India
  For Quick Alerts
  ALLOW NOTIFICATIONS  
  For Daily Alerts

  ಅಮ್ಮನಿಗೆ ಎಚ್ಚರಿಕೆ ನೀಡಿದ ಲೀಲಾ: ಮುಂದೇನು ಮಾಡುತ್ತಾಳೆ ಕೌಸಲ್ಯ?

  By ಪೂರ್ವ
  |

  'ಹಿಟ್ಲರ್ ಕಲ್ಯಾಣ' ಧಾರಾವಾಹಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಧಾರಾವಾಹಿಯಲ್ಲಿ ಲೀಲಾ ನಿಲುವು ಪ್ರೇಕ್ಷಕರಿಗೆ ಇಷ್ಟವಾಗಿದೆ. ಅಮ್ಮನಿಗೆ ಬುದ್ದಿ ಹೇಳಿದ ರೀತಿಯನ್ನೂ ಇಷ್ಟಪಟ್ಟಿದ್ದಾರೆ. ಆದರೆ ಇದನ್ನು ಕೌಸಲ್ಯ ದ್ವೇಷದ ರೀತಿಯಲ್ಲಿ ತೆಗೆದುಕೊಳ್ಳುತ್ತಾಳಾ ಅಥವಾ ತಪ್ಪು ಒಪ್ಪಿಕೊಳ್ಳುತ್ತಾಳಾ? ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಮಗಳ ಮನೆಯ ಅಂತಸ್ತನ್ನು ಕಂಡು ಅದೆಲ್ಲ ತನ್ನ ದಾಗಬೇಕೆಂದು ಮಗಳಿಗೂ ಅಳಿಯನಿಗೂ ವಿಚ್ಛೇದನ ಕೊಡಿಸಲು ಹೊರಟಿದ್ದ ಮಹಾತಾಯಿ ಮುಂದೆಯಾದರೂ ಸರಿ ಹೋಗುತ್ತಾಳಾ?

  ಇಷ್ಟೆಲ್ಲ ಅವಾಂತರ ಮಾಡಿದ್ದು ತಾಯಿ ಎಂದು ಗೊತ್ತಾದ ಬಳಿಕ ತಡಿ ಮಾಡ್ತೀನಿ ಎಂದು ಹೇಳಿ ಲೀಲಾ, ಏಜೆನ ಕರೆದುಕೊಂಡು ತವರು ಮನೆಗೆ ಹೊರಡುತ್ತಾಳೆ. ಇತ್ತ ರೇವತಿ ಮತ್ತು ಕೌಸಲ್ಯ ಮಾತನಾಡುತ್ತಿರುತ್ತಾಳೆ. ರೇವತಿ ನಿನೇನಾದ್ರು ಲೀಲಾ ಥರ ಮಾಡಿದ್ರೆ ಸಾಯಿಸಿಬಿಡುತ್ತೇನೆ. ನನ್ನ ಹೊಟ್ಟೆ ಉರಿಸಿದ್ಲು ಲೀಲಾ. ಅದೆಷ್ಟು ಆಸೆ ಇಟ್ಟುಕೊಂಡಿದ್ದೆ ಎಲ್ಲ ನಾಶ ಆಗೋಯ್ತು. ಎಲ್ಲರೂ ಹೇಳಿದ್ರು ರೀ ಕೌಸಲ್ಯ, ಲೀಲಾನ ಯಾಕೆ ಅಷ್ಟು ಪ್ರೀತಿಯಿಂದ ಸಾಕುತ್ತಿದ್ದಿರೀ ನಿಮ್ಮನ್ನು ನಿಮ್ಮ ಮಗಳು ಮಾತ್ರ ಸಾಕುತ್ತಾಳೆ. ಸಾಕು ಮಗಳು ನಿಮ್ಮನ್ನು ಸಾಕುವುದು ಅಷ್ಟರಲ್ಲಿ ಇದೆ ಎಂದು. ಆದ್ರೆ ನಾನು ಸ್ವಂತ ಮಗಳ ರೀತಿ ಲಿಲಾಳನ್ನು ಸಾಕುತ್ತಿದ್ದೆ. ಆದರೆ ಅವಳು ಮಾಡಿದ್ದೇನು. ನನಗೆ ದ್ರೋಹಮಾಡಿದಳು ಎಂದಾಗ, ಅಮ್ಮ ನಿನ್ನ ಬುದ್ಧಿ ಎಲ್ಲಾ ನನಗೆ ಗೊತ್ತಾಗಿದೆ. ಲೀಲಾ ಅಕ್ಕಾಗೆ ವಿಚ್ಛೇದನ ಪತ್ರ ಬರಲು ನೀನೇ ಕಾರಣ. ನೀನು ಮಾತನಾಡಿದ್ದನ್ನು ಎಲ್ಲಾ ಕೇಳಿಸಿಕೊಂಡಿದ್ದೇನೆ. ಅಕ್ಕನ ಜೀವನ ಹಾಳುಮಾಡಲು ಹೊರಟಿದ್ಯಲ್ಲ ಇದಕ್ಕೆ ಏನನ್ನಬೇಕು ಎಂದಾಗ ಲೀಲಾ ಮನೆಗೆ ಬಂದಿರುವುದನ್ನು ನೋಡುತ್ತಾಳೆ ಕೌಸಲ್ಯ.

