Don't Miss!
- Sports
ಶತಕದ ಮೇಲೆ ಶತಕ ಬಾರಿಸುತ್ತಿರುವ ಪೂಜಾರ: ಇಂಗ್ಲೆಂಡ್ನಲ್ಲಿ ತನ್ನ ಮತ್ತೊಂದು ಮುಖ ತೋರಿಸಿದ ಭಾರತೀಯ!
- News
ಮಂಗೇಶ್, ಲೀಲಾಬಾಯಿ, ವೆಂಕಣ್ಣ, ಸುಬ್ಬಯ್ಯ- ಉ.ಕ. ಸ್ವಾತಂತ್ರ್ಯ ಹೋರಾಟಗಾರರ ರೋಚಕ ಕಥೆಗಳು
- Technology
ಭಾರತದಲ್ಲಿ ರಿಯಲ್ಮಿ 9i 5G ಫೋನ್ ಬಿಡುಗಡೆ ದಿನಾಂಕ ಬಹಿರಂಗ!
- Finance
ಉದ್ಯಮಿ ರಾಕೇಶ್ ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ? ಮೌಲ್ಯ ಎಷ್ಟು?
- Automobiles
ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಸಿಬಿ300ಎಫ್ ಬೈಕ್ ರಿವ್ಯೂ
- Lifestyle
ಆಗಸ್ಟ 14ರಿಂದ ಆಗಸ್ಟ 20ರ ವಾರ ಭವಿಷ್ಯ: ಮಿಥುನ, ಕರ್ಕ, ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭದ ಸಾಧ್ಯತೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಹಿಟ್ಲರ್ ಕಲ್ಯಾಣ: ಅಮ್ಮನ ಕುತಂತ್ರದಿಂದ ಏಜೆ-ಲೀಲಾ ಮಧ್ಯೆ ಬಿರುಕು
'ಹಿಟ್ಲರ್ ಕಲ್ಯಾಣ' ಧಾರವಾಹಿ ಒಂದಲ್ಲ ಒಂದು ತಿರುವು ಪಡೆದುಕೊಳ್ಳುತ್ತಾ ವೀಕ್ಷಕರ ಕುತೂಹಲವನ್ನು ಹೆಚ್ಚು ಮಾಡುತ್ತಿದೆ. ಲೀಲಾ ಮತ್ತು ಏಜೆ ಮಾಡುವ ಪೂಜೆಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ ನಡೆಯಬೇಕು ಎಂಬುವುದು ಏಜೆ ಅಮ್ಮನ ಆಸೆ.
ತನ್ನ ಸೊಸೆ ಹಾಗೂ ಮಗ ನೂರು ಕಾಲ ಅನ್ಯೋನ್ಯವಾಗಿ ಜೀವನ ಸಾಗಿಸಬೇಕು ಎಂಬುವುದು ಬಯಕೆ ಆದರೆ ಲೀಲಾಗೆ ಏಜೆ ಮನೆಯಲ್ಲಿ ಬದುಕಲು ಶತ್ರುಗಳ ಕಾಟ ಮತ್ತು ಸ್ವಂತ ತಾಯಿಯ ದುರಾಸೆಯಿಂದ ಲೀಲಾ ಬಾಳು ಹಾಳಾಗಬಹುದಾದ ಸಾಧ್ಯತೆಯೊಂದು ತೆರೆದುಕೊಂಡಿದೆ.
ಹಿಟ್ಲರ್
ಕಲ್ಯಾಣ:
ತೆರೆ
ಮೇಲೆ
ನೀನಾ,
ನಾನಾ?
ತೆರೆ
ಹಿಂದೆ
ದುರ್ಗಾ-ಲೀಲಾ
ಫುಲ್
ಕ್ಲೋಸ್..!
