Don't Miss!
- News
Breaking: ಕರ್ನಾಟಕದಲ್ಲಿ 2000 ಗಡಿ ದಾಟಿದ ಕೊರೊನಾ ವೈರಸ್!
- Sports
ಮಹಾರಾಜ ಟ್ರೋಫಿ: ಮಯಾಂಕ್ ಶತಕ; 15.4 ಓವರ್ಗಳಲ್ಲಿ 176 ರನ್ ಚಚ್ಚಿ ಗೆದ್ದ ಬೆಂಗಳೂರು ಬ್ಲಾಸ್ಟರ್ಸ್!
- Lifestyle
Surya Gochar 2022 : ಆ. 17ಕ್ಕೆ ಸಿಂಹದಲ್ಲಿ ಸೂರ್ಯ ಸಂಚಾರ: ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವೇನು?
- Finance
ಕ್ರಿಪ್ಟೋ ವಹಿವಾಟು: 370 ಕೋಟಿ ರೂಪಾಯಿ ಜಪ್ತಿ ಮಾಡಿದ ಇಡಿ
- Automobiles
ವ್ಯಾಗನ್ಆರ್ ಕಾರಿಗೆ ಸೆಡ್ಡು ಹೊಡೆಯಲಿದೆ 2022ರ ಕಿಯಾ ರೇ ಫೇಸ್ಲಿಫ್ಟ್
- Technology
ರೆಡ್ಮಿ K50 ಅಲ್ಟ್ರಾ ಮತ್ತು ಶಿಯೋಮಿ ಪ್ಯಾಡ್ 5 ಪ್ರೊ 12.4 ಬಿಡುಗಡೆ! ವಿಶೇಷತೆ ಏನು?
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಮನೆಗೆ ಕಾಲಿಡಲ್ಲ ಎಂದ ಅಜ್ಜಿ: ಇನ್ನಾದರೂ ಒಂದಾಗುತ್ತಾರ ಏಜೆ-ಲೀಲಾ?
'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಅಜ್ಜಿ ಹೊಸ ಆಟ ಶುರು ಮಾಡಿದ್ದಾರೆ. ಏಜೆ-ಲೀಲಾ ಒಂದಾಗುವವರೆಗೆ ಮನೆಗೆ ಕಾಲಿಡಲ್ಲ ಎಂದು ಅಜ್ಜಿ ಶಪಥ ಮಾಡಿದ್ದಾರೆ. ಅಜ್ಜಿಗೆ ಏಜೆ ಪಿಎ ವಿರೂಪಾಕ್ಷ ಹೀಗೆ ಮಾಡಿದರೆ ಬಾಸ್ ಹಾಗೂ ಲೀಲಾ ಒಂದಾಗುತ್ತಾರೆ ಎಂದು ಉಪಾಯವನ್ನು ಹೇಳಿಕೊಡುತ್ತಾನೆ. ಬಳಿಕ ಅಜ್ಜಿ ಅದನ್ನು ಕಾರ್ಯರೂಪಕ್ಕೆ ತಂದು ಮನೆಯ ಹೊರಗೆ ಬಿಡಾರ ಹಾಕಿ ಕುಳಿತು ಬಿಟ್ಟಿದ್ದಾರೆ.
ಏಜೆ..ಏಜೆ ಎಂದು ಕರೆದುಕೊಂಡು ಏಜೆ ಹಾಗೂ ಲೀಲಾ ಇರುವ ಕಡೆ ಬರುತ್ತಾನೆ ವಿರೂಪಾಕ್ಷ. ಇದನ್ನು ಕಂಡು ಏಜೆ ಏನಾಯಿತು ಎಂದು ಕೇಳುತ್ತಾನೆ ಅದಕ್ಕೆ ವಿಶ್ವರೂಪ ಮನೆಯ ಹೊರಗೆ ಯಾರೋ ಟೆಂಟ್ ಹಾಕಿದ್ದಾರೆ ಎಂದು ಏಜೆ ಬಳಿ ಹೇಳುತ್ತಾನೆ. ಇದಕ್ಕೆ ಕೋಪಗೊಂಡ ಏಜೆ ಮನೆಯಿಂದ ಹೊರ ಬರುತ್ತಾನೆ. ಯಾರದು ಟೆಂಟ್ ಹಾಕಿರುವುದು ಮನೆಮುಂದೆ? ಯಾರು? ನೀವಾಗೆ ಹೊರ ಬರುತ್ತೀರಾ ಅಥವಾ ನಾನೇ ಒಳ ಬಂದು ಕುತ್ತಿಗೆ ಹಿಡಿದು ದಬ್ಬಬೇಕಾ ಎಂದು ಜೋರಾಗಿ ಹೇಳುತ್ತಾನೆ.
