ಲೀಲಾ ತಲೆಗೆ ಹುಳಬಿಡುತ್ತಿರುವ ಏಜೆ: ಮಹಾ ಪೂಜೆಗೆ ವಿಘ್ನವಾಗುತ್ತಾ?
ತಪ್ಪು ಮಾಡಿರದಿದ್ದರು ಲೀಲಾಳನ್ನು ತಪ್ಪಿತಸ್ಥಳನ್ನಾಗಿ ಮಾಡುವ ಎಲ್ಲ ಹುನ್ನಾರವನ್ನು ದುರ್ಗಾ ಈಗಾಗಲೇ ಮಾಡುತ್ತಲೇ ಬರುತ್ತಿದ್ದಾಳೆ. ಸಾಕಷ್ಟು ಕಷ್ಟಗಳನ್ನು ಅನುಭವಿಸಿದ ಲೀಲಾಗೆ ತನ್ನ ತಾಯಿಯಿಂದಲೇ ಇನ್ನೊಂದು ಸಂಕಷ್ಟ ಎದುರಾಗಿದೆ. ಇದೀಗ ಅಜ್ಜಿ ಲೀಲಾ- ಏಜೆ ಒಂದಾಗಿ ಇರಲಿ ಎಂದು ಬುಹು ದೊಡ್ಡ ಪೂಜೆಯನ್ನು ಇಟ್ಟುಕೊಂಡಿದ್ದಾರೆ.
ಏಜೆ ಮತ್ತು ಲೀಲಾ ಯಾವತ್ತು ಒಂದಾಗಿಯೇ ಇರಬೇಕು ಎಂದಿಗೂ ದೂರ ಆಗಬಾರದು ಎಂಬ ನಿಟ್ಟಿನಲ್ಲಿ ಅಜ್ಜಿ ಪೂಜೆಯನ್ನು ಮಾಡಿಸುತ್ತಿದ್ದಾರೆ. ಆದರೆ ಅಮ್ಮನ ಈ ನಿರ್ಧಾರಕ್ಕೆ ಬೇಸರಗೊಂಡರು ಏಜೆ ಸರಿಯಮ್ಮ ಎಂದು ಒಪ್ಪಿಗೆಯನ್ನು ಸೂಚಿಸುತ್ತಾನೆ.
ಇನ್ನು ನಡೆಯುವ ಪೂಜೆಗೆ ಏನಾದರೂ ವಿಘ್ನ ಮಾಡಲೇಬೇಕು ಎಂದು ಆಲೋಚಿಸಿ ದುರ್ಗಾ ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾಳೆ. ಇದಕ್ಕೆ ಲಕ್ಷ್ಮೀ, ಸರೂ ಐಡಿಯಾ ಕೊಡುತ್ತಿರುತ್ತಾರೆ ಆದರೆ ಆ ಯಾವ ಐಡಿಯಾಗಳು ದುರ್ಗಾಗೆ ಸಮಾಧಾನ ಕೊಡುತ್ತಿಲ್ಲ.

ಭರ್ಜರಿ ಪೂಜೆ ಮಾಡಿಸುತ್ತಿರುವ ಅಜ್ಜಿ
ಅಜ್ಜಿ, ಏಜೆ ಮತ್ತು ಲೀಲಾ ಬಳಿ ಬಂದು ಇವತ್ತು ಮಾಡುತ್ತಿರುವ ಪೂಜೆ ಸಾಮಾನ್ಯದಲ್ಲ, ನೀವು ಮನಸಲ್ಲಿ ಏನೇ ಅಂದುಕೊಂಡರು ಅದು ನೆರವೇರುತ್ತದೆ. ಅದಕ್ಕಾಗಿ ನೀವು ಬರೀ ಪೂಜೆಯಲ್ಲಿ ಕೂರುದು ಮಾತ್ರ ಅಲ್ಲ ನಿಮ್ಮ ಮನಸನ್ನು ಪೂಜೆಯಲ್ಲಿ ಇಟ್ಟಿರಬೇಕು, ನೀವು ಏನೇ ನೆನೆದುಕೊಂಡಿದ್ದರು ಅದು ನೆರವೇರುತ್ತದೆ. ಪೂಜೆ ಮಧ್ಯೆ ಯಾವುದು ತಪ್ಪು ಆಗಬಾರದು ಅಪಶಕುನಗಳು ಆಗಬಾರದು ಆಗ ಮಾತ್ರ ನಾನು ಅಂದುಕೊಂಡ ಹಾಗೆಯೇ ಈ ಮನೆಯಲ್ಲಿ ನೆಮ್ಮದಿ ಶಾಶ್ವತವಾಗಿ ಉಳಿಯುತ್ತದೆ ಎನ್ನುತ್ತಾರೆ.

