ಮಿತಿ ಮೀರಿದ ದುರ್ಗಾ ಅಹಂಕಾರ, ಆಟಕ್ಕೆ ಕಡಿವಾಣ ಹಾಕುತ್ತಾನಾ ಎಜೆ?
'ಹಿಟ್ಲರ್ ಕಲ್ಯಾಣ' ಧಾರವಾಹಿ ಬಹಳ ಕುತೂಹಲಕಾರಿಯಾಗಿ ಮೂಡಿಬರುತ್ತಿದೆ. ಇನ್ನು ಧಾರವಾಹಿಯ ಕಥೆ ಬಹಳ ಚೆನ್ನಾಗಿ ಮೂಡಿಬರುತ್ತಿದೆ. ಕಿರಿತೆರೆಯ ಅತ್ಯುತ್ತಮ ಧಾರವಾಹಿಗಳಲ್ಲಿ ಒಂದಾಗಿದೆ 'ಹಿಟ್ಲರ್ ಕಲ್ಯಾಣ'. ಲೀಲಾ-ಏಜೆ ಅಭಿನಯಕ್ಕೆ ಎಲ್ಲರೂ ಮಾರು ಹೋಗಿದ್ದಾರೆ. ಆದರೆ ಇದೀಗ ಲೀಲಾ ಬಹಳ ಬೇಸರಿಸಿಕೊಂಡಿದ್ದಾಳೆ ಹಾಗೆಯೇ, ಎಜೆ ಮೇಲೆ ಕೋಪಿಸಿಕೊಂಡಿದ್ದಾಳೆ,
ಇನ್ನೂ ಇಷ್ಟೆಲ್ಲಾ ಆದ ಮೇಲೂ ಲೀಲಾಳ ತಂದೆಯ ಕೆಲಸದ ಮೇಲು ಆ ದೇವರ ವಕ್ರದೃಷ್ಟಿ ಬಿದ್ದಿದೆ. ಹೌದು ಲೀಲಾ ತಂದೆ ಕೆಲಸ ಕಳೆದುಕೊಂಡು ಕುಸಿದು ಬಿದ್ದಿದ್ದಾರೆ ಇದನ್ನು ಕಂಡ ಲೀಲಾ ತಾಯಿ ಪತ್ರದಲ್ಲಿ ಏನಿದೆ ಎಂಬುವುದನ್ನು ಓದಲು ಲೀಲಾ ಬಳಿ ಹೇಳಿದ್ದಾರೆ. ಆ ವೇಳೆ ಪತ್ರವನ್ನು ಓದಿದ ಲೀಲಾಗೆ ಶಾಕ್ ಆಗಿದೆ. ತಂದೆಯನ್ನು ಕೆಸದಿಂದ ತೆಗೆದು ಹಾಕಿರುವುದಾಗಿ ಹೇಳುತ್ತಾಳೆ, ಈ ವೇಳೆಗೆ ಲೀಲಾ ತಂದೆ ಬಿದ್ದಲ್ಲಿಂದ ಮೆತ್ತಗೆ ಎದ್ದೇಳುತ್ತಾರೆ, ಅಳುತ್ತಾರೆ. ಈ ವೇಳೆ ಲೀಲಾ ತಂದೆಗೆ ಸಮಾಧಾನ ಪಡಿಸಿ ಅಪ್ಪ ಎದ್ದೇಳು, ಬ್ಯಾಂಕ್ ಅವರಿಗೆ ಕಾಲ್ ಮಾಡು ಎಂದು ಒತ್ತಾಯಿಸಿ ಕರೆ ಮಾಡಿಸುತ್ತಾಳೆ.
ತಂದೆಯ ಕೈಯಿಂದ, ಲೀಲಾ ತಂದೆ ಕೆಲಸ ತೆಗೆದಿದ್ದು ಯಾಕೆ ಎಂದು ಕೇಳಲು ಬಿಡದೇ ಬಾಯಿಗೆ ಬಂದ ಹಾಗೆ ಮಾತನಾಡಿ ಅವರನ್ನು ನಿಂದಿಸುತ್ತಾರೆ. ಬಳಿಕ ಲೀಲಾ ತಂದೆ ಹೇಳುತ್ತಾರೆ ಇವರಿಗೆ ಕಾಲ್ ಮಾಡದೇ ಇದ್ದಿದ್ದರೆ ಎಷ್ಟೂ ಚೆನ್ನಾಗಿತ್ತು. ಇಂಥಹ ಮಾತುಗಳನ್ನು ನಾನು ಕೇಳಬೇಕಾದ ಸ್ಥಿತಿ ಬರುತ್ತಿರಲಿಲ್ಲ, ನನ್ನ ಕ್ಯಾರೆಕ್ಟರ್ ಸರಿ ಇಲ್ಲವಂತೆ, ನಾನು ಬ್ಯಾಂಕ್‌ಲ್ಲಿ ಇದ್ದರೆ ಕಸ್ಟಮರ್ ಬರುವುದಿಲ್ಲವಂತೆ ಎಂದು ಬಹಳ ನೋವಿನಿಂದ ಹೇಳುತ್ತಾರೆ.

