twitter
    For Quick Alerts
    ALLOW NOTIFICATIONS  
    For Daily Alerts

    ಸ್ವಾಮೀಜಿ ಮಾತು ನಂಬಿ ಮೋಸ ಹೋಗುತ್ತಾಳಾ ಕೌಸಲ್ಯ?

    By ಪೂರ್ವ
    |

    'ಹಿಟ್ಲರ್ ಕಲ್ಯಾಣ' ಧಾರವಾಹಿ ನೋಡಲು ಅನೇಕ ವೀಕ್ಷಕರು ಮುಗಿಬೀಳುತ್ತಿದ್ದಾರೆ. ಲೀಲಾಳ ನಟನೆಗೆ ಧಾರವಾಹಿ ಪ್ರಿಯರು ಭೇಷ್ ಎನ್ನುತ್ತಿದ್ದಾರೆ. ಏಜೆ ಅಮ್ಮ ಇದೀಗ ಮನೆಯ ಹೊರಗೆ ಬಿಡಾರ ಹೂಡಿ, ನಾನು ಮನೆಗೆ ಬರೊಲ್ಲ ಎಂದು ಹಠ ಮಾಡುತ್ತಿದ್ದಾರೆ. ಏಜೆ ಲೀಲಾಳ ಸಂಬಂಧ ಸರಿ ಹೋಗಬೇಕು ಎಂದು ಅನೇಕ ರೀತಿಯಲ್ಲಿ ಪ್ಲಾನ್ ಮಾಡಿದರು ಯಾವುದೇ ಪ್ರಯೋಜನ ಆಗಿರಲಿಲ್ಲ ಆದರೆ ಇದೀಗ ಅಮ್ಮ ಬಿಡಾರ ಹೂಡಿರುವುದನ್ನು ನೋಡಿದ ಏಜೆಗೆ ದಿಕ್ಕೇ ತೋಚದಾಗಿದೆ.

    ಇತ್ತ ಲೀಲಾ ಮನದಲ್ಲಿಯೇ ಯೋಚಿಸುತ್ತಿದ್ದಾಳೆ. ಅಜ್ಜಿ ಯಾಕೆ ಇಂತಹ ನಿರ್ಧಾರವನ್ನು ತೆಗೆದುಕೊಂಡರು. ನಾವಿಬ್ಬರೂ ಅನ್ಯೋನ್ಯವಾಗಿ ಇರಬೇಕೆಂದು ಅಜ್ಜಿ ಎಷ್ಟು ಆಸೆ ಪಡುತ್ತಿದ್ದಾರೆ ಆದರೆ ಅದು ಈ ಜನ್ಮದಲ್ಲಿ ಸಾಧ್ಯವಾಗುವುದಿಲ್ಲ. ಆದರೂ ಅಜ್ಜಿ ಯಾಕೆ ಹಠ ಹಿಡಿಯುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ ಎಂದು ಯೋಚಿಸುತ್ತಿರುತ್ತಾಳೆ.

    ಲಕ್ಷ್ಮಿಗೆ ಇದನ್ನೆಲ್ಲ ತಿಳಿದುಕೊಳ್ಳಲು ಲೀಲಾ ಬಳಿ ಏನೇನೋ ಕೇಳುತ್ತಿರುತ್ತಾರೆ. ಆದರೆ ಲೀಲಾ ಮಾತ್ರ ಖಡಕ್ಕಾಗಿ ಉತ್ತರ ನೀಡಿ ಹೋಗುತ್ತಿರುತ್ತಾಳೆ, ಇದರಿಂದ ಕುಪಿತಗೊಂಡ ಲಕ್ಷ್ಮಿ, 'ನಿಲ್ಲೂ ನಿಲ್ಲೂ ನಿನ್ನ ಪೊಗರು ಇದೀಗ ಜಾಸ್ತಿಯಾಗಿದೆ. ಅಜ್ಜಿ ನಿನ್ನ ಕಡೆ ಇದ್ದಾರೆಂತ ಇಷ್ಟೊಂದು ಪೊಗರು ತೋರಿಸುತ್ತಿದ್ದಿ ಅಲ್ವಾ. ಕಾಲ ಒಂದೇ ಥರ ಇರಲ್ಲಾಂತ' ಲೀಲಾಗೆ ಮನದಲ್ಲಿ ಬೈದುಕೊಳ್ಳುತ್ತಾಳೆ.

