ಹಿಟ್ಲರ್ ಕಲ್ಯಾಣ: ಲೀಲಾಗೆ ವಿಚ್ಛೇಧನ ನೀಡುತ್ತಾನಾ ಏಜೆ?

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿ ಎಲ್ಲರ ಮನೆ ಮಾತಾಗಿದೆ. ಏಜೆಗೆ ಇದೀಗ ಲೀಲಾಳ ಕಡೆಯಿಂದ ವಿಚ್ಚೇಧನದ ನೋಟಿಸ್ ಬಂದಿದೆ. ಆದರೆ ಈ ಬಗ್ಗೆ ಲೀಲಾಗೆ ಮಾಹಿತಿಯೇ ಇಲ್ಲ. ತಾನು ಬರೆದ ಸರ್‌ಪ್ರೈಸ್ ಪತ್ರ ಏಜೆ ಕೈಗೆ ಸೇರಿದೆ ಎಂದೇ ತಿಳಿಸಿದ್ದಾಳೆ ಲೀಲಾ. ಆದರೆ ಪತ್ರಕ್ಕೆ ಪ್ರತಿಕ್ರಿಯೆ ಬಾರದೇ ಇರುವುದರಿಂದ ತಳಮಳಗೊಂಡ ಲೀಲಾ ಏಜೆ ಉತ್ತರಕ್ಕಾಗಿ ಕಾಯುತ್ತಿರುತ್ತಾಳೆ. ಏಜೆ ಮಾತ್ರ ಬಹಳ ಬೇಸರಪಟ್ಟುಕೊಂಡಿದ್ದಾನೆ. ಇತ್ತ ತಾಯಿಯ ಆರೋಗ್ಯದ ದೃಷ್ಠಿಯಿಂದ ಏನು ಹೇಳಿಕೊಳ್ಳದ ಪರಿಸ್ಥಿತಿ, ಲೀಲಾಳ ಜೊತೆಯೂ ಈ ಬಗ್ಗೆ ಮಾತನಾಡದೇ ಏಜೆ ಈ ಬಾರಿ ವಿಚ್ಚೇಧನಕ್ಕೆ ಸಹಿ ಹಾಕುತ್ತಾರಾ ಎಂಬ ಪ್ರಶ್ನೆ ಧಾರವಾಹಿ ಪ್ರೇಮಿಗಳನ್ನು ಕಾಡುತ್ತಿದೆ.

ಲೀಲಾ ಮನೆಯಲ್ಲಿ ನಡೆದ ಎಲ್ಲಾ ಘಟನೆಗಳು ಏಜೆಗೆ ನೆನಪಾಗುತ್ತಿದೆ. ಕೃಷ್ಣ ಹಾಗೂ ಲೀಲಾಳ ಬಾಲ್ಯದ ಗೆಳೆತನವನ್ನು ಏಜೆ ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ. ಕೌಸಲ್ಯ ಕೂಡ ಏಜೆ ಮನಸ್ಸಿಗೆ ಏನೆನೆಲ್ಲಾ ತುಂಬಿ ಮನಸ್ಸನ್ನು ಹಾಳುಗೆಡವಿದ್ದಾಳೆ. ಹಲವು ವರುಷಗಳಿಂದ ಸಿಗದೇ ಇದ್ದ ಬಾಲ್ಯದ ಗೆಳೆಯ ಒಮ್ಮೆಲೆ ಸಿಕ್ಕರೇ ಲೀಲಾಳ ಖುಷಿ ಹೇಗಿರಬಹುದು ಅಲ್ವಾ? ಎಂದೆಲ್ಲಾ ಹೇಳಿದ್ದಾಳೆ. ಅದೇ ರೀತಿ ತನ್ನ ಬಾಲ್ಯದ ಗೆಳೆಯನನ್ನು ಕಂಡು ಲೀಲಾ ಅಪ್ಪಿ ಹಿಡಿದುಕೊಳ್ಳುತ್ತಾಳೆ. ಇದನ್ನು ಕಂಡ ಏಜೆಗೆ ಸ್ವಲ್ಪ ಅನುಮಾನ ಮೂಡುತ್ತದೆ.