ಏಜೆ ಮತ್ತು ಲೀಲಾ ಪೂಜೆಗೆ ಕುಳಿತುಕೊಳ್ಳುತ್ತಾರೆ. ಹಾಗೆಯೇ ಪೂಜೆ ನಿರ್ವಿಘ್ನವಾಗಿ ಮಾಡುತ್ತಾರೆ. ಆದ್ರೆ ಅರ್ಚಕರ ಬಳಿ ಕೇಳಿದಾಗ ಏನು ತೊಂದರೆ ಇಲ್ಲ ಪೂಜೆ ಮುಗಿದ ಮೇಲೆ ಅವರು ಹೋದ ಕಾರಣ ಪೂಜೆಗೆ ಯಾವುದೇ ಅಡೆತಡೆಯಿಲ್ಲದೆ ನೆರವೇರಿದೆ ಎಂದು ಅರ್ಚಕರು ಅಜ್ಜಿಯ ಬಳಿ ಹೇಳುತ್ತಾರೆ. ಇದರಿಂದ ಅಜ್ಜಿಗೆ ಸ್ವಲ್ಪ ತಲೆಬಿಸಿ ಕಡಿಮೆಯಾಗುತ್ತದೆ. ಬಳಿಕ ಅಜ್ಜಿ ಎಲ್ಲರ ಬಳಿ ಆಶೀರ್ವಾದ ತೆಗೆದುಕೊಳ್ಳುವಂತೆ ಸೂಚನೆ ನೀಡುತ್ತಾರೆ. ಆ ವೇಳೆ ಒಬ್ಬಾಕೆ ಲೀಲಾ ಏನು ಅಂತ ನಿಂಗೆ ಆಶಿರ್ವಾದ ಮಾಡಲಿ ಹೇಳು ಎಂದಾಗ ತುಸು ಶಾಕ್ ಆಗುತ್ತದೆ .

ಲೀಲಾಳನ್ನು ಆಶೀರ್ವದಿಸಲು ಹಿಂದೇಟು ಹಾಕಿದ ಸಭಿಕರು
ಆದರೂ ಲೀಲಾ ನಿಮಗೆ ಏನು ಅನ್ನಿಸುತ್ತದೆ ಅದನ್ನು ಆಶಿರ್ವಾದ ಮಾಡಿ ಎಂದು ಹೇಳಿದಾಗ ಆಕೆ ನೀವು ಮತ್ತೆ ಏಜೆ ಬೇರೆಯಾಗುತ್ತಿದ್ದೀರ ಹೀಗಿರಬೇಕಾದರೆ ಏನು ಅಂತ ಆಶಿರ್ವಾದ ಮಾಡಲಿ ಎಂದು ಹೇಳುತ್ತಾರೆ. ಆ ವೇಳೆ ಲೀಲಾ ಕುಪಿತಗೊಂಡು ಪೂಜೆಗೆ ಮನೆಗೆ ಬಂದಿದ್ದೀರಿ ಅಂತ ಆದರದಿಂದ ಮಾತನಾಡಿಸಿದರೆ ನೀವು ಈ ಥರ ಮಾತನಾಡುತ್ತಿದ್ದಿರಾ ಎಂದು ಹೇಳಿದಾಗ ಇದ್ದಿದ್ದನ್ನು ಇದ್ದ ಹಾಗೆ ಹೇಳಿದರೆ ಇವರಿಗೆ ಆಗಲ್ಲ ಕಣ್ರೀ ನೀವು ಏಜೆಯಿಂದ ದೂರ ಆಗುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದಾಗ ಲೀಲಾ ಗೆ ಶಾಕ್ ಆಗುತ್ತದೆ. ಈ ವೇಳೆ ಲೀಲಾಳನ್ನು ಅಜ್ಜಿ ಕೂಡ ನಂಬದೆ ಇರುವುದನ್ನು ನೋಡಿದ ಲೀಲಾ ಗೆ ಬೇಸರವಾಗುತ್ತದೆ.