  ಲೀಲಾಳನ್ನೂ ನೋಡಿ ಬೆಚ್ಚಿಬಿದ್ದ ಕೌಸಲ್ಯ

  ಲೀಲಾಳನ್ನೂ ನೋಡಿ ಬೆಚ್ಚಿಬಿದ್ದ ಕೌಸಲ್ಯ

  ಅಮ್ಮ ಅಮ್ಮ ಎಂದು ಕರೆಯುತ್ತಾ ಲೀಲಾ ಬರುತ್ತಾಳೆ ಲೀಲಾಳನ್ನು ಮತ್ತು ಏಜೆಯನ್ನು ನೋಡಿದ ಕೌಸಲ್ಯಗೆ ಏನು ಮಾಡಬೇಕೆಂದು ತಿಳಿಯದೇ ಲೀಲಾ ಯಾವಾಗ ಬಂದ್ಯಮ್ಮ ಕುಳಿತುಕೋ ಎಂದು ಹೇಳುತ್ತಾಳೆ. ಅದಕ್ಕೆ ಲೀಲಾ ನಾವು ಕುಳಿತುಕೊಳ್ಳಲು ಬಂದಿಲ್ಲ ಅಮ್ಮ. ಯಾಕಮ್ಮ ನನಗೆ ವಿಚ್ಛೇದನ ಪತ್ರ ಕಳುಹಿಸಿದೆ. ನಾನು ಏನಮ್ಮ ಮಾಡಿದ್ದೆ ನಿನಗೆ. ನಾನೇನಾದರೂ ಹೇಳಿದ್ದೆನಾ ಏಜೆ ಮನೇಲಿ ನನಗೆ ಬದುಕಲು ಆಗಲ್ಲ ಎಂದು? ಹೇಳದೆ ಕೇಳದೆ ಈ ಥರ ನಿರ್ಧಾರ ಯಾಕೆ ತೆಗೆದುಕೊಂಡೆ. ಮುಂಚೆ ನಾನು ತಪ್ಪು ಮಾಡಿದಾಗ ಕತ್ತಲು ಕೋಣೆಗೆ ಹಾಕಿ ಬರಿಸುತ್ತಿದ್ದೆಯಲ್ಲ ಹಾಗೆ ನಾನು ಮಾಡಲಾ ಎಂದು ಕೇಳುತ್ತಾಳೆ. ಲೀಲಾ ಮಾತಿಗೆ ಪ್ರತಿ ಮಾತು ಆಡದೇ ಮೌನವಾಗಿ ಕೌಸಲ್ಯ ಇದ್ದಳು. ಬಳಿಕ ಮಾತನಾಡಿದ ಲೀಲಾ ಅಮ್ಮ ಏಜೆ ನನ್ನ ಗಂಡ. ಆ ಮನೆಯಲ್ಲಿರುವವರನ್ನು ನನ್ನ ಮನೆಯವರು ಎಂದುಕೊಂಡು ಬದುಕುತ್ತಿದ್ದೇನೆ. ಆ ಮನೆಯವರಿಗೆ ಏನಾದ್ರು ತೊಂದರೆ ಆದರೆ ನಾನು ಸುಮ್ಮನಿರುವವಳು ಅಲ್ಲಾ. ಎಂದು ಅಮ್ಮನಿಗೆ ಎಚ್ಚರಿಕೆಯನ್ನು ನೀಡಿ. ಏಜೆಯ ಕೈ ಹಿಡಿದು ಬನ್ನಿ ಏಜೆ ಎಂದು ಹೇಳಿ ಕರೆದುಕೊಂಡು ಹೋಗುತ್ತಾಳೆ.

