ನೀನು ಖುಷಿಯಾಗಿ ಇರುತ್ತೀಯಾ ಎಂದೆಲ್ಲ ಹೇಳಿದಾಗ ರೇವತಿ ಹೇಳುತ್ತಾಳೆ ನನಗೆ ಇಷ್ಟು ಬೇಗ ಮದುವೆ ಬೇಡವೆಂದು ಅದಕ್ಕೆ ಕೌಸಲ್ಯ ಇನ್ನಷ್ಟು ಗರಂ ಆಗುತ್ತಾಳೆ.

ಲೀಲಾ ಪ್ರೆಂಡ್ ಕೃಷ್ಣನ ಮೀಟ್ ಮಾಡುತ್ತಾನಾ ಏಜೆ?

ಲೀಲಾ ಪ್ರೆಂಡ್ ಕೃಷ್ಣನ ಮೀಟ್ ಮಾಡುತ್ತಾನಾ ಏಜೆ?

ಲೀಲಾಳ ಬಾಲ್ಯದ ಗೆಳೆಯ ಕೃಷ್ಣ ಕಾಲ್ ಮಾಡಿರುತ್ತಾನೆ ಆದರೆ ಮೊದಲಿಗೆ ಕರೆ ಬಂದಾಗ ಯಾರೆಂದು ತಿಳಿಯದೇ ಲೀಲಾ ಒದ್ದಾಡುತ್ತಾಳೆ, ಬಳಿಕ ವಾಪಸ್ ಕರೆ ಮಾಡಿ ಯಾರೆಂದು ವಿಚಾರಿಸುತ್ತಾಳೆ, ಹೇ ಬ್ರೂಸ್ಲಿ ಎಂದೆಲ್ಲ ಕರೆಯುತ್ತಾನೆ ಆದರೆ ಲೀಲಾಗೆ ಯಾರು ಹಾಗೆ ಕರಿಯೋದು ನನ್ನ ಎಂದು ಯೋಚಿಸುತ್ತಿರುವಾಗ ಹೇ ಕೃಷ್ಣ ನೀನಾ ಎಂದು ಕೇಳುತ್ತಾಳೆ ಇದಕ್ಕೆ ಹೌದು ನಾನೆ ಎಂದು ಹೇಳುತ್ತಾನೆ. ನಿನ್ನ ಮೀಟ್ ಆಗಲೇಬೇಕು ಎಂದು ಹೇಳುತ್ತಾನೆ ಅದಕ್ಕೆ ನಾನು ನಿನ್ನ ಮೀಟ್ ಆಗಲೇ ಬೇಕು ಎಂದು ಹೇಳುತ್ತಾಳೆ. ಮನೆಗೆ ಬಾ ಎಂದು ಕರೆಯುತ್ತಾಳೆ ಆಗ ಅವನು ನೀನು ನಿನ್ನ ಗಂಡ ಇಬ್ಬರು ನನ್ನ ಮನೆಗೆ ಬರಬೇಕು ಎಂದು ಹೇಳಿ ಕಾಲ್ ಕಟ್ ಮಾಡುತ್ತಾನೆ.

ಏಜೆ ಮನವೊಲಿಸಿದ ಲೀಲಾ

ಏಜೆ ಮನವೊಲಿಸಿದ ಲೀಲಾ

ಇತ್ತ ಲೀಲಾ ಹೇಗೆ ಏಜೆನಾ ಒಪ್ಪಿಸುವುದು ಎಂದು ಯೋಚಿಸುತ್ತಿರುತ್ತಾಳೆ. ಆಕೆ ಏಜೆ ಬಳಿ ಬರುತ್ತಾಳೆ, ಏಜೆ ನಾನು ನಾಳೆ ನಿಮ್ಮನ್ನ ಒಂದು ಜಾಗಕ್ಕೆ ಕರೆದುಕೊಂಡು ಹೋಗುತ್ತಿನಿ ನಾಳೆ ಒಂದು ದಿನ ನನಗೆ ನಿಮ್ಮ ಟೈಂ ಬೇಕು ಎಂದು ಕೇಳುತ್ತಾಳೆ ಅದಕ್ಕೆ ಏಜೆ ಆಯ್ತು ಎಂದು ಒಪ್ಪಿಕೊಳ್ಳುತ್ತಾನೆ. ಇನ್ನೂ ಮುಂದೆನಾಗುತ್ತದೆ ಎಂದು ಕಾದು ನೋಡಬೇಕಿದೆ.

More from Filmibeat

English summary
Zee kannada serial Hitler Kalyana Written Update on 17th June. Serial AJ is in deep trouble now.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X