Hitler Kalyana: ಲೀಲಾ ಆಟಕ್ಕೆ ಫುಲ್ ಸ್ಟಾಪ್ ಇಡಲು ಹೊರಟ ಅಂತರಾ, ಏಜೆ ಮಾತಿಗೆ ಲೀಲಾ ಶಾಕ್!
ಹಿಟ್ಲರ್ ಕಲ್ಯಾಣ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರಿಗೆ ಖುಷಿ ನೀಡಿದೆ. ಇದೀಗ ಹೇಗಾದರೂ ಮಾಡಿ ಅಂತರಾ ರೂಪದಲ್ಲಿ ಇರುವ ಪ್ರಾರ್ಥನಾ ಎಂಬುವುದು ಮನೆಯವರಿಗೆಲ್ಲ ಗೊತ್ತಾಗಬೇಕು ಎಂದು ಲೀಲಾ ಬಹಳ ಕಸರತ್ತು ಮಾಡುತ್ತಾ ಇರುತ್ತಾಳೆ. ಅದಕ್ಕೆ ಬೇಕಾದ ಎಲ್ಲ ಪ್ರಯತ್ನವನ್ನೂ ಮಾಡುತ್ತಿದ್ದಾಳೆ.
ಆದರೆ ಪ್ರಾರ್ಥನಾ ಮಾತ್ರ ಎಲ್ಲವನ್ನೂ ಬಹಳ ಜಾಗರೂಕತೆಯಿಂದ ನಿಭಾಯಿಸುತ್ತಿದ್ದಾಳೆ. ಲೀಲಾ ಮಾತ್ರ ಏಜೆಗೆ ಇನ್ನಷ್ಟು ಹತ್ತಿರ ಆಗಬೇಕು ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾಳೆ. ಗಂಡನನ್ನು ಯಾರಿಗೆ ಕೂಡ ಬಿಟ್ಟು ಕೊಡಬಾರದು ಏಜೆ ಎಂದೆಂದಿಗೂ ನನ್ನವರು ಎಂದು ಯೋಚನೆ ಮಾಡುತ್ತಾ ಇರುತ್ತಾರೆ.