ಉಗ್ರವತಾರ ತಾಳಿದ ಲೀಲಾ
ಈ ವೇಳೆ ಲೀಲಾ ಕೋಪದಿಂದ ಯಾಕೆ ನಿನ್ನ ಮೇಲೆ ಇಲ್ಲಸಲ್ಲದ ಅಪವಾದ ಮಾಡುತ್ತಿದ್ದಾರೆ ಎಂದೆಲ್ಲ ಹೇಳಿ ನಾನು ಬ್ಯಾಂಕ್‌ಗೆ ಹೋಗಿ ಎಲ್ಲಾ ಕೇಳಿಕೊಂಡು ಬರುತ್ತೇನೆ, ಇಷ್ಟು ದಿನ ನೀನು ಬೇಕಿತ್ತು ಈಗ ಬೇಡ ಯಾಕೆ ಹಾಗೆ ಮಾಡುವುದು ಇದು ಸರಿ ಇಲ್ಲ, ನಾನು ಮಾತನಾಡಿಕೊಂಡು ಬರುತ್ತೇನೆ ಎಂದು ಹೇಳಿ ಮನೆ ಎದುರುಗಡೆ ಬರಬೇಕಾದರೆ ಎಜೆ, ಲೀಲಾ ಮನೆ ಮುಂದೆ ಇರುತ್ತಾರೆ, ಎಜೆನ ಕಂಡ ಲೀಲಾ ಬಹಳ ಕೋಪಗೊಳ್ಳುತ್ತಾಳೆ.

ಕಠೋರವಾಗಿ ಮಾತನಾಡಿದ ಲೀಲಾ
ಎಜೆಯ ಬಳಿ ಇಷ್ಟೆಲ್ಲ ಅವಮಾನ ಮಾಡಿರುವುದು ನಿಮಗೆ ಸಾಲದ ಈಗ ಮನೆಗೆ ಕೂಡ ಬಂದಿದ್ದೀರಿ ಇಲ್ಲಿಂದ ಹೋಗಿ ಎಂದು ಕಂಠೋರವಾಗಿ ನಡೆದುಕೊಳ್ಳುತ್ತಾಳೆ, ಎಜೆ ಹೇಳುತ್ತಾರೆ ಕುಳಿತು ಮಾತನಾಡುವ ಸಮಸ್ಯೆಯನ್ನು ಬಗೆಹರಿಸುವ ಎಂದೆಲ್ಲ ಮಾತುಗಳನ್ನು ಆಡಿದರು ಲೀಲಾ ಕೇಳಿಸಿಕೊಳ್ಳಲು ತಯಾರಿಲ್ಲ, ಪಿಎ ಎಜೆಗೆ ಕರೆ ಮಾಡಿ ಅತ್ಯಾಚಾರ ಆರೋಪ ಮಾಡಿದವಳು ಅಲ್ಲಿಇಲ್ಲ ಎಂದ ಕೂಡಲೇ ಎಜೆಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತದೆ.

