ಹಿಟ್ಲರ್ ಕಲ್ಯಾಣ: ತನ್ನ ತಾಯಿಗೆ ಪಾಠ ಕಲಿಸುತ್ತಾಳ ಲೀಲಾ?

By ಪೂರ್ವ

'ಹಿಟ್ಲರ್ ಕಲ್ಯಾಣ' ಧಾರವಾಹಿ ಚೆನ್ನಾಗಿ ಮೂಡಿಬರುತ್ತಿದೆ. ಲೀಲಾ, ಏಜೆಯನ್ನು ಕರೆದುಕೊಂಡು ಎಲ್ಲರ ಮುಂದೆ ಬರುತ್ತಾಳೆ. ಬಳಿಕ ಅಲ್ಲಿ ನಡೆದ ವಿಚಾರವನ್ನು ಏಜೆ ಬಳಿ ಹೇಳುತ್ತಾಳೆ. ಆದರೆ ಏಜೆ ಕಲ್ಲು ಬಂಡೆಯ ರೀತಿ ನಿಂತಿರುತ್ತಾನೆ. ಬಳಿಕ ಎಲ್ಲರ ಒತ್ತಾಯಕ್ಕೆ ಕುಪಿತ ಗೊಂಡ ಏಜೆ ವಿಚ್ಚೇದನ ಪತ್ರವನ್ನು ತೋರಿಸುತ್ತಾನೆ. ಇದನ್ನು ಕಂಡ ಲೀಲಾ ಗೆ ಶಾಕ್ ಆಗುತ್ತದೆ.

ಲೀಲಾ ತನ್ನ ತಂದೆ ತಾಯಿ, ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತಾಳೆ ಇಂತಹ ಕೆಲಸ ನಾನು ಮಾಡಿಲ್ಲ ಎಂದು.

ಕೊನೆಗೆ ದೇವರ ಪಾದ ಮುಟ್ಟುವ ಲೀಲಾ, ದೇವರಾಣೆಗೂ ನನಗೆ ಏನು ಗೊತ್ತಿಲ್ಲ ಎಂದು ಹೇಳಿದಾಗ ಏಜೆಗೆ ಶಾಕ್ ಆಗುತ್ತದೆ.

ನಾನೇ ಕಳುಹಿಸಿದ್ದು ಎಂದು ಗೊತ್ತಾದರೆ ಮುಗೀತು ನನ್ನ ಕಥೆ ಎಂದು ಕೊಳ್ಳುತ್ತಿದ್ದಾಳೆ ಲೀಲಾ ತಾಯಿ ಕೌಸಲ್ಯ. ಇತ್ತ ಲೀಲಾ ಆತಂಕದಲ್ಲಿ ಇರುತ್ತಾಳೆ. ಲೀಲಾ ಎಷ್ಟೇ ಹೇಳಿದರೂ ಯಾರು ನಂಬುತ್ತಿಲ್ಲ. ಬಳಿಕ ಲೀಲಾ ಏಜೆ ಕೈಯಲ್ಲಿ ಇದ್ದ ವಿಚ್ಛೇದನ ಪತ್ರವನ್ನು ಹೋಮ ಕುಂಡಕ್ಕೆ ಹಾಕುತ್ತಾಳೆ. ಇದನ್ನು ನೋಡಿದ ಲೀಲಾ ತಾಯಿ ಮನದಲ್ಲಿಯೇ ಲೀಲಾ ಗೆ ಶಾಪ ಹಾಕುತ್ತಿರುತ್ತಾರೆ.