    ಸ್ವಾಮೀಜಿಯ ಮಾತಿಗೆ ಮರುಳಾದ ಕೌಸಲ್ಯ

    ಸ್ವಾಮೀಜಿಯ ಮಾತಿಗೆ ಮರುಳಾದ ಕೌಸಲ್ಯ

    ಇತ್ತ ಲೀಲಾ ತಾಯಿ ಕೌಸಲ್ಯ ಮಗಳು ಹೇಳಿದ ಮಾತುಗಳನ್ನು ಕೇಳಿ ಒಂದೇ ಸಮನೆ ಅಳುತ್ತಾ ಯೋಚಿಸುತ್ತಿರುತ್ತಾಳೆ. ಅಲ್ಲಾ ನಾನು ಎತ್ತಿ ಆಡಿಸಿದ ಮಗು ನನಗೆ ಬಾಯಿಗೆ ಬಂದ ಹಾಗೆ ಬೈದು ಹೋದಳು. ಈಗ ಅವಳಿಗೆ ಗಂಡನೇ ಮುಖ್ಯ. ನಾವು ಅವಳಿಗೆ ಮುಖ್ಯ ಅಲ್ಲ. ಅದಕ್ಕೆ ಎಲ್ಲರೂ ಆವತ್ತು ಹೇಳಿದರು ಸಾಕು ಮಗಳು ನಿಮ್ಮನ್ನು ಸಾಕೋದು ಅಷ್ಟೇ ಇದೆ. ಕೊನೆಗೆ ನಿಮಗೆ ಆಗೋದು ನಿಮ್ಮ ಸ್ವಂತ ಮಗಳು ಮಾತ್ರ ಎಂದೆಲ್ಲ ಹೇಳಿದರು ಎಂದು ಮಾತನಾಡಿಕೊಳ್ಳುತ್ತಾಳೆ.

    70 ಕೋಟಿಗೆ ಕಲ್ಲು ಹಾಕಿದಳು ಲೀಲಾ!

    70 ಕೋಟಿಗೆ ಕಲ್ಲು ಹಾಕಿದಳು ಲೀಲಾ!

    ನಾನೇ ಪ್ರೀತಿಯಿಂದ ಸಾಕಿದ್ದೆ ಆದರೆ ಅವಳು 70 ಕೋಟಿ ಹಣಕ್ಕೆ ಲೀಲಾ ಕಲ್ಲು ಹಾಕಿದಳು. ಇನ್ನೇನೋ ಮಾಡೋಣ. ಏಜೆಯನ್ನು ಲೀಲಾಳನ್ನೂ ಹೇಗೆ ಬೇರೆ ಮಾಡುವುದು ಎಂದೆಲ್ಲ ಯೋಚನೆ ಮಾಡುತ್ತಿರುತ್ತಾಳೆ ಕೌಸಲ್ಯ. ಇತ್ತ ಯಾರೋ ಒಬ್ಬ ಸ್ವಾಮೀಜಿ ಚಿಂತಿತಳಾಗಿ ಕುಳಿತಿದ್ದ ಕೌಸಲ್ಯನನ್ನು ನೋಡಿ ತನ್ನ ಬೇಳೆ ಬೇಯಿಸಿಕೊಳ್ಳಲು ಬರುತ್ತಾನೆ ಕೌಸಲ್ಯ ಬಳಿ ಬಂದ ಈತ ತಾಯಿ ಎನಾದರು ತೊಂದರೆಯಾಗಿದೆಯಾ. ತುಂಬಾ ಚಿಂತಿತರಾಗಿದ್ದಿರಾ. ಯಾಕೆ ಎಂದೆಲ್ಲ ಕೇಳುತ್ತಾನೆ. ಅದಕ್ಕೆ ಹೌದು ಸ್ವಾಮೀಜಿ. ಎಂದಾಗ ಸ್ವಾಮೀಜಿ ಹೇಳುತ್ತಾರೆ ತಮಗೆ ತಮ್ಮವರೆ ಆಗುದು ಮುಂದಕ್ಕೆ, ಅಂದಾಗ ಕೌಸಲ್ಯ ಹಾ.. ಸ್ವಾಮೀಜಿ ಕೊನೆಗೆ ನಮ್ಮವರೇ ನಮಗೆ ಬೇಕಾಗುವುದು ಎಂದು ಹೇಳುತ್ತಾಳೆ. ಬಳಿಕ ಇಷ್ಟೆಲ್ಲ ಮಾತಾನಾಡಿದ ಸ್ವಾಮೀಜಿಯನ್ನು ಮನೆ ಒಳಗೆ ಕರೆಯುತ್ತಾಳೆ.