ಕೃಷ್ಣ ಹಾಗೂ ಲೀಲಾ ಮಹಡಿ ಮೇಲೆ ಮಾತನಾಡುತ್ತಿರುವುದನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ ಏಜೆ. ಕೃಷ್ಣ ಆತನ ಲವರ್‌ಗೆ ಪ್ರಪೋಸ್ ಮಾಡುವುದನ್ನು ಹೇಳುತ್ತಿದ್ದ ಆ ವೇಳೆ ನನ್ನ ಬಳಿ ಅದನ್ನು ಆಕ್ಟ್ ಮಾಡಿ ತೋರಿಸು ಎಂದು ಹೇಳಿದಾಗ ಆ ಸಿಚುವೇಶನ್‌ನಲ್ಲಿ ಆತ ಪ್ರಪೋಸ್ ಮಾಡಿರುವುದನ್ನು ಆಕ್ಟ್ ಮಾಡಿ ತೋರಿಸುತ್ತಿದ್ದ ಅದನ್ನು ನೋಡಿದ ಏಜೆ ಶಾಕ್ ಆಗಿ ಅಲ್ಲಿಂದ ಏಜೆ ಹೊರಡುತ್ತಾರೆ. ಲೀಲಾ ತನ್ನ ತಂಗಿ ರೇವತಿ ಬಳಿ ಏಜೆಯನ್ನು ಗುಣಗಾನ ಮಾಡುತ್ತಿರುತ್ತಾಳೆ. ಅಂಥಹ ಒಬ್ಬ ಒಳ್ಳೆಯ ವ್ಯಕ್ತಿಯೊಂದಿಗೆ ನಾನಿದ್ದೇನೆ ಎಂದು ಹೆಮ್ಮೆ ಎನ್ನುತ್ತಾಳೆ ಲೀಲಾ.

ಕಂಗಾಲದ ಲೀಲಾ

ಕಂಗಾಲದ ಲೀಲಾ

ಕೃಷ್ಣನ ಬಳಿ ಕೂಡ ಇದನ್ನೆ ಹೇಳಿದಳು, ಏಜೆಯನ್ನು ನಾನು ಮದುವೆ ಆಗಿದ್ದು ನನ್ನ ಭಾಗ್ಯ ಇಂಥಹ ಅರ್ಥಮಾಡಿಕೊಳ್ಳುವ ಗಂಡ ನನಗೆ ಸಿಕ್ಕಿರುವುದಕ್ಕೆ ನಾನು ಪುಣ್ಯ ಮಾಡಿದ್ದೆ ಎಂದು ಹೇಳುತ್ತಾಳೆ. ಬಳಿಕ ಲೀಲಾ ಮತ್ತು ಏಜೆ ಲೀಲಾ ಮನೆಯಿಂದ ಹೊರಡುತ್ತಾರೆ. ಏಜೆಯ ಬಳಿ ಬಂದ ಲೀಲಾ ಮನೆಗೆ ಬಂದದಕ್ಕಾಗಿ ಕೃತಘ್ನತೆ ಸಲ್ಲಿಸುತ್ತಾಳೆ ಬಳಿಕ ತಾನು ಕೊಟ್ಟ ಸರ್‌ಪ್ರೈಸ್ ಲೆಟರ್ ಬಗ್ಗೆ ಏನೂ ಹೇಳದೇ ಇರುವುದರ ಬಗ್ಗೆ ಕೇಳುತ್ತಾಳೆ ಆದರೆ ಅದಕ್ಕೆ ಏಜೆ ಕೊಡುತ್ತೇನೆ ಎಂದು ಹೇಳುತ್ತಾನೆ.

ಲೀಲಾ ಕಿವಿಗಿಂಡಿದ ಅಜ್ಜಿ

ಲೀಲಾ ಕಿವಿಗಿಂಡಿದ ಅಜ್ಜಿ

ಇವತ್ತೇ ಹೇಳಬೇಕು ಎಂದು ಲೀಲಾ ಹಠ ಹಿಡಿಯುತ್ತಾಳೆ ಇದನ್ನು ಕಂಡ ಏಜೆಗೆ ಏನು ಮಾಡಬೇಕು ತಿಳಿಯುವುದಿಲ್ಲ ಆಗ ಅಲ್ಲಿಗೆ ಬಂದ ಅಜ್ಜಿ ಎಲ್ಲವನ್ನು ಕೇಳಿಸಿಕೊಳ್ಳುತ್ತಾಳೆ. ಏಜೆಗೆ ಕೊರಿಯರ್ ಮೂಲಕ ಏನು ಸರ್‌ಪ್ರೈಸ್ ಕೊಟ್ಟೆ ಲೀಲಾ ಎಂದು ಕೇಳುತ್ತಾಳೆ ಆಗ ಲೀಲಾ ಅಜ್ಜಿ ಬಳಿ ಹೇಳಲು ಮುಂದಾಗುತ್ತಾಳೆ ಇದನ್ನು ಕಂಡ ಏಜೆಗೆ ಬಹಳ ಆತಂಕವಾಗುತ್ತದೆ. ಬಳಿಕ ಲೀಲಾ ಇದನ್ನೆಲ್ಲ ನಿಮ್ಮ ಬಳಿ ಏಜೆ ಹೇಳಬೇಕು ಗಂಡ ಹೆಂಡತಿಯ ವಿಚಾರಕ್ಕೆ ಮೂರನೆಯವರು ಬರಬಾರದು ಎಂದು ಹೇಳಿದಾಗ ಲೀಲಾಳ ಕಿವಿಗಿಂಡುತ್ತಾರೆ ಅಜ್ಜಿ ಬಳಿಕ ಅಲ್ಲಿಂದ ಕರೆದುಕೊಂಡು ಹೋಗುತ್ತಾರೆ.