ಹಿಟ್ಲರ್
ಕಲ್ಯಾಣ:
ಅಮ್ಮನ
ಕುತಂತ್ರದಿಂದ
ಏಜೆ-ಲೀಲಾ
ಮಧ್ಯೆ
ಬಿರುಕು
ಏಜೆ ಮಾತು ಕೇಳಿ ಆ ವ್ಯಕ್ತಿ ಹೊರಬರುತ್ತಾರೆ ಅವರನ್ನು ನೋಡಿದ ಕೂಡಲೇ ಏಜೆ ಶಾಕ್ ಆಗುತ್ತಾರೆ. ಟೆಂಟ್ ನಿಂದ ಹೊರಬಂದವರು ಬೇರೆಯವರು ಅಲ್ಲ ಬದಲಿಗೆ ಏಜೆಯ ತಾಯಿ. ಟೆಂಟ್ನಿಂದ ಹೊರಗೆ ಬಂದ ಅಮ್ಮನ್ನು ನೋಡಿ ಶಾಕ್ ಆದ ಏಜೆಗೆ ದಿಕ್ಕೆ ತೋಚದಾಗುತ್ತದೆ. ಅಮ್ಮ, ನೀನಾ ಇಲ್ಲಿ ಯಾಕೆ ಇದ್ದೀಯ ಎಂದು ಕೇಳಿದಾಗ ನಾನು ಇಲ್ಲಿಯೇ ಇರುತ್ತೇನೆ ನಿಮ್ಮಿಬ್ಬರ ದಾಂಪತ್ಯ ಜೀವನ ಸರಿಹೋಗೋವರೆಗೂ ನಾನು ಇಲ್ಲಿಯೇ ಇರುತ್ತೇನೆ ಎಂದು ಖಡಾ ಖಂಡಿತವಾಗಿ ಹೇಳಿದುದರಿಂದ ಏಜೆಗೆ ಏನು ಮಾಡಬೇಕು ತಿಳಿಯದೇ ಹೋಗುತ್ತದೆ.

ನಾನು ಇಲ್ಲೇ ಇರುತ್ತೇನೆ ಎಂದ ಅಜ್ಜಿ
ಅಮ್ಮ ನಿನಗೆ ಇಂತಹ ಉಪಾಯ ಹೊಳೆಯೋದಿಲ್ಲ. ನಿನಗೆ ಬೇರೆ ಯಾರೋ ಈ ಥರ ಮಾಡಿ ಎಂದು ಹೇಳಿಕೊಟ್ಟಿದ್ದಾರೆ. ಯಾರಮ್ಮ ಅವರು ಎಂದು ಏಜೆ ಕೇಳಿದ ವೇಳೆ ವಿರೂಪಾಕ್ಷಗೆ ಭಯವಾಗುತ್ತದೆ. ಒಂದು ವೇಳೆ ನಾನೇ ಎಂದು ಗೊತ್ತಾದರೆ ನನ್ನನ್ನು ಬೆಂಗಳೂರಿನಿಂದ ಮಂಗಳೂರಿಗೆ ಓಡಿಸಿ ಬಿಡುತ್ತಾರೆ ಎಂದು ಭಯಗೊಳ್ಳುತ್ತಾನೆ ವಿರೂಪಾಕ್ಷ. ಅಜ್ಜಿ ವಿರೂಪಾಕ್ಷಣ ಮುಖ ನೋಡಿದಾಗ ನಾನು ಅಂತ ಹೇಳಬೇಡಿ ಎಂದು ಸನ್ನೆ ಮಾಡಿದ ಬಳಿಕ ಅಜ್ಜಿ ನೀವಿಬ್ಬರೂ ಸರಿ ಹೋಗಿ, ಒಟ್ಟಿಗೆ ಬಾಳ್ವೆ ನಡೆಸೋ ವರೆಗೂ ನಾನು ಇಲ್ಲಿಯೇ ಇರುತ್ತೇನೆ ಎಂದು ಹೇಳುತ್ತಾರೆ.

ಲೀಲಾಗೆ ತಿರುಗು ಬಾಣವಾಗುತ್ತಾ ಅಜ್ಜಿ ಪ್ರೀತಿ
ಬಳಿಕ ಅಲ್ಲಿಂದ ಏಜೆ ಮತ್ತು ಲೀಲಾ ಒಳ ನಡೆಯುತ್ತಾರೆ. ದುರ್ಗಾ ಹಾಗೂ ಲಕ್ಷ್ಮಿ ಏನೋ ಪ್ಲಾನ್ ಮಾಡೋ ಹಾಗೆ ಕಾಣುತ್ತಿದೆ. ಅಜ್ಜಿನ ಲೀಲಾ ಮೇಲೆ ಎತ್ತಿಕಟ್ಟುವ ತಂತ್ರ ನಡೆಯುತ್ತಿದೆ. ಆದರೆ ಇದು ಅಷ್ಟು ಸುಲಭದ ಮಾತಲ್ಲ ಅನ್ನೋ ವಿಚಾರ ದುರ್ಗಾಗೆ ತಿಳಿದಿದೆ. ಈಗಾಗಲೇ ಅಜ್ಜಿ ಮತ್ತು ಲೀಲಾ ಒಂದಾಗಿದ್ದಾರೆ. ಲೀಲಾ ನ ಕಂಡರೆ ಅಜ್ಜಿಗೆ ವಿಪರೀತ ಪ್ರೀತಿ. ಆದರೆ ದುರ್ಗಾ ಮಾತ್ರ ಮಸಲತ್ತು ನಡೆಸುತ್ತಲೇ ಇದ್ದಾಳೆ.