    ಪೂಜೆ ಮಾಡಿಸಬೇಕು ಎಂದ ಕೌಸಲ್ಯಾ

    ಪೂಜೆ ಮಾಡಿಸಬೇಕು ಎಂದ ಕೌಸಲ್ಯಾ

    ಬನ್ನಿ ಸ್ವಾಮೀಜಿ ಒಳಗೆ ಕುಳಿತು ಮಾತನಾಡುವ ಎಂದೆಲ್ಲ ಹೇಳಿ ಸ್ವಾಮೀಜಿಯನ್ನು ಮನೆ ಒಳಗೆ ಕರೆಯುತ್ತಾಳೆ ಕೌಸಲ್ಯ. ಮನೆಗೆ ಬಂದ ಸ್ವಾಮೀಜಿಯನ್ನು ಆದರದಿಂದ ಸತ್ಕರಿಸುತ್ತಾಳೆ. ಬಳಿಕ ಹೇಳುತ್ತಾಳೆ. ನನ್ನ ಮಗಳು ಹಾಗೂ ಅಳಿಯನನ್ನು ಬೇರೆ ಮಾಡಬೇಕಿತ್ತು. ಇದಕ್ಕೆ ಏನಾದರೂ ಮಾರ್ಗವಿದೆಯಾ ಸ್ವಾಮೀಜಿ ಎಂದಾಗ ಯೋಚಿಸಿದ ಸ್ವಾಮೀಜಿ ದೊಡ್ಡ ಪೂಜೆ ಮಾಡಿಸಬೇಕಾಗುತ್ತದೆ. ಇದಕ್ಕೆ ತುಂಬಾ ಖರ್ಚು ಆಗುತ್ತದೆ ಎಂದು ಹೇಳುತ್ತಾರೆ. ಅದಕ್ಕೆ ಕೌಸಲ್ಯ ಸರಿ 500 ರು. ಕೊಡುತ್ತೇನೆ ಎಂದು ಹೇಳಿದಾಗ ಅದಕ್ಕಿಂತ ಜಾಸ್ತಿಯಾಗುತ್ತದೆ ಎಂದಾಗ ಏಷ್ಟು ಎಂದು ಕೇಳುತ್ತಾರೆ ಕೌಸಲ್ಯ ಅದಕ್ಕೆ ಆತ 50,000 ವಾಗುತ್ತದೆ ಎಂದು ಹೇಳುತ್ತಾರೆ. ಇದನ್ನು ಕೇಳಿ ಕೌಸಲ್ಯ ದಂಗಾಗುತ್ತಾಳೆ. ಬಳಿಕ ಅದನ್ನು ತೋರ್ಪಡಿಸಿಕೊಳ್ಳದೆ ಆಯ್ತು ಸ್ವಾಮಿಗಳೇ ಎಂದು ಹೇಳುತ್ತಾಳೆ. ಬಳಿಕ ಅಲ್ಲಿಂದ ಸ್ವಾಮೀಜಿ ಹೊರಡುತ್ತಾಳೆ. ಏಜೆ ಮತ್ತು ಲೀಲಾಳನ್ನು ದೂರ ಮಾಡುವ ವಿಚಾರವಾಗಿ ಸ್ವಾಮೀಜಿಯು ಕೌಸಲ್ಯಳನ್ನು ಮೂರ್ಖಳನ್ನಾಗಿ ಮಾಡುವ ರೀತಿ ಕಾಣುತ್ತಿದೆ. ಕೌಸಲ್ಯಗೆ ಇನ್ನೂ ಬುದ್ದಿ ಬಂದ ಹಾಗೆ ಕಾಣುತ್ತಿಲ್ಲ.