ವಿಚ್ಚೇದನ ಪತ್ರವನ್ನು ಹರಿದು ಹಾಕಿದ ಲೀಲಾ

ವಿಚ್ಚೇದನ ಪತ್ರವನ್ನು ಹರಿದು ಹಾಕಿದ ಲೀಲಾ

ಇತ್ತ ಲೀಲಾ ನಡವಳಿಕೆಯಿಂದ ಅಜ್ಜಿಗೆ ಕೊಂಚ ಸಮಾಧಾನ ವಾಯಿತು. ಏಜೆಗೆ ಶಾಕ್ ಆಯಿತು. ಲೀಲಾ ವರ್ತನೆ ದುರ್ಗಾ ಚೂರು ಹಿಡಿಸಲಿಲ್ಲ. ಲೀಲಾಳನ್ನು ಮನೆಯಿಂದ ಹೊರಗೆ ಹಾಕಬೇಕು ಎಂದು ಕೊಂಡಿದ್ದ ದುರ್ಗಾ ಉದ್ದೇಶಕ್ಕೆ ವಾಪಸ್ ಕೊಡಲಿ ಏಟು ಬಿದ್ದಿದೆ. ಆದರೆ ಲಕ್ಷ್ಮಿಗೆ ಈ ಬಾರಿ ಬಹಳ ಕೋಪ ಬರುತ್ತದೆ. ಮನೆಯಿಂದ ಮಾರಿ ಹೋಗೋದೇ ಇಲ್ಲ. ಅದೆಷ್ಟೇ ಓಡಿಸಲು ಪ್ರಯತ್ನ ಪಟ್ಟರು ಸಾಧ್ಯವಾಗುತ್ತಿಲ್ಲ ಎಂದು ಮನದಲ್ಲಿಯೇ ಬೈದುಕೊಳ್ಳುತ್ತಾಳೆ.

ಎಲ್ಲರ ಆಶಿರ್ವಾದ ಪಡೆದುಕೊಂಡ ಲೀಲಾ

ಎಲ್ಲರ ಆಶಿರ್ವಾದ ಪಡೆದುಕೊಂಡ ಲೀಲಾ

ಇತ್ತ ಅಜ್ಜಿ ಲೀಲಾ ಬಳಿ ಎಲ್ಲರ ಆಶಿರ್ವಾದ ತೆಗೆದುಕೊಳ್ಳಲು ಹೇಳುತ್ತಾರೆ. ಲೀಲಾ ಮತ್ತು ಏಜೆ ಅಜ್ಜಿಯ ಕಾಲಿಗೆ ಬಿದ್ದು ಆಶಿರ್ವಾದ ಪಡೆದುಕೊಳ್ಳುತ್ತಾರೆ. ಅಜ್ಜಿಯ ಬಳಿ ಪುರೋಹಿತರು ನೋಡಿದ್ರಾ ಅಮ್ಮ. ಇವರಿಬ್ಬರ ದಾಂಪತ್ಯ ಜೀವನ ಸುಖವಾಗಿ ಇರಬೇಕು ಪೂಜೆ ಮಾಡಿಸಿದರಿಂದ ಅವರಿಬ್ಬರೂ ಜೊತೆಯಾಗಿಯೆ ಇರುತ್ತಾರೆ. ಅವರಿಬ್ಬರನ್ನು ಯಾರು ದೂರ ಮಾಡಲು ಸಾಧ್ಯವಿಲ್ಲ. ಎಂದು ಹೇಳಿದಾಗ ಅಜ್ಜಿಗೆ ಸಮಾಧಾನ ವಾಗುತ್ತದೆ.