ಅಮ್ಮನನ್ನು ನೋಯಿಸಲು ಇಷ್ಟಪಡದ ಏಜೆ
ಅಮ್ಮ ಆಗಬೇಕೆಂದಿರುವುದು ಆಗೆ ಆಗುತ್ತದೆ ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಏಜೆ ಹೇಳುತ್ತಾರೆ. ಮನುಷ್ಯ ನೂರು ಅಂದುಕೊಳ್ಳುತ್ತಾನೆ ಆದರೆ ಅದು ಯಾವುದು ಕೂಡ ನಡೆಯೋದಿಲ್ಲ, ಮೇಲೆ ಒಬ್ಬ ಮಾಯಾವಿ ಕುಳಿತಿರುತ್ತಾನೆ. ಅವನಿಗೆ ಗೊತ್ತಿರುತ್ತೆ ಯಾವುದು ಸರಿ ಯಾವುದು ತಪ್ಪು ಅಂತ. ಕಷ್ಟಾನೂ ಕೊಡುತ್ತಾನೆ ಹಾಗಂತ ಅದೇ ಶಾಸ್ವತವಲ್ಲ, ಹಾಗೆಯೇ ಸುಖವನ್ನೂ ಕೊಡುತ್ತಾನೆ. ಇಷ್ಟರ ಮಧ್ಯೆ ನಮಗೆ ಕೆಟ್ಟದನ್ನು ಬಯಸೋ ನೂರು ಜನ ಇದ್ದರು ಅವರಿಂದ ನಮಗೆ ಏನು ಆಗುವುದಿಲ್ಲ ಎಂದು ಅಜ್ಜಿ ಹೇಳುತ್ತಾರೆ.

ಪೂಜೆಗೆ ಖುಷಿಯಿಂದ ಭಾಗಿಯಾಗಲು ಲೀಲಾ ರೆಡಿ
ಅದಕ್ಕೆ ಲೀಲಾ, ಅಜ್ಜಿ ನೀವೇನು ತಲೆ ಕೆಡಿಸಿಕೊಳ್ಳಬೇಡಿ ಇವತ್ತಿನ ಪೂಜೆ ಸುಸೂತ್ರವಾಗಿ ಆಗುತ್ತದೆ. ನಾವೆಲ್ಲರೂ ಏನು ಅಂದುಕೊಂಡಿದ್ದೇವೋ ಅದು ಆಗೇ ಆಗುತ್ತದೆ. ಹಾಗೇಯೇ ಆಗಲಿ ಅಮ್ಮ ಎಂದು ಹೇಳಿ ಅಲ್ಲಿಂದ ಏಜೆ ತಾಯಿ ಹೊರಡುತ್ತಾರೆ. ಬಳಿಕ ಏಜೆ, ಲೀಲಾ ನೋಡು ನಾನು ನಿನ್ನ ಏನನ್ನು ಕೇಳುವುದಿಲ್ಲ ಏನು ಎಕ್ಸಪೆಕ್ಟ್ ಮಾಡುವುದಿಲ್ಲ ಇವತ್ತೊಂದಿನ ಖುಷಿಯಾಗಿರೂ ಲೀಲಾ ಎಂದು ಹೇಳಿದಾಗ ಲೀಲಾ ನಾನು ಖುಷಿಯಾಗಿಯೇ ಇರುತ್ತೇನೆ ಇನ್ನು ನಿಮ್ಮತರಹ ಇರಕ್ಕಾಗುತ್ತಾ ಎಂದು ಹೇಳಿ ಸಾರಿ, ನಾನು ಖುಷಿಯಾಗಿಯೇ ಇರುತ್ತೇನೆ ಎಂದು ಹೇಳುತ್ತಾಳೆ.

ಲೀಲಾ ಮನದಲ್ಲಿ ಮೂಡಿದೆ ಹಲವು ಪ್ರಶ್ನೆ
ಅದಕ್ಕೆ ಏಜೆ, ಅಮ್ಮ ನಿನ್ನ ಮೇಲೆ ತುಂಬ ಭರವಸೆಗಳನ್ನು ಇಟ್ಟಿದ್ದಾರೆ. ಅವರಿಗೆ ನಿರಾಶೆ ಮಾಡಬೇಡ ಸೋ ಪ್ಲೀಸ್ ಎಂದು ಹೇಳುತ್ತಾನೆ ಅದಕ್ಕೆ ಲೀಲಾ ನೀವೇನು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ಏಜೆ ತೆರಳುತ್ತಾರೆ. ಬಳಿಕ ಲೀಲಾ ಆಲೋಚಿಸುತ್ತಾಳೆ. ಯಾಕೆ ಇವರೆಲ್ಲ ಈ ತರ ಹೇಳುತ್ತಿದ್ದಾರೆ ದುರ್ಗಾ, ಸರೂ, ಲಕ್ಷ್ಮೀ ಒಂಥರ ಮಾತನಾಡುತ್ತಿದ್ದಾರೆ, ಅಮ್ಮ ಒಂಥರ ಮಾತನಾಡುತ್ತಾರೆ. ಈಗ ಇವರು ಒಂಥರ ಮಾತನಾಡುತ್ತಿದ್ದಾರೆ, ನಾಳೆ ಈ ಮನೆಯಲ್ಲಿ ಇರೋದಿಲ್ಲ ಅನ್ನೋ ಹಾಗೆ ಎಂದು ಹೇಳುತ್ತಿರುತ್ತಾಳೆ ಲೀಲಾ, ಮುಂದೇನಾಗುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.


Click it and Unblock the Notifications











