ಜೀ ಕನ್ನಡ: 200 ಸಂಚಿಕೆ ಪೂರೈಸಿ..ಯಶಸ್ಸಿನಿಂದ ಮುನ್ನುಗ್ಗುತ್ತಿದೆ ಹಿಟ್ಲರ್ ಕಲ್ಯಾಣ..!

By ಎಸ್ ಸುಮಂತ್

ವಾರದ ಮನರಂಜನೆಯಲ್ಲಿ 'ಹಿಟ್ಲರ್ ಕಲ್ಯಾಣ' ಕೂಡ ಅಗ್ರಸ್ಥಾನವನ್ನೇ ಪಡೆದುಕೊಂಡಿದೆ. ಜನರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಕ್ಸಸ್ ಫುಲ್ ಆಗಿದೆ. ದಿನ ದಿನದಿಂದ ದಿನ ಒಂದೊಂದು ತಿರುವು ನೀಡುತ್ತಿದೆ. ನಮ್ಮ ಮನೆಯ ಸಮಸ್ಯೆಗಳೇನು ಎನ್ನುವಷ್ಟು ಕಥೆ ತೀರಾ ಹತ್ತಿರವಾಗಿದೆ. ನೋಡ ನೋಡುತ್ತಾ 200 ಸಂಚಿಕೆಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಇಡೀ ತಂಡ ಆಚರಿಸುತ್ತಿದೆ. ಅದೇ ಖುಷಿಯಲ್ಲಿ ಲೀಲಾ ಮತ್ತು ಎಜೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಕೂಡ ಬಂದು, ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಈಗಾಗಲೇ ಯಶಸ್ಸಿನ ಹಾದಿಯಲ್ಲಿರುವ 'ಹಿಟ್ಲರ್ ಕಲ್ಯಾಣ' ಜನರ ಬಳಿಗೂ ಹೋಗಿತ್ತು. 'ಹಿಟ್ಲರ್ ಕಲ್ಯಾಣ' ಜಾತ್ರೆಯನ್ನು ಮಾಡಿ, ಜನರಿಗಿರುವ ಅನುಮಾನಗಳನ್ನು ಪರಿಹರಿಸಿತ್ತು. ಅವರೊಡನೆ ಬೆರೆತು ಒಂದಷ್ಟು ಸಂತಸ ಹಂಚಿಕೊಂಡಿತ್ತು. ಸೆಲೆಬ್ರೆಟಿ ಹಾಗೂ ಅಭಿಮಾನಿಗಳು ಇಬ್ಬರ ಬಾಂಧವ್ಯವನ್ನು ತೀರಾ ಹತ್ತಿರಕ್ಕೆ ತೆಗೆದುಕೊಂಡು ಹೋಗುವ ಕೆಲಸವನ್ನು 'ಹಿಟ್ಲರ್ ಕಲ್ಯಾಣ' ಟೀಂ ಮಾಡಿತ್ತು.

ದಿಲೀಪ್ ರಾಜ್ ಯುವಕರಿಗೂ ಸ್ಪೂರ್ತಿಯಾದ ಕಥೆ

ದಿಲೀಪ್ ರಾಜ್ ಯುವಕರಿಗೂ ಸ್ಪೂರ್ತಿಯಾದ ಕಥೆ

ದಿಲೀಪ್ ರಾಜ್ 'ಹಿಟ್ಲರ್ ಕಲ್ಯಾಣ'ಕ್ಕೂ ಮುನ್ನ ಹಲವು ಸಿನಿಮಾಗಳಲ್ಲಿ ನಡಿಸಿದ್ದಾರೆ. ನಟನಾಗಿ, ವಿಲನ್ ಆಗಿ, ಸಹ ನಟನಾಗಿ ಹೀಗೆ ಅನೇಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ 'ಹಿಟ್ಲರ್ ಕಲ್ಯಾಣ'ದಲ್ಲಿ ಅದ್ಯಾವಾಗ ಎಜೆ ಆಗಿ ಎಂಟ್ರಿ ಕೊಟ್ಟರೋ ಅಂದಿನಿಂದ ಅದೆಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಫಿಟ್ನೆಸ್, ಬ್ಯೂಟಿ, ಲೈಫ್ ಸ್ಟೈಲ್, ಬ್ಯುಸಿನೆಸ್ ಹೀಗೆ ಎಲ್ಲಾ ರೀತಿಯಲ್ಲೂ ಮಾದರಿಯಾಗಿದ್ದಾರೆ. ಎಜೆ ಅಂದ್ರೆ ಪರ್ಫೆಕ್ಟ್.. ಪರ್ಫೆಕ್ಟ್ ಅಂದ್ರೆ ಎಜೆ. ಲೈಫ್‌ನಲ್ಲಿ ಎಜೆ ರೀತಿ ಲೈಫ್‌ ಲೀಡ್ ಮಾಡಬೇಕು ಎಂಬ ಕನಸು ಸಾಕಷ್ಟು ಜನರಲ್ಲಿ ಹುಟ್ಟಿಕೊಂಡಿದೆ. ಅಷ್ಟು ಮಾದರಿಯಾಗಿ ಕಾಣುತ್ತಿದ್ದಾರೆ.