  ಕಣ್ಣೀರಿಟ್ಟ ಲೀಲಾ, ಸಾಂತ್ವನ ಹೇಳಿದ ಏಜೆ

  ಕಣ್ಣೀರಿಟ್ಟ ಲೀಲಾ, ಸಾಂತ್ವನ ಹೇಳಿದ ಏಜೆ

  ಏಜೆಯನ್ನೂ ಕರೆದುಕೊಂಡು ಮನೆಗೆ ಬಂದ ಲೀಲಾ, ಏಜೆಗೆ ಧನ್ಯವಾದ ತಿಳಿಸುತ್ತಾಳೆ. ನಾನು ಕರೆದಾಗ ನನ್ನ ಮನೆಗೆ ಬಂದಿದ್ದಕ್ಕೆ ಥಾಂಕ್ಸ್ ಎಂದು ಹೇಳುತ್ತಾಳೆ. ಅಲ್ಲಿಂದ ಹೊರಡಲು ಅನುವಾದಾಗ ಲೀಲಾ ಎಂದು ಕರೆಯುತ್ತಾನೆ. ಇದೆಲ್ಲ ನೀನು ಮನಸ್ಪೂರ್ತಿಯಾಗಿ ಮಾಡುತ್ತಿದ್ದಿಯಾ ಇಲ್ಲ ನನಗೋಸ್ಕರ ಮಾಡುತ್ತಿದಿಯಾ ಅಂದಾಗ ಲೀಲಾ ಮಾತನಾಡುವುದಿಲ್ಲ. ಲೀಲಾ ನೀನು ನನಗೋಸ್ಕರ ಮಾಡುತ್ತಿದ್ದಿಯಾ ಇದೆಲ್ಲಾ ಎಂದು ನಿನಗಾಗಿ ಈ ಥರ ಮಾಡಬೇಕು ಅನ್ನಿಸುವುದಿಲ್ಲವೇ ಎಂದಾಗ ಲೀಲಾಗೆ ದುಃಖ ತಡೆಯಲಾಗಲಿಲ್ಲ. ಜೋರಾಗಿ ಅಳುತ್ತಾಳೆ ಬಳಿಕ ಹೇಳುತ್ತಾಳೆ ಅಜ್ಜಿಗೋಸ್ಕರ ಅಜ್ಜಿ ಖುಷಿಗೋಸ್ಕರ ಮಾಡುತ್ತಿದ್ದೇನೆ ಎಂದು ಹೇಳಿ ಅಲ್ಲಿಂದ ಹೊರಹೋಗುತ್ತಾಳೆ. ಲೀಲಾ ಹಾಗಂದಾಗ ಏಜೆಗು ಬೇಸರವಾಗುತ್ತದೆ.