ಎಜೆಯನ್ನು ಸಮಾಧಾನ ಪಡಿಸಿದ ಲೀಲಾ

ಎಜೆಯನ್ನು ಸಮಾಧಾನ ಪಡಿಸಿದ ಲೀಲಾ

ಏಜೆ ರೂಮಿನಲ್ಲಿ ಏನೋ ಯೋಚನೆಯಲ್ಲಿ ನಿರತರಾಗಿರುತ್ತಾರೆ ಈ ವೇಳೆ ಲೀಲಾ ಅಲ್ಲಿಗೆ ಬರುತ್ತಾಳೆ. ಏಜೆ ಬಳಿ ಹೇಳುತ್ತಾಳೆ ನಾನು ನಿಮಗೆ ಗ್ರೀಟಿಂಗ್ ಕಳುಹಿಸಿದ್ದು. ವಿಚ್ಚೇದನ ಪತ್ರ ಕಳುಹಿಸಿದ್ದಲ್ಲ ನನ್ನ ಮೇಲೆ ನಂಬಿಕೆ ಇಲ್ವಾ.. ಎಂದಾಗ ಏಜೆ ಹೇಳುತ್ತಾರೆ ಅಮ್ಮನಿಗೆ ವಯಸ್ಸಾಯಿತು ದಿನದಿಂದ ದಿನಕ್ಕೆ ಅವರ ಆರೋಗ್ಯ ಹದಗೆಡುತ್ತಿದೆ ಈ ರೀತಿಯ ತೊಂದರೆಗಳು ರಿಪೀಟ್ ಆಗೋದು ಬೇಡ ಎಂದು ಬೇಸರದಿಂದ ಹೇಳುತ್ತಾರೆ ಬಳಿಕ ಕೃಷ್ಣ ಪ್ರಪೋಸ್ ಮಾಡಿದನಲ್ಲ ಎಂದು ಹೇಳುತ್ತಾನೆ ಅದಕ್ಕೆ ಲೀಲಾ ನೀವು ಪೂರ್ತಿಯಾಗಿ ನಮ್ಮ ಮಾತು ಕೇಳಿಸಿಕೊಂಡೆ ಇಲ್ಲ ಅದಕ್ಕೆ ಈ ರೀತಿ ಮಾತನಾಡುತ್ತಿದ್ದಿರಾ. ಅಲ್ಲಿ ನಡೆದ ವಿಚಾರ ತಿಳಿದುಕೊಂಡ ಏಜೆಗು ಇದು ಬೇಸರ ತರಿಸುತ್ತದೆ ಅದಕ್ಕೆ ಲೀಲಾ ಹೇಳುತ್ತಾಳೆ ಹಾಗೆಲ್ಲ ಅಂದುಕೊಳ್ಳುವುದು ಕಾಮನ್ ಎಂದು ಹೇಳುತ್ತಾಳೆ ಬಳಿಕ ಅಲ್ಲಿಂದ ತೆರಳುತ್ತಾಳೆ. ಏಜೆ ಪರಿಸ್ಥಿತಿ ಕಂಡು ಮರುಕ ಪಡುತ್ತಾಳೆ.

ಅಮ್ಮನ ಕುತಂತ್ರ ಬುದ್ದಿಯನ್ನು ಲೀಲಾ ಬಳಿ ಹೇಳಿದ ರೇವತಿ

ಅಮ್ಮನ ಕುತಂತ್ರ ಬುದ್ದಿಯನ್ನು ಲೀಲಾ ಬಳಿ ಹೇಳಿದ ರೇವತಿ

ಇತ್ತ ಲೀಲಾ ತಾಯಿ ಲಾಯರ್ ಗೆ ಕರೆ ಮಾಡಿ ನಡೆದ ವಿಚಾರವನ್ನು ಹೇಳುತ್ತಾ ಅಳುತಿರುತ್ತಾಳೆ. ನನಗೆ 78 ಕೋಟಿ ಬೇಕು ಎಂದೆಲ್ಲ ಹಠ ಹಿಡಿಯುತ್ತಿರುತ್ತಾಳೆ. ಇದನ್ನು ಕಂಡ ಲೀಲಾ ತಂಗಿ ರೇವತಿಗೆ ತನ್ನ ಅಮ್ಮನೇ ಅಕ್ಕನ ಜೀವನ ಹಾಳು ಮಾಡುತ್ತಿದ್ದಾಳೆ ಎಂದು ತಿಳಿಯುತ್ತದೆ. ರೇವತಿ ಲಿಲಾಗೆಗೆ ಕರೆ ಮಾಡಿ ಅಮ್ಮ ಮಾಡಿದ ಕುತಂತ್ರವನ್ನು ಹೇಳುತ್ತಾಳೆ. ಲೀಲಾ ಮುಂದೇನು ಮಾಡುತ್ತಾಳೆ ಎಂದು ಕಾದು ನೋಡಬೇಕಿದೆ

More from Filmibeat

English summary
Zee Kannada serial Hitler Kalyana written update on 24th June. Hitler Kalyana is an Kannada language television serial. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X