ಚಂದ್ರ ಶೇಖರ್ ರವರಿಗೆ ಕರೆ ಮಾಡಿದ ಅಜ್ಜಿ
ಇನ್ನೂ ಅಜ್ಜಿ ಲೀಲಾ ತಂದೆಗೆ ಕರೆ ಮಾಡುತ್ತಾರೆ. ಅಜ್ಜಿ ಕಾಲ್ ನೋಡಿ ಚಂದ್ರಶೇಖರ್ ಗೆ ಭಯ ವಾಗುತ್ತದೆ. ರೇವತಿ ಬಳಿ ಹೇಳುತ್ತಾರೆ. ಮತ್ತೆ ಏನು ಗಂಡಾಂತರ ಆಗಿದೆ ಎಂದು ಗೊತ್ತಾಗುತ್ತಿಲ್ಲ. ಅಜ್ಜಿ ಬೇರೆ ಕಾಲ್ ಮಾಡುತ್ತಿದ್ದಾರೆ. ರೇವತಿ ನೀನೇ ಈ ಕರೆನಾ ಸ್ವೀಕಾರ ಮಾಡು ಎಂದು ತಂದೆ ಹೇಳುತ್ತಾರೆ. ಇದನ್ನು ಕೇಳಿದ ರೇವತಿ ಅಪ್ಪ ಎನು ಆಗಲ್ಲ ಕಾಲ್ ರಿಸೀವ್ ಮಾಡಿ ಎಂದು ಹೇಳುತ್ತಾಳೆ. ಬಳಿಕ ಲೋಡ್ ಸ್ಪಿಕರಿಗೆ ಇಟ್ಟು ಕರೆ ಸ್ವೀಕರಿಸುತ್ತಾರೆ. ಹಲೋ ಎಂದು ಹೇಳಿದಾಗ ..ಹೊ ನೀವೇ ಕಾಲ್ ತೆಗೆದು ಬಿಟ್ರಾ .. ನಾನೇನೋ ರೇವತಿ ಕಾಲ್ ತೆಗೆಯುತ್ತಾಳೆ ಎಂದುಕೊಂಡೆ. ಅದಕ್ಕೆ ಚಂದ್ರ ಶೇಖರ್ ಯಾಕಮ್ಮ ರೇವತಿ ಜೊತೆ ಮಾತನಾಡಬೇಕಿತ್ತಾ ಎಂದಾಗ ಇಲ್ಲ ಇಲ್ಲ ನಿಮ್ಮ ಬಳಿ ಮಾತನಾಡಬೇಕಿತ್ತು ಎಂದಾಗ ಚಂದ್ರಶೇಖರ್ ಭಯಗೊಳ್ಳುತ್ತಾರೆ. ಬಳಿಕ ಏನು ಭಯ ಪಡಬೇಡಿ ಎಂದು ನಡೆದ ವಿಚಾರ ವನ್ನೆಲ್ಲ ಹೇಳುತ್ತಾರೆ. ಅದನ್ನು ಕೇಳಿದ ಇಬ್ಬರು ಖುಷಿ ಪಡುತ್ತಾರೆ. ನಾನು ಹೀಗೆಲ್ಲ ಟೆಂಟ್ ಹಾಕಿದ್ದೇನೆ ಎಂದು ನಿಮ್ಮ ಕಿವಿಗೆ ಬಿದ್ದರೆ ನೀವು ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಕಾಲ್ ಮಾಡಿದೆ ಎಂದು ಹೇಳುತ್ತಾರೆ.

ಅಜ್ಜಿ ಮುಂದೆ ಲೀಲಾ ನಾಟಕ
ಅಜ್ಜಿ ಮನ ಓಲೈಸಲು ಲೀಲಾ ನಾಟಕವಾಡುತ್ತಾಳೆ. ಆದರೆ ಏಜೆ ಗೆ ನಾಟಕವಾಡಲು ಆಗುವುದಿಲ್ಲ. ಆದರೆ ಅಜ್ಜಿಗೆ ಲೀಲಾಳ ಪರಿಸ್ಥಿತಿ ಕಂಡು ನಗು ಬರುತ್ತದೆ. ಏಜೆ ಕೈ ಹಿಡಿದು ಬನ್ನಿ ಏಜೆ ಎಂದೆಲ್ಲ ಹೇಳುತ್ತಿರುತ್ತಾಳೆ ಲೀಲಾ. ಮುಂದೇನು ಮಾಡುತ್ತಾಳೆ ಲೀಲಾ? ಕೊನೆಗೂ ಲೀಲಾ ಏಜೆ ಒಂದಾಗುತ್ತಾರ ಕಾದು ನೋಡಬೇಕಿದೆ.