ಇದೀಗ ಏಜೆ ಲೀಲಾ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಲೀಲಾ ಕೋರಿಕೆಗಳನ್ನು ಈಡೇರಿಸಿದ್ದಾರೆ. ಇಷ್ಟೆಲ್ಲ ಮಾಡಿದ ಏಜೆಗೆ ಯಾರಾದರೂ ದ್ರೋಹ ಬಗೆದರೆ ಲೀಲಾ ಮಾತ್ರ ಸುಮ್ಮನಿರುವುದಿಲ್ಲ. ಅದಕ್ಕಾಗಿ ಬೇಕು ಬೇಕಂತಲೇ ಲೀಲಾ ಮೊಬೈಲ್ ಕವರ್ ಪೋಟೋಗೆ ಏಜೆ ಹಾಗೂ ಲೀಲಾ ನಿಂತಿರುವ ಫೋಟೋವನ್ನು ಹಾಕುತ್ತಾಳೆ.
ಅಂತರಾ ಮಾತಿಗೆ ಶಾಕ್ ಆದ ಏಜೆ
ಲೀಲಾ ಮೊಬೈಲ್ ನೋಡಿ ನೋಡಿದ ಸರು ಶಾಕ್ ಆಗಿ ಅಂತರಾಗೆ ತೋರಿಸುತ್ತಾಳೆ. ಇದನ್ನು ನೋಡಿದ ಅಂತರಾ ಕೆಂಡಾಮಂಡಲ ಆಗುತ್ತಾಳೆ. ಜೋರಾಗಿ ಲೀಲಾ ಲೀಲಾ ಎಂದು ಕರೆಯುತ್ತಾ ಇರುತ್ತಾಳೆ . ಇನ್ನೂ ಲೀಲಾ ಮಾತ್ರ ಇದೆಲ್ಲ ಬೇಕಂತಲೇ ಮಾಡಿರುವುದು ಅಂತರಾ ಮನದಲ್ಲಿ ಏನೆಲ್ಲ ಇದೆ ಅದೆಲ್ಲ ಹೊರಗೆ ಬರಲಿ ಅನ್ನುವ ಕಾರಣಕ್ಕೆ ಇಷ್ಟೆಲ್ಲ ಮಾಡುತ್ತಾಳೆ.
ಕೋಪಗೊಂಡ ಅಂತರಾ ಮಾತಿಗೆ ತುಪ್ಪ ಸುರಿದ ಸರು
ಇನ್ನೂ ಲೀಲಾ ಅಜ್ಜಿಯನ್ನು ಕರೆದುಕೊಂಡು ಹಾಲ್‌ಗೆ ಹೋಗುತ್ತಾಳೆ. ಲೀಲಾ ಏನಕ್ಕ ಇಷ್ಟು ಕಿರುಚಾಡೂತ್ತಾ ಇದ್ದೀರಿ ಏನಾಯಿತು ಎಂದಾಗ ಲೀಲಾ ಮೊಬೈಲ್ ತೋರಿಸಿದ ಅಂತರಾ ಏನಿದು ಎಂದು ಜೋರಾಗಿ ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಲೀಲಾ ಏನು ಉತ್ತರ ನೀಡದೆ ಅಯ್ಯೋ ಇದು ನನ್ನ ಏಜೆ ಫೋಟೋ. ಈ ಮೊಬೈಲ್ ನಿಮ್ಮ ಕೈಗೆ ಸಿಗದ ಹಾಗೆ ಇಟ್ಟಿದ್ದೇ ಹೇಗೆ ಸಿಕ್ಕಿತು ಎಂದು ಹೇಳಿದಾಗ ಅಂತರ ಬಹಳ ಕೋಪ ಮಾಡಿಕೊಂಡಿದ್ದಾಳೆ.

ಅಂತರಾಗೆ ಸರು ಬೆಂಬಲ
ಸರು ಮಾತ್ರ ಲೀಲಾಗೆ ಈ ಬಾರಿ ಬುದ್ದಿ ಕಲಿಸಬೇಕು ಎಂದು ಹೇಳಿ ಏಜೆಯನ್ನ ಕರೆಯುವ ವೇಳೆ ಏಜೆ ಬರುವುದನ್ನು ಗಮನಿಸಿದ ಸರು ಸುಮ್ಮನೆ ಆಗುತ್ತಾಳೆ. ಆ ಬಳಿಕ ಸರುಗೆ ಏನಾಯಿತು ಎಂದು ಸರುಗೆ ಕೇಳಿದಾಗ, ನೀವು ಬಂದಿದ್ದು ಒಳ್ಳೆಯದಾಯಿತು ಏಜೆ, ನೋಡಿ ಲೀಲಾ ಮೊಬೈಲ್ ಎಂದು ಮೊಬೈಲ್ ಕೊಡುತ್ತಾಳೆ. ಅದರಲ್ಲಿ ತಮ್ಮ ಫೋಟೋ ನೋಡಿದ ಏಜೆ, ಲೀಲಾಳನ್ನು ಪ್ರಶ್ನೆ ಮಾಡುತ್ತಾ ಇರುತ್ತಾನೆ. ಏನು ಲೀಲಾ ಇದೆಲ್ಲ ಎಂದು ಕೇಳಿದಾಗ ಲೀಲಾ ಭಯದಲ್ಲಿ ಇರುವ ಹಾಗೆ ನಾಟಕ ಮಾಡುತ್ತ ಇರುತ್ತಾಳೆ.. ಇನ್ನೂ ಅಂತರಾ ರೂಪದಲ್ಲಿ ಇರುವ ಪ್ರಾರ್ಥನಾ ಮಾತ್ರ ಸಿಡುಕುತ್ತಾ ಇರುತ್ತಾಳೆ.


Click it and Unblock the Notifications