ಆತಂಕದಲ್ಲಿ ಏಜೆ

ಆತಂಕದಲ್ಲಿ ಏಜೆ

ಇದನ್ನು ಕಂಡ ಏಜೆ ಸ್ವಲ್ಪ ನಿಟ್ಟುಸಿರು ಬಿಡುತ್ತಾನೆ. ಬಳಿಕ ಏಜೆ ವಿಶ್ವರೂಪ್‌ಗೆ ಕರೆ ಮಾಡುತ್ತಾನೆ ಎಲ್ಲ ವಿಚಾರವನ್ನು ಹೇಳಿಕೊಳ್ಳುತ್ತಾನೆ. ವಿಶ್ವರೂಪ್ ಆತಂಕದಲ್ಲಿ ಏಜೆ ಬಳಿ ಓಡಿ ಬರುತ್ತಾನೆ ಇದನ್ನು ಕಂಡ ಏಜೆ ಬಾಗಿಲು ತಟ್ಟಿ ಬರಬೇಕು ಗೊತ್ತಿಲ್ವ ಎಂದು ಕೇಳಿದಾಗ ಇಲ್ಲಾ ಸರ್ ಲೀಲಾ ಮೇಡಮ್ ವಿಚ್ಚೇಧನ ಕೊಡಲು ಸಾಧ್ಯನೇ ಇಲ್ಲ. ನಾನು ಮಾತನಾಡುತ್ತೇನೆ ಅವರ ಬಳಿ ಎಂದು ಹೇಳಿದಾಗ ಏಜೆ ಹೇಳುತ್ತಾರೆ ಯಾರ ಬಳಿಯೂ ಮಾತನಾಡುವ ಅವಶ್ಯಕತೆ ಇಲ್ಲ ಎಂದು.

ವಿಶ್ವರೂಪ್‌ಗೆ ಬೇಸರ

ವಿಶ್ವರೂಪ್‌ಗೆ ಬೇಸರ

ವಿಚ್ಚೇಧನ ಕೊಡಬೇಕು ಎಂದು ಹೇಳಿದಾಗ ಬಹಳ ಬೇಸರವಾಗುತ್ತದೆ. ಲೀಲಾ ಬಳಿ ಬಂದು ವಿಶ್ವರೂಪ್ ಏನೆಲ್ಲಾ ಬಡಬಡಾಯಿಸಿದರು ಅದನ್ನು ಅರ್ಥಮಾಡಿಕೊಳ್ಳದ ಲೀಲಾ ಏನೇನೋ ಮಾತನಾಡುತ್ತಾಳೆ. ಬಳಿಕ ಅಲ್ಲಿಂದ ವಿಶ್ವರೂಪ್ ತೆರಳುತ್ತಾನೆ. ಇದನ್ನು ಕಂಡ ಲೀಲಾಗೆ ವಿಚಿತ್ರವಾಗುತ್ತದೆ. ಬಳಿಕ ಲೀಲಾ ಪಾತ್ರೆ ಎಲ್ಲಾ ಬೇಗ ತೊಳೆಯಬೇಕು ಏಜೆ ಬರುವಾಗ ಎಲ್ಲಾ ಕ್ಲೀನ್ ಆಗಿರಬೇಕು ಎಂದು ಹೇಳುತ್ತಾ ಪಾತ್ರೆ ತೊಳೆಯುತ್ತಾಳೆ ಮುಂದೇನಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

More from Filmibeat

English summary
Zee Kannada serial Hitler Kalyana Written Update on 21th June. Hitler kalyana is an Kannada language television serial. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X