ಬಾಗಿಲು ಹಾಕಿದ ಲೀಲಾ
ಬಳಿಕ ಮಗಳ ಕೂಗು ಕೇಳಿ ಲೀಲಾ ತಂದೆ ತಾಯಿ ಬರುತ್ತಾರೆ, ಎಜೆಯನ್ನು ಕಂಡ ಲೀಲಾ ತಂದೆ ಇನ್ನೂ ಯಾಕೆ ಸರ್ ನಮ್ಮ ಮನೆಗೆ ಬಂದಿದ್ದೀರಾ ಇರೋದೆ ಸ್ವಲ್ಪ ಮರ್ಯಾದೆ ಅದನ್ನು ತೆಗೆದುಹಾಕಲು ಬಂದಿದ್ದೀರ ಎಂದ ಬಹಳ ಬೇಸರದಲ್ಲಿ ಹೇಳುತ್ತಾರೆ ಇದರಿಂದ ನೊಂದು ಕೊಂಡ ಎಜೆ ಮಾತನಾಡಲು ಲೀಲಾ ಬಿಡದೇ ಬಾಗಿಲನ್ನು ಹಾಕಿ ಬಿಡುತ್ತಾಳೆ.

ದುರ್ಗಾ ಪ್ಲಾನ್ ಉಲ್ಟಾ ಹೊಡೆಯುತ್ತಾ?
ಇನ್ನೂ ದುರ್ಗಾ ಆರಾಮವಾಗಿದ್ದಾಳೆ , ಅತ್ಯಾಚಾರ ಆರೋಪ ಮಾಡಿದವಳನ್ನು ಬೇರೆಡೆಗೆ ಸ್ಥಳಾಂತರಿಸಿದ ಖುಷಿಯಲ್ಲಿದ್ದಾಳೆ, ಹಾಗೆಯೇ ಲೀಲಾಳನ್ನು ಎಜೆ ಮನೆಗೆ ಕರೆದುಕೊಂಡು ಬರದ ರೀತಿ ಮಾಡುತ್ತಿದ್ದಾಳೆ ದುರ್ಗಾ ಇದೆಲ್ಲ ಎಜೆಗೆ ತಿಳಿದಿಲ್ಲ, ಎಜೆ ಬಹಳ ಕೋಪದಲ್ಲೇ ಇದ್ದಾರೆ ಆದರೆ ಅತ್ಯಾಚಾರ ಆರೋಪ ಮಾಡಿದಾಕೆಯ ಹಿಂದೆ ಕಾಣದ ಕೈ ಇದೆ ಎಂದು ಎಜೆಗೆ ತಿಳಿಯುತ್ತದೆ ಆದರೆ ಇದಕ್ಕೆಲ್ಲ ಸೂತ್ರಧಾರಿ ದುರ್ಗಾ ಎಂದು ಎಜೆಗೆ ತಿಳಿದಿಲ್ಲ ಏಕೆಂದರೆ ಎಜೆಗೆ ತಮ್ಮ ಸೊಸೆ ಮೇಲೆ ಬಲವಾದ ನಂಬಿಕೆ. ಇನ್ನೂ ಇತ್ತ ಸರಸ್ವತಿ ದುರ್ಗಾ ಬಳಿ ಬಂದು ಏನಕ್ಕಾ ಮಾಡೋದು ಲೀಲಾ ಮನೆಗೆ ಬಂದ್ರೆ ಎಂದು ತನ್ನ ತಳಮಳವನ್ನು ಹೇಳಿಕೊಳ್ಳುತ್ತಿರುತ್ತಾಳೆ. ಆದರೆ ದುರ್ಗಾ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದನ್ನು ನೋಡಿ ಸುಮ್ಮನಾಗುತ್ತಾಳೆ.


Click it and Unblock the Notifications