  ಸತ್ಯ ತಿಳಿದ ಅಜ್ಜಿ

  ಸತ್ಯ ತಿಳಿದ ಅಜ್ಜಿ

  ಲೀಲಾಳನ್ನ ಅಜ್ಜಿ ಜೋರಾಗಿ ಕರೆಯುತ್ತಾರೆ. ಲೀಲಾ ಎಲ್ಲಿದಿಯಮ್ಮ ಬಾ ಇಲ್ಲಿಗೆ ಎಂದಾಗ ಲೀಲಾ ಬರುತ್ತಾಳೆ. ಏನಜ್ಜಿ ಏನಾದರು ಹೇಳಬೇಕಿತ್ತಾ ಎಂದಾಗ ಬಾ ಇಲ್ಲಿಗೆ ಕುಳಿತುಕೋ ನಿನ್ನ ಮುಖ ಯಾಕೆ ಹೀಗೆ ಆಗಿದೆ ಎಂದು ಕೇಳುತ್ತಾರೆ. ಅದಕ್ಕೆ ಲೀಲಾ ಇಲ್ಲ ಇವತ್ತು ನಡೆದ ಅವಘಡದಿಂದ ಹಾಗೆ ಆಗಿದೆ ಎಂದು ಹೇಳಿ ಏನಜ್ಜೀ ಕರೆದಿದ್ದು. ಎಂದು ಕೇಳುತ್ತಾಳೆ ಅದಕ್ಕೆ ಲೀಲಾ ಮೊನ್ನೆ ಹೋಟೆಲ್ ಹೋದಾಗ ಏನು ನಡೆಯಿತು ನನ್ನ ಬಳಿ ಏನು ಹೇಳಿಲ್ಲ ನೀನು ಅಂದಾಗ ಅಜ್ಜಿ ಮೊನ್ನೆ ಇಡೀ ರೆಸ್ಟೋರೆಂಟ್ ನನಗಾಗಿ ಕಾಯುತ್ತಿತ್ತು. ಬಳಿಕ ನನ್ನ ಫೇವರಿಟ್ ಆಕ್ಟರ್ ಗೀತಾ ಹಾಗೂ ಗುರುಮೂರ್ತಿ ಅಲ್ಲಿದ್ದರು ಅದನ್ನು ನೋಡಿ ನನಗೆ ಖುಷಿ ಆಯ್ತು ಅವರ ಜೊತೆ ಕಳೆದು ಏಜೆ ಜೊತೆ ಬಂದೆ ಎಂದು ಹೇಳುತ್ತಾಳೆ. ಅಜ್ಜಿ ಕೇಳುತ್ತಾರೆ ಏಜೆ ನಿನಗೆ ಊಟ ಮಾಡಿಸಿಲ್ವಾ ಎಂದಾಗ ಏಜೆ ಊಟ ಮಾಡಿಸೋದಾ ಸಾಧ್ಯನೇ ಇಲ್ಲ ಅಂದಾಗ ಗೊತ್ತಾಗುತ್ತೆ ಅಜ್ಜಿಗೆ ನನ್ನ ಮಗ ನನ್ನ ಬಳಿ ಸುಳ್ಳು ಹೇಳಿದ್ದಾನೆ ಎಂದು ಬೇಸರವಾಗುತ್ತದೆ ಅಜ್ಜಿಗೆ. ಆ ವೇಳೆ ಲೀಲಾ ಸರಿ ಅಜ್ಜಿ ನಾನು ನಿಮಗೆ ಫ್ರೂಟ್ಸ್ ಕಟ್ ಮಾಡಿ ತರುತ್ತೇನೆ ಎಂದು ಹೇಳಿ ಅಲ್ಲಿಂದ ತೆರಳುತ್ತಾನೆ.

  ಹೊಸ ಬಿಡಾರ ಹೂಡಿದ ಅಜ್ಜಿ

  ಹೊಸ ಬಿಡಾರ ಹೂಡಿದ ಅಜ್ಜಿ

  ಅಜ್ಜಿ ಬೇಸರದಲ್ಲಿರುವಾಗ ವಿರೂಪಾಕ್ಷ ಬಂದು ಅಜ್ಜಿಗೆ ಸಮಾಧಾನ ಮಾಡಿ ಒಂದು ಉಪಾಯ ನೀಡುತ್ತಾನೆ. ಅವನ ಮಾತಿನ ಹಾಗೆಯೇ ಮನೆಯ ಹೊರಗೆ ಒಂದು ಬೀಡಾರದಲ್ಲಿ ಅಜ್ಜಿ ವಾಸಮಾಡಲು ಶುರು ಮಾಡುತ್ತಾರೆ. ಏಜೆ ಮತ್ತು ಲೀಲಾ ಅಲ್ಲಿಗೆ ಬಂದು ಬೈದಾಗ ಬಿಡಾರದಿಂದ ಅಜಿ ಹೊರಬಂದಿದ್ದನ್ನು ಕಂಡು ಲೀಲಾಗೆ, ಏಜೆಗೆ ಶಾಕ್ ಆಗುತ್ತದೆ. ಇನ್ನಾದರೂ ಲೀಲಾ ಏಜೆ ಒಂದಾಗುತ್ತಾರ ಎಂಬುವುದನ್ನು ಕಾದು ನೋಡಬೇಕಿದೆ.

  English summary
  Zee Kannada serial Hitler Kalyana Written Update on 27th June. Hitler kalyana is an Kannada language television serial. Hear is more details,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X