    ಅಜ್ಜಿಯ ಮುಂದೆ ನಾಟಕ ಆಡುವ ಏಜೆ-ಲೀಲಾ

    ಅಜ್ಜಿಯ ಮುಂದೆ ನಾಟಕ ಆಡುವ ಏಜೆ-ಲೀಲಾ

    ಇತ್ತ ಏಜೆ ಮನೆಗೆ ಬಂದಾಗ ಅಜ್ಜಿಯನ್ನು ಕಂಡು ಏನಮ್ಮ ಇದೆಲ್ಲ ಮನೆಗೆ ಹೋಗೋದು ಇಲ್ವಾ ಅಂದಾಗ ನೀವಿಬ್ಬರೂ ಒಂದಾದರೆ ಮಾತ್ರ ಹೋಗುತ್ತೇನೆ ಎಂದು ಅಜ್ಜಿಯ ಮಾತು ಕೇಳಿ ಎಜೆಗೆ ಏನು ಮಾಡಬೇಕು ತಿಳಿಯಲಿಲ್ಲ. ಈ ವೇಳೆ ವಿರೂಪಾಕ್ಷ ಲೀಲಾ ಬಳಿ ಬಂದು ಲೀಲಾ ಮೇಡಂ ಏಜೆ ಮನೆಗೆ ಬಂದ್ರು ಅವರ ಬಳಿ ಪ್ರೀತಿಯಿಂದ ಮಾತನಾಡಿ ಅಜ್ಜಿ ಮುಂದೆ ನಟಿಸಿ ಎಂದು ಹೇಳಿಕೊಡುತ್ತಾನೆ. ಆ ಪ್ರಕಾರವಾಗಿ ಹೋದ ಲೀಲಾ, ಏಜೆ ಈಗ ಬಂದ್ರ ಕೊಡಿ ಕೊಡಿ ಬ್ಯಾಗ್ ಏಷ್ಟು ದಣಿದಿದ್ದೀರಾ ಎಂದೆಲ್ಲಾ ಹೇಳುವಾಗ ಅಜ್ಜಿಗೆ ಖುಷಿಯಾಗುತ್ತದೆ. ಬಳಿಕ ಏಜೆಗೆ ನಟಿಸಲು ಬರದಿದ್ದರೂ ಹೇಗಾದರೂ ಸ್ವಲ್ಪ ನಟನೆ ಮಾಡುತ್ತಿರುವುದನ್ನು ಕಂಡು ಅಜ್ಜಿಗೆ ನಗು ಬರುತ್ತದೆ. ಮುಂದೇನು ಮಾಡುತ್ತಾರೆ ಏಜೆ ಲೀಲಾ ಕಾದು ನೋಡಬೇಕಿದೆ.

    English summary
    Zee Kannada serial Hitler Kalyana Written Update on 29th June. Hitler kalyana is an Kannada language television serial. Hear is more details.
    Thursday, June 30, 2022, 17:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X