ಹಿಟ್ಲರ್ ಕಲ್ಯಾಣ: ಲೀಲಾಳನ್ನು ಮನೆಗೆ ಕರೆತರುತ್ತಾನಾ ಎಜೆ?

By ಪೂರ್ವ

ಕಿರುತೆರೆಯಲ್ಲಿ ಉತ್ತಮವಾಗಿ ಪ್ರಸಾರವಾಗುತ್ತಿದೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿ. ಆದರೆ ಜನಗಳೇಕೋ ಎಜೆ ಮೇಲೆ ಮುನಿಸಿಕೊಂಡಂತೆ ಕಾಣುತ್ತಿದೆ. ಮುದ್ದು ಮುಖದ ಲೀಲಾಳನ್ನು ಅರ್ಥಮಾಡಿಕೊಳ್ಳದೇ ಮನೆಬಿಟ್ಟು ಹೋಗುವ ಹಾಗೆ ಮಾಡಿದ ಎಜೆ ಮೇಲೆ ಬೇಸರಿಸಿಕೊಂಡಿದ್ದಾರೆ ವೀಕ್ಷಕರು.

ಆದ್ರೆ ಇದೀಗ ಎಜೆಗೆ ತಪ್ಪಿನ ಮನವರಿಕೆಯಾಗಿದೆ. ಅಂದು ಸಿಸಿ ಕ್ಯಾಮಾರದಲ್ಲಿ ನೋಡಿದ್ದನ್ನು ತಪ್ಪು ತಿಳಿದುಕೊಂಡ ಎಜೆ ಏನು ಮಾಡಲು ಆಗದ ಸ್ಥಿತಿಯಲ್ಲಿ ನಿಂತಿದ್ದರು. ಇದಿರಂದ ಲೀಲಾಗೆ ನೋವಾಗಿದೆ. ತಂದೆ ಏನಾದರೂ ಹೇಳಿದರೆ ನಿಮ್ಮ ಅಳಿಯ ನಿಮ್ಮ ಪರವಾಗಿ ಅಂದು ನಿಂತಿದ್ದರೆ ಈ ರೀತಿ ಆಗುತ್ತಿರಲಿಲ್ಲ ಎಂದು ಕೋಪದಲ್ಲಿಯೇ ನುಡಿದಿದ್ದಾಳೆ.

ಇದೀಗ ಎಜೆ ತಾಯಿಗೆ ದಿನೇ ದಿನೇ ಆರೋಗ್ಯ ಕುಂದುತ್ತಾ ಬರುತ್ತಾ ಇದೆ. ಅವರಿಗೆ ಲೀಲಾಳದ್ದೆ ಜಪ, ಲೀಲಾ ಮನೆ ಬಿಟ್ಟು ಹೋಗಿರುವುದನ್ನೆ ಯೊಚಿಸುಕೊಂಡು ಬೇಸರಿಸಿಕೊಳ್ಳುತ್ತಿದ್ದಾರೆ. ಎಜೆ ತನ್ನ ಅಮ್ಮನ ಬಳಿ ಮಾತನಾಡಲು ಬಂದಾಗ ಎಜೆ ತಾಯಿ ಹೇಳುತ್ತಾರೆ, ಲೀಲಾಳನ್ನು ಕರೆದುಕೊಂಡು ಬಾ, ಲೀಲಾ ಇಲ್ಲದೇ ಮನೆ ಬಿಕೋ ಎನ್ನುತ್ತಿದೆ. ಅಂದು ನಡೆದ ಆ ಕೆಟ್ಟ ಘಟನೆಯಿಂದ ಮನೆಯ ಸೊಸ ಮನೆ ಬಿಟ್ಟು ಹೋಗುವ ಹಾಗೆ ಆಗಿದೆ. ಬಹಳ ಬೇಸರವಾಗುತ್ತಿದೆ, ನನ್ನ ಕೊನೆ ಗಾಲದಲ್ಲಿ ಈ ರೀತಿ ಆಗುತ್ತಿರುವುದು ನನಗೆ ತಡೆದುಕೊಳ್ಳಲು ಆಗುತ್ತಿಲ್ಲ, ಇಂಥಹ ಬಿರುಕು ಬಿಟ್ಟ ಮನೆಯಲ್ಲಿ ಪ್ರಾಣ ಬಿಡಲು ನನಗೆ ಇಷ್ಟವಿಲ್ಲ ಎಂದು ಹೇಳಿ ಅಳುತ್ತಾರೆ.