ಲೀಲಾಗೆ ಮೊದಲ ಧಾರಾವಾಹಿ

ಲೀಲಾಗೆ ಮೊದಲ ಧಾರಾವಾಹಿ

ಲೀಲಾ ಮಾಡುತ್ತಿರುವ ಪಾತ್ರ ಅಂತಿದ್ದಲ್ಲ. ಮೂವರು ಸೊಸೆಯಂದಿರಿಗೆ ಅತ್ತೆಯಾಗಿ, ಇಡೀ ಮನೆಯ ಜವಾಬ್ದಾರಿ ಹೊರುವಂತಹ ಸ್ಥಾನ. ಮೊದ ಮೊದಲಿಗೆ ಎಜೆ ಎಂದರೆ ಅಂಕಲ್ ಎನ್ನುತ್ತಿದ್ದ ಲೀಲಾ ಇದೀಗ ಪತಿಯಾಗಿ ಪಡೆದಿದ್ದಾಳೆ. ಕುಟುಂಬವೇ ಎಲ್ಲಾ ಎನ್ನುತ್ತಿದ್ದವಳು ದೇವ್ ಮಾಡಿದ ಕಿತಾಪತಿಗೆ ಸಿಲುಕಿ ಎಜೆಯನ್ನು ಮದುವೆಯಾದಳು. ತಂಗಿಗಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದ ಲೀಲಾ ಇದೀಗ ತಂಗಿಗಾಗಿಯೇ ತನ್ನ ಜೀವನ ತ್ಯಾಗ ಮಾಡಿದ್ದಾಳೆ. ಆದರೆ ಎಲ್ಲವನ್ನೂ ಮರೆತು ಎಜೆ ಕುಟುಂಬಕ್ಕೆ ತಕ್ಕ ಸೊಸೆಯಾಗಿ, ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾಳೆ. ಇದು ಅವಳ ಮೊದಲ ಧಾರಾವಾಹಿ ಎನ್ನಿಸುವುದೇ ಇಲ್ಲ. ಅಷ್ಟು ಲೀಲಾಜಾಲಾವಾಗಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದಾಳೆ. ಅದಕ್ಕೆಂದೇ ಹಲವು ಫ್ಯಾನ್ ಪೇಜ್‌ಗಳು ಕ್ರಿಯೇಟ್ ಆಗಿವೆ.