ಅಜ್ಜಿ ಕಣ್ಣೀರು ಆತಂಕಗೊಂಡ ಲೀಲಾ
ಲೀಲಾ ಹೇಳುತ್ತಾಳೆ ಇಲ್ಲಿಗೆ ಏಜೆಯನ್ನು ಕರೆದುಕೊಂಡು ಬರುತ್ತೇನೆ ಆಗ್ಲಾದ್ರು ನಾನು ಮತ್ತು ಏಜೆ ಬೇರೆ ಆಗುವುದಿಲ್ಲ ಎಂದು ನಿಮಗೆ ಗೊತ್ತಾಗುತ್ತದೆ. ಎಂದು ಹೇಳಿ ಏಜೆ ಬಳಿಗೆ ಹೋಗುತ್ತಾಳೆ ಲೀಲಾ. ಏಜೆ ಅಂತರಾಳ ಬಳಿ ಹೇಳುತ್ತಾರೆ ನೀನೇ ನೋಡಿದ ಹುಡುಗಿ ಅಮ್ಮನಿಗೆ ಬಹಳ ಖುಷಿ ನೀಡುತ್ತಾಳೆ. ಉತ್ತಮವಾಗಿ ನೋಡಿಕೊಳ್ಳುತ್ತಾರೆ . ಎಂದು ಎನಿಸಿಕೊಂಡರೆ ಇದು ಬೇರೆಯೇ ಆಗುತ್ತಿದೆ. ಅಮ್ಮನ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಇದನ್ನು ಅವರ ಬಳಿ ಹೇಗೆ ಹೇಳಲಿ ಇದಕ್ಕೆಲ್ಲ ನೀನೇ ಕಾರಣ ಅಂತರ ಎಂದು ದೂಷಿಸುತ್ತಾ ಇರುವಾಗ ಲೀಲಾ ಬಂದು ಏಜೆ ನಿಮಗೆ ನನ್ನ ಮೇಲೆ ನಂಬಿಕೆ ಇದೆ ಅಲ್ವಾ ಎಂದಾಗ ಏಜೆ ಹು ಎಂದು ಹೇಳುತ್ತಾನೆ ಬಳಿಕ ಅಲ್ಲಿಂದ ಲೀಲಾ ಏಜೆಯನ್ನು ಕರೆದುಕೊಂಡು ಹೋಗುತ್ತಾಳೆ.

ಕೋಪಗೊಂಡ ಏಜೆಗೆ ಲೀಲಾ ತತ್ತರ
ಎಲ್ಲರ ಮುಂದೆ ಬಂದ ಲೀಲಾ ನೋಡಿ ಏಜೆ ನಾನು ಮತ್ತು ನೀವು ಬೇರೆಯಾಗುತ್ತಿದ್ದೇವೆಯಂತೆ.ಇವರೆಲ್ಲ ಏನೇನೋ ಹೇಳುತ್ತಿದ್ದಾರೆ ನೀವಾದರೂ ನಿಜ ಹೇಳಿ ಏಜೆ. ಇದೆಲ್ಲ ಸುಳ್ಳು ಎಂದು ಹೇಳಿ. ಎಂದಾಗ ಏಜೆ ಕುಪಿತಗೊಂಡು ವಿಚ್ಛೇದನ ಪೇಪರನ್ನು ತೋರಿಸಿ ಹಾಗಾದರೆ ಇದೇನು ಎಂದು ಕೇಳಿದಾಗ ಲೀಲಾ ಶಾಕ್ ಆಗುತ್ತಾಳೆ. ಮುಂದೇನಾಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ.

ತಾಯಿಯೇ ಕಳಿಸಿರುವ ವಿಚ್ಛೇಧನ ಪತ್ರ
ಲೀಲಾ ಬಯಸಿ-ಬಯಸಿ ಏಜೆಗೆ ವಿಚ್ಛೇಧನ ಪತ್ರ ಕಳಿಸಿಲ್ಲ ಬದಲಿಗೆ ಲೀಲಾಳ ತಾಯಿ ಲೀಲಾ ಹೆಸರಿನಲ್ಲಿ ವಿಚ್ಛೇಧನ ಪತ್ರ ಕಳಿಸಿದ್ದಾಳೆ. ಮಗಳಿಗೆ ಏಜೆಯಿಂದ ವಿಚ್ಛೇಧನ ದೊರೆತರೆ ಪರಿಹಾರವಾಗಿ ಮಗಳಿಗೆ ಕೋಟಿ-ಕೋಟಿ ಹಣ ಬರುತ್ತದೆ ಎಂಬುದು ಆಕೆಯ ಕುತಂತ್ರ. ಆದರೆ ತನ್ನ ತಾಯಿ ವಿಚ್ಛೇಧನ ಪತ್ರ ಕಳಿಸಿರುವ ವಿಚಾರ ಲೀಲಾಗೆ ಗೊತ್ತಿರಲಿಲ್ಲ ಆದರೆ ಈಗ ಗೊತ್ತಾಗಿದೆ.