Zee Kannada serial Hitler Kalyana Written Update on 24th May


ಎಜೆ ಕರೆ ಸ್ವೀಕರಿಸದ ಲೀಲಾ ಬೇಸರಿಸಿಕೊಂಡ ಎಜೆ

ಇದಕ್ಕಿಂತ ಮುಂಚೆ ಲೀಲಾಗೆ ಎಜೆ ಕಾಲ್ ಮಾಡುತ್ತಾರೆ, ಆದ್ರೆ ಲೀಲಾ ಮಾತ್ರ ಎಜೆ ಪೋನ್‌ನ್ನು ರಿಸಿವ್ ಮಾಡದೇ ಬ್ಲಾಕ್ ಮಾಡುತ್ತಾಳೆ, ಎಜೆ ಬಳಿಕ ಲೀಲಾ ತಾಯಿಗೂ ಕಾಲ್ ಮಾಡುತ್ತಾರೆ ಅವರು ಲೀಲಾ ಬಳಿ ಬಂದು ಹೇಳುತ್ತಾರೆ ಎಜೆ ಕಾಲ್ ಮಾಡುತ್ತಿದ್ದಾರೆ ಎಂದಾಗ ಲೀಲಾಗೆ ಇನ್ನೂ ಕೋಪ ಬರುತ್ತದೆ ಆ ಮೊಬೈಲ್ ತೆಗೆದುಕೊಂಡು ಎಜೆ ನಂಬರ್‌ನ್ನು ಬ್ಲಾಕ್ ಮಾಡುತ್ತಾಳೆ, ಲೀಲಾಗೆ ತಾಯಿಯ ಮುಖ ನೋಡಿ ಬೇಸರವಾಗುತ್ತದೆ. ಬೇಸರ ಮಾಡಿಕೊಳ್ಳಬೇಡ ಅಮ್ಮ ಹೆದರಬೇಡ ದೈರ್ಯದಿಂದ ಇರು ಎಂದು ಸಮಾಧಾನ ಮಾಡುತ್ತಾಳೆ, ಆ ವೇಳೆ ರೇವತಿಯು ಹೇಳುತ್ತಾಳೆ ಬಾವ ಕಾಲ್ ಮಾಡುತ್ತಿದ್ದಾರೆ ಎಂದು ಅವಳ ಮೊಬೈಲ್ ತೆಗೆದುಕೊಂಡು ಎಜೆ ನಂಬರ್‌ನ್ನು ಬ್ಲಾಕ್ ಮಾಡುತ್ತಾಳೆ ಲೀಲಾ, ಬಳಿಕ ಎಜೆ ಮನೆಗೂ ನಮಗೂ ಯಾವುದೇ ಸಂಬಂಧವಿಲ್ಲ, ಎಂದು ಕೋಪದಿಂದ ಲೀಲಾ ಕಿರುಚುತ್ತಾಳೆ. ಇದನ್ನು ನೋಡಿದ ಲೀಲಾ ತಾಯಿ ದಂಗಾಗುತ್ತಾರೆ.

ದೇವ್ ಆತನ ಹೆಂಡತಿ ಬಳಿ ನಡೆದ ವಿಚಾರವನ್ನು ಹೇಳುತ್ತಿರುತ್ತಾನೆ, ನಿನ್ನ ಸವತಿಯ ಮನೆಗೆ ತೆರಳಿದ್ದೆ ಆಕೆಯ ನ್ನು ಪಡೆದುಕೊಳ್ಳಲು ನಾನೇನು ಬೇಕಾದರು ಮಾಡುತ್ತೇನೆ ಎಂದು ಆಕೆಯ ಕತ್ತು ಹಿಸುಕಲು ನೋಡುತ್ತಾನೆ, ಆ ವೇಳೆ ಅಲ್ಲಿಗೆ ಸರಸ್ವತಿ ಬರುತ್ತಾಳೆ, ಅವಳನ್ನು ನೋಡಿದ ದೇವ್ ಅಳುವ ನಾಟಕವಾಡುತ್ತಾನೆ, ಅಣ್ಣ ನಿನ್ನ ನೋವು ನನಗೆ ಅರ್ಥವಾಗುತ್ತದೆ ಬಾ ಊಟಕ್ಕೆ ಎಂದು ಹೇಳಿ ಅಲ್ಲಿಂದ ತೆರಳುತ್ತಾಳೆ, ಆ ವೇಳೆ ರೇವತಿ ಕಾಲ್ ಮಾಡುತ್ತಾಳೆ ದೇವ್‌ಗೆ, ಮೊದಲ ಕರೆಯನ್ನು ದೇವ್ ಕಟ್ ಮಾಡುತ್ತಾನೆ. ಮತ್ತೊಂದು ಬಾರಿ ಕಾಲ್ ಮಾಡಿದಾಗ ರೇವತಿ ಬಳಿ ಏನೂ ಎಂದು ಕಠೋರವಾಗಿ ಮಾತಾನಾಡುತ್ತಾನೆ ದೇವ್, ಆ ವೇಳೆ ರೇವತಿ ನಿಮ್ಮನ್ನು ಮೀಟ್ ಮಾಡಬೇಕು ಸಿಗುವಿರ ಎಂದು ಕೇಳುತ್ತಾಳೆ. ಇದನ್ನು ಕೇಳಿದ ದೇವ್‌ಗೆ ಮನದಲ್ಲಿಯೇ ಖುಷಿ ಪಡುತ್ತಾನೆ. ಇನ್ನೂ ಎಜೆ, ತಾಯಿಗೆ ಲೀಲಾಳನ್ನು ಹೇಗಾದರೂ ಮಾಡಿ ಕರೆದುಕೊಂಡು ಬರುತ್ತೇನೆ ಎಂದು ಹೇಳುತ್ತಾನೆ. ಲೀಲಾಳನ್ನು ಮೀಟ್ ಮಾಡಲು ನಾಳೆ ಅವಳ ಮನೆಗೆ ತೆರಳುವುದಾಗಿ ಪಿಎ ಬಳಿ ಹೇಳುತ್ತಾನೆ. ಬಳಿಕ ಅತ್ಯಾಚಾರ ಆರೋಪ ಮಾಡಿದಾಕೆಯನ್ನು ನೀನು ಕರೆದುಕೊಂಡು ಬಾ ಎಂದು ಹೇಳುತ್ತಾನೆ. ಎಜೆ ಹೇಗೆ ಲೀಲಾಳನ್ನು ಮನವೊಲಿಸುತ್ತಾನೆ ಎಂಬುವುದನ್ನು ಇಂದಿನ ಸಂಚಿಕೆಯಲ್ಲಿ ನೊಡಬೇಕಾಗಿದೆ.

More from Filmibeat

English summary
Zee Kannada serial Hitler Kalyana Written Update on 24th May. Hitler kalyana is a Kannada language telivission serial. Hear is more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X