ಲೀಲಾ ಫೂಚರ್ ಹೀರೊಯಿನ್ ಕನಸು ಏನಾಗುತ್ತೆ

ಲೀಲಾ ಫೂಚರ್ ಹೀರೊಯಿನ್ ಕನಸು ಏನಾಗುತ್ತೆ

ಲೀಲಾಗಿರುವ ಅಡ್ಡ ಹೆಸರು ಎಡವಟ್ಟು. ಲೀಲಾಗೆ ಫ್ಯೂಚರ್ ಹೀರೊಯಿನ್ ಆಗಬೇಕೆಂಬುದೇ ದೊಡ್ಡ ಕನಸಾಗಿತ್ತು. ಮದುವೆಯಾಗುವುದಕ್ಕೂ ಮುನ್ನ ಅದಕ್ಕೆಂದೇ ಸಿಕ್ಕಾಪಟ್ಟೆ ಪ್ರಯತ್ನಪಟ್ಟರು ಲೀಲಾ ಕೈನಲ್ಲಿ ಅದು ಸಾಧ್ಯವೇ ಆಗಲಿಲ್ಲ. ಅದೃಷ್ಟ ಕೈಹಿಡಿಯಲಿಲ್ಲ. ಆದರೆ ಅನಿವಾರ್ಯತೆ ಸಿಲುಕಿ ಮದುವೆಯೂ ಆಗಿಬಿಡ್ತು. ಲೀಲಾಳಿಗೆ ದೊಡ್ಡ ನಟಿಯಾಗಬೇಕೆಂಬ ಕನಸು ಹಾಗೇ ಉಳಿದು ಬಿಡ್ತು. ಆದರೆ ಇತ್ತೀಚೆಗೆ ಎಜೆ ಮನೆಯನ್ನೇ ಶೂಟಿಂಗ್‌ಗೆ ಬಾಡಿಗೆ ಕೊಟ್ಟು, ತಾನೂ ನಟಿಯಾಗಬೇಕೆಂದು ಎಲ್ಲಾ ತಯಾರಿ ನಡೆಸಿದ್ದರು. ಆದರೆ ಆಗಲೂ ಅದೃಷ್ಟ ಕೈಕೊಡ್ತು. ಪವಿತ್ರ ಜೀವಕ್ಕೆ ಕುತ್ತು ಬಂದು ಮತ್ತೆ ನಟಿಯಾಗುವ ಆಸೆ ಕಳಚಿ ಬಿದ್ದಿದೆ. ಎಜೆ ಬೇರೆ ದೊಡ್ಡ ಬಿಸಿನೆಸ್ ಮ್ಯಾನ್. ಆದರೆ ಈಗ ಯಾವ ರೀತಿಯಲ್ಲಿ ನಟನೆ ಕಡೆಗೆ ಹೋಗುತ್ತಾಳೆ ಎಂಬುದೇ ಅನುಮಾನ.

ಅಂತರ ನೋಡಲು ಕಾಯುತ್ತಿದ್ದ ಫ್ಯಾನ್ಸ್ ಖುಷ್

ಅಂತರ ನೋಡಲು ಕಾಯುತ್ತಿದ್ದ ಫ್ಯಾನ್ಸ್ ಖುಷ್

ಈ ಧಾರಾವಾಹಿಯಲ್ಲಿ ತುಂಬಾ ಮುಖ್ಯವಾದ ಪಾತ್ರವಹಿಸಿರುವುದು ಅಂತರ. ಇಷ್ಟು ದಿನ ಬರೀ ಫೋಟೊದಲ್ಲಿ ಕಾಣಿಸುತ್ತಿದ್ದರು. ಯಾವ್ಯಾಗ, ಹೇಗೆ ಎಂಟ್ರಿ ಕೊಡುತ್ತಾರೆ ಅನ್ನೋ ಕ್ಯೂರಿಯಾಸಿಟಿ ಇತ್ತು. ಆದರೆ ನಿರೀಕ್ಷೆಗೂ ಮೀರಿದ ಎಂಟ್ರಿ ಅಂತರಾದ್ದಾಗಿತ್ತು. ಮಾತಿಗೆ ಮುಂಚೆ ಸಿಡಿ ಸಿಡಿ ಎನ್ನುತ್ತಿದ್ದ ಎಜೆ ಮುಖದಲ್ಲಿ ನಗು ಕಂಡಿದ್ದು ಅಂತರಾ ಬಂದ ಮೇಲೆ. ಯಾವಾಗಲೂ ಪರ್ಫೆಕ್ಟ್ ಎನ್ನುತ್ತಿದ್ದ ಎಜೆ ಕೂಡ ರೋಮಿಯೊ ಎನಿಸಿಕೊಂಡಿದ್ದು, ಅಂತರಾ ನೆನಪಲ್ಲಿಯೇ. ಆ ಎಪಿಸೋಡುಗಳೆಲ್ಲಾ ಖುಷಿ ನೀಡಿತ್ತು. ಈಗಲೂ ಆಗಾಗ ಅಂತರಾ ಬರುತ್ತಾಳೆ. ಬಂದು ಹೋಗುತ್ತಾಳೆ. ಅಂತರಾಳ ನೆನಪೇ ಎಜೆ ಲೀಲಾ ನಡುವಿನ ಪ್ರೀತಿಗೆ ಕಾರಣವಾಗಿದೆ.

More from Filmibeat

English summary
Zee Kannada Serial Hitler Kalyana Written Update on 200 Episode. Here is the details about Hitler kalyana success full journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X